ಅಳದಂಗಡಿ ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನ20ನೇ ವರ್ಷದ ಉಚಿತ ಪುಸ್ತಕ ವಿತರಣೆ, ಆರೋಗ್ಯ ಶಿಬಿರ ಸಂಪನ್ನ.

Поделиться
HTML-код
  • Опубликовано: 10 июн 2024
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಅಳದಂಗಡಿ ಶ್ರೀ ಸತ್ಯ ದೇವತಾ ದೈವ ಸ್ಥಾನದಲ್ಲಿ ಶ್ರೀ ಸತ್ಯದೇವತಾ ವತಿಯಿಂದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಸಹಯೋಗದೊಂದಿಗೆ ಜೂನ್ 9ರಂದು ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ 20ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸಮ್ಮಾನ ಮತ್ತು ಆರೋಗ್ಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಖ್ಯಾತ ಚಲನಚಿತ್ರ ನಟ ಹಾಗೂ ಸಿರಿ ಬ್ರಾಂಡ್ ರಾಯಭಾರಿ ರಮೇಶ್ ಅರವಿಂದ್ ಮಾತನಾಡುತ್ತಾ,
    ಧರ್ಮ ಕ್ಷೇತ್ರವೊಂದು 63 ಸಾವಿರ ವಿದ್ಯಾರ್ಥಿ ಗಳಿಗೆ ನೆರವಾಗಿರುವುದು ಮಾದರಿ. ನಮ್ಮೊಳಗಿನ ಸಾಧಕರು, ಸಾಧನೆಯನ್ನು ನಾವು ಗೌರವಿಸಬೇಕು. ಹಾಗಾದಾಗ ಮತ್ತಷ್ಟು ಸಾಧಕರು ಹೊರಹೊಮ್ಮಲು ಸಾಧ್ಯ ಅರ್ಥಪೂರ್ಣವಾದ ಕೆಲಸ, ಉತ್ತಮ ನಿದ್ದೆ ವ್ಯಾಯಾಮ, ನಮ್ಮ ಮನೆ, ಕೆಲಸ, ಕುಟುಂಬದೊಳಗಿನ ಸಂಬಂಧಗಳು ಸರಿಯಿದ್ದರೆ ಬದುಕು ಸಂತಸದಿಂದ ಕೂಡಿರುತ್ತದೆ. ಇದರೊಂದಿಗೆ ಸಾಮಾಜಿಕ ಸೇವೆ ನಮ್ಮ ಜೀವನದ ಅರ್ಥವನ್ನು ಪರಿಪೂರ್ಣಗೋಳಿಸುವದು.
    ಉಚಿತ ಪುಸ್ತಕ ವಿತರಣೆ, ಆರೋಗ್ಯ ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಡಾ। ಡಿ. ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿದ್ದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ. ಡಾ| ಡಿ. ವೀರೇಂದ್ರ ಹೆಗ್ಗಡೆ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿ ಮಾತನಾಡಿ, ಅರಸರು ಮತ್ತು ಅಜಿಲರು ಗ್ರಾಮೀಣ ವಾಗಿ 20 ವರ್ಷದಿಂದ ನೀಡುತ್ತಿರುವ
    ಪುಸ್ತಕ ವಿತರಣೆ ಮಾದರಿ ಎಂದರು. ಅಳದಂಗಡಿ ಅರಮನೆಯ
    ತಿಮ್ಮಣ್ಣರಸರಾದ ಡಾ। ಪದ್ಮಪ್ರಸಾದ್ ಅಜಿಲರು ಅಧ್ಯಕ್ಷತೆ ವಹಿಸಿದ್ದರು.
    ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಆಡಳಿತ ಮೊತ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ
    ಉಪಸ್ಥಿತರಿದ್ದರು.
    ನಟ ರಮೇಶ್ ಅರವಿಂದ್ ಅವ ರನ್ನು ಕ್ಷೇತ್ರದ ವತಿಯಿಂದ ಶಾಲು, ಹಾರ, ಸ್ಮರಣೆಕೆ, ಹಣ್ಣು ಹಂಪಲು, ಫಲಕ, ಬೆಳ್ಳಿಯ ಕಲಶ ನೀಡಿ ಸಮ್ಮಾನಿಸಲಾ ಯಿತು.
    ನಿವೃತ್ತ ಯೋಧ ರಾದ ಗಣೇಶ್ ಲಾಯಿಲ, ಸಂಜೀವ ಕುಲಾಲ್, ಯೋಧ ಸೂರಜ್, ಸಾಧಕಿ ಸಬಿತಾ ಮೋನಿಸ್ ಅವರನ್ನು ನಟ ರಮೇಶ್ ಅರವಿಂದ್ ಸಮ್ಮಾನಿಸಿದರು. ಎಸೆಸೆಲ್ಸಿ ಸಾಧಕ ಚಿನ್ಮಯ್, ಪಿಯುಸಿ ಸಾಧಕರಾದ ಧ್ವನಿ ಭಟ್, ಅನುಪ್ರಿಯಾ ಅವರನ್ನು ಗೌರವಿಸಲಾಯಿತು.
    'ಸಿರಿ' ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ದನ ಪ್ರಸ್ತಾವನೆಗೈದರು. ಅಳದಂಗಡಿ ಅರಮನೆ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಅಜಿತ್, ಕುಮಾರ್ ಕೊಕ್ರಾಡಿ, ಪ್ರಜ್ಞಾಕುಲಾಲ್, ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
    ಆರೋಗ್ಯ ಶಿಬಿರ: ಅಳದಂಗಡಿ ಶ್ರೀ
    ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ, ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ, ಕಸ್ತೂರ್ಬಾಮೆಡಿಕಲ್ ಕಾಲೇಜುಮತ್ತು ಭಾರತೀಯ ರೆಡ್ ಕ್ರಾಸ್ ಸಹಯೋಗ ದಲ್ಲಿ ಅಂಗಾಂಗ ದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಾವೂರು ಡಾ| ಪ್ರದೀಪ್ ಉದ್ಘಾಟಿಸಿದರು. ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ| ಎನ್.ಎಂ. ತುಳುಪುಳೆ, ಡಾ। ಶಶಿಧರ ಡೋಂಗ್ರೆ, ಡಾ। ಸುಷ್ಮಾ ಡೋಂಗ್ರೆ, ಸೌಪರ್ಣಿಕಾ, ಉದ್ಯಮಿ ರಾಕೇಶ್ ಹೆಗ್ಡೆ ಹಬರ್ಟ್ ಮ್ಯಾಥ್ ಪಿರೇರಾ, ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್ ಉಪಸ್ಥಿತರಿದ್ದರು.
    Mangalore Samachar..
    / @mangaloresamachar9338
  • РазвлеченияРазвлечения

Комментарии •