ಮಾ ಮಝ ಭಾಪುರೇ | maa maja bapure with lyrics | Purandara dasaru | Hanuma | Mukhyapraana

Поделиться
HTML-код
  • Опубликовано: 12 сен 2024
  • #bhajane #dasarapadagalu #mukhyapraana #hanuma #purandaradasaru
    ಮಾ ಮಝ ಭಾಪುರೇ ಭಳಿರೆ ಹನುಮಂತ॥ಪ॥
    ರಾಮಪದ ಸೇವಿಪ ವೀರ ಹನುಮಂತ ||
    ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ|
    ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ॥
    ದಿಟ್ಟ ಹರಿದಾಡಿ ಮನಮುಟ್ಟ ಪೂಜಿಸಲವನ |
    ಪಟ್ಟಕನುವಾದ ಸಿರಿವಂತ ಹನುಮಂತ ॥೧॥
    ಅಂಬರಕೆ ಪುಟನೆಗೆದು ಅಂಬುಧಿಯ ನೆರೆದಾಟ।
    ಕುಂಭಿನಿಯ ಮಗಳಿಗುಂಗುರವನಿತ್ತೆ||
    ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ|
    ಗಂಭೀರ ವೀರಾಧಿವೀರ ಹನುಮಂತ ॥೨॥
    ಅತಿದುರುಳ ರಕ್ಕಸನು ರಥದ ಮೇಲಿರಲು ರಘು।
    ಪತಿಯು ಪದಚರಿಯಾಗಿ ನಿಂತಿರಲು ನೋಡಿ ॥
    ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ |
    ಅತಿಭಯಂಕರ ಸತ್ತ್ವವಂತ ಹನುಮಂತ ||೩||
    ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದು |
    ದೃಢಭಕುತಿಯಿಂದ ಮೌನದಲಿ ಕುಳಿತು॥
    ಎಡೆಯ ಕೊಂಡೆದ್ದೋಡಿ ಗಗನದಲಿ ಸುರರಿಂಗೆ |
    ಕೊಡುತ ಸವಿ ದುಂಡ ಗುಣವಂತ ಹನುಮಂತ ॥೪॥
    ಪ್ರಥಮದಲಿ ಹನುಮಂತ ದ್ವಿತಿಯದಲಿ ಕಲಿಭೀಮ |
    ತೃತಿಯದಲಿ ಗುರುಮಧ್ವ ಮುನಿಯು ಎನಿಸಿ||
    ಪ್ರತಿಯಿಲ್ಲದಲೆ ಮೆರೆದೆ ಪುರಂದರ ವಿಠ್ಠಲನ|
    ಭಕ್ತ ನಿನಗಾರು ಸರಿ ವಿಜಯ ಹನುಮಂತ||೫||

Комментарии •