ಕುರಿಯ ವಿಠಲ ಶಾಸ್ತ್ರಿ ಸ್ಮೃತಿ ಗೌರವ ವನ್ನು ಶ್ರೀ ಬಿ ಭುಜಬಲಿ ಧರ್ಮಸ್ಥಳ ಇವರಿಗೆ ನೀಡಿ ಗೌರವಿಸಲಾಯಿತು.

Поделиться
HTML-код
  • Опубликовано: 28 дек 2023
  • ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ, ರಜತ ವರ್ಷಾಚರಣೆ ಸಂಭ್ರಮವು ಕುರಿಯ ಮನೆಯಲ್ಲಿ ದಿನಾಂಕ 28 ಡಿಸೆಂಬರ್ 2023 ರಂದು ಸಂಪನ್ನಗೊಂಡಿತ್ತು.
    ಇವರ ಮಾನ ಪತ್ರ ಹೀಗಿದೆ.
    ಬಂಗಾಡಿ ಅರಮನೆಯ ವಂಶಸ್ಥರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ನಿಷ್ಠಾವಂತ ಉದ್ಯೋಗಿಯಾಗಿ ಬೃಹತ್ ಜಮಾ ಉಗ್ರಾಣದ ಮುತ್ಸದ್ದಿ ಸಹಿತ ವಿವಿಧ ಹೊಣೆಗಳನ್ನು ನಿರ್ವಹಿಸಿ ಪೂಜ್ಯ ಹೆಗ್ಗಡೆ ದಂಪತಿಗಳು ಮತ್ತು ಕುಟುಂಬಿಕರ ಸಂಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರರಾದವರು.
    ಶ್ರದ್ಧಾವಂತ ಶ್ರಾವಕರಾಗಿ ಜಿನಾಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜಿನ ಮಂದಿರಗಳ ಪ್ರಗತಿ ಶಾಸ್ತ್ರದಾನ ಜೈನ ಸಂಘಟನೆಗಳ ನೇತಾರರಾಗಿ ಕಾರ್ಯಕರ್ತರಾಗಿ ಗಣನೀಯ ಸೇವೆ ಸಲ್ಲಿಸಿದವರು.
    ಶ್ರೀ ಧರ್ಮಸ್ಥಳ ಸೇವಾ ಸಹಕಾರಿ ಸೊಸೈಟಿಯ ನಿರ್ದೇಶಕರಾಗಿ ಅಧ್ಯಕ್ಷರಾಗಿ ದಾಖಲೆ ವ್ಯವಹಾರ ನಡೆಸಿ ಸಂಸ್ಥೆಗೆ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಲಭಿಸುವಲ್ಲಿ ಕಾರಣಿಭೂತರು.
    ಪ್ರವೃತ್ತಿಯಿಂದ ಯಕ್ಷಗಾನ ಕಲೆಯ ಉತ್ಕಟ ಅಭಿಮಾನಿಯಾಗಿ ಕಲೆ ಕಲಾವಿದರಿಗೆ ಪೋಷಕರು ಯಕ್ಷಗಾನ ಆಟ ಕೂಟ ಹರಿಕಥೆ ಜಿನಕಥೆ ಕ್ಷೇತ್ರ ಮಹಾತ್ಮೆ ಭಕ್ತಿಗೀತೆ ಪುರಾಣ ಪ್ರವಚನ ಮಾಲಿಕೆ ಹೀಗೆ ನೂರಕ್ಕೂ ಮಿಕ್ಕಿದ ದ್ವನಿ ಸುರುಳಿಗಳ ನಿರ್ಮಾತೃ ಆಕಾಶವಾಣಿ ದೂರದರ್ಶನ ಎ ಗ್ರೇಡ್ ತಂಡದ ನಾಯಕ ನಿರ್ದೇಶಕ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸಾಮಾಜಿಕ ಸೇವಾ ನಿರತರು.
    ಪರಿಸರದ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸಹಯೋಗ ನೀಡುತ್ತಿರುವ ಸಹೃದಯಿ ವ್ಯಕ್ತಿಶ: ಅತ್ಯಂತ ಸ್ನೇಹಶೀಲ ಅತ್ಯುತ್ತಮ ಆತಿಥೇಯ ಸತ್ಕಾರ್ಯಗಳಿಗೆ ಸಂತಸ ಪಡುವ ಗುಪ್ತದಾನಿ ಚೋಕ್ಕ ವ್ಯವಹಾರ ಸ್ವಚ್ಛ ವ್ಯಕ್ತಿತ್ವ ಧವಳ ಚಾರಿತ್ಯ ಸರ್ವಸ್ನೇಹಿ ಗುಣನಡತೆ ನೈಜ ಪ್ರೀತಿ ಅಭಿಮಾನವುಳ್ಳ ಸಮೂಹ ಜೀವಿ ಅಪೂರ್ವ ಕುಟುಂಬ ಪ್ರೇಮಿ ಆದರ್ಶ ಸಂಸಾರಿ ಪಾದರಸ ಹರಿತದ ಉತ್ಸಾಹಿ ಹೀಗೆ ಬಹುಮುಖೀ ವ್ಯಕ್ತಿತ್ವದ ಗಣ್ಯ ಸಾಮಾಜಿಕ ನಮ್ಮೆಲ್ಲರ ಆದರ ಅಭಿಮಾನಕ್ಕೆ ಪಾತ್ರರಾಗಿ ನಮ್ಮ ಪ್ರತಿಷ್ಠಾನದ ಹಿತೈಷಿಗಳಾದ ಸನ್ಮಾನ್ಯ ಶ್ರೀ ಬಿ ಭುಜಬಲಿ ಧರ್ಮಸ್ಥಳ ಇವರಿಗೆ ಸಕಲ ಗೌರವಾದರಗಳೊಂದಿಗೆ ನೀಡಿದ ಕುರಿಯ ವಿಠಲ ಶಾಸ್ತ್ರಿ ಸ್ಮೃತಿ ಗೌರವ ಪತ್ರ.
    ಈ ಸಂದರ್ಭ ಕುರಿಯ ಗಣಪತಿ ಶಾಸ್ತ್ರಿ ಮತ್ತು ಕುರಿಯ ಮನೆತನದವರು, ಕುರಿಯ ಪ್ರತಿಷ್ಠಾನದ ಸಂಚಾಲಕರಾದ ಉಜಿರೆ ಅಶೋಕ ಭಟ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.
    Mangalore Samachar..
    / @mangaloresamachar9338
  • РазвлеченияРазвлечения

Комментарии •