🌹 *ತನ್ನ ತಾನು ತಿಳಿದ ಮೇಲೆ* 🌹 ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೋ ಇನ್ನೇನಿನ್ನೇನೋ | ತನ್ನಂತೆ ತಾನು ಸರ್ವರ ಜೀವ ಮನ್ನಿಸಿ ಮೂಕಾದ ಮೇಲೆ || ತಾನೇ ಪೃಥ್ವೀ ಅಪ್ಪು ತೇಜ ತಾನೇ ವಾಯು ಆಕಾಶಾತ್ಮ | ತಾನೇ ಸೂರ್ಯ ಚಂದ್ರ ತಾರೆ ತಾನೇ ಬ್ರಹ್ಮಾಂಡಾದ ಮೇಲೆ || ತಾನೇ ಪ್ರಾಣ ಜೀವ ನೇತ್ರ ತಾನೇ ತ್ವಕ್ಕು ಶ್ರೋತೃ ಹೃದಯ | ತಾನೇ ಕಾಯ ಕರಣ ಹರಣ ತಾನೇ ಪಿಂಡಾಂಡಾದ ಮೇಲೆ || ತಾನೇ ಹೆತ್ತ ಸತ್ತ ಅತ್ತ ತಾನೇ ನಿತ್ಯ ಸ್ತುತ್ಯ ಸತ್ಯ | ತಾನೇ ಅರ್ಥ ವ್ಯರ್ಥ ಮರ್ತ ತಾನೇ ಸರ್ವನಾದ ಮೇಲೆ || ತಾನೇ ಲಕ್ಷ ಸಾವಿರ ನೂರು ತಾನೇ ಹತ್ತೊಂಬತ್ತೆಂಟೇಳು | ತಾನೇ ಆರೈದು ನಾಲ್ಕು ಮೂರು ತಾನೇ ಎರಡೊಂದಾದ ಮೇಲೆ || ತಾನೇ ನೀನೇ ನೀನೇ ತಾನು ತಾನೇ ಅಲ್ಲ ತಾನೇ ಇಲ್ಲ | ತಾನೇ ಮಹಾಂತ ತಾನೇ ತಾನು ಏನೋ ಏನೊಂದಾದ ಮೇಲೆ || 🙏🏻🙏🏻🙏🏻🙏🏻🙏🏻
🌹 *ತನ್ನ ತಾನು ತಿಳಿದ ಮೇಲೆ* 🌹
ತನ್ನ ತಾನು ತಿಳಿದ ಮೇಲೆ
ಇನ್ನೇನಿನ್ನೇನೋ ಇನ್ನೇನಿನ್ನೇನೋ |
ತನ್ನಂತೆ ತಾನು ಸರ್ವರ ಜೀವ
ಮನ್ನಿಸಿ ಮೂಕಾದ ಮೇಲೆ ||
ತಾನೇ ಪೃಥ್ವೀ ಅಪ್ಪು ತೇಜ
ತಾನೇ ವಾಯು ಆಕಾಶಾತ್ಮ |
ತಾನೇ ಸೂರ್ಯ ಚಂದ್ರ ತಾರೆ
ತಾನೇ ಬ್ರಹ್ಮಾಂಡಾದ ಮೇಲೆ ||
ತಾನೇ ಪ್ರಾಣ ಜೀವ ನೇತ್ರ
ತಾನೇ ತ್ವಕ್ಕು ಶ್ರೋತೃ ಹೃದಯ |
ತಾನೇ ಕಾಯ ಕರಣ ಹರಣ
ತಾನೇ ಪಿಂಡಾಂಡಾದ ಮೇಲೆ ||
ತಾನೇ ಹೆತ್ತ ಸತ್ತ ಅತ್ತ
ತಾನೇ ನಿತ್ಯ ಸ್ತುತ್ಯ ಸತ್ಯ |
ತಾನೇ ಅರ್ಥ ವ್ಯರ್ಥ ಮರ್ತ
ತಾನೇ ಸರ್ವನಾದ ಮೇಲೆ ||
ತಾನೇ ಲಕ್ಷ ಸಾವಿರ ನೂರು
ತಾನೇ ಹತ್ತೊಂಬತ್ತೆಂಟೇಳು |
ತಾನೇ ಆರೈದು ನಾಲ್ಕು ಮೂರು
ತಾನೇ ಎರಡೊಂದಾದ ಮೇಲೆ ||
ತಾನೇ ನೀನೇ ನೀನೇ ತಾನು
ತಾನೇ ಅಲ್ಲ ತಾನೇ ಇಲ್ಲ |
ತಾನೇ ಮಹಾಂತ ತಾನೇ ತಾನು
ಏನೋ ಏನೊಂದಾದ ಮೇಲೆ ||
🙏🏻🙏🏻🙏🏻🙏🏻🙏🏻
ಮನುಷ್ಯನನ್ನು ಮನುಷ್ಯತ್ವದ ಕಡೆ ಒಯ್ಯುವ ತತ್ವ ಪದ.... ತುಂಬಾ ಚೆನ್ನಾಗಿದೆ.
OM SHANTI
GURUJI SUPER SONG
C M Gaviyappanawar17--7--2022