ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ|kandu kandu nee enaa|Sri Purandara Dasaru|Sung by Anand Kulkarni

Поделиться
HTML-код
  • Опубликовано: 7 фев 2025
  • ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ | kandu kandu nee enaa
    Composed by Sri Purandara Dasaru
    Sung by Anand Kulkarni
    ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ
    ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ||
    ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
    ನಿಂದೆಯಲಿ ನೊಂದೆನೈಯ್ಯ ನೀರಜಾಕ್ಷ
    ತಂದೆತಾಯಿಯು ನೀನೆ ಬಂಧುಬಳಗವು ನೀನೆ
    ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||೧||
    ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
    ಎಣಿಸಲಾರದ ಭವದಿ ಕಡುನೊಂದೆ ನಾನು
    ಸನಕಾದಿಮುನಿವಂದ್ಯ ವನಜಸಂಭವ ಜನಕ
    ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||೨||
    ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆ
    ಭಕ್ತರಾಧೀನನಾಗಿ ಇರಬೇಡವೆ
    ಮುಕ್ತಿದಾಯಕ ನೀನು ಹೊನ್ನೂರುಪುರವಾಸ
    ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||೩||
    #anandamaya #anandkulkarni #bhaktigeete #dasarapadagalu #dasasahitya #devotionalsongs #kannadadevotionalsongs #purandaradasaru #purandaravittala #bhakti

Комментарии • 2

  • @annapurna6462
    @annapurna6462 2 дня назад +1

    Guruji.padhabhi.vandanegalu.lireks.hakidakke🙏🙏🙏🙏🙏🙏🎉🎉🎉🌹🌹🌹