Lyrics part 1 of 3 ನಾರಾಯಣ ಕೃಷ್ಣ ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ | ವಾಣಿ ಭಾರತಿಯ ಗಜಮುಖನ ಬಲಗೊಂಬೆ || ನಾನು ಬಲ್ಲಷ್ಟು ಪೇಳುವೆನು ಈ ಕಥೆಯ | ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ || ಛಪ್ಪನ್ನ ದೇಶ ದೇಶದ ರಾಯರೊಳಗೆ | ಉತ್ತಮದ ದೇಶ ಗೌಳಾದೇಶದಲ್ಲಿ || ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು | ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ || ಚಿತ್ತದಲಿ ನರಹರಿಯ ನೆನೆದು ಚಿಂತಿಸುತ | ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ || ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ | ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ || ೩ || ಸರ್ಪಶಯನನ ಧ್ಯಾನದಲ್ಲಿದ್ದ ತಾನು | ಮತ್ತೆ ತ್ರಿಕೂಟಪರ್ವತಕಾಗಿ ಬಂದು || ನಾಗಶಯನನ ಧ್ಯಾನದಲ್ಲಿದ್ದ ತಾನು | ಮೇರುಮಂದರದ ಸಮೀಪಕ್ಕೆ ಬಂದು ||೪ || ಸಿದ್ಧ ಕಿನ್ನರರು ಗಂಧರ್ವರಿಗೆ ಸ್ಥಾನ | ಎದ್ದೆದ್ದು ಕುಣಿವ ಮೃಗಖಗಗಳ ಸೀಮ || ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ | ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ || ಹಲವು ನದಿ ಹಲವು ಕೊಳ ಹಲವು ಸರೋವರದಿ | ಹಲವು ಪರಿ ಪುಷ್ಪಗಳು ಮೆರೆವ ಅಳಿಕುಲದಿ || ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ | ಕುಣಿವ ನವಿಲುಗಳ ಗಿಳಿಕೋಗಿಲೆಯ ಗಾನ || ೬ || ಬಂದು ನದಿಯಲ್ಲಿ ಸ್ನಾನವನು ಮಾಡಿದನು | ಚಂದದಿಕ್ಕಿದನು ದ್ವಾದಶ ನಾಮಗಳನು || ಸಂಧ್ಯಾವಂದನೆ ಮಾಡಿ ಪದ್ಮ ಆಸನದಿ | ಇಂದಿರಾಪತಿಯ ಮನದೊಳಗಿರಿಸಿ ತಾನು || ೭ || ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ | ನಿಂದಿರ್ದು ವಂದನೆಯ ಮಾಡಲಿಲ್ಲೆಂದ || ಎಂದೆನುತ ಮನದಿ ಕೋಪಿಸುತ ಶಾಪಿಸಿದ | ಕುಂಜರದ ರೂಪಾಗಿ ಜನಿಸು ಹೋಗೆಂದ || ೮ || ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ | ಉಚ್ಛಾಪ ಎಂದಿಗಾಗುವುದೆನುತ ಪೇಳು || ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ | ಉಚ್ಛಾಪ ಅಂದಿಗಾಗುವುದೆಂದು ಪೇಳೆ || ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ | ಉಚ್ಛಾಪ ಅಂದಿಗಾಗುವುದೆಂದು ಪೇಳೆ || ೯ || ಜ್ಞಾನವಡಗಿದವು ಅಜ್ಞಾನ ಆವರಿಸೆ | ಸೂರ್ಯ ಮುಳುಗಿದನು ಕತ್ತಲೆಯ ಮುಸುಕಂತೆ || ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು | ಅನೆಯಾದನು ನೃಪನು ಆ ಕ್ಷಣದಿ ತಾನು || ೧೦ || ಮೇರುಪರ್ವತ ಕದಲಿ ಇಳಿದು ಬರುವಂತೆ | ಮೇಲುಮದ ಕೀಳು ಮದ ಸುರಿಯೆ ಕುಂಭದಲಿ | ಕಾಡಾನೆ ಕರಿಯಾನೆ ಮರಿಯಾನೆ ಸಹಿತ | ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ || ಕಾಡಾನೆಯೊಳಗ್ಹಲವು ಮಕ್ಕಳನೆ ಪಡೆದು | ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧ || ಘಟ್ಟ ಬೆಟ್ಟಗಳ ಹತ್ತುತಲಿ ಇಳಿಯುತಲಿ | ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲಿ || ದಟ್ಟಡವಿಯೊಳಗೆ ಸಂಚರವ ಮಾಡುತಲಿ | ಬತ್ತಿದವು ಕೆರೆತೊರೆಯು ಬೇಸಗೆಯು ಬರಲು || ೧೨ || ಕಂಡಕಂಡಲ್ಲಿ ಏರುತಲಿ ಇಳಿಯುತಲಿ | ತುಂಡುತುಂಡಾಗಿ ಗಿಡಮರವ ಮುರಿಯುತಲಿ || ತಂಡತಂಡದಲಿದ್ದ ತನ್ನ ಸತಿ ಸುತರು | ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ || ಬಾಳೆ ಕಿತ್ತಳೆ ನಿಂಬೆ ಚೂತ ಮಾದಲವು ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು || ಮೇಲಾದ ಫಲಪುಷ್ಪದಿಂದ ಶೋಭಿಸಲು | ತಾವರೆ ಕೊಳವೊಂದ ಕಂಡ ಗಜರಾಜ || ೧೪ || ನವರತ್ನ ಮುತ್ತು ಮಾಣಿಕ್ಯ ಸೋಪಾನ | ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು || ನಲಿಯುತಿವೆ ಹಲುವ ಹಕ್ಕಿಗಳು ಹಂಸಗಳು | ಪರಿಮಳಿಸುವಾ ಕೊಳವೆ ಹೊಕ್ಕ ಗಜರಾಜ ||೧೫ || ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ | ಮಡುವಿನಲಿ ಚೆಲ್ಲುತಲಿ ನಲಿದುವೊಂದಾಗಿ || ಕಾಡಾನೆ ಕರಿಯಾನೆ ಮರಿಯಾನೆ ಸಹಿತ | ಕೂಡಿಕೊಂಡಿರಲಿಂತು ಸಮ್ಭ್ರಮದಿ ಜಲದಿ || ೧೬ || ಮುನಿಯ ಶಾಪದಲೊಂದು ಮಕರಿ ಮಡುವಿನೊಳು | ಹಲವುಕಾಲದಿ ತಪಿಸಿ ಜೀವಿಸುತ್ತಿರಲು || ಮದಗಜವು ಪೊಕ್ಕು ಮಡುವನೆ ಕಲಕುತಿರಲು ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲು || ೧೭ || ಅತ್ತಿತ್ತ ನೋಡಿದನು ಸುತ್ತ ನೋಡಿದನು | ಎತ್ತ ನೋಡಿದರೂ ಬಿಡದು ಆ ಮಕರಿ ಕಾಲು || ಎಳೆದೊಮ್ಮೆ ನೋಡಿದನು ಸೆಳೆದೊಮ್ಮೆ ನೋಡಿದನು | ಹೇಗೆ ನೋಡಿದರು ಬಿಡದು ಆ ಮಕರಿ ಕಾಲು || ೧೮ || ತನ್ನ ಸತಿ ಸುತರೆಲ್ಲ ಸೆಳೆದರೊಂದಾಗಿ | ತಮ್ಮ ಕೈಲಾಗದೆಂದೆನುತ ತಿರುಗಿದರು | ಎನ್ನ ಪುಣ್ಯದ ಫಲವು ಹೋಗಿ ನೀವೆಂದ | ದುಮ್ಮಾನದಿಂದ ದೊರದಲ್ಲಿದ್ದರವರು || ೧೯ || ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು | ರಕ್ತಮಯವಾಗಿ ತುಂಬಿತು ಕೊಳದ ನೀರು | ಅಕ್ಕಾಟ ಎನಗಿನ್ನು ಗತಿಯಾರು ಎನುತ ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ || See reply to this comment for part 2
ಸಾವಿರಾರು ವರುಷ ಗಜೇಂದ್ರ ನೋವಿನಲ್ಲಿದ್ದರೂ ..ಇದು ನನ್ನ ಪಾಲಿಗೆ ಬಂದದ್ದು.. ಎಂದು ಬಿಡದೇ ಅಲ್ಲೇ ಇದ್ದ ಕಮಲದ ಹೂವಿನಿಂದ ಪೂಜಿಸಿ ಸ್ತುತಿಸಿತು. ಇದನ್ನು ನಾವು ಗಜೇಂದ್ರ ನಿಂದ ಕಲಿಯಬೇಕು. ತುಂಬಾ ಚೆನ್ನಾಗಿದೆ. ನಮಸ್ಕಾರ.
ಹರೇ ಕೃಷ್ಣ, ಜೈ ಶ್ರೀ ಕಾಲ ಭೈರವೇಶ್ವರ, , ದೇವ ಭಗವಂತ ಮುಂದಿನ ಜನ್ಮ ವಿದ್ದರೆ ನಿನ್ನ ಸೇವಕನಾಗಿ ದೇಹ ಸವೆಸುವ ಸೌಭಾಗ್ಯ ವ ಕೊಡು ಪ್ರಭು, ಮುಕ್ತಿ ಮಾರ್ಗವ ತೋರಿಸು ತಂದೆ, 🙏🙏🙏🙏🌹❤️❤️🌹❤️❤️🌹🙏
ಈ ಕೃತಿ ಪ್ರಸ್ತುತಿ ಪಡಿಸಬೇಕು ಅಂತ ಹಲವು ದಿನಗಳಿಂದ ಮನಸ್ಸು ಚಡಪಡಿಸುತ್ತಿತ್ತು....ನಿಮ್ಮ ದಿವ್ಯ ಪ್ರಸ್ತುತಿ ಕೇಳಿದ ನಂತರ, I get more motivated..🙏 ನಮ್ಮ ತಾಯಿಯವರು ಇನ್ನೊಂದು ಸಾಂಪ್ರದಾಯಿಕ ಧಾಟಿಯಲ್ಲಿ ಹೇಳಿಕೊಟ್ಟಿದಾರೆ....ಸದ್ಯದಲ್ಲೇ ಹಾಡುವೆನು 🙏🙂
ಶ್ರೀ ವಾದರಾಜ ತೀರ್ಥರ ರಚಿತವಾದ ಸುಂದರ ಹಾಡು ಗಜೇಂದ್ರ ಮೋಕ್ಷವನ್ನ ಕೇಳುತಿದ್ರೆ ದಿನವಿಡೀ..... ಕೇಳುತ್ತಾನೆ ಇರಬೇಕು ಅನಿಸುತ್ತೆ. ಎಷ್ಟು ಸಾರಿ ಕೇಳಿದರೂ ಇನ್ನೂ ಮತ್ತೆ ಇನ್ನೊಂದು ಸಲ ಕೇಳೋಣ ಅನಿಸುತ್ತೆ.... 😊😊😊 ಈ ಪದಗಳನ್ನ ನಮ್ಮೆಲ್ಲರಿಗಾಗಿ ಸುಂದರವಾಗಿ ಹಾಡಿದ ವೇಣುಗೋಪಾಲ ಖಟಾವಕ್ಕರ್ ಅವರಿಗೆ ನಮ್ಮ ನಮನ ಸಲ್ಲಿಸಿ ಕೃತಾರ್ಥರಾಗಿ ಇರುತ್ತೇವೆ 🙏🙏🙏🙏🙏🙏
Lyrics part 1 of 3
ನಾರಾಯಣ ಕೃಷ್ಣ
ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ |
ವಾಣಿ ಭಾರತಿಯ ಗಜಮುಖನ ಬಲಗೊಂಬೆ ||
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ |
ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ ||
ಛಪ್ಪನ್ನ ದೇಶ ದೇಶದ ರಾಯರೊಳಗೆ |
ಉತ್ತಮದ ದೇಶ ಗೌಳಾದೇಶದಲ್ಲಿ ||
ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು |
ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ ||
ಚಿತ್ತದಲಿ ನರಹರಿಯ ನೆನೆದು ಚಿಂತಿಸುತ |
ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||
ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ |
ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ || ೩ ||
ಸರ್ಪಶಯನನ ಧ್ಯಾನದಲ್ಲಿದ್ದ ತಾನು |
ಮತ್ತೆ ತ್ರಿಕೂಟಪರ್ವತಕಾಗಿ ಬಂದು ||
ನಾಗಶಯನನ ಧ್ಯಾನದಲ್ಲಿದ್ದ ತಾನು |
ಮೇರುಮಂದರದ ಸಮೀಪಕ್ಕೆ ಬಂದು ||೪ ||
ಸಿದ್ಧ ಕಿನ್ನರರು ಗಂಧರ್ವರಿಗೆ ಸ್ಥಾನ |
ಎದ್ದೆದ್ದು ಕುಣಿವ ಮೃಗಖಗಗಳ ಸೀಮ ||
ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ |
ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ ||
ಹಲವು ನದಿ ಹಲವು ಕೊಳ ಹಲವು ಸರೋವರದಿ |
ಹಲವು ಪರಿ ಪುಷ್ಪಗಳು ಮೆರೆವ ಅಳಿಕುಲದಿ ||
ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ |
ಕುಣಿವ ನವಿಲುಗಳ ಗಿಳಿಕೋಗಿಲೆಯ ಗಾನ || ೬ ||
ಬಂದು ನದಿಯಲ್ಲಿ ಸ್ನಾನವನು ಮಾಡಿದನು |
ಚಂದದಿಕ್ಕಿದನು ದ್ವಾದಶ ನಾಮಗಳನು ||
ಸಂಧ್ಯಾವಂದನೆ ಮಾಡಿ ಪದ್ಮ ಆಸನದಿ |
ಇಂದಿರಾಪತಿಯ ಮನದೊಳಗಿರಿಸಿ ತಾನು || ೭ ||
ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ |
ನಿಂದಿರ್ದು ವಂದನೆಯ ಮಾಡಲಿಲ್ಲೆಂದ ||
ಎಂದೆನುತ ಮನದಿ ಕೋಪಿಸುತ ಶಾಪಿಸಿದ |
ಕುಂಜರದ ರೂಪಾಗಿ ಜನಿಸು ಹೋಗೆಂದ || ೮ ||
ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ |
ಉಚ್ಛಾಪ ಎಂದಿಗಾಗುವುದೆನುತ ಪೇಳು ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ಉಚ್ಛಾಪ ಅಂದಿಗಾಗುವುದೆಂದು ಪೇಳೆ ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ಉಚ್ಛಾಪ ಅಂದಿಗಾಗುವುದೆಂದು ಪೇಳೆ || ೯ ||
ಜ್ಞಾನವಡಗಿದವು ಅಜ್ಞಾನ ಆವರಿಸೆ |
ಸೂರ್ಯ ಮುಳುಗಿದನು ಕತ್ತಲೆಯ ಮುಸುಕಂತೆ ||
ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು |
ಅನೆಯಾದನು ನೃಪನು ಆ ಕ್ಷಣದಿ ತಾನು || ೧೦ ||
ಮೇರುಪರ್ವತ ಕದಲಿ ಇಳಿದು ಬರುವಂತೆ |
ಮೇಲುಮದ ಕೀಳು ಮದ ಸುರಿಯೆ ಕುಂಭದಲಿ |
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ ||
ಕಾಡಾನೆಯೊಳಗ್ಹಲವು ಮಕ್ಕಳನೆ ಪಡೆದು |
ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧ ||
ಘಟ್ಟ ಬೆಟ್ಟಗಳ ಹತ್ತುತಲಿ ಇಳಿಯುತಲಿ |
ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲಿ ||
ದಟ್ಟಡವಿಯೊಳಗೆ ಸಂಚರವ ಮಾಡುತಲಿ |
ಬತ್ತಿದವು ಕೆರೆತೊರೆಯು ಬೇಸಗೆಯು ಬರಲು || ೧೨ ||
ಕಂಡಕಂಡಲ್ಲಿ ಏರುತಲಿ ಇಳಿಯುತಲಿ |
ತುಂಡುತುಂಡಾಗಿ ಗಿಡಮರವ ಮುರಿಯುತಲಿ ||
ತಂಡತಂಡದಲಿದ್ದ ತನ್ನ ಸತಿ ಸುತರು |
ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ ||
ಬಾಳೆ ಕಿತ್ತಳೆ ನಿಂಬೆ ಚೂತ ಮಾದಲವು
ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು ||
ಮೇಲಾದ ಫಲಪುಷ್ಪದಿಂದ ಶೋಭಿಸಲು |
ತಾವರೆ ಕೊಳವೊಂದ ಕಂಡ ಗಜರಾಜ || ೧೪ ||
ನವರತ್ನ ಮುತ್ತು ಮಾಣಿಕ್ಯ ಸೋಪಾನ |
ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು ||
ನಲಿಯುತಿವೆ ಹಲುವ ಹಕ್ಕಿಗಳು ಹಂಸಗಳು |
ಪರಿಮಳಿಸುವಾ ಕೊಳವೆ ಹೊಕ್ಕ ಗಜರಾಜ ||೧೫ ||
ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ |
ಮಡುವಿನಲಿ ಚೆಲ್ಲುತಲಿ ನಲಿದುವೊಂದಾಗಿ ||
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿಕೊಂಡಿರಲಿಂತು ಸಮ್ಭ್ರಮದಿ ಜಲದಿ || ೧೬ ||
ಮುನಿಯ ಶಾಪದಲೊಂದು ಮಕರಿ ಮಡುವಿನೊಳು |
ಹಲವುಕಾಲದಿ ತಪಿಸಿ ಜೀವಿಸುತ್ತಿರಲು ||
ಮದಗಜವು ಪೊಕ್ಕು ಮಡುವನೆ ಕಲಕುತಿರಲು
ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲು || ೧೭ ||
ಅತ್ತಿತ್ತ ನೋಡಿದನು ಸುತ್ತ ನೋಡಿದನು |
ಎತ್ತ ನೋಡಿದರೂ ಬಿಡದು ಆ ಮಕರಿ ಕಾಲು ||
ಎಳೆದೊಮ್ಮೆ ನೋಡಿದನು ಸೆಳೆದೊಮ್ಮೆ ನೋಡಿದನು |
ಹೇಗೆ ನೋಡಿದರು ಬಿಡದು ಆ ಮಕರಿ ಕಾಲು || ೧೮ ||
ತನ್ನ ಸತಿ ಸುತರೆಲ್ಲ ಸೆಳೆದರೊಂದಾಗಿ |
ತಮ್ಮ ಕೈಲಾಗದೆಂದೆನುತ ತಿರುಗಿದರು |
ಎನ್ನ ಪುಣ್ಯದ ಫಲವು ಹೋಗಿ ನೀವೆಂದ |
ದುಮ್ಮಾನದಿಂದ ದೊರದಲ್ಲಿದ್ದರವರು || ೧೯ ||
ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು |
ರಕ್ತಮಯವಾಗಿ ತುಂಬಿತು ಕೊಳದ ನೀರು |
ಅಕ್ಕಾಟ ಎನಗಿನ್ನು ಗತಿಯಾರು ಎನುತ
ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ ||
See reply to this comment for part 2
Lyrics part 2 of 3
ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ |
ಸಚ್ಚಿದಾನಂದ ಸರ್ವೇಶ್ವರನೆ ಕಾಯೋ ||
ಭಕ್ತವತ್ಸಲನೆ ಭವಭಂಜನನೆ ಕಾಯೋ |
ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ || ೨೧ ||
ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳ |
ಇಂಬಿಟ್ಟು ಸಲಹೋ ಜಗದೀಶ್ವರನೆ ಕಾಯೋ |
ಜಂಗಮ ಸ್ಥಾವರಗಳೊಳಗೆ ಪರಿಪೂರ್ಣ |
ಎಂಬಂಥ ನೀ ಎನ್ನ ಬಂಧನವ ಬಿಡಿಸೊ || ೨೨ ||
ಈರೇಳು ಭುವನವನು ಹೃದಯದೊಳಗಿಟ್ಟೆ |
ಕಾದುಕೋ ಎಂದು ಗಜರಾಜ ಮೊರೆಯಿಟ್ಟ |
ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ|
ಬಹಳ ನೊದೆನೆ ಸ್ವಾಮಿ ಕಾಯೋ ಬಾಯೆಂದ || ೨೩ ||
ವೇದಗಳ ಕದ್ದುಕೊಂಡೊಯ್ದ ದಾನವನ |
ಸಾಧಿಸಿದೆ ಭೇಧಿಸಿದೆ ಅವನ ಛೇದಿಸಿದೆ ||
ಆದಿ ನಿಗಮವ ತಂದು ಕಮಲಜನಿಗಿತ್ತೆ |
ವೇದಾಂತವೇದ್ಯ ಮತ್ಸ್ಯವತಾರ ಶರಣು || ೨೪ ||
ಸುರಾಸುರರು ಪಾಲ್ಗಡಲ ಮಥಿಸುತಿರಲು |
ಮುರವೈರಿ ಹಾಸಿಗೆಯ ಹುರಿ ಮಾಡಿಕೊಂಡು |
ಭರದಿ ಮಂದರಗಿರಿಯು ಇಳಿಯುತಿರೆ ಬಂದು |
ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರಣು || ೨೫ ||
ಸುರುಳಿ ಸುತ್ತಿದ ಭೂಮಿ ದಾಡೆಯಲಿ ತಂದೆ |
ದುರುಳ ಹಿರಣ್ಯಾಕ್ಷನ ಬೇಗದಲಿ ಕೊಂದೆ |
ಧರಣಿದೇವಿಯನು ಸದಮಲದೊಳು ಗೆದ್ದೆ |
ವರಹಾವತಾರ ಶ್ರೀಹರಿ ನಿನಗೆ ಶರಣು || ೨೬ ||
ಬಾಲಕನು ಕರೆಯಲಿಕೆ ಕಂಬದಲಿ ಬಂದೆ |
ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ ||
ಶೀಲ ಪ್ರಲ್ಹಾದನಿಗೆ ಅಭಯವನು ಇತ್ತೆ |
ಶ್ರೀಲಕ್ಷ್ಮಿವೊಡನಿದ್ದ ನರಸಿಂಹ ಶರಣು || ೨೭ ||
ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ |
ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ ||
ಅಳೆದ ಪಾದದಲಿ ಭಾಗೀರಥಿಯ ತಂದೆ |
ಚೆಲುವ ವಾಮನಮೂರ್ತಿ ತ್ರಿವಿಕ್ರಮನೆ ಶರನು || ೨೮ ||
ದುಷ್ಟ ಕ್ಷತ್ರಿಯ ನೃಪರ ಕುಲವ ಸಂಹರಿಸಿ |
ರಕ್ತದಲಿ ಸ್ನಾನತರ್ಪಣವ ನೀ ಕೋಟ್ಟೆ
ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿ |
ವಿಪ್ರ ಭಾರ್ಗವರಾಮ ಹರಿ ನಿನಗೆ ಶರಣು || ೨೯ ||
ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ |
ದುರುಳ ರಾವಣನ್ಹತ್ತು ಶಿರಗಳ ತರಿದೆ |
ವರ ವಿಭೀಷಣಗವನ ರಾಜ್ಯಗಳನಿತ್ತೆ ||
ಶರಣರಕ್ಷಕ ಸೀತಾಪತಿ ರಾಮ ಶರಣು || ೩೦ ||
ಮಧುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ |
ತರಳತನದಲಿ ಹಾಲು ಬೆಣ್ಣೆಗಳ ಮೆದ್ದೆ |
ತುರುವ ಕಾಯುತ ಕೊಂದೆ ಹಲವು ರಕ್ಕಸರ |
ಬಲರಾಮಕೃಷ್ಣ ಗೋಪಾಲಕನೆ ಶರಣು || ೩೧ ||
ತ್ರಿಪುರಸತಿಯರ ವ್ರತವ ಅಪಹರಿಸಿದವನೆ |
ಪೃಥವಿಯೊಳು ಅಶ್ವತ್ಥನಾಗಿ ಮೆರೆದವನೆ ||
ಬಿಸಿಗಣ್ಣ ಹರಗೆ ಅಂಬಾಗಿ ನಿಂತವನೆ ||
ಪಶುಪತಿಪ್ರೀಯ ಬೌದ್ಧ ಅವತಾರ ಶರಣು || ೩೨ ||
ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು |
ಬಿನ್ನಾಣದಿಂದ ತುರುಗವನೇರಿಕೊಂಡು ||
ಬನ್ನ ಪಡಿಸುತ ಹಲವು ಪಾತಕರ ಕೊಂದೆ |
ಬ್ರಹ್ಮಸ್ವರೂಪ ಕಲ್ಕ್ಯವತಾರ ಶರಣು || ೩೩ ||
ಅರಿಯದಂತಿರದೆ ಅಚ್ಯುತ ರಕ್ಶಿಸೆನ್ನ |
ಮರೆತೆನೆಂದನದೆ ಮಾಧವ ರಕ್ಷಿಸೆನ್ನ ||
ಕೇಳೆನೆಂದೆನದೆ ಕೇಶವ ರಕ್ಷಿಸೆನ್ನ |
ಕಾಣಿನೆಂದೆನದೆ ಕರುಣಿಸಿ ರಕ್ಷಿಸೆನ್ನ || ೩೪ ||
ಕಾಯಕಂಜದ ಪ್ರಾಣ ಹೋಗುತಿದೆ ಮುನ್ನ |
ಯಾವಾಗ ಹರಿಬಂದು ಕಾಯ್ವನೋ ಎನ್ನ |
ಚೀರಿದನು ಕೂಗಿ ಮೊರೆಯಿಟ್ಟ ಗಜರಾಜ |
ದಾನವಾಂತಕನು ಕಿವಿಗೊಟ್ಟು ಕೇಳಿದನು || ೩೫ ||
ಕ್ಷೀರಾಬ್ಧಿಯಲಿ ವೈಕುಂಠ ನೆಲಸಿದ್ಧ |
ಶೇಷನಾ ಹಾಸಿಗೆಯ ಮೇಲೆ ಕುಳ್ಳಿರ್ದ ||
ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು |
ಆಲಯಿಸಿ ಕೇಳಿದನೆ ಅಜನನೆ ಅಜನ ಪೆತ್ತವನು || ೩೬ ||
ಶಂಕಚಕ್ರಗಳಿಲ್ಲವೆಂದು ಶಂಕಿಸದೇ |
ಬಿಂಕದಿಂ ಗರುಡನ್ನ ಪಗಲೇರಿಸಿಕೊಳದೆ ||
ಪಂಕಜಾಕ್ಷಿಯ ಕೂಡ ತಾನು ಉಸಿರಿಸದೆ ||
ಪಂಕಜನಾಭ ಬಂದನು ಕೊಳದ ಕಡೆಗೆ || ೩೭ ||
ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ |
ವಜ್ರಕುಂಡಲ ಕದಪು ಹಾರಗಳು ಹೊಳೆಯೆ |
ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿ |
ಎದ್ದು ಬಂದನು ದಯಾಸಮುದ್ರ ಬಂದಂತೆ || ೩೮ ||
ಸಿಂಧುಸುತೆ ಪತಿಯೆಲ್ಲಿ ಪೋದನೋ ಎನುತ |
ಮಂದಗಮನೆಯು ಬರಲು ಪುರವೆಲ್ಲ ತೆರಳೆ ||
ವಂದಿಸಿದ ಗರುಡ ಗಂಧರ್ವರೊಗ್ಗಿನಲಿ |
ಅಂದಾಗ ಶಂಖಚಕ್ರವು ಕೂಡಿ ಬರಲು || ೩೯ ||
ಹರಿಯು ಗರುಡನನೇರಿ ಕರಿಯತ್ತ ಬರಲು |
ಹರ ಪಾರ್ವತಿಯರು ನಂದಿಯನೇರಿಕೊಳುತ ||
ಶಿರದ ಮೇಲಿನ ಗಂಗೆ ತುಳುಕಾಡುತಿರಲು |
ಹರ ಬಂದ ಕೈಲಾಸಪುರದಿಂದ ಇಳಿದು || ೪೦ ||
See reply to this comment for part 3
Lyrics part 3 of 3
ತೊಡೆಯ ಮೇಲಿನ ಗೌರಿದೇವಿಯಳ ಸಹಿತ |
ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು |
ಹರಪಾರ್ವತಿದೇವಿ ವೃಷಭವನ್ನೇರಿ |
ಹರ ಬಂದ ಕೈಲಾಸಪುರದಿಂದ ಇಳಿದು || ೪೧ ||
ದೇವರ್ಷಿ ಬ್ರಹ್ಮರ್ಷಿ ರಾಜರ್ಷಿ ಸಹಿತ |
ದೇವಪುತ್ರಾದಿ ಸನಕಾದಿಗಳು ಕೂಡಿ ||
ಸುಮ್ಮನೇ ನಾರದನಂದು ನಡೆತಂದ |
ಧರ್ಮ ಸ್ವರೂಪರೆಲ್ಲಾ ನೆರೆದರಂದು || ೪೨ ||
ಬಂದ ಚಕ್ರವನು ಕರಕಮಲದಲಿ ತೆಗೆದು |
ಸಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ |
ಅಂದಾಗ ಅವನ ಶಾಪ ವಿಶ್ಯಾಪವಾಗಿ |
ಗಂಧರ್ವ ರೂಪಿನಲಿ ನಿಂತಿತಾ ಮಕರಿ || ೪೩ ||
ಹರಿಯ ಸಂದರ್ಶನವು ಮದಗಜಕೆ ಸೋಕುತಲೆ |
ಒದಗಿದವು ಶಂಖ ಚಕ್ರ ನಾಲ್ಕು ಕೈಗಳಲಿ |
ಉಟ್ಟ ಪಿತಾಂಬರವು ಕಿರೀಟ ಕುಂಡಲವು |
ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು || ೪೪ ||
ಜಯಜಯ ಜಗನ್ನಾಥ ಜಯ ವಿಶ್ವಮೂರ್ತಿ |
ಜಯ ಜಯ ಜನಾರ್ಧನ ಜಯ ವಿಶ್ವರೂಪ |
ಜಯತು ಸರ್ವೋತ್ತಮನೆ ಕ್ಷೀರಾಬ್ಧಿಶಯನ |
ಜಯವೆಂದು ಪದಗಳಿಗೆ ಬಂದು ಎರಗಿದನು || ೪೫ ||
ಇಂದಿವನ ಭಾಗ್ಯವನು ನೋಡುವರು ಕೆಲರು |
ಇಂದಿರಾ ಪತಿಯ ಕೊಂಡಾಡುವರು ಕೆಲರು |
ಮಂದಾರ ಹೊಮಳೆಯ ಕರೆಯುತ್ತ ಸುರರು |
ದುಂದುಭಿ ವಾದ್ಯಗಳ ವೈಭವಗಳಿರಲು || ೪೬ ||
ಸಿರಿಸಹಿತ ಹರಿಯು ಗರುಡನೇರಿಕೊಂಡು
ಕರಿರಾಜನೊಡನೆ ವೈಕುಂಠಕ್ಕೆ ಬರಲು ||
ಹರಪಾರ್ವತಿಯರು ಕೈಲಾಸಕೆ ತೆರಳೆ |
ತರತರದ ವಾಹನದಿ ಸುರರು ತೆರಳಿದರು || ೪೭ ||
ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳಿದವರಿಗೆ |
ದುಃಸ್ವಪ್ನ ದುರ್ಬುದ್ಧಿ ದುರ್ವ್ಯಸನ ಕಳೆವದು ||
ಸರ್ಪಾರಿ ವಾಹನನ ಧ್ಯಾನದೊಳಗಿರಲು |
ಸತ್ಸಂಗ ಸಾಯುಜ್ಯ ಪದವಿ ದೊರಕುವುದು || ೪೮ ||
ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ
ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ |
ಹರಿಯ ನೆನೆದವರಿಗೆ ಪರಮ ಪದವಿಯು ಉಂಟು |
ಕರಿರಾಜವರದನ್ನ ಶರಣೆಂದು ಭಜಿಸು || ೪೯ ||
ಜಯತು ಧ್ರುವರಾಯನಿಗೆ ವರವಿತ್ತ ದೇವ |
ಜಯತು ಪ್ರಲ್ಹಾದಗಭಯವನಿತ್ತ ದೇವ |
ಜಯತು ದ್ರೌಪದಿಯಭಿಮಾನ ಕಾಯ್ದ ದೇವಾ
ಜಯತು ಜಯ ಹಯವದನ ಶ್ರೀವಾಸುದೇವ || ೫೦ ||
Thank you so much!
Tq namaskargalu
🙏🙏🙏🙏🙏 Anantha namaskaragalu for uploading this song with lyrics
ಸುಂದರವಾಗಿ ಗೀತೆ ರಚಿಸಿದವರಿಗೆ ಮತ್ತು ಇಂಪಾಗಿ ಗಾಯನ ಹಾಡಿದ ತಮಗೆ ಮತ್ತು ರಚಿಸಿದವರಿಗೆ ಅಭಿನಂದನೆಗಳು
🕉️ಈ ಸುಂದರ ಗೀತೆಯನ್ನು ರಚಿಸಿದ ಶ್ರೀ ವಾದಿರಾಜ ತೀರ್ಥರ ಪದಾರವಿಂದಗಳಿಗೆ ನನ್ನ ಸಾಸ್ಟoಗ ನಮಸ್ಕಾರಗಳು 🕉️
ಇದನ್ನು ಸುಶ್ರಾವ್ಯ ವಾಗಿ ಹಾಡಿದ gayakaru🎉ಹಾಗೂ ತಂಡದವರಿಗೆ ಧನ್ಯವಾದಗಳು 🌹🌹🙏😄
@@lalitayarnaal🎉🎉
Pl in mi ni BH thu thu ni ni
BH ni CDR@@lalitayarnaal
🙏🙏👏💐
Ri😮g😊f St vi❤👺@@RatnaBhat-o5z
What a divine voice… Venugopal Khatavkar 👏👏👏 Close your eyes and listen to it!!! Just mesmerising ❤️
ಎಷ್ಟು ಬಾರಿ ಕೇಳಿದರು ಕೇಳಬೇಕು
ಎನ್ನಿಸುವಂತೆ ಶ್ರೀ ವೇಣುಗೋಪಾಲ್ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ.
ಅಭಿನಂದನೆಗಳು ಸರ್
ನನಗಂತೂ ಎಷ್ಟು ಬಾರಿ ಕೇಳಿದರೂ ಸಾಕೆನಿಸುವುದಿಲ್ಲ ಈ ಧ್ವನಿಯನ್ನು 🙏
ಸಾವಿರಾರು ವರುಷ ಗಜೇಂದ್ರ ನೋವಿನಲ್ಲಿದ್ದರೂ ..ಇದು ನನ್ನ ಪಾಲಿಗೆ ಬಂದದ್ದು.. ಎಂದು ಬಿಡದೇ ಅಲ್ಲೇ ಇದ್ದ ಕಮಲದ ಹೂವಿನಿಂದ ಪೂಜಿಸಿ ಸ್ತುತಿಸಿತು. ಇದನ್ನು ನಾವು ಗಜೇಂದ್ರ ನಿಂದ ಕಲಿಯಬೇಕು. ತುಂಬಾ ಚೆನ್ನಾಗಿದೆ. ನಮಸ್ಕಾರ.
Houdu....... Hare Krishna
ಶ್ರೀ ಹರೇ ಶ್ರೀ ನಿವಾಸ ✨✨🙏🙏
Why did god delay so much to help his biggest devotee. ??I dont t understand this.
హరే కృష్ణ హరే కృష్ణ హరే రామ హరే రామ హరే రామ రామ రామ హరే రామ 🙏
Aapki awaaz bahut hi Achcha hai aur Bhagwan ke gane mein bahut hi Achcha Sa lagta hai Hare Srinivasa
ತಮ್ಮ ಮಧುರ ಕಂಠದಿಂದ ಮೂಡಿ ಬಂದ ಈ ಸ್ತೋತ್ರ, ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ . ತಮ್ಮ ಪಾದಗಳಿಗೆ ಭಕ್ತಿ ನಮನಗಳು.
Yes
ತುಂಬಾ ತುಂಬಾ ಅದ್ಭುತವಾಗಿ ಹಾಡಿದ್ದೀರಾ ಸರ್ ನಿಮಗೆ ಧನ್ಯವಾದಗಳು 🙏🙏🙏🙏
ಅದ್ಭುತ ಸಾಹಿತ್ಯ ! ಅದ್ಭುತ ಗಾಯನ ! ಶ್ರೀ ಹರಿಯ ಕೃಪೆ ನಿಮ್ಮೆಲ್ಲರಿಗೂ ಶುಭ ತರಲಿ !
ಹರೇ ಕೃಷ್ಣ ಹರೇ ಕೃಷ್ಣ....🦚
ಹರೇ ರಾಮ ಹರೇ ರಾಮ....🏹
ಭಕ್ತಿಪೂರ್ವಕ ಪ್ರಸ್ತುತಿ. ಎಂಥ ಅದ್ಭುತ. ಕೋಟಿ ನಮನ
Tumba chennagi hadiddiri. Bahala santosha. Hardika abhinandanegalu. 🎉🎉🎉
Kelutha eddare manacige shanthi ciguthade Dhanyavadagalu nemage
Manassige tumba mudaniduva narayanakrishna stuti 🙏🙏🙏🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ ಗುರುಗಳಿಗೆ ಅನ೦ತಾನಂತ ನಮಸ್ಕಾರ ಗಳು
ಕೇಳುತ್ತಾ ಕೇಳುತ್ತಾ ಕಣ್ ತುಂಬಿ ಬರುತ್ತೆ ಅಷ್ಟು ಚೆನ್ನಾಗಿ ಹೇಳಿದ್ದೀರಿ.
ಶ್ರೀವಾದಿರಾಜ ನಮಸ್ತುಭ್ಯಂ. ನಮಃ
Dina two times keluthene
Gajendra moksha ಹಾಡು ಚನ್ನಾಗಿದೆ ಹಾಗೂ ಹಾಡಿದವರ ಕಂಠ ಸಹ sumadhuravaagide ಧನ್ಯವಾದಗಳು.❤
16:26
F@@mohanbhat1747
ಸತ್ಯವಾದ ಮಾತು
💯%
ತುಂಬಾ ಮಧುರ ಧ್ವನಿ 👌
ನಾರಾಯಣಾ ಕೃಷ್ಣಾ 🙏
Sri, gajaraja, varadanada, narayan, krishna, ninage, namaskaragalu
Super narayana.nya..nama vandane.gurgji
Wah wah ಎನ್ ವಾಯ್ಸ್ ಇವರ್ದು 🙏🏿🙏🏿 ಹಾಗೆ ಕಣ್ಣೆದುರು ಕಥೆ ನಡೀತಾ ಇರೋಹಗೆ ಅನಸ್ತು
ನನ್ನ ಜೀವನ ವನ್ನೇ ಬದಲಿಸಿತು ಈ ಗಜೇಂದ್ರ ಮೋಕ್ಷ 🌹🙏🙏🙏🌹ನಾರಾಯಣ ಕೃಷ್ಣ 🙏
ತುಂಬಾ ಚೆನ್ನಾಗಿದೆ. ನಾನು ಒಂದು ದಿನದಲ್ಲಿ 2 ಸಲ ವಾದ್ರೂ ಕೇಳ್ತೇನೆ. ನೆಮ್ಮದಿ ಸಿಗುತ್ತದೆ. ಧನ್ಯವಾದ ಸರ್
🙏🙏🙏 ನಾರಾಯಣಾ ಕೃಷ್ಣ 🙏🙏🙏ಗೋವಿಂದಾ... 🙏🙏
❤naraayana.....krishna....gajamukha
ಈ ಸುಂದರ ಗೀತೆಯನ್ನು ರಚಿಸಿದ ಶ್ರೀ ವಾದಿರಾಜ ತೀರ್ಥರ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಹಾಗೆಯೇ ಇಷ್ಟು ಅದ್ಭುತವಾಗಿ ಹಾಡಿದ ವೇಣುಗೋಪಾಲರಿಗೂ ನನ್ನ ನಮನಗಳು .
Thumba dhanyavad
Thank you so much
@@amithats5791😊
@@sukanya5471❤p00
@@amithats5791😅😅😅
ಈ ಹಾಡು ಕೇಳಿದಾಗ ಏನು ಒಂದು ತರಾ ದೇವರ ಮೇಲೆ ನಂಬಿಕೆ ಭಕ್ತಿ ಬರುತ್ತದೆ
ನಿಜ ನೂರಕ್ಕೆ ನೂರು
ಎಸ್ಟು ಕೇಳಿದರು ಮತ್ತೆ ಕೇಳಬೇಕು ಅನುಸುತ್ತೆ ಗಜೇಂದ್ರ ನಾರಾಯಣ
Sri, gajendra, varadanige, namaskatagalu
Very very nice swara maduriya nimmadu shanthavada swara om Sri krishnaya namaha dhaniyavadagalu gurugale shubhavagali 🎉❤
ಈ ಸುಂದರವಾದ ಗೀತೆಯ movie ಮಾಡಿದರೆ ತುಂಬಾ ಉಪಯುಕ್ತವಾಗುತ್ತದೆ🗿❤️💯
ಕೇಳುತ್ತಿದ್ದರೆ ಮತ್ತೆಮತ್ತೆ ಕೇಳುವಂತಿದೆ ಇಂಪಾಗಿ 👌👌🙏🙏
ತುಂಬಾ ಚೆನ್ನಾಗಿ ಹಾಡಿದ್ದೀರಾ, ಕಣ್ಣು ಮುಂದೆ ನೆ ನಡೀತಿದೆ ಅನ್ಸತ್ತೆ,ಇದನ್ನು ಕೇಳುತ್ತಿದ್ದರೆ.
ನಾನು ದಿನಕ್ಕೊಂದು ಬಾರಿ ಕೇಳುತ್ತೇನೆ ತುಂಬಾ ಚೆನ್ನಾಗಿದೆ
❤❤
❤
ನಮ್ಮ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಗಜೇಂದ್ರ ಮೋಕ್ಷ ಕೇಳುತ್ತೇವೆ. ತುಂಬಾ positive energy ಇರುತ್ತದೆ. ಶ್ರೀ ವಾದಿರಾಜ ಗುರುಭ್ಯೋ ನಮಃ 🙏🙏🙏
ಓಂ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
ಹರೇ ಕೃಷ್ಣ,
ಜೈ ಶ್ರೀ ಕಾಲ ಭೈರವೇಶ್ವರ,
,
ದೇವ ಭಗವಂತ ಮುಂದಿನ ಜನ್ಮ ವಿದ್ದರೆ ನಿನ್ನ ಸೇವಕನಾಗಿ ದೇಹ ಸವೆಸುವ ಸೌಭಾಗ್ಯ ವ ಕೊಡು ಪ್ರಭು, ಮುಕ್ತಿ ಮಾರ್ಗವ ತೋರಿಸು ತಂದೆ, 🙏🙏🙏🙏🌹❤️❤️🌹❤️❤️🌹🙏
Hare Krishna hare Krishna hare Krishna hare Krishna hare Krishna Jai Krishna Narayana Krishna
ದಿನಕ್ಕೊಮ್ಮೆ ಕೇಳಲೇಬೇಕಾದ ಹಾಡು, ಮನಸ್ಸು ಪ್ರಫುಲ್ಲವಾಗಿರುತ್ತದೆ
Hare Krishna🌹🙏🙏🙏🙏🙏🙏🙏🙏🙏🙏🌹
ನಾರಾಯಣ ಕೃಷ್ಣ ನಾರಾಯಣ ಕೃಷ್ಣ ವಾದಿರಾಜ ತೀರ್ಥರಿಗೆ ಕೋಟಿ ಕೋಟಿ ನಮನಗಳು❤❤❤❤❤
ఈ పాట వింటుంటే శరీరంలో ఏదో తెలియని అనుభూతి కలుగుతుంది శ్రీ లింబద్రీ లక్ష్మి నరసింహస్వామి గోవింద గోవిందా
భీంగల్ నా bro మీది
@@laddutechs హా బషీరాబాద్
@@yamavenkatesh5857😅❤
Brother neku Kannada language Telidu
ಪ್ರತಿ ದಿನ ಮಲಗುವಾಗ ಕೇಳ್ತಾ ಇದ್ರೆ ತುಂಬಾ ಸುಂದರವಾದ ಕನಸುಗಳು ಬೀಳ್ತವೆ
Nijana
ಅತಿ ಮಧುರ ಸ್ವರವನ್ನು ಕೇಳಿ ತುಂಬಾ ಸ೦ತೋಷ ಆಯಿತು. ನಾನು ನಿಮಗೆ ನಿಜವಾಗಿ ನಮನ ಸಲಿಸುತೇನೇ.
🎉
Hare Krishna hare Krishna Krishna Krishna hare hare Jai sri ram ❤🙏
Wow excellent voice god bless you gajendra moksha namakara
Gajendra moksha stotra is wonderfull ,powerfull edannu bare vadiraja theera padagalige sashtanga namaskara nimage🙏❤🌹🙏❤🌹🙏🌹❤
❤❤ನಾರಾಯಣ ಕೃಷ್ಣ ಗುರುಗಳೇ ತುಂಬಾ ಚೆನ್ನಾಗಿ ಹಾಡ್ತೀರಾ ಎಷ್ಟು ಕೇಳಿದರೂ ಸಾಕಾಗಲ್ಲ❤❤
Super
ಏನು ಚೆನ್ನಾಗಿ ಹಾಡಿದ್ದೀರಾ ಗುರುಗಳೇ ನಮಸ್ಕಾರ ಗುರುಗಳೇ ❤️🙏🙏🙏❤️
Hare Sri Narayana....Hare Sri Krishna.....Hare Sri Srinivasa.....Hare Sri Ram🙏🙏🙏🙏🙏
Nanna kasta dura agthade yendadare ee gajendra mokshadinda than u so much sir❤❤❤❤❤❤
Tumba santhosha agtide.manasige
ಶ್ರೀ ನಾರಾಯಣ ಕೃಷ್ಣ 😊🙏💜🌿🌸🕊🙏🙏🙏ಗೋವಿಂದ ಗೋವಿಂದ
🙏🙏🙏🙏🙏🙏🙏🙏🙏🙏🙏🙏🙏🙏🙏 ಸೂಪರ್ ತುಂಬಾ ಚನ್ನಾಗಿದೆ ಕೇಳ್ತಾಯಿದ್ರೆ ಮನಸ್ಸಿಗೆ ತುಂಬಾ ಇಂಪು ನಿಡುತ್ತೆ ಎಲ್ಲ ನೋವುಗಳನ್ನು ಮರೆಯುವಂತೆ ಮಾಡುತ್ತೆ 🙏🙏🙏🙏🙏🙏🙏🙏🙏🙏🙏🙏🙏🙏🙏
ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಕೃಷ್ಣ 🙏🙏🚩
Hare Krishna Hare Krishna Ji Ki Jai 🙏🙏🌺🚩❤
Tumbha Dannyvada 🎉kelabeku anisutte manassige samadhana anisutte
Very Melody's voice impressed god bless you👍
ಗುರುಗಳೇ .ನನ್ನ.ಪಾಲಿಗೆಇದ್ಧೆಜೇವನದಲ್ಲಿ.ನೇಮ್ಮದಿ.ಕೂಡುತ್ತದೆ
ತುಂಬಾ ಚೆನ್ನಾಗಿ ಹಾಡಿದ್ದೀರ ಸಹ ನಿಮಗೆ ಅನಂತ ಅನಂತ ಧನ್ಯವಾದಗಳು
ನಿಮ್ಮ ಧ್ವನಿ ಈ ಹಾಡನ್ನು ಇನ್ನೂ ಸುಂದರವಾಗಿಸಿದೆ
ಈ ಕೃತಿ ಪ್ರಸ್ತುತಿ ಪಡಿಸಬೇಕು ಅಂತ ಹಲವು ದಿನಗಳಿಂದ ಮನಸ್ಸು ಚಡಪಡಿಸುತ್ತಿತ್ತು....ನಿಮ್ಮ ದಿವ್ಯ ಪ್ರಸ್ತುತಿ ಕೇಳಿದ ನಂತರ, I get more motivated..🙏 ನಮ್ಮ ತಾಯಿಯವರು ಇನ್ನೊಂದು ಸಾಂಪ್ರದಾಯಿಕ ಧಾಟಿಯಲ್ಲಿ ಹೇಳಿಕೊಟ್ಟಿದಾರೆ....ಸದ್ಯದಲ್ಲೇ ಹಾಡುವೆನು 🙏🙂
Pl post details
@@1966ssvas ruclips.net/video/ugjhPKPX318/видео.html ಸಾಂಪ್ರದಾಯಿಕ ಧಾಟಿಯಲ್ಲಿ 🙏
Dhanyosmi dhanyosmi 🙏🙏🙏
Namskaraglu
Name,Narayan,krishana,
Sri, gajarajanige, valida,naga, shayananige, namo, namaha😮
Om Shree Lakshmi Narayan Swamy namaha namaha maneya ishwar ya shree Lakshmi Venkateshwar Swamy namaha
ಗಜೇಂದ್ರ ಮೋಕ್ಷಸುಂಧರ ಗೀತೆಯನ್ನು ರಚಿಸಿದವರಿಗೆ ಸಾಷ್ಠಾಂಗ ನಮಸ್ಕರಗಳು❤
Shri vadiraja gurugalu
Bhavisameera Sri Vadirajaru🙏🏾🙏🙏🏾🙏🙏🏾🙏
🙏💞 Guru Vadiraja Charanau Sharanam Prapadye💞🙏
Wow....!😘excellent voice🤗, god bless u💫with a good health😚who sung this song💙... What a meaning full song😌.... ನಾರಾಯಣ ಕೃಷ್ಣ🙏🏻🙏🏻🙏🏻🙏🏻🙏🏻
ಶ್ರೀ ವಾದರಾಜ ತೀರ್ಥರ ರಚಿತವಾದ ಸುಂದರ ಹಾಡು ಗಜೇಂದ್ರ ಮೋಕ್ಷವನ್ನ
ಕೇಳುತಿದ್ರೆ ದಿನವಿಡೀ..... ಕೇಳುತ್ತಾನೆ ಇರಬೇಕು ಅನಿಸುತ್ತೆ.
ಎಷ್ಟು ಸಾರಿ ಕೇಳಿದರೂ ಇನ್ನೂ ಮತ್ತೆ ಇನ್ನೊಂದು ಸಲ ಕೇಳೋಣ ಅನಿಸುತ್ತೆ....
😊😊😊
ಈ ಪದಗಳನ್ನ ನಮ್ಮೆಲ್ಲರಿಗಾಗಿ ಸುಂದರವಾಗಿ ಹಾಡಿದ
ವೇಣುಗೋಪಾಲ ಖಟಾವಕ್ಕರ್ ಅವರಿಗೆ ನಮ್ಮ ನಮನ ಸಲ್ಲಿಸಿ ಕೃತಾರ್ಥರಾಗಿ ಇರುತ್ತೇವೆ
🙏🙏🙏🙏🙏🙏
👌👌🌺ಸುಂದರ ವಾಗಿ ಹಾಡಿದ್ದೀರಾ 🙏🙏👏🌺
ತುಂಬಾ ಚೆನ್ನಾಗಿ ಹಾಡಿದ್ದೀರ ಕೇಳಲು ತುಂಬಾ ಇಂಪಾಗಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು
Hare Krishna hare Krishna
Krishna Krishna hare hare
Hare Ram hare Ram Ram Ram hare hare ❤
*ಶ್ರೀ ಮದ್ವಾದಿರಾಜರ ಅಪ್ರತಿಮ ಕೃತಿ..ಇದು...ಇದನ್ನು ಅಷ್ಟೇ ಸುಮಧುರವಾಗಿ.. ಎಲ್ಲರೂ ಕೇಳುವಂತೆ...ಭಕ್ತಿಪೂರ್ವಕ ಹಾಡಿದ್ದೀರಾ.. @ ಶ್ರೀ ವೇಣುಗೋಪಾಲ.. ಅವರೇ..👌👍👏👏👏🌹🌹
Thumba channagide e haadu harisarvothma vayu jeevothma🙏🏻🙏🏻🙏🏻🙏🏻🙏🏻🙏🏻
ಶ್ರೀ ಗಜೇಂದ್ರ ಮೋಕ್ಷ ಹಾಡು ಕೇಳಿದ ರೆ ತುಂಬಾ ಚೆನ್ನಾಗಿದೆ ಗುರುಗಳೇ 🙏🙏🙏
ನಾರಾಯಣ ಕೃಷ್ಣ ನಾರಾಯಣ ನಾರಾಯಣ ನಾರಾಯಣ ಕೃಷ್ಣ 🚩🙏
ನಾರಾಯಣ ಕೃಷ್ಣ ನಾರಾಯಣ ಕೃಷ್ಣಾ 🙏🙏🙏🚩
Thumbha chennagide❤narayana Krishna 👌
Harekrishan prabhuji.. Very nc.. Thnk u. Gurusharanam
ಗಜೇಂದ್ರ ಮೋಕ್ಷ ಗೀತೆ ಚೆನ್ನಾಗಿದೆ ಗುರುಗಳೇ
ತುಂಬಾ ಚೆನ್ನಾಗಿ ಹಾಡಿದ್ದಿರ ಗುರುಗಳೇ ಧನ್ಯವಾದಗಳು. ನಾರಾಯಣ ಕೃಷ್ಣ...
Sri, gajendta, varada, Sri, narahari, narayana, krishna, ninage, namo, namaha
Shri vadirajarige koti namaskata thank u
ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ 🙏🙏🙏 ನಾರಾಯಣ ಕೃಷ್ಣ
ಶ್ರೀ ವಾದಿರಾಜ ಗುರುಭ್ಯೋ ನಮಃ 🙏🙏🙏
Sri, gaja, raja, varada, Sri, narayana, krishna, ninage, namonamaha
Evattu putturinalli(D K) shrinivasa kalyana .
Om namo bhagavathe. Vasudevayaa🙏🙏🙏🙏
🙏ಹೇಳಲು ಪದಗಳೇ ಇಲ್ಲ
ನಮೋ ನಮಃ 🙏
Excellent rendition... Very melodious, calming n soothing 🙏
ప్రతిరోజూ గజేంద్ర మోక్షం పారాయణం చేస్తే చాల ఉత్తమం,శ్రీ వాదిరాజగురువు ల
అనుగ్రహంతో ఆభాగ్యం కలిగించడం,ధన్యులను చేస్తున్నారు కృత జ్ఞతలు ధన్యవాదములు
Narayana Krishna Narayana Krishna Narayana Krishna Narayana Krishna 🎉🎉🎉🎉🎉🙏🏼🙏🏼🙏🏼🙏🏼🙏🏼🌹🌹🌹🙏🏼🙏🏼
🙏🙏👏👏ಓಂ ನಮೋ ಭಗವಂತನೇ ವಾಸುದೇವಾಯ ನಮಃ
ಗಂಜೇದ್ರ ಮೋಕ್ಷ ಹಾಡು ಕೇಳಿ ತುಂಬಾ ಸಂತೋಷ ವಾಯಿತು ಗುರುಗಳೇ 🙏🙏🙏
I'm very happy 🎉❤so nice narayana Krishna
Tumba sogsagi hadidira hadu kelutha iddare mansige nemmadi siguthe danyavadagalu
ತುಂಬ ಚೆನ್ನಾಗಿದೆ, ಧನ್ಯವಾದಗಳು, ನಮಸ್ಕಾರ.
Tumba chennagi haadiddira 🙏🙏🙏🙏🙏🙏🙏🙏🙏🙏🙏
ಎಷ್ಟು ಬಾರಿ ಕೇಳಿದರು ಕೇಳಬೇಕು ಎನ್ನಿಸುವಂತೆ ಶ್ರೀ ವೇಣುಗೋಪಾಲ್ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅಭಿನಂದನೆಗಳು ಸರ್
ತುಂಬಾ ಅರ್ಥಗರ್ಭಿತ ಈ ಗಜೇಂದ್ರ ಮೋಕ್ಷ ಹಾಡು, 🇳🇪💐🙏🙏🙏💐🇳🇪
ಗಜೇಂದ್ರ ಮೊಕ್ಷೆ ತೋತ್ರ ಕೆಳೆದರೆ ಮನಸಿಗೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ನಿಮಗೆ ಧನ್ಯವಾದಗಳು
ತುಂಬು ಮನಸ್ಸಿನ ಧನ್ಯವಾದಗಳು 🙏🙏🙏
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಓಂ ಶ್ರೀ ಗುರುಭ್ಯೋ ನಮಃ
ಓಂ ಶ್ರೀ ವಾದಿರಾಜ ಪಹಿಮಾಮು ವಾದಿರಾಜ ರಕ್ಷಮಾಂ.
Super I'm happy peace mind calm
ಜೈ ಶ್ರೀ ಕೃಷ್ಣ 👏🏻ದಿನಪ್ರತಿ ಕೇಳಲು ಆನಂದ 😍