ಉನ್ನತ ಶಿಕ್ಷಣ ಪೂರ್ವಭಾವಿ ಮಾಹಿತಿ ಕಾರ್ಯಾಗಾರ.

Поделиться
HTML-код
  • Опубликовано: 5 окт 2024
  • ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘಟನೆಯ ಆಶ್ರಯದಲ್ಲಿ ಕಾರ್ಯಕ್ರಮವು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸನ್ನಿಧಿ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ದಿನಾಂಕ 12 ಮೇ 2024 ರಂದು ಸುಸಂಪನ್ನ.
    ಸಮಾಜದ ವ್ಯಕ್ತಿಗಳು ಕಲೆ, ಭಾಷೆ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ನವೋದ್ಯಮ, ಕೃಷಿ, ವೇದಾಂಗ ಹೀಗೆ ಕೈಯಾಡಿಸದ ಕ್ಷೇತ್ರಗಳಿಲ್ಲ. ಹಾಗೆಯೇ ಮುಂದಿನ ಜನಾಂಗವೂ ಅವರ ಸಾಮರ್ಥ್ಯಕ್ಕೆ ತಕ್ಕುದಾದ, ಮನಸ್ಸಿಗೆ ಇಷ್ಟವಾದ, ತನ್ನ ಕುಟುಂಬವನ್ನು ಉತ್ತಮ ರೀತಿಯಿಂದ ಪಾಲನೆಮಾಡಬಲ್ಲ ವೃತ್ತಿಗಳನ್ನು ಪಡೆಯಲು ಇಂಥದ್ದೊಂದು ಮಂಥನದ ಅಗತ್ಯವಿದೆ.
    ಇಂದಿನ ದಿನಮಾನದಲ್ಲಿ ಒಳ್ಳೆಯ ಪೂರ್ವಸಿಧ್ಧತೆಗಳೊಂದಿಗೆ ಯಾವುದೇ ವೃತ್ತಿಯನ್ನು ಆರಿಸಿಕೊಂಡರೂ ಉತ್ತಮ ಭವಿಷ್ಯ ಸಾಧ್ಯವಿದೆ. ಸೋತು ಜಿದ್ದಿನ ಸ್ಪರ್ಧೆಗೆ ಇಳಿಯುವ ಬದಲು ಎಳವೆಯಲ್ಲೇ ಸ್ವಲ್ಪವಾದರೂ ಸ್ಪರ್ಧಾತ್ಮಕ ಜಗತ್ತಿನ, ನಿರ್ದಿಷ್ಟತೆ, ಸ್ಪಷ್ಟಗುರಿ, ಪೂರ್ವತಯಾರಿಗಳನ್ನು ಮಾಡುವ ವಿಧಾನಗಳ ಪರಿಚಯ ಮಾಡಿಕೊಂಡರೆ ನಮ್ಮಲ್ಲೂ, ನಮ್ಮ ಮಕ್ಕಳಲ್ಲೂ ಉತ್ತಮ ಮಾನಸಿಕ ಸ್ಥೈರ್ಯ, ಸವಾಲುಗಳನ್ನು ಎದುರಿಸುವ ಛಲ ನಿರ್ಮಾಣವಾಗುತ್ತದೆ. ಹುಟ್ಟು ಪರಿಶ್ರಮಿಗಳಾದ ನಮ್ಮ ಸಂಸ್ಕಾರಗಳು ಒಳ್ಳೆಯ ದಿಸೆಯಲ್ಲಿ ಸಾಗುವಂತಾಗುತ್ತದೆ. ಕ್ಲಾಟ್
    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕಿನ ಚಿತ್ಪಾವನ ಬ್ರಾಹ್ಮಣರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ವಿಚಾರ ಸಂಕಿರಣ.
    ಪ್ರಾರ್ಥನೆ ಯೊಂದಿಗೆ ಆರಂಭ ಕಂಡು ಚಿತ್ಪಾವನ ಸಂಘದ ಅಧ್ಯಕ್ಷರಾದ ಶ್ರೀ ತ್ರಿವಿಕ್ರಮ ಹೆಬ್ಬಾರ್ ರವರಿಂದ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು.
    ದೇವಳ ಆಡಳಿತ ಮೊಕ್ತೇಸರ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಉದ್ಘಾಟನಾ ನುಡಿಗಳನ್ನಾಡಿದರು.
    ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರಾಮಕುಂಜ ಕಾಲೇಜು ಪ್ರಾಂಶುಪಾಲರಾದ ಶ್ರೀ ಸತೀಶ್ ಭಟ್ ಮರಾಠೆಯವರು ವಿಚಾರಗಳನ್ನು ಮಂಡಿಸಿದರು.
    Mangalore Samachar..
    / @mangaloresamachar9338

Комментарии • 2

  • @ganeshshendye8169
    @ganeshshendye8169 4 месяца назад +5

    It was wonderful, eye opening session by Sri Sathish Bhat Sir

  • @VikrantKelkarKarambaru
    @VikrantKelkarKarambaru 4 месяца назад +5

    Very informative session @Satish Bhat. Thanks for the organisers..