ತನ್ನ ಇನಿಯನು ಬರುವ (tanna iniyanu baruva)| Bhavageethe| Shrinivasa Nayak |Anjali Mehendale|Vidya Umesh
HTML-код
- Опубликовано: 5 фев 2025
- Bhavageethe : Tanna Iniyanu Baruva...
Lyrics: Shrinivasa Nayak
Composer & Singer: Anjali Mehendale
Music : Shiva Sathya
Voice mixing : Lokesh B.K
Acting : Vidya Umesh
Videography: Prajwal Nayak
Editing: Shrinivasa Nayak
Special Thanks to:
Umesh Nayak
Hema Nayak
Sneha Umesh
Veena Shrinivas
Gurumurthy Mehendale
Video Shooting Spot
Shri Lakshmi Ravalanatha Nilaya Jigani
#bhavageete #soulful #romantic
ತನ್ನ ಇನಿಯನು ಬರುವ, ಸಣ್ಣ ಸೂಚನೆಯಿಂದ
ಮಂದಹಾಸವು ಅವಳ ಅಧರದಲ್ಲಿ...
ಇನಿಯನೊಲುಮೆಯ ನೆನೆದು, ಮನದ ಬೇಸರ ಕಳೆದು,
ಬಣ್ಣಗಟ್ಟಿದೆ ಕನಸು ಕಣ್ಣಿನಲ್ಲಿ....
ರೇಶಿಮೆಯು ಮೈಯಲ್ಲಿ, ಮದರಂಗಿ ಕರದಲ್ಲಿ
ಸೆಳೆವ ರಂಗಿನ ಹೊಳಪು ಬೆರಳ ತುದಿಯಲ್ಲಿ...
ಬೊಟ್ಟು,ಬಳೆ,ಸರ ತೊಟ್ಟು, ಮುಡಿಗೆ ಮಲ್ಲಿಗೆಯಿಟ್ಟು,
ಚೆಲುವು ಸಂಭ್ರಮಿಸುತಿದೆ ಕನ್ನಡಿಯಲಿ...
ಅವನೊಲವು ಎದೆಯಲ್ಲಿ, ಹಂಬಲವು ಮನದಲ್ಲಿ
ಸಮಯ ಸರಿಯದ ಭಾವ ಬಾಗಿಲಲ್ಲಿ...
ನೋಟ ನಿಲುಕುವ ತನಕ, ತುಂಬಿ ತುಳುಕಿದೆ ತವಕ
ಎನಿತೊ ಕಾತರ ಬರುವ ದಾರಿಯಲ್ಲಿ...
ಹೊಸಿಲಬಳಿ ಬಂದವನೆ, ಮೆಲ್ಲ ಹೆಸರನು ಕೂಗಿ,
ಬಳಿಗೆ ಕರೆಯಲು ಅವಳ, ಸನ್ನೆಯಲ್ಲಿ...
ಆಸೆ ಕಂಗಳ ಚಾಚಿ, ನಿಂತ ನಿಲುವಿಗೆ ನಾಚಿ,
ಸಂಜೆ ಬಾನಿನ ಕೆಂಪು, ಕೆನ್ನೆಯಲ್ಲಿ....
- ಶ್ರೀನಿವಾಸ ನಾಯಕ್
#waiting #fiancee #happy #celebration #engaged
#sareelove #kannadasongs #newcomposition
#newsong #music #lightmusic
#ಭಾವಗೀತೆಗಳು #ಕನ್ನಡಹಾಡು #ಪ್ರೀತಿ #ಪ್ರೇಮಗೀತೆ
#ಸುಮಧುರ #kannadabhavageethe #lightmusic
Thank you all for watching. Please subscribe to the channel, like, comment and share with your contacts.
Let's spread the light music and new songs 🙏
my other popular bhavageethe
ಯಾಕೆ ಮೌನದ ಮುಸುಕು?
• ಯಾಕೆ ಮೌನದ ಮುಸುಕು(yaake...
ಒಲವಿನ ರಾಗಕೆ
• ಒಲವಿನ ರಾಗಕೆ | Olavina ...
ನೀ ಬರುವ ಕಾರಣಕೆ
• ಭಾವಗೀತೆ | ನೀ ಬರುವ ಕಾರಣ...
ಎನಿತು ಸುಂದರ ನಾಡು
• ಎನಿತು ಸುಂದರ ನಾಡು (enit...
ಆಷಾಢದೊಂದು ದಿನ, ನೀನು ಜೊತೆಗಿರದ ಕ್ಷಣ...
• ಭಾವಗೀತೆ | ಆಷಾಢದೊಂದು ದಿ...
ಕಾರಣವಿಲ್ಲದೆ ಕನಸಲಿ ಬಂದವ...
• ಕಾರಣವಿಲ್ಲದೆ ಕನಸಲಿ ಬಂದವ...
ಇನ್ನೆಷ್ಟು ದಿನ ಹೀಗೆ ಬಾಗಿಲನು ಮುಚ್ಚಿರುವೆ (ಶಾಲೆಯ ಬಗ್ಗೆ) • INNESHTU DINA HEEGE(ಇನ...
(composed and sung by Raghavendra beejadi)
ನೆವ - • ನೆವವೊಂದು ಬೇಕಿಹುದು(neva...
(ಬೆಂಗಳೂರು ಆಕಾಶವಾಣಿಯ ಪ್ರಸ್ತುತಿ)
ಎಂಥ ಸುದಿನ (Kannada birthday special song) • Entha Sudina (ಎಂಥ ಸುದಿ...
#food #easyrecipes #cooking #simplerecipes #beautifulsong #deepseek #ai #weightloss tips #weight loss recipes#exercises#sweets#chocolate#easy recipes#breakfast recipes#lunch and dinner recipes#weight loss exercises#weight loss diet#healthy diet#health tips#cooking tips#kitchen tips#home remedies#rangoli#hairstyles #stock #amazon #share #saree styles#saree draping#hand works#drawings#paintings#pencil sketches#crafts#chit chat @trending #mahakumbh #delhi #home tours#family story#fun time#family time#duet songs#bhajans#devara Nama#bhakti geet#devotional songs#Dasara pada#bhavageete#janapada geete#patriotic songs#vachanas#finance#money matters#saving tips#motivational talks#healthy talks#travelling#travelling vlogs#ಭಜನೆಗಳು#ದೇವರ ನಾಮ#ಭಕ್ತಿ ಗೀತೆ#ದಾಸರ ಪದ#ಭಾವಗೀತೆ#ಜಾನಪದ ಗೀತೆ#ದೇಶಭಕ್ತಿ ಗೀತೆ#ಪರಿಸರ ಗೀತೆ#ವಚನಗಳು#ಸುಲಭದ ಹಾಡುಗಳು#ಸುಲಭದ ಭಜನೆಗಳು#etc
#cricket #trending #newdesign #offers #businessideas
#workfromhome #free #instrumental
ಇನಿಯನ ಬರುವಿಕೆಯ ನಿರೀಕ್ಷೆ ಮಹಾಕಾವ್ಯವಾದ ಭಾವವೊಂದು ಕೇಳಿದ ನನ್ನ ಮನದಂಗಳದಲ್ಲಿ ಇನ್ನೂ ಗುಣುಗುಣಿಸುತ್ತಿದೆ. ಪ್ರೇಮಭಾವದ ಲಹರಿಯನ್ನು ಕೇಳುತ್ತಲೇ ಇರಬೇಕೆನ್ನುವ ತವಕ ತುಡಿಯುತ್ತಲೇ ಇದೆ....
ಬಣ್ಣಗಟ್ಟಿದೆ ಕನಸು ಕಣ್ಣಿನಲ್ಲಿ
ಸೆಳೆವ ರಂಗಿನ ಹೊಳಪು ಬೆರಳತುದಿಯಲ್ಲಿ
ಚೆಲುವು ಸಂಭ್ರಮಿಸುತ್ತಿದೆ ಕನ್ನಡಿಯಲ್ಲಿ
ಸಮಯ ಸರಿಯದ ಭಾವ ಬಾಗಿಲಲ್ಲಿ
ನೋಟ ನಿಲುಕುವ ತನಕ
ತುಂಬಿ ತುಳುಕಿದೆ ತವಕ
ಎನಿತು ಕಾತರ ಬರುವ ದಾರಿಯಲ್ಲಿ
ಆಸೆ ಕಂಗಳ ಬಾಚಿ
ನಿಂತ ನಿಲುವಿಗೆ ನಾಚಿ
ಸಂಜೆ ಬಾನಿನ ಕೆಂಪು ಕೆನ್ನೆಯಲ್ಲಿ
ಇನಿಯನ ನಿರೀಕ್ಷೆಯಲ್ಲಿ ಮುಳುಗಿಹೋದವಳ ಕ್ಷಣಕ್ಷಣದ ಭಾವವನ್ನು ಇದಕ್ಕಿಂತ ಉತ್ತಮವಾಗಿ ಪದಗಳಲ್ಲಿ ಹಿಡಿದಿಡಲು ಸಾಧ್ಯವೇ?
ಹಾಡೊಂದು ಪೂರ್ಣವಾಗಿ ವಯಸ್ಸಿನ ಪರಿವೆಯಿಲ್ಲದೆ ನಮ್ಮನ್ನು ಆವರಿಸಿಬಿಡುವ ಪ್ರೇಮಭಾವ ಭಾವಗೀತೆಯ ಯಶಸ್ಸನ್ನು ಸಾರುತ್ತದೆ.
ಇಂತಹ ಭಾವಪಯಣದ ಸಾಹಿತ್ಯವನ್ನು ರಚಿಸಿದ ಶ್ರೀನಿವಾಸ ನಾಯಕ್, ಮನಮುಟ್ಟುವ ಸಂಗೀತ ಸಂಯೋಜಿಸಿದ ಶ್ರೀಮತಿ ಅಂಜಲಿ ಮೆಹೆಂದಳೆ, ಭಾವಾಭಿನಯದಲ್ಲಿ ನಮ್ಮನ್ನು ಮರೆಯುವಂತೆ ಮಾಡಿದ ವಿದ್ಯಾ ಉಮೇಶ್ ಹಾಗೂ ತಂಡದ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು 🌹
ನಮ್ಮನ್ನು ನಾವು ಮರೆತು ಕೇಳುವಂತಹ ಇಂತಹ ಭಾವಗೀತೆಗಳು ಬರುತ್ತಲೇ ಇರಲಿ ಎಂದು ಹಾರೈಸುವೆ 🙏
ನಿಮ್ಮ ಮೆಚ್ಚುಗೆಗೆ ಮತ್ತು ಒಂದು ಹಾಡನ್ನು ಈ ಪರಿಯಲ್ಲಿ ಆಸ್ವಾದಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು 😊🙏
ಬಹಳ ಖುಷಿಯಾಯಿತು 😊
ಪ್ರತಿಯೊಂದು ಹೆಣ್ಣಿನ ಬಾಳಲ್ಲಿ ಬರುವ ಸುಂದರ ಸನ್ನಿವೇಶ.....
ಸವಿ ನೆನಪನ್ನು ಮೆಲುಕು ಹಾಕಿದಾಗಾಯಿತು..😊😊
ಸುಂದರ ಹಾಡಿಗಾಗಿ ಧನ್ಯವಾದಗಳು 🙏
@@shreeshetty2680 ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
ಬಹಳ ಚೆನ್ನಾಗಿ ಮೂಡಿ ಬಂದಿದೆ.. ಸಾಹಿತ್ಯವೂ ಉತ್ತಮವಾಗಿದೆ.❤
ತುಂಬಾ ಧನ್ಯವಾದಗಳು 😊🙏
ನಿಮ್ಮ ಚಂದದ ಸಾಹಿತ್ಯಕ್ಕೆ ಒಪ್ಪುವ ಗಾಯನ ಅಭಿನಯ ಹಾಡನ್ನು ಶ್ರೀಮಂತವಾಗಿಸಿದೆ 👌 ಅಭಿನಂದನೆಗಳು ತಂಡಕ್ಕೆ 🥳👏👏
@@ramyavinay292 ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
ತುಂಬಾ ಚೆನ್ನಾಗಿದೆ, ಅತ್ಯಂತ ಸುಂದರ.. ಉತ್ತಮ ಸಾಹಿತ್ಯ, ರಾಗ ಸಂಯೋಜನೆ, ಹಾಡುಗಾರಿಕೆ, ಹಿನ್ನಲೆ ಸಂಗೀತ ಎಲ್ಲವೂ ಭಾವಾಭಿನಯಕ್ಕೆ ಪೂರಕವಾಗಿ ಇಷ್ಟವಾಯಿತು.. ಒಂದಕ್ಕೊಂದು ಪೂರಕವಾಗಿ ಹೊಂದಿಕೊಂಡು ನೋಡಿಸಿಕೊಂಡು ಹೋಯ್ತು. ತುಂಬಾ ಸಂತೋಷವಾಯಿತು. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನೆಗಳು 💐💐🙏
ನಿಮ್ಮ ಮೆಚ್ಚುಗೆ ಖುಷಿಯಾಯಿತು. ಅನಂತ ಧನ್ಯವಾದಗಳು 😊🙏
ಬಹಳ ಚಂದದ ಸಾಹಿತ್ಯ. ಹದವಾದ ಸಂಗೀತ ಹಾಗೂ ಗಾಯನ. ಸುಂದರ ಭಾವಾಭಿನಯ.
ತುಂಬಾ ಧನ್ಯವಾದಗಳು ಸರ್ 😊🙏
ನಮ್ಮ ಕಾಲದ ಕೆ ಎಸ್ ಎನ್ ನೀನು ಶ್ರೀ❤ ಅಷ್ಟು ಚೆನ್ನಾಗಿದೆ ನಿನ್ನ ಈ ಒಲವಿನ ಸಾಹಿತ್ಯ...ಕೇಳುತ್ತಿದ್ದರೆ ಹಿತವಾದ ಆಹ್ಲಾದದ ಒಂದು ಹೊಸ ಭಾವಪ್ರಪಂಚದಲ್ಲಿ ಕಳೆದುಹೋದ ಹಾಗೆ. ಸಮಯ ಸರಿಯದ ಭಾವ ಬಾಗಿಲಲ್ಲಿ...ಈ ಸಾಲುಗಳು ಕಾಯುವಿಕೆಯಲ್ಲಿನ ವಿರಹದ ಜೊತೆಯಲ್ಲಿಯೇ ನಿರೀಕ್ಷೆಯ ಸಂಭ್ರಮವನ್ನೂ ಬಹಳ ಶಕ್ತವಾಗಿ ಕಟ್ಟಿಕೊಟ್ಟಿದೆ.ಪ್ರೇಮದ ಬದುಕಿನ ಅವಧಿಯೇ ಈ ವಿರಹದ ಕಾಲ.ಅದು ಪ್ರೇಮ ಬದುಕಿನ ಸುವರ್ಣ ಅಧ್ಯಾಯ. ಪ್ರೇಮದ ಎಲ್ಲಾ ಉತ್ಕಟತೆ ಸಾಧ್ಯವಾಗುವುದೂ ಕೂಡಾ ವಿರಹದಲ್ಲಿಯೇ.ನಿರೀಕ್ಷೆ ಮುಗಿದ ಮೇಲೆ ಮತ್ತೇನಿದೆ? ಈ ಉತ್ಕಟತೆಯನ್ನು ಈ ಕವಿತೆ ಮತ್ತಷ್ಟು ಸಂಭ್ರಮಿಸುವಂತೆ ಮಾಡಿದೆ❤
ನೋಟ ನಿಲುಕುವ ತನಕ ತುಂಬಿ ತುಳುಕಿದೆ ತವಕ...ಅವನು ಬರುವ ನಿರೀಕ್ಷೆಯ ದಾರಿ ಕೂಡಾ ಪ್ರೇಮದ ಘಮಲನ್ನೇ ಹೊದ್ದು ಕುಳಿತ ಹಾಗೆ. ಅದು ಮುಗಿಯದ ಕನಸುಗಳ ರಹದಾರಿ.ಹೊಸ ಬದುಕು ಸಾಧ್ಯವಾಗಿಸುವ ತಿರುವು. ಬಂದು ಎದುರು ನಿಲ್ಲುವ ತನಕ ಆ ದಾರಿಗೂ ದೇವರ ಗರ್ಭಗುಡಿಯ ನೋಟ.
ಈ ಭಾವಾಭಿನಯ ಭಾವಗೀತೆಯನ್ನು ಒಂದು ಖುಷಿಯಲ್ಲಿ ಒಂದು ಬೆರಗಿನಲ್ಲಿ ನೋಡುವ ಹಾಗೆ ಮಾಡಿದೆ❤️
ಅಭಿನಂದನೆಗೆಳು
ಕವಿತೆಯ ಬಗ್ಗೆ ಇಷ್ಟು ಸೊಗಸಾದ ಅಭಿಪ್ರಾಯ ಓದಿ ತುಂಬಾ ಖುಷಿಯಾಯಿತು ರವಿ ❤
ತುಂಬಾ ಧನ್ಯವಾದಗಳು 🙏 ಇಂತಹ ಸಾಲುಗಳನ್ನು ನನ್ನಲ್ಲಿ ಹೊಳೆಯಿಸಿದ ದೇವರಿಗೆ ನಮನ🙏
ಬಹಳ ದಿನಗಳ ಬಳಿಕ ಸುಂದರ ಗೀತೆಯನ್ನು ಕೇಳಿದಂತಾಯಿತು. ಉತ್ತಮ ಸಾಹಿತ್ಯ, ಪೂರಕ ಸಂಗೀತ ಸಂಯೋಜನೆ, ಇಂಪಾದ ಸ್ವರದಲ್ಲಿ ಗಾಯನ, ಹಿತವಾದ ಹಿನ್ನೆಲೆಯಲ್ಲಿ ವಾದ್ಯಗಳ ಸಮ್ಮಿಲನ, ಭಾವನೆಗಳಿಂದ ತುಂಬಿದ ಅಭಿನಯ, ಅತ್ಯುತ್ತಮ ಛಾಯಾಗ್ರಹಣ, ತಕ್ಕುದಾದ ಸಂಕಲನ, ಇಡೀ ತಂಡದ ಶ್ರಮ ಸಾರ್ಥಕವಾಗಿದೆ.
ಇನಿಯ ಬರುವ ವೇಳೆಗೆ ಮನಸು ಕಾತುರ ದಿಂದ ಕಾಯುವ ತವಕ, ನಿರೀಕ್ಷೆ, ಅಂತರಂಗದ ಲ್ಲಿ ಮೂಡುವ ನವಿರಾದ ಸಂಭ್ರಮ ಇವೆಲ್ಲವೂ ಸಾಹಿತ್ಯದಲ್ಲಿ ಮತ್ತು ಅಭಿನಯದಲ್ಲಿ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು.
ಭಾವಾಭಿನಯದ ನಿರ್ದೇಶಕರು ಯಾರು?
ನಿಮ್ಮ ಮೆಚ್ಚುಗೆಗೆ, ಅಭಿಪ್ರಾಯಕ್ಲೆ ಅನಂತ ಧನ್ಯವಾದಗಳು 😊🙏 ತುಂಬಾ ಖುಷಿಯಾಯಿತು 😊
ಮತ್ತೆ ಇಂತದ್ದೊಂದು ಹಾಡು ಮಾಡುವುದಕ್ಕೆ ಇಂತಹ ಕಾಮೆಂಟ್ ಪ್ರೇರಣೆಯಾಗುವುದು.
ಅಭಿನಯ ನಿರ್ದೇಶನ ನಾವೇ ಸೇರಿ ಮಾಡಿದ್ದು. ಒಬ್ಬೊಬ್ಬರು ಒಂದೊಂದು ಐಡಿಯಾ ಕೊಟ್ಟೆವು. ನಮ್ಮ ಅಭಿನೇತ್ರಿ ಅದಕ್ಕೆ ಸೊಗಸಾಗಿ ಭಾವ ತುಂಬಿದರು 😊
ವಾಹ್ ಅದ್ಬುತ ಮಧುರ ಕಂಠದ ಗಾಯನ ಮತ್ತು ಅತಿ ಸುಂದರ ಸಾಹಿತ್ಯ
ತುಂಬಾ ಧನ್ಯವಾದಗಳು 😊🙏
ಶ್ರೀನಿವಾಸ್ ಸರ್ ನಾಯಕ್ ಈ ಸಾಂಗ್ ಕೇಳಿ ನಿಮ್ಮ ದೊಡ್ಡ ಅಭಿಮಾನಿ ಅದೇ ಸರ್ ಅದ್ಭುತವಾದ ಲೈನು ಅದ್ಭುತವಾದ ಸಾಂಗ್ ❤️❤️😍😍
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊😊❤🙏
Tumba chennagide sir❤️ Abhinaya innusa chanda ide, Idannu nodida nantara nimma abhimaaniyade sir🙏❤️
ತುಂಬಾ ಧನ್ಯವಾದಗಳು 😊🙏
ಆಹಾ ಎಷ್ಟು ಒಳ್ಳೆಯ ಸಾಹಿತ್ಯ!, ಅದಕ್ಕೆ ತಕ್ಕನಾದ ಸುಮಧುರವಾದ ಸಂಗೀತ-ಗಾಯನ,, ಮತ್ತು ಸುಂದರವಾದ ಭಾವ ತುಂಬಿದ ನಟನೆ... ಎಲ್ಲವೂ ಮನಸ್ಸನ್ನು ಮುಟ್ಟುವ ಹಾಗೆ ಮೂಡಿ ಬಂದಿದೆ. ಧನ್ಯವಾದಗಳು ❤️
@@sinchanavbhat9332 ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
ಇಂತಹ ಹಾಡು ಕೊಟ್ಟು ನಮ್ಮ ಕವಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏
ಸರ್, ದೊಡ್ಡ ಮಾತು 😊🙏 ತುಂಬಾ ಧನ್ಯವಾದಗಳು 🙏
Super sir, thumba chennagide
Thank you so much 😊🙏
Thumba changi ede Vidya ❤❤❤
ತುಂಬಾ ಧನ್ಯವಾದಗಳು 🙏
Super song very good lyrics very good acting loved it❤
ತುಂಬಾ ಧನ್ಯವಾದಗಳು 😊🙏
ಅದ್ಬುತವಾಗಿದೆ ❤❤❤❤
ತುಂಬಾ ಧನ್ಯವಾದಗಳು 🙏
ಸೊಗಸಾದ ಸಾಹಿತ್ಯ... ಸುಂದರ ಗಾಯನ ಹಾಗು ಅಭಿನಯ...👌👌💐💐
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 🙏
90ರ ದಶಕಗಳ ನೆನಪುಗಳು ಹಿಂದಿರುಗಿ ಬರುವಂಥ ಭಾವಗೀತೆ 👌 ಸಾಹಿತ್ಯ, ಸಂಗೀತ, ನಟನೆ ಎಲ್ಲವೂ 👌👌👌ಅದ್ಭುತ
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 😊🙏
Tumba chennagide 👌👌👌
ತುಂಬಾ ಧನ್ಯವಾದಗಳು🙏
ಬಹಳ ಸೊಗಸಾದ ಅನುಭೂತಿ ನೀಡಿದ ಭಾವಗೀತೆ.. ಸಾಹಿತ್ಯ - ರಾಗ - ಗಾಯನ- ಸಂಗೀತ - ಭಾವಾಭಿನಯಗಳ ಮಧುರ ಸಂಗಮ ಈ ಗೀತೆ..ಇಷ್ಟಪಟ್ಟೆ..♥️✍🏻🎶💝💐🙏
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 😊🙏
ಖುಷಿಯಾಯಿತು 😊
ತುಂಬಾ ಚೆನ್ನಾಗಿದೆ ಸರ್
@@anilkumaryeddula7464 ತುಂಬಾ ಧನ್ಯವಾದಗಳು 😊🙏
ಬಹಳ ಚೆಂದದ ಹಾಡು. ಮನದೊಳಗಿನ ಪ್ರೀತಿಯ ಭಾವನೆಗಳನ್ನು ಅಕ್ಷರದ ಮೂಲಕ, ಅಕ್ಷರವನ್ನು ಗೀತೆಯಾಗಿ, ಗೀತೆಯನ್ನು ಕಣ್ಣಿಗೆ ರಂಗಾಗಿಸಿ ತೋರಿದ ಪರಿ ಅದ್ಭುತ. ಹಾಡಿಗೆ ತೊಡಗಿಸಿಕೊಂಡ ಎಲ್ಲರಿಗೂ ಅಭಿನಂದನೆಗಳು 🌷
ನಿಮ್ಮ ಪ್ರೀತಿಗೆ, ಮೆಚ್ಚುಗೆಗೆ ಮತ್ತು ಹಾಡಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು ಸರ್ 😊🙏
ಅದ್ಭುತವಾದ ರಚನೆ....ಹೀಗೆ ಸಾಗಲಿ ಕವನಗಳ ಪಯಣ....
ತುಂಬಾ ಧನ್ಯವಾದಗಳು 😊🙏
ತುಂಬಾ ಚೆನ್ನಾಗಿದೆ ಅಣ್ಣ ❤
ತುಂಬಾ ಧನ್ಯವಾದಗಳು 😊🙏
ಸುಂದರ ಸುಲಲಿತ ಸಾಹಿತ್ಯ, ಸುಮಧುರ ಗಾಯನ ಹಾಗೂ ಅದ್ಭುತ ಭಾವಾಭಿನಯ
ತುಂಬಾ ಧನ್ಯವಾದಗಳು 😊🙏
ಪ್ರೇಮ ಕವಿಯ ಸಾಹಿತ್ಯ ಅತ್ಯದ್ಭುತ ❤
ತುಂಬಾ ಧನ್ಯವಾದಗಳು ಅಕ್ಕಾ 🙏
Meaningful Lyrics, Nice composition, singing, acting and videography....👌👌👌👏👏👏🎉🎉🎉
ತುಂಬಾ ಧನ್ಯವಾದಗಳು 😊🙏
ಈ ಗೀತೆಯಲ್ಲಿ ನಿಮ್ಮ ಸಹಕಾರಕ್ಕೂ ಧನ್ಯವಾದಗಳು 🙏
ಚೆನ್ನಾಗಿತ್ತು...😍
ತುಂಬಾ ಧನ್ಯವಾದಗಳು 😊🙏
ಕನ್ನಡಕ್ಕಾಗಿ ಮತ್ತೊಂದು ಭಾವಗೀತೆ😊
@@ಕಾಳಜಿಯಕನ್ನಡಿಗಜ಼ಮೀರ್ ತುಂಬಾ ಧನ್ಯವಾದಗಳು 🙏
👏👏👌👌 tumba chendada bhawa geete, chenna gi hadiddare 🥰🥰
ತುಂಬಾ ಧನ್ಯವಾದಗಳು 😊🙏
ಬಹಳ ಸೊಗಸಾಗಿ ಮೂಡಿಬಂದಿದೆ 👌👏💐
ತುಂಬಾ ಧನ್ಯವಾದಗಳು 😊🙏
ಸಾಹಿತ್ಯ, ಗಾಯನ, ಅಭಿನಯ..... ಎಲ್ಲವೂ ಚಂದ
ತುಂಬಾ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ 😊🙏
ತುಂಬಾ ಚೆನ್ನಾಗಿದೆ ಹಾಡು ❤❤
ತುಂಬಾ ಧನ್ಯವಾದಗಳು 😊🙏
ಹೃದಯಕ್ಕೆ ನಾಟಿದಂತಿದೆ!!!!!
ತುಂಬಾ ಧನ್ಯವಾದಗಳು 😊🙏
ಸೂಪರ್. ಶುಭವಾಗಲಿ
ತುಂಬಾ ಧನ್ಯವಾದಗಳು😊🙏
ಸಾಹಿತ್ಯ, ಸಂಗೀತ ಗಾಯನ ಎಲ್ಲವೂ ಚೆನ್ನಾಗಿದೆ.
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು ಮೇಡಮ್ 🙏
ಖುಷಿಯಾಯಿತು 😊
ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
Its been long time to listen these kind of lyrics..pleasant music and good video .. awesome 🎉🎉🎉
Thank you so much 😊🙏
👌👌 ತುಂಬಾ ಚೆನ್ನಾಗಿದೆ
ತುಂಬಾ ಧನ್ಯವಾದಗಳು 🙏
Beautiful lyrics 😊
ತುಂಬಾ ಧನ್ಯವಾದಗಳು 😊🙏
ತುಂಬಾ ಚೆನ್ನಾಗಿದೆ 🎉
ತುಂಬಾ ಧನ್ಯವಾದಗಳು 😊🙏
As always beautiful lyrics , lovely singing n Beautiful presentation.. liked it 👌👌 super
@@bhagyashreedharwad590 ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
Nice 👍❤
ತುಂಬಾ ಧನ್ಯವಾದಗಳು 🙏
❤As Always Super Duper Sir👌👍😍❤️💖💐
ತುಂಬಾ ಧನ್ಯವಾದಗಳು 🙏
Super sneha akka and vidya akka💞
ತುಂಬಾ ಧನ್ಯವಾದಗಳು 😊🙏
ತುಂಬಾ ಚೆನ್ನಾಗಿದೆ ಸರ್
ತುಂಬಾ ಧನ್ಯವಾದಗಳು 😊🙏
Awesome 👌
Thank you
ಚೆನ್ನಾಗಿ ಹಾಡಿದ್ದಾರೆ 👌👏👏💐
ತುಂಬಾ ಧನ್ಯವಾದಗಳು 😊🙏
ಚೆನ್ನಾಗಿದೆ ಈ ಹಾಡು
ತುಂಬಾ ಧನ್ಯವಾದಗಳು 🙏
ಸುಂದರ ಸುಮಧುರ... Enjoyed listening to it♥️
ತುಂಬಾ ಧನ್ಯವಾದಗಳು 😊🙏
ತುಂಬಾ ಚೆನ್ನಾಗಿದೆ.ಹಾಡು, ಭಾವಭಿನಯ ,ರಾಗ ಸಂಯೋಜನೆ ಎಲ್ಲಾ ಚೆನ್ನಾಗಿ ಮೂಡಿಬಂದಿದೆ.ಅಭಿನಂದನೆಗಳು🌷🌷
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
Bhavageete tumba chennagide estavaitu
ತುಂಬಾ ಧನ್ಯವಾದಗಳು 😊🙏
Super
@@srinivasrao2129 thank you
ಎಂಥ ಅದ್ಭುತ ಗೀತೆ ಹೃದಯಾ ತುಂಬಿ ಬಂತು❤. ನೀವು ಪ್ರತೀಯೊಂದು ಶಬ್ದಗಳನ್ನು ಆರಿಸಿ ...ಪೋಣಿಸಿ ಬರೆದ ಈ ಸುಂದರ ಗೀತೆಯನ್ನು ಕೇಳಿ ನನ್ನ ಮನಸ್ಸೂ ಹಾಡಿತು...🥰🥰❤❤
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 😊🙏 ಖುಷಿಯಾಯಿತು 😊
Super 👌 ❤
ತುಂಬಾ ಧನ್ಯವಾದಗಳು 😊🙏
ಅದ್ಭುತ ಸಾಹಿತ್ಯ, ಉತ್ತಮ ಅಭಿನಯ, ಸೊಗಸಾದ ಹಾಡುಗಾರಿಕೆ, ಒಳ್ಳೆಯ ಹಿನ್ನೆಲೆ ಸಂಗೀತ 👌👌👌
ತುಂಬಾ ಧನ್ಯವಾದಗಳು 🙏
Sooooo nice❤
@@pratibhahegde9052 ತುಂಬಾ ಧನ್ಯವಾದಗಳು 🙏
ತುಂಬಾ ಸೊಗಸಾಗಿದೆ. ಈ ಹಾಡು ಹಳೆಯ ಹುಚ್ಚು ಕೊಡಿ ಮನಸು ಹಾಡನ್ನ ನೆನಪಿಸುತ್ತದೆ. ಭಾವಾಭಿನಯ ಸೂಪರ್ ಆಗಿದೆ❤❤
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
Super 👌👌
ತುಂಬಾ ಧನ್ಯವಾದಗಳು 😊🙏
👏👌👌
ತುಂಬಾ ಧನ್ಯವಾದಗಳು 🙏
Meaningful
ತುಂಬಾ ಧನ್ಯವಾದಗಳು 🙏
Very Nice composition, singing and acting
ತುಂಬಾ ಧನ್ಯವಾದಗಳು 🙏
ಸಾಹಿತ್ಯ, ಗಾಯನ, ರಚನೆ, ಬಹಳ ಸೊಗಸಾಗಿದೆ 👍🙏❤
ತುಂಬಾ ಧನ್ಯವಾದಗಳು 🙏
ಸೊಗಸಾಗಿದೆ 👌🏻👌🏻👌🏻
ತುಂಬಾ ಧನ್ಯವಾದಗಳು 🙏
❤️👍
ತುಂಬಾ ಧನ್ಯವಾದಗಳು 🙏
Nice one ❤ loved it 😊
ತುಂಬಾ ಧನ್ಯವಾದಗಳು 😊🙏
ತುಂಬಾ ಒಳ್ಳೆಯ ಸಾಹಿತ್ಯ
ತುಂಬಾ ಧನ್ಯವಾದಗಳು 🙏
Nice
ತುಂಬಾ ಧನ್ಯವಾದಗಳು 😊🙏
ಸೂಪರ್ 🌹🌹🌹
ತುಂಬಾ ಧನ್ಯವಾದಗಳು 😊🙏
👌❤
ಧನ್ಯವಾದಗಳು 🙏
ತುಂಬಾ ಚೆನ್ನಾಗಿದೆ ಸರ್ 👌❤
ತುಂಬಾ ಧನ್ಯವಾದಗಳು 🙏
👌👌👌👌👌
ತುಂಬಾ ಧನ್ಯವಾದಗಳು 🙏
🎉💐💐👏👌
ತುಂಬಾ ಧನ್ಯವಾದಗಳು 🙏
Too good song. Nice singing and acting
ಧನ್ಯವಾದಗಳು 🙏
Very nice action
ತುಂಬಾ ಧನ್ಯವಾದಗಳು 🙏
ಕನ್ನಡದ ಸೊಗಸಾದ ಸೊಗಡು
ತುಂಬಾ ಧನ್ಯವಾದಗಳು 😊🙏
bhavapoorna haadu abhinaya.
ತುಂಬಾ ಧನ್ಯವಾದಗಳು ಸರ್ 🙏
👏👏👍ತುಂಬಾ ಚನ್ನಾಗೀ👌 ಸೋಗ್ಸಾಗಿ ಬಂದಿದೆ 🥰
ತುಂಬಾ ಧನ್ಯವಾದಗಳು 😊🙏
💐👌👌👌 ಅಭಿನಂದನೆಗಳು, ತುಂಬಾ ಚನ್ನಾಗಿ ಮೂಡಿ ಬಂದಿದೆ
ತುಂಬಾ ಧನ್ಯವಾದಗಳು 😊🙏
ಅತ್ಯದ್ಭುತ ಸಾಹಿತ್ಯ ಮತ್ತು ಗಾಯನ🥰
ತುಂಬಾ ಧನ್ಯವಾದಗಳು 😊🙏
Super 👌
ತುಂಬಾ ಧನ್ಯವಾದಗಳು 🙏
Nice
ತುಂಬಾ ಧನ್ಯವಾದಗಳು 😊🙏