ಶ್ರೀ ತೀರ್ಥರಾಮೇಶ್ವರ ಸ್ವಾಮಿ ಪುಣ್ಯಕ್ಷೇತ್ರ ವಜ್ರ.!Sri Theertharameshwara Swamy.

Поделиться
HTML-код
  • Опубликовано: 12 сен 2024
  • ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಯರೇಕಟ್ಟೆ ಗ್ರಾಮ ( ವಜ್ರ)
    ಶ್ರೀ ತೀರ್ಥರಾಮೇಶ್ವರ ಸ್ವಾಮಿ ಪುಣ್ಯಕ್ಷೇತ್ರ ( ವಜ್ರ )
    ---------------------------------------------------------------------
    ನಮಸ್ಕಾರ ವೀಕ್ಷಕರೇ ಇಂದು ನಮ್ಮ ಕ್ಷೇತ್ರ ಸತ್ಯ ಕಾರ್ಯಕ್ರಮದಲ್ಲಿ ಒಂದು ಪುರಾಣ ಪ್ರಸಿದ್ಧವಾದ ಹಾಗೂ ವಿಶೇಷತೆಯಿಂದ ಕೂಡಿದ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಕನ್ನಡ ನಾಡಿನ ಮಹಾನ್ ಸಾಹಿತಿಗಳಾದ ತೀನಂ ಶ್ರೀಕಂಠಯ್ಯನವರು ಜನ್ಮ ಪಡೆದಂತಹ ನಮ್ಮ ಹೆಮ್ಮೆಯ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಬಳಿ ಇರುವ ಯರೆಕಟ್ಟೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ತೀರ್ಥರಾಮೇಶ್ವರ ದೇವಾಲಯದ ದರ್ಶನ ಮತ್ತು ಅಲ್ಲಿನ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ ಇಂದಿನ ನಿಮ್ಮ ಕ್ಷೇತ್ರ ಸತ್ಯ ಕಾರ್ಯಕ್ರಮದಲ್ಲಿ ಈ ದೇವಾಲಯದ ಇತಿಹಾಸವನ್ನು ಗಮನಿಸಿದಾಗ ಈ ದೇವಾಲಯವು ಸುಮಾರು 650 ವರ್ಷಗಳ ಇತಿಹಾಸವನ್ನು ಹೊಂದಿದೆ ಎಂಬ ಮಾಹಿತಿ ಸಿಕ್ಕಿದೆ ಈ ದೇವಾಲಯವು ಹಾಗಲವಾಡಿ ಸಂಸ್ಥಾನದ ಪಾಳೆಯಗಾರರ ಕಾಲಘಟ್ಟದಲ್ಲಿ ಸ್ಥಾಪನೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ ಹಾಗಲವಾಡಿ ಸಂಸ್ಥಾನದ ಮೂಲಪುರುಷ ಯರಿ ಮಾದಿ ನಾಯಕರ ಆಳ್ವಿಕೆಯ ನಂತರ ತಮ್ಮ ಮಗನಾದ ಸಾಲಿನಾಯಕರ ಆಳ್ವಿಕೆ ಮಾಡಿರುತ್ತಾರೆ ನಂತರದಲ್ಲಿ ಸಾಲಿನಾಯಕರ ಮಗನಾದ ಭೈರಪ್ಪ ನಾಯಕರು ಹಾಗಲವಾಡಿ ಸಂಸ್ಥಾನವನ್ನು ಆಳ್ವಿಕೆ ಮಾಡಿರುತ್ತಾರೆ. ಇವರ ಆಳ್ವಿಕೆಯ ಕಾಲಘಟ್ಟದಲ್ಲಿ ತೀರ್ಥರಾಮೇಶ್ವರ ಸ್ವಾಮಿ ದೇವಾಲಯದ ಸ್ಥಾಪನೆಯಾಗಿದೆ ಎಂಬ ಮಾಹಿತಿ ದೊರೆತಿದೆ ಈ ದೇವಾಲಯದ ವಿಶೇಷತೆ ಏನೆಂದರೆ ಸ್ವಾಮಿಯು ಉದ್ಭವ ಲಿಂಗ ಸ್ವರೂಪಿಯಾಗಿ ನೆಲೆಯಾಗಿರುತ್ತಾರೆ ಎಂಬ ಮಾಹಿತಿ ದೊರೆತಿದೆ. ದೇವಾಲಯದ ಎಡಭಾಗದಲ್ಲಿ ರಾಜರಾಜೇಶ್ವರಿ ಅಮ್ಮನವರ ವಿಗ್ರಹ ಮೂರ್ತಿಯನ್ನು ಕಾಣುತ್ತೇವೆ. ದೇವಾಲಯದ ಬಲಭಾಗದಲ್ಲಿ ವೀರಭದ್ರೇಶ್ವರ ಸ್ವಾಮಿ ಚನ್ನಕೇಶವ ಸ್ವಾಮಿ ಮತ್ತು ವಿಘ್ನೇಶ್ವರ ಸ್ವಾಮಿಯ ವಿಗ್ರಹಗಳನ್ನು ಕಾಣುತ್ತೇವೆ. ದೇವಾಲಯದಲ್ಲಿ ಒಂದು ವಿಶೇಷವಾದ ಹಳೆಗನ್ನಡದಲ್ಲಿ ಬರೆದಿರುವ ಒಂದು ಶಿಲಾಶಾಸನವನ್ನು ಕಾಣುತ್ತೇವೆ. ದೇವಾಲಯದ ಹಿಂಭಾಗ ಮಜ್ಜನ ಗುಂಡಿಯ ಪಕ್ಕದಲ್ಲಿ ಕಾಲಭೈರೇಶ್ವರ ಸ್ವಾಮಿಯ ಗುಡಿಯನ್ನು ಕಾಣುತ್ತೇವೆ. ದೇವಾಲಯದ ಸುತ್ತಲೂ ವಿಶೇಷವಾದ ಪ್ರಾಂಗಣ ಇದ್ದು ಅತಿ ಆಕರ್ಷಣೆಯಿಂದ ಕೂಡಿದೆ. ಈ ದೇವಾಲಯವು ಹಚ್ಚಹಸುರಾದ ಪ್ರಕೃತಿಯ ಮಡಿಲಲ್ಲಿ ಸುಂದರವಾದ ಬೆಟ್ಟ ಗುಡ್ಡಗಳ ನಡುವೆ ಇದ್ದು ಅತಿ ವಿಶೇಷತೆಯಿಂದ ಕೂಡಿದೆ. ದೇವಾಲಯದ ಮುಂಭಾಗದಲ್ಲಿ ಒಂದು ವಿಶೇಷವಾದ ಗುಪ್ತಗಾಮಿನಿ ಎಂಬ ನದಿಯು ಉದ್ಭವಿಸಿ ಸುಮಾರು 500 ಮೀಟರ್ ಅಂತರದಲ್ಲಿ ಕಣ್ಮರೆಯಾಗುವ ಒಂದು ವಿಸ್ಮಯ ಸಂಗತಿ ಇಲ್ಲಿ ಗೋಚರಿಸುತ್ತದೆ. ಈ ನದಿಯ ನೀರಿನಲ್ಲಿ ವಿಶೇಷವಾದ ಗಂಗಾ ಪೂಜೆಯನ್ನು ಮಾಡಲಾಗುತ್ತದೆ ಅಲ್ಲಿ ಚಿಕ್ಕದಾದ ಒಂದು ಗುಡಿಯಲ್ಲಿ ಗಂಗಾಮಾತೆಯ ವಿಗ್ರಹ ಮೂರ್ತಿಯನ್ನು ಕಾಣುತ್ತೇವೆ. ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಬೇಡಿಕೊಂಡು ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿಕೊಂಡು ಗಂಗೆ ಪೂಜೆಯನ್ನು ನೆರವೇರಿಸಿಕೊಂಡು ಹೋಗುವ ವಿಶೇಷತೆ ಇಲ್ಲಿ ಕಂಡುಬರುತ್ತದೆ. ಅದರಲ್ಲೂ ಸಂತಾನ ಸಮಸ್ಯೆ ಇರುವವರು ಇಲ್ಲಿ ಬಂದು ಗಂಗಾ ಪೂಜೆ ಮಾಡಿಕೊಂಡು ಹೋದರೆ ಮಕ್ಕಳಾಗುವ ಭಾಗ್ಯ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಭಕ್ತರು ತಮ್ಮ ಕಷ್ಟಗಳು ಪರಿಹಾರವಾದ ಬಳಿಕ ಬಂದು ನಾಗರಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಿರುವ ಸಂಗತಿಯನ್ನು ಇಲ್ಲಿ ಕಾಣುತ್ತೇವೆ. ಇಲ್ಲಿ ಹಲವಾರು ರೀತಿಯ ವಿಶೇಷವಾದ ನಾಗರಕಲ್ಲುಗಳನ್ನು ಕಾಣುತ್ತೇವೆ. ಇಲ್ಲಿ ಹರಿಯುತ್ತಿರುವ ನದಿಯ ನೀರು ತುಂಬಾ ವಿಶೇಷತೆಯಿಂದ ಕೂಡಿದ್ದು ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ದೇವರುಗಳನ್ನು ಕರೆತಂದು ಪುಣ್ಯ ಸ್ನಾನ ಮಾಡಿಸಿಕೊಂಡು ಹೋಗುವುದು ಇಲ್ಲಿಯ ವಾಡಿಗೆಯಾಗಿದೆ. ದೇವರುಗಳು ಪುಣ್ಯಸ್ಥಾನದ ಬಳಿಕ ವಿಶೇಷವಾದ ಶಕ್ತಿ ಪಡೆಯುತ್ತವೆ ಎಂಬ ನಂಬಿಕೆ ಇದೆ. ಹೀಗೆ ಈ ಸ್ಥಳವು ತುಂಬಾ ವಿಶೇಷತೆಯನ್ನು ಹೊಂದಿದೆ ತೀರ್ಥರಾಮೇಶ್ವರ ಸ್ವಾಮಿಯು ಹಲವಾರು ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದ್ದು ಬೇಡಿದ ಭಕ್ತರ ಕಷ್ಟಗಳನ್ನು ಈಡೇರಿಸುವ ಶಕ್ತಿಶಾಲಿ ಸ್ವಾಮಿಯಾಗಿದೆ. ಇಲ್ಲಿ ಪ್ರತಿನಿತ್ಯ ವಿಶೇಷವಾದ ಅಭಿಷೇಕ ಅಲಂಕಾರ ಹಾಗೂ ನೈವಿದ್ಯ ಕಾರ್ಯಕ್ರಮಗಳು ಜರುಗುತ್ತವೆ ಈ ದೇವಾಲಯದಲ್ಲಿ ನಾಮಕರಣ ಮದುವೆ ಮುಂತಾದ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಲ್ಲಿ ನಿತ್ಯ ಅಣ್ಣ ಸಂಪರ್ಕನೆ ಇರುತ್ತದೆ ಪ್ರತಿ ಭಾನುವಾರ ಅಮಾವಾಸ್ಯೆ ಪೌರ್ಣಮಿಯ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಇದು ಒಂದು ಪ್ರೇಕ್ಷಣೀಯ ಸ್ಥಳವೂ ಆಗಿದ್ದು ಪ್ರವಾಸಿಗರನ್ನು ಸೆಳೆಯುವ ವಿಶೇಷ ಪ್ರವಾಸಿ ತಾಣವು ಆಗಿದೆ. ಈ ತೀರ್ಥರಾಮೇಶ್ವರ ಸ್ವಾಮಿ ದೇವಾಲಯ ಇರುವ ಸ್ಥಳಕ್ಕೆ ವಜ್ರ ಎಂದು ಸಹ ಕರೆಯಲಾಗುತ್ತದೆ. ನೀವು ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ.

Комментарии • 33