ತೋಳು ತೋಳು ತೋಳು ರಂಗ ತೋಳನ್ನಾಡೈ | Tolu Tolu Tolu Ranga |Kannada Lyrical Video Song |Purandara Dasaru
HTML-код
- Опубликовано: 5 фев 2025
- || कृष्णं वन्दे जगद्गुरुम् ||
ತೋಳು ತೋಳು ತೋಳು ರಂಗ ತೋಳನ್ನಾಡೈ One of the best devotional songs for Lord Krishna , Written by Purandara Dasaru and Sung by Raichuru Sheshagiridas.
Lyrics:
ತೋಳು ತೋಳು ತೋಳು ರಂಗ
ತೋಳನ್ನಾಡೈ ಸ್ವಾಮಿ
ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
||ತೋಳು||
ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ
ತೋಳನ್ನಾಡೈ
ಸ್ವಾಮಿ,ಘಲಿರು ಘಲಿರೆಂಬ
ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
||ಹುಲಿಯುಗುರರಳೆಲೆ||
ನಿಲುವಿಗೆ ನಿಲುಕದೆ ಒರಳ ತಂದಿಟ್ಟ
ತೋಳನ್ನಾಡೈ ಸ್ವಾಮಿ
ಚೆಲುವ ಮಕ್ಕಳ ಮುದ್ದು ಮಾಣಿಕವೆ
ತೋಳನ್ನಾಡೈ
||ತೋಳು||
ಪೂತನಿಯೆಂಬವಳಸುವನೆ ಹೀರಿದ
ತೋಳನ್ನಾಡೈ
ಸ್ವಾಮಿ ಮಾತೆಯ ಪಿತನ ಅನುಜನ
ಮಡುಹಿದ ತೋಳನ್ನಾಡೈ||ಪೂತನಿ||
ಮಾತಿಗೆ ಶಿಶುಪಾಲನ ಶಿರತರಿದ
ತೋಳನ್ನಾಡೈ ಸ್ವಾಮಿ
ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ
ತೋಳನ್ನಾಡೈ
||ತೋಳು||
ಸತ್ಯಕೆ ಧರ್ಮವ ನಡೆಸಿದ
ತೋಳನ್ನಾಡೈ
ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ
ತೋಳನ್ನಾಡೈ ||ಸಜ್ಜನ||
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ
ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ
ತೋಳನ್ನಾಡೈ
||ತೋಳು||
ನಖದಿಂದ ಹಿರಣ್ಯಕನುದರವ ಸೀಳಿದ
ತೋಳನ್ನಾಡೈ
ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ
ತೋಳನ್ನಾಡೈ ||ನಖದಿಂದ||
ವಿಖಳಿತಗೆಡಿಸಿದ ಗೋಪಸ್ತ್ರೀಯರ
ತೋಳನ್ನಾಡೈ
ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ
ತೋಳನ್ನಾಡೈ ||ತೋಳು||
#sheshagiridasaru
#purandaradasaru
#kannadadevotionalsong
#bhakthigeethe