Dharmasthala, 52ನೇ ಪಟ್ಟಾಭಿಷೇಕ ವರ್ಧಂತಿ ಯಲ್ಲಿ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಚನಗೈದರು.

Поделиться
HTML-код
  • Опубликовано: 26 авг 2024
  • ಶ್ರೀ ಕ್ಷೇತ್ರದಲ್ಲಿ ಅತಿಥಿ ಗೃಹಗಳ ನಿರ್ಮಾಣ, ಸಂಕಷ್ಟದಲ್ಲಿ ಬಾಗಿದವರಿಗೆ ಊರುಗೋಲು, ಪರಿಹಾರ ಕಾರ್ಯಕ್ರಮಗಳು, ಧರ್ಮೋತ್ಥಾನ ಟ್ರಸ್ಟ್, ಸರಳತೆಯನ್ನು ಸಾರುವ ಸಾಮೂಹಿಕ ವಿವಾಹ, ಉದ್ಯೋಗ ತರಬೇತಿ, ಯಕ್ಷಗಾನಕ್ಕೆ ವಿಶೇಷ ಕಾಯಕಲ್ಪ, ಪ್ರಕಾಶನ,39 ಅಡಿ ಶ್ರೀ ಬಾಹುಬಲಿ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ಯೋಗ ಮತ್ತು ನೈತಿಕ ಶಿಕ್ಷಣ, ತಾಳೆಗರಿ ಹಸ್ತಪ್ರತಿಗಳ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಯೋಜನೆ, ಸಂಪೂರ್ಣ ಸುರಕ್ಷತೆ ಹೀಗೆ ಅನೇಕ ಜನೋಪಕಾರಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ಮಾದರಿ ವ್ಯಕ್ತಿಯಾಗಿದ್ದಾರೆ. ಏಕಕಾಲದಲ್ಲಿ ಮೂರು ಸಾವಿರ ಜನ ಊಟ ಮಾಡಲು ಅವಕಾಶವಿರುವ ಹಾಗೂ ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿದ ಅನ್ನಛತ್ರ ಒಂದಿದೆ. ಅದನ್ನು ಧರ್ಮಸ್ಥಳದಲ್ಲಿ ಮಾತ್ರ ನೋಡಬಹುದು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಇದರಡಿ ಮನೆ ಬಾಗಿಲಿಗೆ ಆರೋಗ್ಯ ಸೇವೆ,ಸಂಚಾರಿ ಆಸ್ಪತ್ರೆ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಕಣ್ಣಿನ ಆಸ್ಪತ್ರೆ ಮಂಗಳೂರು, ಉಡುಪಿ- ಹಾಸನ ಆಯುರ್ವೇದ ಆಸ್ಪತ್ರೆ, ಧಾರವಾಡ ದಂತ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಇತ್ಯಾದಿಗಳನ್ನು ಸ್ಥಾಪಿಸಿದ್ದಾರೆ. ಒಟ್ಟಾರೆ ಪ್ರಾಥಮಿಕ, ಪ್ರೌಢ, ಪದವಿ ,ಸ್ನಾತಕೋತ್ತರ, ವೈದ್ಯಕೀಯ, ದಂತ ವೈದ್ಯಕೀಯ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಇಂಜಿನಿಯರಿಂಗ್ ,ಕಾನೂನು, ಉದ್ಯಮಾಡಳಿತ, ಮ್ಯಾನೇಜ್ ಮೆಂಟ್ ತರಬೇತಿ,ಕೈಗಾರಿಕಾ ತರಬೇತಿ ,ಅಂಗವಿಕಲರ ಕಲ್ಯಾಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಗೆ ಪ್ರೇರಣೆ ನೀಡಿದ್ದಾರೆ. ಪೂಜ್ಯರ ಶಿಕ್ಷಣ ಕ್ಷೇತ್ರಗಳಲ್ಲಿ 25 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ .5 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನೋಪಕಾರಿಯಾದ ಯಾವುದೇ ಒಳ್ಳೆಯ ವಿಚಾರಗಳು ಬಂದರೆ ಒಪ್ಪಿಕೊಳ್ಳುವ ಮಹಾನ್ ವ್ಯಕ್ತಿತ್ವ ಇವರದಾಗಿದೆ.ಜನರಿಗೆ ಅವರ ಸಂದೇಶ ಇಂತಿದೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ,ಗಳಿಸು ಮತ್ತೆ ಗಳಿಸಿದ್ದನ್ನು ಉಳಿಸು.ತಾಳ್ಮೆ ,ಸ್ಥಿತಪ್ರಜ್ಞ , ದೂರದೃಷ್ಟಿ, ಸಮಯಪ್ರಜ್ಞೆ, ಧನಾತ್ಮಕ ಧೋರಣೆ, ಭಾವಜೀವಿ,ವಿನಯ, ಲೇಖಕರು,ಪ್ರವಾಸ ಪ್ರಿಯ ಗುಣಗಳನ್ನು ಮೈಗೂಡಿಸಿಕೊಂಡಿರುವ ಶ್ರೀ ಯುತರು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು, ಅನ್ಯನ್ಯವಾದ್ದು, ಅಸಾಧಾರಣವಾದದ್ದು. ನಾಡಿನ ಶಿಲ್ಪ ಕಲೆಗಳು ಮತ್ತು ಸಾಂಸ್ಕೃತಿಕ ಮಹತ್ವದ ಪ್ರಾಚೀನ ದೇವಾಲಯಗಳ ಮೂಲಸ್ವರೂಪ ರಕ್ಷಣೆಗಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮೂಲಕ 234 ಕ್ಕಿಂತಲೂ ಹೆಚ್ಚು ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣಕ್ಕಾಗಿ ಸುಮಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಹಂಚಿದ್ದಾರೆ. ಮಂಜುವಾಣಿ ಎಂಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯದ ಮಾಸಪತ್ರಿಕೆಯನ್ನುಪ್ರಕಾಶನಗೊಳಿಸಿದ್ದಾರೆ.ಪ್ರತಿವರ್ಷ ಸುಮಾರು 5 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ 4786 ಶಿಕ್ಷಕರಿಗೆ ಯೋಗ ತರಬೇತಿ ಹಾಗೂ ನೈತಿಕ ಶಿಕ್ಷಣ ಒದಗಿಸುತ್ತಿದ್ದಾರೆ.ಮಂಜೂಷ ವಸ್ತು ಸಂಗ್ರಹಾಲಯದಲ್ಲಿ ಅಮೂಲ್ಯವಾದ ಹಳೆಯ ಕಾರುಗಳ ಸಂಗ್ರಹಾಲಯವಿದೆ. ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾಪನದಲ್ಲಿ ಒಟ್ಟು 5938 ಪ್ರಾಚೀನ ಇದರಲ್ಲಿ ಎರಡು ಸಾವಿರದ ಒಂಬೈನೂರ ತೊಂಬತ್ತೈದು ಪ್ರಾಚೀನ ಕನ್ನಡದ ಹಸ್ತಪ್ರತಿಗಳು ಇವೆ .ಶ್ರೀ ಕ್ಷೇತ್ರ ಉಚಿತ ಸಾಮೂಹಿಕ ವಿವಾಹದಲ್ಲಿ ಇದುವರೆಗೆ 12160 ಜೊತೆ ವಿವಾಹಗಳನ್ನು ನಡೆಸಲಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಕೇಂದ್ರ ರುಡ್ ಸೆಡ್ ಅಡಿಯಲ್ಲಿ ದೇಶದ 17 ರಾಜ್ಯಗಳಲ್ಲಿ 4,40,250 ಉದ್ಯೋಗಸ್ಥರಾಗಿದ್ದಾರೆ. ಇಂಥ ಅನೇಕ ಜನೋಪಕಾರಿ ಕೆಲಸಗಳನ್ನು ಕೈಗೊಂಡಿದ್ದಾರೆ. ಪ್ರಶಸ್ತಿಗಳು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪ್ರಿಯದರ್ಶಿನಿ, ಪದ್ಮಭೂಷಣ,ಧರ್ಮಭೂಷಣ, ವಾಟಿಕಾ ವರ್ಷದ ಕನ್ನಡಿಗ ಪ್ರಶಸ್ತಿ ,ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ ,ಕರ್ನಾಟಕ ರತ್ನ ಪ್ರಶಸ್ತಿ ,ನಾಡೋಜ ಪ್ರಶಸ್ತಿ, ಸಂಯಮ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ದೇವಿ ಅಹಿಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ, ಪದ್ಮವಿಭೂಷಣ ಹೀಗೆ 50ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Комментарии • 3