ಗೆದ್ದೆಯೊ ಹನುಮಂತ ಅಸುರರ | geddeyo hanumantha asurara - with kannada lyrics | purandara Dasaru

Поделиться
HTML-код
  • Опубликовано: 25 авг 2024
  • #bhajane #purandaraDasaru #hanumanta #mukhyaPraana
    ಗೆದ್ದೆಯೊ ಹನುಮಂತ ಅಸುರರ ಒದ್ದ್ಯೋ ನೀ ಬಲವಂತ
    ಬದ್ಧಾಂಜಲಿಯಿಂದ ರಘುಪತಿಪಾದವ ಹೃದ್ಯದಿ ಭಜನೆ ಮಾಡುವ ಬುದ್ಧಿವಂತ||
    ಅಂಜನೆ ಸುತನೀತ ಲಂಕಾಪುರದಿ ಅಕ್ಷಯನ ಕೊಂದಾತ|
    ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು ಮಂಜುಳ ವಾರ್ತೆಯ ತಂದ ರಾಮನ ದೂತ||
    ಈರೇಳು ಜಗದೊಳಗೆ ಇನ್ನು ಮತ್ತೆ ಯಾರು ಸರಿಯೋ ನಿನಗೆ|
    ವೀರ ಮಹಾಬಲ ಶೂರ ಪರಾಕ್ರಮ ಧೀರ ಸಮೀರ ಉದಾರ ಗಂಭೀರ||
    ವಾಂಛಿತ ಫಲವೀವನಾದ ಮುಖ್ಯಪ್ರಾಣ ಮಹಾನುಭಾವ|
    ಕಿಂಚಿತ್ತು ಕಷ್ಟವ ಪಡಲೀಸಾ ಭಕ್ತರಿಗೆ ಪಾಂಚಜನ್ಯಧರ ಪುರಂದರ ವಿಠ್ಠಲದಾಸ||

Комментарии • 1