Amma hachchidondu hanate innu belagide (ಎಂ ಆರ್ ಕಮಲ) - MD Pallavi

Поделиться
HTML-код
  • Опубликовано: 24 янв 2025

Комментарии • 351

  • @sumatibailur5199
    @sumatibailur5199 Год назад +29

    ಅಮ್ಮ ಎಂದರೆ ಬಹುತೇಕ ಎಲ್ಲರಿಗೂ ಸುಂದರ ಅತೀಸುಂದರ ಭಾವ -ಜೀವ ಎಲ್ಲವೂ... ಆದರೆ ನನಗೆ ಅಮ್ಮನ ಕುರಿತಾದ ಮೃದು ಮಧುರ ಭಾವನೆಗಳು ಮೂಡಿದ್ದು ತೀರ ಕಡಿಮೆ... ಕಣ್ಣಿಗೆ ಕಾಣುವಂತೆ ಪ್ರೀತಿಯ ಧಾರೆ ಹರಿಸಲಿಲ್ಲ ನನ್ನವ್ವ..!! ಪಾಪ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಬದುಕಿನ ಅವಶ್ಯಕತೆಗಳಿಗಾಗಿ ಬದುಕಿನ ತುಂಬಾ ಬಡಿದಾಡಿದಳು..!! ಹಾಗಾಗಿ ಅವಳಿಂದ ಅತೀ ಪ್ರೀತಿ ನಿರೀಕ್ಷೆಯೇ ಮರೀಚಿಕೆಯಾಗಿತ್ತು.. ಎಲ್ಲ ಸತ್ಯ ಅರಿತು ಅವಳ ಕಡೆ ಗಮನ ಹರಿಸುವಷ್ಟರಲ್ಲಿ ವಿಧಿ ತನ್ನ ವಕ್ರದೃಷ್ಟಿ ಬೀರಿಯಾಗಿತ್ತು.. ಈ ದಿನ ನನ್ನವ್ವವ ಬಗ್ಗೆ ಮನ ನೆನೆಯುತ್ತಿರಲು ಈ ಹಾಡಿನ ಮೊರೆ ಹೋಗಿ ಇಲ್ಲಿ ಬಂದಿದ್ದೇನೆ.. ದೇವರೆನಾದರೂ ಪ್ರತ್ಯಕ್ಷನಾಗಿ ವರ ಕೇಳು ಎಂದರೆ ನನ್ನವ್ವನನ್ನೆ ಮರಳಿ ಕೊಡು ಎಂದು ಕೇಳಿಕೊಳ್ಳುತ್ತೇನೆ... ದಯವಿಟ್ಟು ಯಾರೂ ಅಮ್ಮನನ್ನು ಅವಳ ಕಷ್ಟ ಅಥವಾ ಭಾವನೆ ಅಥವಾ ಪ್ರೀತಿ -ಕಾಳಜಿಯನ್ನು ಕಡೆಗಣಿಸಬೇಡಿರಿ... ಇಂತಹ ಅದ್ಭುತ ಗೀತೆಯನ್ನು ರಚಿಸಿದವರಿಗೂ , ಭಾವ ತುಂಬಿ ಹಾಡಿದವರಿಗೂ ಹೃದಯದಾಳದ ಧನ್ಯವಾದಗಳು...♥😊

    • @ashwinimanju5353
      @ashwinimanju5353 11 месяцев назад +1

      Nimma padagalu👌🏻ಭಾವನೆ

    • @savithribadiger5339
      @savithribadiger5339 9 месяцев назад

      ❤amma great

    • @sumad.r7043
      @sumad.r7043 8 месяцев назад +6

      ನಿಮ್ಮನ್ನು ಪ್ರೀತಿಸುವ ಯಾವ ಹೆಣ್ಣೇ ಇರಲಿ ಅವರಲ್ಲಿ ನಿಮ್ಮ ಅಮ್ಮನನ್ನು ಕಾಣಿರಿ. ತೊಡೆಯ ಮೇಲೆ ತಲೆ ಇಟ್ಟು ಮಲಗಿ ನೀವೇ ನನ್ನ ಅಮ್ಮ ಅಂತ ಹೇಳಿ. ಅಮ್ಮನ ಮಧುರ ಪ್ರೀತಿಯನ್ನು ಸವಿಯಿರಿ. ಎಷ್ಟೋ ಮಕ್ಕಳಿಗೆ ಅಮ್ಮ ಇದ್ರೂ ಪ್ರೀತಿ ಸಿಗದೇ ಹೋಗಿದೆ. ಕಾರಣಗಳು ಎಷ್ಟೋ... ಮನೆಯಲ್ಲಿ ಬಡತನ, ಸುತ್ತಲಿನವರ ದೌರ್ಜನ್ಯ ಇನ್ನೂ ಏನೇನೋ. ನನ್ನ ಅಮ್ಮ ಮಾತ್ರ ಒಳ್ಳೆ ಮಗಳಾಗಿ, ಸಹೋದರಿಯಾಗಿ,ಹೆಂಡತಿಯಾಗಿ, ಅತ್ತಿಗೆಯಾಗಿ,ಸೊಸೆಯಾಗಿ ತುಂಬು ಜೀವನ, ಸಾರ್ಥಕ ಜೀವನ ನಡೆಸಿದ್ದಾರೆ. ಎಲ್ಲರಿಗೂ ಪ್ರೀತಿಯ ಧಾರೆ ಎರೆದಿದ್ದಾರೆ.

    • @sumatibailur5199
      @sumatibailur5199 8 месяцев назад

      @@sumad.r7043 ನೀವೇ ಅದೃಷ್ಟವಂತರು..!! ಚೆನ್ನಾಗಿರಿ...😊

    • @ramannaramanna3613
      @ramannaramanna3613 3 месяца назад

      ಅಮ್ಮನಿಗೆ ಅಮ್ಮನೆ ಸಾಟಿ ನಾನು ಅಮ್ಮ ಆಗಿದ್ದೇನೆ ಅದಕ್ಕೆ ದೇವರಿಗೆ ಕೋಟಿ ನಮಸ್ಕಾರಗಳು ಭಾಗ್ಯರಾಮಣ್ಣ

  • @dbyguttedar5480
    @dbyguttedar5480 3 года назад +142

    ಸಾವಿರಾರು ಪದಗಳಿದ್ದರು, ವರ್ಣನಗೆ ಸಿಗದವಳು ಈ ಸಾಹುಕಾರ್ತಿ, ಜನ್ಮಕ್ಕೆ ಆರ್ಥ ಕೊಟ್ಟು ಬೆಟ್ಟದಷ್ಟು ಪ್ರೀತಿ ಕೊಟ್ಟು ಕಾಪಾಡುವ ಈ ಓಡತಿಗೆ ನನ್ನ ಕೋಟಿ ನಮಗಳು 🙏🙏💐

  • @kavithakh9193
    @kavithakh9193 5 лет назад +41

    ಈ ಹಾಡನ್ನ ಕೇಳಿದ ಎಲ್ರಿಗೂ ಅವ್ರಮ್ಮ ನೆನ್ಪಾಗ್ತಾರೆ ಈ ಗೀತೆಯನ್ನ ರಚಿಸಿದವ್ರಿಗೂ...ಹಾಗು ಭಾವ ತುಂಬಿ ಹಾಡಿದಂತ ಪಲ್ಲವಿ ಮೇಡಂರಿಗೂ ಹೃತ್ಪೂರ್ವಕ ಅಭಿನಂದನೆಗಳು💐

  • @manjulasasvihalli8781
    @manjulasasvihalli8781 Год назад +11

    🙏🤝ತುಂಬಾ ಸಮಾಧಾನ ತರುವ ಮತ್ತು ಅಮ್ಮ ನೆನಪಾಗಿ ಶಕ್ತಿ ತುಂಬುವ ಗೀತೆ ರಚಿಸಿದವರಿಗೂ,ಹಾಡಿದವರಿಗೂ ವಂದನೆಗಳು 🌹🌹

  • @guruprasadc4782
    @guruprasadc4782 3 года назад +16

    ಕನ್ನಡದ ಸಾಹಿತ್ಯ ಕ್ಕೆ ಯಾರು ಬೆಲೆ ಕಟ್ಟಲು ಸಾದ್ಯವಿಲ್ಲ.... Wow.... 👏👏👏👏

  • @jaykannada
    @jaykannada 2 года назад +25

    ಅಮ್ಮ ಎಂದರೆ ಬರೀ ಹೆತ್ತವಳಲ್ಲ, ನಿಂತು ನಡೆದು, ಹತ್ತಿ ಹಾರಲು ಕಲಿಸಿಕೊಟ್ಟವಳು, 🙏👏👏👏🙏

  • @SUJATHA6870
    @SUJATHA6870 3 года назад +17

    ಪ್ರತಿ ದಿನ ಈ ಹಾಡು ಕೇಳಿಲ್ಲ ಅಂದ್ರೆ
    ಏನೋ ಮಿಸ್ ಮಾಡ್ಕೊಂಡ ಹಾಗೆ ಅನಿಸುತ್ತೆ
    ಅರ್ಥ ಪೂರ್ಣವಾಗಿದೆ... ಅಮ್ಮ ಅನ್ನೋದರಲ್ಲಿ
    ಸಂತೋಷ..... Love you ಅಮ್ಮ ♥

  • @kamalakshammag4714
    @kamalakshammag4714 3 года назад +25

    ಅಮ್ಮ ಅನ್ನುವ ಪದ ಬರೀ ಪದವಲ್ಲ..
    "ಅಮ್ಮ"- ಅದ್ಭುತ 💖 ಭೂಮಿಯಷ್ಟು ಭಾರವಾದ /ಅಘಧವಾದ ಅರ್ಥವಿದೆ!
    ಭಾವನೆಗಳಿಗೆ ಜೀವ ನೀಡಿದೆ... 💖💖💖
    Love u maa🙏🏾🙏🏾🙏🏾🙏🏾🙏🏾🙏🏾🙏🏾👍👏👏

  • @ashahr4438
    @ashahr4438 3 года назад +10

    ಅಮ್ಮ ಅನ್ನುವಳು ನಮ್ಮ ಜೀವ ಜೀವನ ಎಲ್ಲಾ,,
    ಮತ್ತೊಂದೆಡೆ ಅಮ್ಮನಾಗುವುದೇ ಒಂದು ಭಾಗ್ಯ,,
    ತಾಯ್ಥನದ ಅನುಭವವೇ ಅದ್ಬುತ,,
    ತನ್ನ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಡು ಮುದ್ದಿಸುವುದೇ ಸ್ವರ್ಗ ಸುಖ,,

  • @ganeshavb6789
    @ganeshavb6789 3 года назад +21

    ಕವಯಿತ್ರಿಯ ಭಾವನೆಗಳನ್ನು ತಮ್ಮ ಮಾಂತ್ರಿಕ ಧ್ವನಿಯ ಮೂಲಕ ನಮ್ಮ ಮನದೊಳಗೆ ಇಳಿಸಿದ ಅದ್ಭುತ ಗೀತೆ

  • @sachinnaikcs5705
    @sachinnaikcs5705 6 лет назад +36

    ಇಂತ ಹಾಡುಗಳನ್ನು ಕೇಳಿ‌ ಆನಂದಿಸಿ‌ ಅದ್ರೆ ಇಂದಿನ‌ ದಿನಗಳಲ್ಲಿ ಅರ್ಥ‌ವಾಗದ ಹಾಡುಗಳನ್ನೆ ಕೇಳುತ್ತಾರೆ ಬಹುಷಹ ದೀಮಾಕು ಇರಬಹುದು

    • @graghavendraprasad1812
      @graghavendraprasad1812 4 года назад

      ಅಧ್ಭುತ ವಾದ ಮಾತು ಸಾರ್ 👍

    • @Ventaru-l8d
      @Ventaru-l8d 3 года назад

      deemake illa adakke

    • @prabhavathi.k.p4157
      @prabhavathi.k.p4157 Год назад

      ಧಿಮಾಕಲ್ಲ ಇಂದಿನ ಸಾಹಿತಿಗಳಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ ಬರೆದಿದ್ದೆ ಹಾಡು ಹಾಡಿದ್ದೇ ಸಂಗೀತ😂😂

  • @Keshavrukmini7274
    @Keshavrukmini7274 Год назад +5

    ನಾನು ಮನೆ ಬಿಟ್ಟು ದೂರ ಇದ್ದು ಪದವಿ ಓದುವಾಗ ಅಮ್ಮನ ನೆನಪಾಗಿ ಬಹಳ ಸಲ ಕೇಳಿ ಕೇಳಿ ಮನಸ್ಸು ಹಾಗುರಾಗಲಿಕ್ಕೆ ಅತ್ತ ನೆನಪುಗಳು ಈಗ ಏನೋ ಆ ಸಮಯ್ ಹೇಗಿತ್ತಲ್ಲ ಎನ್ನುವ ಭಾವ ನೀಡುತ್ತವೆ

    • @akhileshgudadinni8192
      @akhileshgudadinni8192 3 месяца назад +1

      ನಿಜ,ಕಾಲ ಕಳೆದರು ಉಳಿದು ಕಾಡುವವು ನೆನಪುಗಳು ಮಾತ್ರ

  • @divyadharani9880
    @divyadharani9880 7 лет назад +105

    Daily I used to listen atleast 10 times in a day. Miss u ma. I love u so much. U r always with me. Writing this with tears. U r not with me alive but u r still alive in my heart. Love u so much. And thank you maam for the wonderful song

    • @Umashankarm
      @Umashankarm 4 года назад +5

      Your feeling stands above all....

    • @cavychinnu3126
      @cavychinnu3126 4 года назад +2

      Feel proud to be a daughter to a great soul

    • @NDBos-gz7hy
      @NDBos-gz7hy 4 года назад +2

      @@cavychinnu3126 yes very proud of lines. outstanding comments

    • @NDBos-gz7hy
      @NDBos-gz7hy 4 года назад +1

      lovely divya

    • @sourabhim2013
      @sourabhim2013 4 года назад +1

      Super song

  • @gb4805
    @gb4805 6 лет назад +223

    ಅಮ್ಮ ಹಚ್ಚಿದೊಂದು ಹಣತೆ
    ಇನ್ನೂ ಬೆಳಗಿದೆ
    ಮನಕೆ ಮಬ್ಬು ಕವಿಯದಂತೆ
    ಸದಾ ಕಾದಿದೆ ।।
    ಕಪ್ಪು ಕಡಲಿನಲ್ಲಿ ದೋಣಿ
    ದಿಕ್ಕು ತಪ್ಪಲು
    ದೂರದಲ್ಲಿ ತೀರವಿದೆ
    ಎಂದು ತೋರಲು ।। ಅಮ್ಮ ।।
    ಕೃತಕ ದೀಪ ಕತ್ತಲಲ್ಲಿ
    ಕಳೆದು ಹೋಗದಂತೆ
    ಸೂರ್ಯ ಚಂದ್ರ ತಾರೆಯಾಗಿ
    ಹೊಳೆದು ಬಾಳುವಂತೆ ।। ಅಮ್ಮ ।।
    ಅಂತರಂಗದಲ್ಲಿ ನೂರು
    ಕಗ್ಗತ್ತಲ ಕೋಣೆ
    ನಾದ ಬೆಳಕ ತುಂಬಲು
    ಮಿಡಿದ ಹಾಗೆ ವೀಣೆ ।। ಅಮ್ಮ ।।

  • @kavyahanji4486
    @kavyahanji4486 3 года назад +5

    ಅಮ್ಮನ ನೆನಪು ಬಂದಾಗಲೆಲ್ಲಾ ಈ ಹಾಡು ಆಲಿಸುತ್ತೆನೆ. I miss you Amma.

  • @ravikumarnadvocate1882
    @ravikumarnadvocate1882 5 лет назад +22

    ವರ್ಣಿಸಲು ಬೇರೆ ಪದಗಳಿಲ್ಲ ನಿಮ್ಮಗೆ ಹೃದಯ ಪೂರ್ವಕ ನಮನಗಳು...

  • @prameelarajraj7363
    @prameelarajraj7363 2 месяца назад

    ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ 🥰🙏

  • @parvathibr4830
    @parvathibr4830 Год назад

    Nanna Amma tumba nenepu madikoduva e geethe sundara ...sumadhura....ravhisidavarige nanna hrudayapoorvaka vandanegalu

  • @GangaSwamy-np7ye
    @GangaSwamy-np7ye Год назад

    ಪ್ರೀತಿ ಕೊಡೋದ್ರಲ್ಲಿ, ನೀತಿ ಹೇಳೋದ್ರಲ್ಲಿ, ಜೀವನ ಕಟ್ಟೋದ್ರಲ್ಲಿ....... ಇವರನ್ನ ಬಿಟ್ಟು ಅಂಥದೊಂದು ನಿಸ್ವಾರ್ಥತೆ thathparathe,,,..ಎಲ್ಲಿ ಸಾಧ್ಯ .. ಮತ್ತೆ ಅಮ್ಮ ಇದ್ದಾ ಗಿಂತ ಕಳ್ಕೊಂಡ್ ಮೇಲೆ ತುಂಬಾ ಕಾಡೋದು .....ಅ ನೋವು ಯಾವ ಶತೃ ಗೂ beda😢😢😢

  • @indirapadukone2646
    @indirapadukone2646 2 года назад +2

    ಇದೇ ಕನ್ನಡದ ಮಾಂತ್ರಿಕ ಶಕ್ತಿ ಮತ್ತು ಭಾವನೆಗೂ ಮೀರಿದ್ದು.. ಕನ್ನಡಕ್ಕೆ ಕಣ್ಣಂಚಿನಲ್ಲಿ ನೀರು ಭರಿಸುವ ತಾಕತ್ತು ಇದೆ ಎನ್ನಲು ಈ ಹಾಡು ಉದಾಹರಣೆಯಾಗಬಲ್ಲದು..

  • @Vinutha2368
    @Vinutha2368 Год назад

    ಎಂದಿಗೂ ಮರೆಯದ ಹಾಡು.👌❤️ ಅಮ್ಮನ ಸ್ಥಾನವನ್ನು ಯಾರಿಂದಲೂ ತುಂಬಲು ಸಾದ್ಯವಿಲ್ಲ..ಅಮ್ಮನಿಗೆ ಅಮ್ಮನೇ ಸಾಟೀ. ಲವ್ ಯು ಅಮ್ಮಾ❤️❤️🥺🥺🥺

  • @bmrammd
    @bmrammd Год назад +1

    I am in tears listening to this great song I think of my mother, thousands of miles away in USA.

  • @shanthagurunath602
    @shanthagurunath602 7 лет назад +21

    My friend ,gurueverything in my life is my. Mother. Whenever I hear this song my mother will be in front of my eyes. Thanks for this song.

  • @manasiseshaiah7907
    @manasiseshaiah7907 Год назад +1

    Simply beautiful ❤ can’t explain in words❤

  • @raghavendrakadabur4585
    @raghavendrakadabur4585 6 лет назад +4

    ಕಮಲ ಮೇಡಂ ರ ರಚನೆ ಅದ್ಭುತ.. ಹಾಗೆ ಪಲ್ಲವಿಯವರ ಧ್ವನಿಯಂತೂ ತುಂಬಾ ಚೆನ್ನಾಗಿ ಬಂದಿದೆ...I listened 20times. Love dis song

  • @k.srinivasb.pattar1545
    @k.srinivasb.pattar1545 2 года назад

    ಹೃದಯ ಸ್ಪರ್ಶ ಮಮತೆಯ ಮಡಿಲು ಒಡನಾಡಿಯ ಛಾಯಾಚಿತ್ರ ಸಂಗೀತ ಗಾಯನ ಉತ್ತಮವಾಗಿದೆ👍👍☝️☝️👌👌🙏🙏

  • @SudhaSudha-hk8mg
    @SudhaSudha-hk8mg 5 месяцев назад

    Havdu nuru janmavetidaru saveraru pujegalu madedaru segadyero preeti,preama aservada eetaiedu koti koti namana nanna hettavaligage❤❤❤🌹🌹🌹

  • @gopalabhat936
    @gopalabhat936 3 года назад +5

    ಅಮೋಘ ಕವನ ಹಾಗೂ ಮಧುರ ಹಾಡುಗಾರಿಕೆ...as usual of sister Pallavi 🙏🙏🙏

  • @LegendGamingMKHARI
    @LegendGamingMKHARI 4 года назад +3

    Innondu janmadalladru ammana preethi sigo haage maadu deware .yaawa makkalannu ammaninda doora maadbeda deware .plz

  • @lalithahn3459
    @lalithahn3459 2 года назад

    ನಮ್ಮ ಕನ್ನಡ ಭಾಷೆ ನಾಡು ನುಡಿ ಸಾಹಿತ್ಯದ ವೖಶಿಷ್ಟ್ಯತೆ ಅತ್ಯದ್ಭುತ 😘😘😘🙏🙏🙏🙏

  • @sowmyasowmyaroopa4483
    @sowmyasowmyaroopa4483 9 месяцев назад

    Remembering my sweet mother....she went to a heavenly temple on 29.11.23...hope she is listening to this song....

  • @lokeshapk
    @lokeshapk Год назад

    Amma ninna prathi kshana miss madkotini.. neenindidre jeevna innu chennagirtitu.. neenu iddidre sakagittu.. ide koragu neenu iddidre nammondige..

  • @kemparajupadugur1163
    @kemparajupadugur1163 2 года назад

    ನನ್ನಮ್ಮ ನನಗೆ ಸ್ಪೂರ್ತಿ, ಮಾತೊಂದು ಜನ್ಮಕ್ಕೆ ನೀನೇ ನನ್ನಮ್ಮನಾಗಬೇಕು ಅದೇ ನನ್ನಾಸೆ

  • @beingu_manaswimanu8345
    @beingu_manaswimanu8345 5 лет назад +3

    ನನ್ನ ಅಮ್ಮ ನೇ ನನ್ನ ಬಾಳಿಗೆ ಹಣತೆ ಹಚ್ಚಿ......
    ನನ್ನ ಮನಕೆ ಮಬ್ಬು ಬರದಂತ್ತೆ ನನ್ ಜೊತೆ ಈವಾಗಲೂ ಯಾವಾಗಲು ಇರೊಲೊ....
    ಈ ಹಾಡು ನನ್ನ ಪ್ರೀತಿ ಅಮ್ಮ ಲಕ್ಷಮು..... ಗೇ.......

  • @amruthaamrutha6401
    @amruthaamrutha6401 5 лет назад +7

    beautiful song.amman prithina yarukodakkagalla.i love u amma.😍

  • @prakashp9616
    @prakashp9616 5 лет назад +12

    ತುಂಬಾ ಅದ್ಭುತವಾದ ರಚನೆ ಮತ್ತು ಗಾಯನ 🙏🙏🙏🙏🙏🙏

  • @rajusarojarajusaroja3761
    @rajusarojarajusaroja3761 Год назад

    ನನ್ನ ಅಮ್ಮ ದೂರ ಸರಿದು ಕೆಲ ತಿಂಗಳು ಆಯಿತು ಈ ದಿನ ಅವರ ನೆನಪು ತುಂಬಾ ಕಾಡುತ್ತಿದೆ. ಈ ಅಮ್ಮನ ಹಾಡು ನಾನು ಪ್ರತಿದಿನ ಒಂದು ಬಾರಿ Kelalebeeku.

  • @shashikalamurugan6768
    @shashikalamurugan6768 8 месяцев назад

    Devaru Ella kade irokkagalla antha srushtisidha ondhu gods gift Amma❤miss you amma 😢😢😢

  • @hemavathis3850
    @hemavathis3850 Год назад

    ಅದ್ಬುತವಾದ ಸಾಹಿತ್ಯ....

  • @eshwarakarthik2662
    @eshwarakarthik2662 5 лет назад +10

    Forgive me amma i miss u amma always i was blaming on you ....amma u r a great light to my life

  • @santhusanthukudwakudwa3164
    @santhusanthukudwakudwa3164 7 лет назад +2

    Super song ..matte matte kelabeku anisthithde...nuru sala mele keliddaytutu..
    Waw..supurb..

  • @indumathiugru4709
    @indumathiugru4709 4 года назад +1

    ಸುಂದರವಾದ ಹಾಡು mattu ಹಾಡಿದ್ದು soooper

  • @lakshmanks4802
    @lakshmanks4802 3 года назад +3

    ಹೃದಯ ಮುಟ್ಟುವ ಗೀತೆ

  • @sindhuachar2825
    @sindhuachar2825 6 лет назад +4

    Wt a song...!!! n mam ur voice really made it more beautiful.

  • @srinidhi7140
    @srinidhi7140 5 лет назад +18

    💠❣️ಅದ್ಭುತವಾದ ಹಾಡು ತುಂಬಾ ಚೆನ್ನಾಗಿದೆ❣️💠

    • @nagarathnact4257
      @nagarathnact4257 4 года назад

      ಈ ಹಾಡು ಕೇಳುವಾಗ ನನ್ನ ಅಮ್ಮ ನನ್ನ ಕಣ್ಣ ಮುಂದೆ ಬರುತ್ತಾರೆ

  • @rupadhyaya6743
    @rupadhyaya6743 8 лет назад +26

    I love this song...When I hearing this song I remember my mother and cry.... Love you so much maaa..... miss you a lot😭😭😭😩

    • @sunithananjappa5257
      @sunithananjappa5257 7 лет назад +1

      i love this song

    • @shanmukhatn7618
      @shanmukhatn7618 4 года назад

      Manamuttuva haadu
      Dhanyavadagalu

    • @macsaint7708
      @macsaint7708 4 года назад

      Lost my mom on 7th ...this song kills me ...but I want that pain as the memories go so fresh ...my mom an angel ❤️ Miss you ma 🌟

  • @vasanthashetty4581
    @vasanthashetty4581 7 лет назад +11

    Amma Hachidondu Hanate innu Belagide...yantaha Satya . Amma I Miss You Amma I Miss You...

  • @gopinathr.v2843
    @gopinathr.v2843 3 года назад

    ನನ್ನ ಹಡೆದಮ್ಮನಿಗೆ ಈ ಹಾಡು ಅರ್ಪಣೆ

  • @ನನ್ನುಡಿಕನ್ನಡ

    ಜಗವ ಮರೆತು ಲೀನವಾಯ್ತು ಮನಸ್ಸು ಗಾಯನದ ಲೋಕದಲ್ಲಿ

  • @pushpalathasatyadaharikara6201
    @pushpalathasatyadaharikara6201 5 лет назад +1

    ಅಮ್ಮನ ನೆನಪು ಸದಾ ತರುತ್ತೆ

  • @mallanayak98
    @mallanayak98 6 лет назад +2

    Melody and really ammana mamatheya kadalu tumbiruva evergreen bhaavageethe

  • @mohanlakshmi8355
    @mohanlakshmi8355 3 года назад

    🙏🌺🙏. When I lijan this song I My love to My Mamm lots of love..Tk you Mm ones this song.. both are very much...🌹👣🌹🙇🙏🙏🌺

    • @ushasc5256
      @ushasc5256 2 года назад

      Beautiful feelings🙏

  • @manojcharvaka8119
    @manojcharvaka8119 3 года назад +1

    ಎಷ್ಟು ಬಾರಿ ಕೇಳಿದರು ಸಾಕಾಗದ ಒಂದು ಹಾಡು... ಪದ್ಯದ ಸಾರವೆ ತಾಯಿಯ ಮಮತೆ ಯನ್ನು ಎತ್ತಿ ತೋರಿಸುವ ಒಂದು ಮುಖ್ಯ ಪಾತ್ರ...

  • @anitavm2966
    @anitavm2966 9 лет назад +5

    simply superb .... I love this song.. lv u ammmma

  • @jayaramgowda9282
    @jayaramgowda9282 6 лет назад +2

    Jeevamana shredhta haadu
    Nammantha thayi elladhavara palige
    Thayiya bagegina haadu super

  • @ramachandrabhagwath437
    @ramachandrabhagwath437 3 года назад +1

    What a excellent song and singing!!!, tears will be there forever who loves amma... really heart breaks in silence

  • @anvitakareddy6373
    @anvitakareddy6373 5 лет назад

    Amma hachhidondu hanate innuuu belagideeee....... wawwww wt a song

  • @varamalakshmivaramalakshmi5323

    Bhava poornavagide🙏👍👍💐💐🌹🌹👏👏

  • @BhagyaSahukar
    @BhagyaSahukar 5 месяцев назад

    ಮನಕ್ಕೆ ನೇರವಾಗಿ ತಾಕುವ ಹಾಡು

  • @shanthalaanand4611
    @shanthalaanand4611 10 лет назад +4

    very happy to listen this song in Pallavi' s voice

    • @gangadhara4419
      @gangadhara4419 9 лет назад

      shanthala yashodha hi madam please tell me the which movie song this

    • @ramurama7833
      @ramurama7833 7 лет назад

      yggui

  • @guruguru5620
    @guruguru5620 4 года назад

    I love this song 💓ತುಂಬಾ ಚನ್ನಾಗಿ ದೇ ಹಾಡು 👌👌👌👌👌

  • @basavanagoudasulekal4779
    @basavanagoudasulekal4779 Год назад

    ❤ಹೆಣ್ಣುಮಕ್ಕಳ ಆತ್ಮವಿಸ್ವಾಸದ ಹಾಡು

  • @ranirani9964
    @ranirani9964 5 лет назад +1

    Amma nemagi koti koti vandani

  • @mdk708
    @mdk708 6 лет назад

    ನನಗೆ ಇಷ್ಟವಾದ ಸುಮಧುರ ಹಾಡು

  • @romancatholichyms8073
    @romancatholichyms8073 7 лет назад +2

    Very nice...first I would thank the composer for wonderful compositions..one and only living spirit on earth it's mom..dedicated to my mom

  • @karthikhskarthikhs1567
    @karthikhskarthikhs1567 8 лет назад +2

    Bhaava Geethe is so Awesome......! n i love this song so much....!

  • @nitinvk751
    @nitinvk751 7 лет назад +2

    Meaningful song..Heart touching...

  • @shyamaladineshshetty9134
    @shyamaladineshshetty9134 6 лет назад +6

    Bhavanege belaku bhavageethegalu

    • @NDBos-gz7hy
      @NDBos-gz7hy 4 года назад +1

      Yes absolutely. Bhavanege belaku bhavageetegalu. Yestu satya alwa

  • @dr.sureshkumar2910
    @dr.sureshkumar2910 9 лет назад +14

    this song is like a 'non image of mother' M D pallavi mdm perfectly sensitised the feelings of mother and black letters of M R kamala mdm

  • @roopanagarajroopanagaraj4058
    @roopanagarajroopanagaraj4058 5 лет назад +8

    I miss my amma..miss a lot maa 😭😭u r really great 🙏🙏🙏🙏

  • @savitrijotawar8688
    @savitrijotawar8688 4 года назад +3

    Sooo beautiful.... 🤗

  • @chandandev3251
    @chandandev3251 2 года назад +1

    ಅದ್ಬುತ ಗೀತೆ

  • @manjulal2516
    @manjulal2516 7 месяцев назад

    Pallavi madam thank uuu

  • @hemavathi6541
    @hemavathi6541 3 года назад

    ಹೇಳೋಕೆ ಪದಗಳೇ ಇಲ್ಲ .....ಅಮ್ಮ ನೀನು ಎಸ್ಟೊಂದು ಸುಂದರ....., ಅಮ್ಮ ಅನ್ನೋ ಪದಕ್ಕೆ ಬೆಲೆ ಕಟ್ಟೋಕೆ ಆಗೋಲ್ಲ.....ಅಮ್ಮ ಅಂದ್ರೆ ಜೀವ ..

  • @yamunakshiramesh9301
    @yamunakshiramesh9301 7 лет назад +3

    Very sensational song I love it. Madam u sang very beautiful.

  • @sandyaashu3149
    @sandyaashu3149 2 года назад

    Amma anno vyakti shakthi astu...eddaga esto janake ha pada da arta tiliyolla.....e hadu ammana miss madkondrige arta aguthe...

  • @anupamaml3566
    @anupamaml3566 5 лет назад +8

    Yes it's absolutely right,
    I loos her one year ago, but I miss u every second Amma ur every thing for me I have no another world, ee hadu kelttidre neenu nan ollage eddiya ansatte

    • @delicious_food_vibes
      @delicious_food_vibes 5 лет назад

      Same here..lost her a year back and i get tears by listening this song

  • @premav3964
    @premav3964 Год назад

    Manasige besara adhagella keluva ondhe song idhu.

  • @akshthaanagu2651
    @akshthaanagu2651 7 лет назад +2

    awesome no words to define

  • @kanakaautomobiles790
    @kanakaautomobiles790 9 лет назад +2

    satish ks this is a folk song (bhava geethe) and it's not yet taken into any movie

  • @drtejaswinianil950
    @drtejaswinianil950 5 лет назад

    Vishwa Nim uploads antu priceless. Thanks for these awesome songs🤩👌🏻👏🏻🙏

  • @bhavyashettyshetty8265
    @bhavyashettyshetty8265 5 лет назад

    Nice.. True love ammana prithi

  • @ravimanjulasheetyravimanju4473
    @ravimanjulasheetyravimanju4473 7 лет назад +1

    nice songs in amam songs md palavi madem thank you

  • @nithyasrinivasan5359
    @nithyasrinivasan5359 7 лет назад +2

    I miss u Amma. As she passed away some months back

  • @chinnammam1261
    @chinnammam1261 2 года назад

    Daily used 2 and 3 times listen

  • @vanitha4943
    @vanitha4943 2 года назад

    Wonderful song 💖😍🙏🙏🙏

  • @vinayakbhide5201
    @vinayakbhide5201 5 месяцев назад

    Best Song & Voice .

  • @AnithaAnitha-il8kp
    @AnithaAnitha-il8kp 6 лет назад +5

    Super song i dedicated to my mom

  • @amritahegde4213
    @amritahegde4213 4 года назад

    I love amma. Amma ondu sundara koduge

  • @deepikanaveen9683
    @deepikanaveen9683 9 лет назад +1

    Superb...i love so much song...

  • @mallikasnayak6318
    @mallikasnayak6318 2 года назад +1

    All time favourite evergreen song ❤️🙏

  • @lingappayogi4970
    @lingappayogi4970 6 лет назад +1

    ಚೆನ್ನಾಗಿದೆ...!

    • @meenakaranth6904
      @meenakaranth6904 2 года назад

      ಅಮ್ಮ ಪ್ರೀತಿಗೆ ಸರಿಸಾಟಿ ಯಾದಪ್ರೀತಿ ಜಗತ್ತಿನಲ್ಲಿ ಯಾವುದು ಇಲ್ಲ.,🙏🌹🙏🌷🙏🌹🙏🌷💥

  • @ghpsakhallighpsakhalli9946
    @ghpsakhallighpsakhalli9946 3 года назад

    Namma grugalu bareda haadu keli indu dhanyanade

  • @shwethakumari7635
    @shwethakumari7635 7 лет назад +1

    6 tariku naanu nanu anaatheyada Dina Amma aglida dina I miss amma

  • @SreedharMurthy-r6w
    @SreedharMurthy-r6w 10 месяцев назад

    Amma a mukha nodidare saku hasivige artha. Illa idu nanna anubhava. Yee hadu hadida m d paalavi avrige sashtanga namaskaragalu

  • @sanjanamv7319
    @sanjanamv7319 2 года назад +1

    Please yaradru ee haadina artha heli

  • @santhusanthukudwakudwa3164
    @santhusanthukudwakudwa3164 3 года назад

    Mate matte meluku haakuva bhavuka baavageete....💝💞👍✌

  • @jayachander1537
    @jayachander1537 7 лет назад +1

    I miss my amma. I feel the love pain in this song. Feeling lonely 😥 feel of the song touches my soul

  • @indumathivenktesh4316
    @indumathivenktesh4316 3 года назад

    ನನ್ನ ಇಷ್ಟವಾದ ಹಾಡು ಎವರ್ಗ್ರೀನ್

  • @anushasheshadri9665
    @anushasheshadri9665 3 года назад +1

    I love this song and voice also my dear mam