Harikrishna Punarur, ಅಂತರಾಳದ ಮಾತು, ಸಾಹಿತಿ ಹರಿಕೃಷ್ಣ ಪುನರೂರು ಮಾಜಿ ಸಾಹಿತ್ಯ ಪರಿಷತ್ ಅಧ್ಯಕ್ಷರು.

Поделиться
HTML-код
  • Опубликовано: 5 ноя 2023
  • ಮಂಗಳೂರು ಸಮಾಚಾರ ವಾಹಿನಿಯ ವಿಶಿಷ್ಟ ವ್ಯಕ್ತಿಗಳ ಪರಿಚಯ ಮಾಲಿಕೆಯಲ್ಲಿ ನಾವಿಂದು ಶ್ರೀ ಹರಿಕೃಷ್ಣ ಪುನರೂರು ಮಾಜಿ ರಾಜ್ಯಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರನ್ನು ವಾಹಿನಿಯ ಪರವಾಗಿ ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇವೆ..
    ಪ್ರಪ್ರಥಮ ಬಾರಿಗೆ ದ.ಕ.ಜಿಲ್ಲೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿ ಸಾಹಿತ್ಯ ಪರಿಷತ್ತನ್ನು ಜನಸ್ನೇಹಿ ಕನ್ನಡ ಮಕ್ಕಳ ತವರುಮನೆಯನ್ನಾಗಿಸಿದ ಕೀರ್ತಿ ಗೌರವಾನ್ವಿತ ಹರಿಕೃಷ್ಣ ಪುನರೂರು ಅವರಿಗೆ ಸಲ್ಲುತ್ತದೆ..!!
    ಓರ್ವ ಹೋಟೆಲ್ ಉದ್ಯಮಿಯಾಗಿದ್ದರೂ ಕನ್ನಡ ಕಟ್ಟಾ ಅಭಿಮಾನಿಯಾಗಿದ್ದರೂ ಅವರನ್ನು ಅಂದು ಸಾಹಿತಿಯೇ ಅಲ್ಲ ಎಂದು ಹಲವು ಅತಿಬುದ್ದಿವಂತರೆನಿಸಿಕೊಂಡವರುಟೀಕಿಸಿ ಅಧಿಕಾರದಿಂದ ಇಳಿಸಲು ಪ್ರಯತ್ನ ಮಾಡಿದರೂ ವಿಫಲವಾಗಿ ಅಧಿಕಾರಕ್ಕೇರಿದ ಶ್ರೀಯತರು ನಿಜವಾಗಿಯೂ ಕನ್ನಡ ತಾಯಿ ಭುವನೇಶ್ವರಿಯ ದೇವಿಯ ಸೇವಾ ಕೈಂಕರ್ಯದಲ್ಲಿ ಪಾಲ್ಗೊಂಡು ಪುನೀತರಾಗಿ ಸಮಸ್ತ ಕನ್ನಡಿಗರ ಹೃದಯವನ್ನು ಗೆದ್ದ ಜನಾನುರಾಗಿ ಬಡವರ ಬಂಧು ಧರ್ಮದರ್ಶಿಯೇ ಸರಿ..
    ಈಗಾಗಲೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವು ಬಡ ವಿಪ್ರಕುಟುಂಬಕ್ಕೆ ಉಚಿತವಾಗಿ ಮನೆ ನಿರ್ಮಾಣ ಮಾಡಿ ಕೊಟ್ಟು ಆಸರೆ ನೀಡಿದ ಮನುಕುಲದ ಸಂತನೇ ಸರಿ..
    ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿದ ಇವರು ತನ್ನ ಸ್ವಂತ ಕಾರಿನಲ್ಲಿ ಧೂಳು ಹಿಡಿದ ಕನ್ನಡ ಪುಸ್ತಕಗಳನ್ನು ಎಲ್ಲೆಲ್ಲಿ ಕನ್ನಡದ ಸುಮ್ಮೇಳನಗಳು ನಡೆಯುತ್ತದೆಯೋ ಅಲ್ಲೆಲ್ಲ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಕನ್ನಡ ಭವನ ತುಂಬಿಸಿದ ಪುಣ್ಯಾತ್ಮರು..ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀ ಮನು ಬಳಿಗಾರ್ ಮೂರು ವರ್ಷಗಳ ಅವಧಿಯನ್ನು ಐದು ವರ್ಷಕ್ಕೆ ಏರಿಸುವ ಪ್ರಸ್ತಾವನೆ ಮಾಡಿದ ಕೂಡಲೇ ಪ್ರತಿಭಟಿಸಿ ತನ್ನ ಅಸಮ್ಮತಿ ಸೂಚಿಸಿದವರು ಕಟ್ಟಕಡೆಗೆ ಅವರಿಂದಲೇ ಕನ್ನಡ ಭವನ ಬೆಂಗಳೂರಲ್ಲಿ ಪುರಸ್ಕಾರ ಪಡೆದವರು ನಮ್ಮ ಇಂದಿನ ವಿಶೇಷ ವಿಶಿಷ್ಟ ಅತಿಥಿ..ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಎಲ್ಲರಿಂದಲೂ ಇದೀಗಲೂ ಮಾನ್ಯತೆ ಪಡೆಯುತ್ತಿರುವ ಇವರು ಈಗಲೂ ತನ್ನ ಇಳಿವಯಸ್ಸಿನಲ್ಲಿದ್ದರೂ ಹುಮ್ಮಸ್ಸಿನಿಂದ ಭಾಗವಹಿಸಿ ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ..
    ನನ್ನ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಹುಮ್ಮಸ್ಸಿಗೂ ಬೆಂಗಾವಲಾಗಿ ನಿಂತು ಪ್ರೋತ್ಸಾಹ ಮಾರ್ಗದರ್ಶನ ಆಶೀರ್ವಾದ ನೀಡುತ್ತಾ ಬಂದಿರುವ ಇವರು ಪ್ರಾತಃ ಸ್ಮರಣೀಯರು ನಾನು ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ..ಅವರ ಹೃದಯ ಮಾತುಗಳಿಗೂ ನೀವೂ ಕಿವಿಯಾಗಿ ಕಣ್ಣಾಗಿ ನೋಡಿ ವೀಕ್ಷಿಸಿ ಪ್ರತಿಕ್ರಿಯಿಸಿ..
    ನಮ್ಮ ಮಂಗಳೂರು ವಾಹಿನಿಯನ್ನು ಸಬ್ಕೈಬ್ ಮಾಡಿ ವೀಕ್ಷಿಸಿ ಶೇರ್ ಮಾಡಿ
    ಬದುಕು ಬರಹ ಪರಿಕಲ್ಪನೆ ಮತ್ತು ಸಂದರ್ಶನ -ಜೀವಿ ಗಂಗೇನೀರು
    ಛಾಯಾಗ್ರಹಣ -ಶ್ರೀ ವೆಂಕಟೇಶ್ ಬೆಂಡೆ
    Mangalore Samachar..
    / @mangaloresamachar9338
  • РазвлеченияРазвлечения

Комментарии •