ಕಥನ ಕುತೂಹಲ: ಜಯಂತ್ ಕಾಯ್ಕಿಣಿ ಉಪನ್ಯಾಸ

Поделиться
HTML-код
  • Опубликовано: 26 авг 2024
  • ‘ಶ್ರಾವಣ ಮಧ್ಯಾಹ್ನ’ ಕಾವ್ಯದ ಮಳೆಗರೆದ ಕವಿ, ‘ತೂಫಾನ್‌ ಮೇಲ್‌’ಗೆ ಕಥೆಯ ಹಳಿ ಕಟ್ಟಿದ ಕಥೆಗಾರ, ‘ಬೊಗಸೆಯಲ್ಲಿ ಮಳೆ’ ಹಿಡಿದು ಚಂದನವನದಲ್ಲಿ ಮಧುರ ಗೀತೆಗಳ ಹರಿಸಿದ ಚಿತ್ರಗೀತಕಾರ... ಜಯಂತ್‌ ಕಾಯ್ಕಿಣಿ ಮಾತಿಗೆ ನಿಂತರೆ ಮಾನವೀಯತೆಯ ನದಿತಟದಲ್ಲಿ ಮೈಚೆಲ್ಲಿದಂತೆ... ಗೋಕರ್ಣದ ಕಡಲ ತಡಿಯಿಂದ ಮುಂಬೈ ಬೀಚಿನವರೆಗೆ ಕಥೆಗಳ ಸಾಲು ದೀಪ ಹಚ್ಚಿದ ಜಯಂತ ಕಾಯ್ಕಿಣಿ ಅವರ ‘ಕಥನಲೋಕ’ದಲ್ಲಿ ಏನೇನಿರಬಹುದು? ಅವರ ‘ಕಥನ ಕುತೂಹಲ’ ಎಂಥದ್ದಿರಬಹುದು? 2016ನೇ ಸಾಲಿನ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ಪ್ರದಾನ ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ ತಮ್ಮ ‘ಕಥನ ಕುತೂಹಲ’ದ ಕುರಿತೇ ವಿಶೇಷ ಉಪನ್ಯಾಸ ನೀಡಿದರು. ಅವರ ಮಾತಿನ ಮೋಡಿಯ ಪೂರ್ಣ ಚಿತ್ರ ಇಲ್ಲಿದೆ. ಜಯಂತರ ಕಥನಲೋಕದ ಝರಿಯಲ್ಲಿ ನೀವೂ ಮೀಯಿರಿ..

Комментарии • 49