ವಾರಕ್ಕೊಂದು ಕನ್ನಡ ಹಾಡು - ಸಂಚಿಕೆ 29

Поделиться
HTML-код
  • Опубликовано: 10 фев 2025
  • ವಾರಕ್ಕೊಂದು ಕನ್ನಡ ಹಾಡು - 29 ನೇ ಸಂಚಿಕೆ
    ಕೆ ಕೆ ಎನ್ ಸಿ
    ಎಲ್ಲರಿಗೂ ನಮಸ್ಕಾರ,
    ಜುಲೈ ತಿಂಗಳ ವಿಷಯ :
    ಗುರುವಂದನೆ ಮತ್ತು ಜಗನ್ನಾಥಸ್ತುತಿ
    ರಾಷ್ಟ್ರಕವಿ ಕುವೆಂಪು “ಗುರುವಿನೊಡನೆ ದೇವರೆಡೆಗೆ” ಎಂದು ತಮ್ಮ ಅಧ್ಯಾತ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನು ನಮಿಸಿದರು. ಹಾಗೆಯೇ ತಮ್ಮ “ರಾಮಾಯಣ ದರ್ಶನಂ” ಮೇರುಕೃತಿಯನ್ನು ಅವರ ಸಾಹಿತ್ಯ ಗುರು, ಶ್ರೀ ವೆಂಕಣ್ಣಯ್ಯನವರಿಗೆ ಅರ್ಪಿಸಿದರು. ಹೀಗೆ ಗುರುಗಳಿಂದ ಅರಿವೆಯನ್ನು ಕಂಡ ಕುವೆಂಪು ಈ ಹಾಡಿನಲ್ಲಿ ಅಂತರಾತ್ಮವನ್ನು ಸಹ ಗುರುವೆಂದು ವರ್ಣಿಸಿದ್ದಾರೆ. ಭಗವದ್ಗೀತೆಯ “ಉದ್ಧರೇತ್ ಆತ್ಮನಾತ್ಮಾನಂ” ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು.
    ನಮ್ಮ ಬೇ ಏರಿಯಾದ ಉದಯೋನ್ಮುಖ ಗಾಯಕಿ ಅಮೇಯ ಗಣೇಶ್ ಈ ಹಾಡನ್ನು ಬಹಳ ಮಧುರವಾಗಿ ಹಾಡಿದ್ದಾರೆ.
    ನೀವು ಹಾಡುತ್ತೀರಾದರೆ, ನೀವು ಹಾಡಿರುವ video ಒಂದನ್ನು ನಿಮ್ಮ Google driveಗೆ upload ಮಾಡಿ, ಈ ಫಾರಂ ತುಂಬಿರಿ. forms.gle/TGkE...
    ವಿ. ಸೂ.: ಅಂತಿಮ ಆಯ್ಕೆ ನಮ್ಮ ತಂಡಕ್ಕೆ ಬಿಟ್ಟದ್ದು. ಎಂದಿನಂತೆ ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು.
    ಇಗೋ ಇಲ್ಲಿದೆ ಈ ವಾರದ ಹಾಡು -
    ಕುವೆಂಪು ಅವರ ಕವಿತೆ - ಅಂತರಾತ್ಮ ನೀ ಗುರು
    ಸಂಗೀತ ಸಂಯೋಜಕ : ಮೈಸೂರು ಅನಂತಸ್ವಾಮಿ
    ರಾಗ: ಹಂಸಾನಂದಿ / ಮಾರ್ವಾ
    ತಾಳ: ಆದಿ
    ಅಂತರತಮ ನೀ ಗುರು ಆತ್ಮ ತಮೋಹರಿ
    ಅಂತರತಮ ನೀ ಗುರು ಆತ್ಮ ತಮೋಹರಿ
    ಜಟಿಲ ಕುಟಿಲ ತಮ ಅಂತರಂಗ
    ಬಹುಭಾವ ವಿಪಿನ ಸಂಚಾರಿ
    ಅಂತರತಮ ನೀ ಗುರು ಆತ್ಮ ತಮೋಹರಿ
    ಜನುಮ ಜನುಮ ಶತ ಕೋಟಿ ಸಂಸ್ಕಾರ
    ಪರಮ ಚರಮ ಸಂಸ್ಕಾರಿ
    ಅಂತರತಮ ನೀ ಗುರು ಆತ್ಮ ತಮೋಹರಿ
    ಪಾಪಪುಣ್ಯಾ ನಾನಾಲಲಿತಾ ರುದ್ರಲೀಲಾ ॥
    ರೂಪ ರೂಪ ವಿಹಾರಿ
    ಅಂತರತಮ ನೀ ಗುರು ಆತ್ಮ ತಮೋಹರಿ

Комментарии •