ಚಿನ್ನ ಬೆಳ್ಳಿಯ ಕರಕುಶಲ ಕುಸುರಿ ಕಲಾಕಾರ ರಾದ ಶ್ರೀ ಸುಧಾಕರ ಡೋಂಗ್ರೆಯವರ ಮನದ ಮಾತು.

Поделиться
HTML-код
  • Опубликовано: 7 окт 2024
  • ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಕಲ್ಲಣ ಶ್ರೀಮತಿ ಪ್ರಮೀಳಾ ಡೋಂಗ್ರೆ ಮತ್ತು ಶ್ರೀ ಪದ್ಮನಾಭ ಡೊಂಗ್ರೆ, ಇವರ ಜೇಷ್ಠ ಪುತ್ರ ಶ್ರೀ ಸುಧಾಕರ ಡೊಂಗ್ರೆ.
    ಎಳವೆಯಲ್ಲೇ ಆಟ ಪಾಠಗಳೊಂದಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶ್ರೀಯುತ ಡಿಪಿ ನಾರಾಯಣ ಭಟ್ ಚಿಪ್ಲೂಂಣಕರ್ ಅಜ್ಜನ ಸಹವಾಸ. ಅಮ್ಮನು ಮನೆಯಲ್ಲಿ ಒಪ್ಪ ಹಾಕುವ ಕೆಲಸಗಳನ್ನು ಮಾಡುತ್ತಿದ್ದ ಸುಸಂದರ್ಥ ಕೈಯಾಡಿಸುತ್ತಿದ್ದುದೇ ಪ್ರಭಾವ ಆಗಿ ಮುಂದೆ ಬೆಳ್ಳಿಯ ಚಿನ್ನದ ಕೆಲಸಗಾರನಾಗಿ ತನ್ನ ವೃತ್ತಿಯಲ್ಲಿ ತೊಡಗಿದುಕೊಳ್ಳುವಂತೆ ಪ್ರೇರಣೆಯಾಯಿತು.
    ಬಾಲ್ಯದಲ್ಲಿ ಹಳ್ಳಿಯ ಜೀವನ ತಳಮಟ್ಟದಿಂದ ಬಂದಿರುವ ಶ್ರೀಯುತರು ಛಲದಿಂದ ಬೆಳ್ಳಿಯ ಕೆಲಸಗಳನ್ನು ಅಜ್ಜನ ಮನೆಯಲ್ಲಿ ಕಲಿತು ಸ್ವಂತ ಉದ್ಯಮವನ್ನು ತನ್ನ ಮನೆಯಲ್ಲಿ ಆರಂಭಿಸಿದರು.
    ಹಲವಾರು ಹುಡುಗರಿಗೂ ಕೆಲಸಗಳನ್ನು ಕಲಿಸುತ್ತಾ ತಾನು ಬೆಳೆಯುವುದರೊಂದಿಗೆ ಸಮಾಜದಲ್ಲಿ ಒಂದಷ್ಟು ಉದ್ಯಮಿಗಳನ್ನು ಬೆಳೆಸುವಂತಾದರು.
    ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ದೇವಾಲಯಗಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ, ಉಡುಪಿಯ ಶ್ರೀ ಕೃಷ್ಣ ಮಠ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ, ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ, ಕಾರ್ಕಳದ ಪಡು ತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ, ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಮೊದಲಾದ ಅನೇಕ ದೇವಾಲಯಗಳಲ್ಲಿ ಮತ್ತು ದೈವಾಲಯಗಳಲ್ಲಿ ಬೆಳ್ಳಿಯ ರಥಗಳು ಪಲ್ಲಕ್ಕಿಗಳು ಕಲಶ ಪ್ರಭಾವಳಿಗಳು ಬೆಳ್ಳಿ ಚಿನ್ನದ ದೇವರ ವಿಗ್ರಹಗಳು ಅಟ್ಟೇ ಪ್ರಭಾವಳಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕುಸುರಿ ಕೆಲಸಗಳನ್ನು ಮಾಡಿ ಕೊಟ್ಟಿರುವ ಹೆಗ್ಗಳಿಕೆ ಇವರದು.
    ಕುಸುರಿ ಕೆಲಸ ಬೆಳೆಯುವಲ್ಲಿ ತನ್ನ ಉದ್ಯಮದಲ್ಲಿ ಹಲವಾರು ಮಂದಿ ಕೆಲಸಗಾರರನ್ನು ತಯಾರು ಮಾಡಿ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಿರುವದು.
    ತಾನುಕಲಿತ ಮಾಳದ ಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗ ಸಂಚಾಲಕರಾಗಿ ತನ್ನ ಸೇವೆಯನ್ನು ನೀಡುತ್ತಾ ವಿದ್ಯಾ ಮಾತೆ ಸರಸ್ವತಿಯ ಪ್ರೀತಿಗೂ ಪಾತ್ರರಾಗಿದ್ದಾರೆ.
    ಮಾಳದ ಎಡಪಾಡಿ, ಶ್ರೀ ಪರುಶುರಾಮ ದೇವಳದ ಭಜಕರಾಗಿ ಕೆಲವೊಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.
    ತಳಮಟ್ಟದಿಂದ ಬಂದಿರುವ ಇವರು ಈಗಾಗಲೇ ಹಲವಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ.
    ತಾನು ಬೆಳೆಯುದರೊಂದಿಗೆ ಸಮಾಜ ಮುಖಿ ಯಾಗಿ ಅನೇಕ ಕೊಡುಗೆಗಳನ್ನು ಕೊಡುತ್ತಾ ಗೌರವಯುತವಾಗಿ ಬಾಳುತ್ತಿದ್ದಾರೆ. ಅವರ ಮುಂದಿನ ಜೀವನ ಇನ್ನೂ ಅಭಿವೃದ್ಧಿ ಮಟ್ಟದಲ್ಲಿ ಬೆಳೆದು ನೆಮ್ಮದಿಯಾಗಿರಲೆಂದು ಹಾರೈಸುತ್ತಾ.

Комментарии • 1

  • @SourabhChiploonkar
    @SourabhChiploonkar 3 месяца назад +2

    Really a great work by Mr Sudhakar Dongre! Wishing him more and more success!