ಬೆಳ್ತಂಗಡಿ ತಾಲೂಕು 18 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸುಸಂಪನ್ನ..

Поделиться
HTML-код
  • Опубликовано: 23 дек 2023
  • ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಡಿ.17 ರಂದು ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ನಡೆದ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ದ
    ಸರ್ವಾಧ್ಯಕ್ಷತೆ ವಹಿಸಿ ನಿವೃತ್ತ ಪ್ರಾಂಶುಪಾಲ ಪ್ರೊ| ಕೃಷ್ಣಪ್ಪ ಪೂಜಾರಿ ಯವರು ಮಾತನಾಡುತ್ತಾ,
    ಮೌಲ್ಯಗಳು ಮಾತೃ ಭಾಷೆಯಿಂದ ಬರು ವುದು ಮಾತೃ ಭಾಷೆಯಲ್ಲಿ ಮೂಡಿ ಬಂದ ಸಾಹಿತ್ಯ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಉದಾತ್ತವಾದ ಸಮಾಜ ನಿರ್ಮಾಣವೆ ಸಾಹಿತ್ಯದ ಮುಖ್ಯ ಕಾರ್ಯ ವಾಗಬೇಕು. ಕನ್ನಡ ಅನ್ನದ ಭಾಷೆಯಾದಾಗ ಮಾತ್ರ ಅದರ ಮೌಲ್ಯ ದೊರೆಯುತ್ತದೆ.
    ಕನ್ನಡ ಬೇರೂರಲು ನಮ್ಮೊಳಗೆ ಇಚ್ಛಾಶಕ್ತಿ ಇರಬೇಕು. ಕನ್ನಡ ಭಾಷೆ ಬೆಳೆದಾಗ ಕನ್ನಡಿಗರು ಬೆಳೆಯುತ್ತೇವೆ. ನಾಡೂ ಬೆಳೆಯಲು ಸಾಧ್ಯವಾಗುತ್ತದೆ ನಮ್ಮ ಮಾತೃ ಭಾಷೆ ವಿಸ್ತಾರವಾಗಿ ಇಂಗ್ಲಿಷ್ ಭಾಷೆಯ ಮಟ್ಟಕ್ಕೆ ಬೆಳೆಯಬೇಕು. ಕನ್ನಡ ಭಾಷೆಯಲ್ಲಿ ಮಾತನಾಡಲು ನಾವು ಹೆಮ್ಮೆ ಪಡಬೇಕು చెందరు.
    ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ನಾಗರಾಜ್ ರಾವ್ ಕಲ್ಕಟ್ಟೆ ಕಾರ್ಯ ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಭಾಷೆ ಎಂಬುದು ಜ್ಞಾನದ ವಾಹಿನಿಯೇ ಹೊರತು ಭಾಷೆಯ ಜ್ಞಾನ ಅಲ್ಲ ಇಂಗ್ಲಿಷ್ ನಮಗೆ ವಿದ್ಯೆಯ ಮಾಧ್ಯಮವಾಗಿರಲಿ ಹೊರತು ನಮ್ಮ ಸಂಸ್ಕೃತಿಯಾಗಿ ಇರಬಾರದು ಎಂದರು.
    ಸತ್ವಗುಣ ರೂಪಿಸಲು ಸಾಹಿತ್ಯ ಮುಖ್ಯವಾ ದುದು. ಜನರ ಜತೆ ಬೆರೆಸುವ, ಜನರ ಮಧ್ಯೆ ಬದುಕಿಸುವ ಶಕ್ತಿ ಸಾಹಿತ್ಯದ್ದಾಗಿರಬೇಕು. ಸಾಹಿತ್ಯ ನಮ್ಮೊಳಗೆ ಇರುವ ಋಣಾತ್ಮಕ ಯೋಚನೆಗಳನ್ನು ನಾಶ ಮಾಡಬೇಕು.
    ಚಾರುಮುಡಿ ಸಂಚಿಕೆ ಬಿಡುಗಡೆ ಮಾಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಕನ್ನಡ ಸಾಹಿತ್ಯಗಳ ಮೂಲಕ ಕರ್ನಾಟಕ ಒಂದಾಗಿದೆಯೇ ಹೊರತು ರಾಜಕಾರಣದಿಂದಲ್ಲ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಕೆಲಸವನ್ನು ರಾಜ್ಯಗಳು ಮಾಡುತ್ತಾ ಬಂದಿದ್ದಾರೆ. ತಾಲೂಕಿನವರಾದ ಲೀಲಾವತಿಯಂತ ಕಲಾವಿದೆಯಿಂದ ಸಾಹಿತ್ಯದ ಭಾಗವಾದ ಕಲೆಗೆ ಅಪಾರ ಕೊಡುಗೆಯಾಗಿದೆ ಎಂದರು.
    ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ಪರಿಷತ್ ಧ್ವಜ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಯದುಪತಿ ಗೌಡ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.
    ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್. ಶುಭ ಹಾರೈಸಿದರು.
    ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ, ಬೆಳ್ತಂಗಡಿ ಚಿಕಿತ್ಸಾ ಫಾರ್ಮ್ನ ಶ್ರೀಶ ಮುಚ್ಚಿನ್ನಾಯ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಸದಸ್ಯ ಡಾ| ಎಂ.ಕೆ.ಮಾಧವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ರಾಜೇಶ್ವರಿ, ತಾಲೂಕು ಘಟಕದ ಗೌರವ ಕಾರ್ಯದರ್ಶಿ ಪ್ರಮೀಳಾ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಮಂಗಳೂರು ಘಟಕದ ಅಧ್ಯಕ್ಷ ಮಂಜುನಾಥ್ ಎಸ್.ರೇವಣ್ಣರ್,ಸಮ್ಮೇಳನ ಸಂಯೋಜನ ಸಮಿತಿ ಅಧ್ಯಕ್ಷ ಜಯಾನಂದ ಗೌಡ ಸ್ವಾಗತಿಸಿದರು ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಿ. ಯದುಪತಿ ಗೌಡ ಪ್ರಸ್ತಾವಿಸಿದರು.ತಾಲೂಕು ಕಸಾಪ ಕಾರ್ಯದರ್ಶಿ, ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಮಹಾವೀರ ಜೈನ್ ಇಚ್ಚಂಪಾಡಿ ಮತ್ತು ವಸಂತಿ ಮುಂಡಾಜೆ ನಿರೂಪಿಸಿದರು.
    Mangalore Samachar..
    / @mangaloresamachar9338
  • РазвлеченияРазвлечения

Комментарии •