ಧನ್ವಂತರಿ ಜಯಂತಿ ದಿನಾಚರಣೆ, ಧನ್ವಂತರಿ ಭಾಗ 2 ಕೃತಿ ಲೋಕಾರ್ಪಣೆ ಸುಸಂಪನ್ನ.

Поделиться
HTML-код
  • Опубликовано: 13 ноя 2023
  • ಧನ್ವಂತರಿ ಜಯಂತಿ ದಿನಾಚರಣೆ, ಧನ್ವಂತರಿ ಭಾಗ 2 ಕೃತಿ ಲೋಕಾರ್ಪಣೆ ಸುಸಂಪನ್ನ.
    ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಇವರ ಸಹಕಾರದಲ್ಲಿ
    ಹವ್ಯಕ ಸಭಾ ಮಂಗಳೂರು ರಿ. ಆಶ್ರಯದಲ್ಲಿ
    ಶ್ರೀ ಭಾರತೀ ಕಾಲೇಜು ಮಂಗಳೂರು ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದಲ್ಲಿ
    ಧನ್ವಂತರಿ ಜಯಂತಿ ದಿನಾಚರಣೆ ಮತ್ತು ಡಾ.ಮುರಲೀ ಮೋಹನ್ ಚೂಂತಾರು ಅವರ 14ನೇ ಕೃತಿ ವೈದ್ಯಕೀಯ ಲೇಖನಗಳ ಗುಚ್ಛ ಧನ್ವಂತರಿ ಭಾಗ 2 ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 10 ನವೆಂಬರ್ 2023 ರಂದು ನೆರವೇರಿತು.
    ನಂತೂರು ಭಾರತೀ ಕಾಲೇಜು ಆವರಣ ಶ್ರೀ ಶಂಕರ ಶ್ರೀ ಸಭಾಭವನದಲ್ಲಿ ಜರುಗಿದ ಸಮಾರಂಭದ ವೇದಿಕೆಯಲ್ಲಿ
    ಧನ್ವಂತರಿ ಮಂತ್ರೋಚ್ಚಾರಣೆಯಿಂದ ಆರಂಭ ಕಂಡ ಕಾರ್ಯಕ್ರಮದಲ್ಲಿ
    ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಮಂಗಳೂರು ಘಟಕ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ರೇವಣಕರ್ ವಹಿಸಿದ್ದರು.
    ಶಿಕಾರಿಪುರ ಶ್ರೀ ಕೃಷ್ಣ ಮೂರ್ತಿ ಯವರು ಬಿಡುಗಡೆಗೊಳ್ಳಲಿರುವ ಪುಸ್ತಕ ವಿಮರ್ಶೆ ಮಾಡಿದರು.
    ಕೆ.ಎಂ.ಸಿ.ಆಸ್ಪತ್ರೆಯ ಫಿಸಿಷಿಯನ್ ಪ್ರೊ.ಡಾ.ಚಕ್ರಪಾಣಿ ಎಂ. ರವರು ಧನ್ವಂತರಿ ಭಾಗ 2 ಪುಸ್ತಿಕೆಯನ್ನು ಲೋಕಾರ್ಪಣೆ ಮಾಡಿದರು. ದಂತ ವೈದ್ಯರಾದ ಪುಸ್ತಕ ಲೇಖಕರಾದ ಡಾ. ಮುರಲೀ ಮೋಹನ್ ಚೂಂತಾರು, ರವರನ್ನು ಶಾಲು ಪೇಟಾ ಹಾರ ತೊಡಿಸಿ, ಪುಷ್ಪ ಗುಚ್ಛ ನೀಡಿ ಅತಿಥಿಗಳು ಗೌರವಿಸಿದರು.
    ಡಾ ಚೂಂತಾರು ಅವರು ಬರೆದ ಧನ್ವಂತರಿ ಪುಸ್ತಕ ವು ವಿವಿಧ ರೋಗ ಲಕ್ಷಣಗಳು ಹಾಗೂ ವಿವರವನ್ನು ನೀಡುವ ಕೃತಿಯಾಗಿದ್ದು ಓದಿಸಿಕೊಂಡು ಹೋಗುವ ಗುಣವುಳ್ಳ ಭಾಷೆ ಹೊಂದಿದೆ.ಜೀವನ ಶೈಲಿ ಬದಲಾಯಿಸಿಕೊಂಡು ರೋಗದಿಂದ ದೂರ ಉಳಿಯಬಹುದಾದ ಸಲಹೆಗಳು ಮತ್ತು ಭವಿಷ್ಯದಲ್ಲಿ ವೈದ್ಯಕೀಯ ಎಂಬ ವೈದ್ಯಕೀಯ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬಲ್ಲ ಅಧ್ಯಾಯ ಹೊಂದಿದೆ. ವೈದ್ಯ ನಿಂತ ನೀರಾಗದೆ ನಿರಂತರ ಅಧ್ಯಯನ / ಅಭ್ಯಾಸಶೀಲನಾಗಬೇಕು ಎಂದು ಡಾ. ಶಿಕಾರಿಪುರ ಕೃಷ್ಣಮೂರ್ತಿ ನುಡಿದರು.
    ಪುಸ್ತಕ ವನ್ನು ಲೋಕಾರ್ಪಣೆ ಗೊಳಿಸಿದ ಡಾ ಚಕ್ರಪಾಣಿ ಅವರು ಇಂತಹ ಕೃತಿಗಳಿಂದ ಜನರಿಗೆ ಬಹಳ ಉಪಯೋಗ ಎಂದರು. ವೈದ್ಯರ ಮತ್ತು ರೋಗಿ ಗಳ ಸಮಯ ಉಳಿತಾಯ ಎಂದು ಡಾ. ಚಕ್ರಪಾಣಿ ಅಭಿಪ್ರಾಯ ಪಟ್ಟರು. ಇನ್ನೋರ್ವ ಅತಿಥಿ ಡಾ ಕಿಶನ್ ರಾವ್ ಬಾಳಿಲ ಅವರು ಮಾತನಾಡಿ ವೈದ್ಯನ ಪರಿಣತಿ , ಕೌಶಲ್ಯ ,ರೋಗ ವಿಧಾನ ಮತ್ತು ಔಷಧಿಯ ಜೊತೆಗೆ ರೋಗಿಯ ಶ್ರದ್ಧೆ ಮತ್ತು ನಂಬಿಕೆಗಳೂ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.ಲಯನ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಸೀನ್ ಪೂಜಾರಿ ಶುಭ ಹಾರೈಸಿದರು. ಲೇಖಕ ಡಾ ಮುರಲಿ ಮೋಹನ್ ಚೂಂತಾರು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.ಕ ಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು ಮತ್ತು ಶುಭ ಹಾರೈಸಿದರು.ಧನ್ವಂತರಿ ಮಂತ್ರ ಪಠಣ ದೊಂದಿಗೆ ಸಭೆ ಆರಂಭವಾಯಿತು. ಗಣೇಶ್ಪ್ರಸಾದ್ ಜಿ ಅವರು ವಂದಿಸಿದರು.ರಾಮಕ್ರಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.ಶ್ರೀ ಭಾರತೀ ಕಾಲೇಜು ಇದರ ಖಜಾಂಚಿ ಉದಯಶಂಕರ್ ನೀರುಪಾಜೆ, ಮಂಗಳೂರು ಹವ್ಯಕ ಸಭಾ ದ ಅಧ್ಯಕ್ಷ ಶ್ರೀ ಮತಿ ಗೀತಾಗಣೇಶ್
    ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎ.ಜೆ.ಆಸ್ಪತ್ರೆಯ ಸರ್ಜರಿ ವಿಭಾಗದ ಡಾ.ಕಿಶನ್ ರಾವ್ ಬಾಳಿಲ, ಹವ್ಯಕ ಸಭಾದ ಶ್ರೀ ಮತೀ ಗೀತಾ ಗಣೇಶ್, ಲಯನ್ ಸೀನ ಪೂಜಾರಿ, ಶ್ರೀ ಉದಯಶಂಕರ್ ನೀರ್ಪಾಜೆ ಭಾಗವಹಿಸಿದ್ದರು.
    Mangalore Samachar..
    / @mangaloresamachar9338

Комментарии •