ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀ ಭಾಸ್ಕರ್ ಶೆಟ್ಟಿ ಸ್ಪರ್ಧೆ , ಅಭಿವೃದ್ಧಿ ಕುರಿತು ಬಿಚ್ಚು ಮಾತು

Поделиться
HTML-код
  • Опубликовано: 18 май 2024
  • ತೀರ ಬಡತನದ ಬೇಗೆಯಲ್ಲಿ ಹುಟ್ಟಿ ಬೆಳೆದು ಕಷ್ಟದಲ್ಲಿ ಶಿಕ್ಷಣ ಪೂರೈಸಿ ಶಿಕ್ಷಕರಾಗಿ ಹಲವು ಉತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುವಲ್ಲಿ ಸಹಕಾರಿಯಾದ ಶ್ರೀಯುತ ಭಾಸ್ಕರ್ ಶೆಟ್ಟಿ ಅವರು ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಸಮಸ್ಯೆಗಳು ನೋವುಗಳು ಹಾಗೂ ಹಲವು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಪರ್ಧೆ ಮಾಡುವುದು.
    ರಾಷ್ಟ್ರೀಯ ಪಕ್ಷಗಳೂ ಬಂಡಾಯಿ ಬಿಸಿಯಲ್ಲಿ ಈ ಬಂಡಾಯಕ್ಕೆ ಮೂಲ ಕಾರಣ ಕರಾವಳಿ ಭಾಗದ ಆಕಾಂಕ್ಷಿಗಳಿಗೆ ಟಿಕೇಟ್ ಸಿಕ್ಕಿಲ್ಲ ಎನ್ನುವುದೇ ಆಗಿದೆ. ಇದನ್ನು ಗಮನಿಸಿದ ಸ್ವತಂತ್ರ ಅಭ್ಯರ್ಥಿ ಭಾಸ್ಕರ್ ಶೆಟ್ಟಿ ಅವರು, ಕ್ಷೇತ್ರದೆ ಲ್ಲೆಡೆ ಹುರುಪಿನಿಂದ ಓಡಾಡುತ್ತಿದ್ದಾರೆ. ಬಂಟ ಸಮುದಾಯ ದವರಾದರೂ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ ಭಾಸ್ಕರ್ ಶೆಟ್ಟರು, ತಮ್ಮ ನಿವೃತ್ತಿಯವರೆಗೂ ಎಲ್ಲಾ ಶಿಕ್ಷಕರೊಂದಿಗೆ ಆತ್ಮೀಯ ಬಾಂಧವ್ಯವವನ್ನು ಹೊಂದಿದ್ದವರು. ಸಹಶಿಕ್ಷಕರಾಗಿ ಕುಂದಾಪುರದ ತೆಕ್ಕಟ್ಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು, ಉಡುಪಿ ಜಿಲ್ಲಾ ಪ್ರಭಾರ ಡಿಡಿಪಿಐ ಆಗುವವರೆಗೂ ಬೆಳೆದು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದಾರೆ. ತಮಗೆ ಸಿಕ್ಕ ಹುದ್ದೆಗಳನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿಯೇ ಬಳಸಿಕೊಂಡಿದ್ದ ಇವರು, ತಾವು ಕೆಲಸ ಮಾಡಿದ ಕಡೆಗಳಲ್ಲಿ ಶಿಕ್ಷಕರೊಂದಿಗೆ ಮಾತ್ರವಲ್ಲದೆ ಮಕ್ಕಳು, ಅವರ ಪೋಷಕರು, ಊರಿನ ಜನರೊಂದಿಗೂ ಹತ್ತಿರದ ಒಡನಾಟ ಇಟ್ಟುಕೊಂಡಿ ದ್ದವರು. ಇವರು ಉಡುಪಿ ಜಿಲ್ಲಾ ಡಿಡಿಪಿಐ ಆಗಿದ್ದಾಗ ಉಡುಪಿ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಇದರೊಂದಿಗೆ ಸಾಹಿತ್ಯದಲ್ಲಿಯೂ ಆಸಕ್ತಿ ಹೊಂದಿದ ಭಾಸ್ಕರ ಶೆಟ್ಟರು, ಸರ್ಕಾರಿ ನಿವೃತ್ತಿಯ ನಂತರವೂ - ತಮ್ಮ ಅನುಭವವನ್ನು ಶಿಕ್ಷಣ ಕ್ಷೇತ್ರಕ್ಕೆ ಧಾರೆ ಎರೆಯಬೇಕೆಂದು ನಿರ್ಧರಿಸಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು. ಳಿಗೆ ತಮ್ಮ ಈ ಅನುಭವ ಮತ್ತು ಜನಸಂಪರ್ಕವನ್ನು
    ಈ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ!?
    ಮುಂದಿಟ್ಟುಕೊಂಡು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಬೇಕು, ನಿಜವಾದ ಶಿಕ್ಷಕರೂ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯ ಎನ್ನುವುದನ್ನು ತೋರಿಸಬೇಕು, ಈ ಮೂಲಕ ಶಿಕ್ಷಕರಿಗೆ ಮಾದರಿಯಾಗಬೇಕು ಎಂದುಕೊಂಡು ಭಾಸ್ಕರ್ ಶೆಟ್ಟಿ ಅವರು ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಮತ್ತು ಕ್ಷೇತ್ರದೆಲ್ಲೆಡೆಯ ಓಡಾಟದಲ್ಲಿ ಭಾಸ್ಕರ್ ಶೆಟ್ಟರಿಗೆ ಕರಾವಳಿಯವರು ಎನ್ನುವ ಕಾರಣಕ್ಕೆ ಒಳ್ಳೆಯ ಬೆಂಬಲವೇ ಸಿಕ್ಕಿದೆ.
    ಬಂಡಾಯ ಬಿಸಿಯನ್ನು ಸರಿಯಾಗಿ ಬಳಸಿಕೊಂಡಿದ್ದೇ ಹೌದಾದರೆ ಭಾಸ್ಕರ್ ಶೆಟ್ಟಿಯವರು ಗೆಲ್ಲುವ ಸಾಧ್ಯತೆಗಳು ಹೆಚ್ಚು ಕಾಣುತ್ತಿವೆ. ಸ್ಥಳೀಯ ಟಿಕೇಟ್ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪಕ್ಷಗಳು ಮಾಡಿರುವ ಅನ್ಯಾಯ, ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಣ ತಜ್ಞರ * ಅಗತ್ಯ ಇತ್ಯಾದಿಗಳನ್ನು ಮನಗಂಡು ಮತದಾರರು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕಿದೆ. ತಮ್ಮ ಪ್ರತಿನಿಧಿಯಾಗಿ - ಯಾರಿದ್ದರೆ ನಮ್ಮ ಬೇಡಿಕೆ, ಸಮಸ್ಯೆಗಳು ಸದನದಲ್ಲಿ ದೊಡ್ಡ ದನಿಯಾಗಿ ಪ್ರತಿಧ್ವನಿಸುತ್ತವೆ ಎನ್ನುವುದನ್ನು ಅರಿಯದಷ್ಟು ಶಿಕ್ಷಕರು ದಡ್ಡರಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ಜಾತಿ, ಧರ್ಮ, ಪಕ್ಷ ಆಧಾರಿತ ರಾಜಕೀಯಕ್ಕೆ ದಾರಿ ಮಾಡಿಕೊಡುವ ಬದಲು, ತಮ್ಮದೇ ಕ್ಷೇತ್ರದ ಅರ್ಹರನ್ನು ಆಯ್ಕೆ ಮಾಡಿಕೊಳ್ಳುವತ್ತ ನೈಋತ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಮತದಾರರು ಗಮನ ಹರಿಸಿದರೆ ಈ ಬಾರಿ ದೊಡ್ಡ ಬದಲಾವಣೆಯೊಂದನ್ನು ಕಾಣಬಹುದಾಗಿದೆ.
    ಶಿಕ್ಷಕ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗುವ ದೃಷ್ಟಿಯಿಂದ ಅಭ್ಯರ್ಥಿಯಾಗಿರುವ ಶ್ರೀಯುತರು ಮಂಗಳೂರು ಸಮಾಚಾರಕ್ಕೆ ಬಿಚ್ಚು ಮಾತುಗಳ ಮೂಲಕ ಖುಲ್ಲಂ ಖುಲ್ಲಾ ಮಾತನಾಡಿರುತ್ತಾರೆ.
    Mangalore Samachar..
    / @mangaloresamachar9338
  • РазвлеченияРазвлечения

Комментарии • 1