ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana with Lyrics | Streeyarellaru

Поделиться
HTML-код
  • Опубликовано: 11 окт 2024
  • dasarahadugalu...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
    Kruti:Sri Vadirajaru (Hayavadana)
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಸ್ತ್ರೀಯರೆಲ್ಲರು ಬನ್ನಿರೆ | ಶ್ರೀನಿವಾಸನ ಪಾಡಿರೇ
    ಜ್ಞಾನಗುರುಗಳಿಗೊಂದಿಸಿ | ಮುಂದೆ ಕಥೆಯ ಪೇಳುವೆ ||
    ಗಂಗಾತೀರದಿ ಋಷಿಗಳು | ಅಂದು ಯಾಗವ ಮಾಡಿದರು
    ಬಂದು ನಾರದ ನಿಂತುಕೊಂಡು | ಯಾರಿಗೆಂದು ಕೇಳಲು
    ಅರಿತು ಬರಬೇಕು ಎಂದು | ಆ ಮುನಿಯು ತೆರಳಿದ
    -ಭೃಗುಮುನಿಯು ತೆರಳಿದ
    ನಂದಗೋಪನ ಮಗನ ಕಂದನ | ಮಂದಿರಕಾಗೆ ಬಂದನು
    ವೇದಗಳನೆ ಓದುತಾ | ಹರಿಯನು ಕೊಂಡಾಡುತಾ
    ಇರುವ ಬೊಮ್ಮನ ನೋಡಿದ | ಕೈಲಾಸಕ್ಕೆ ಬಂದನು
    ಕಂಭುಕಂಠನು ಪಾರ್ವತೀಯು | ಕಲೆತಿರುವುದ ಕಂಡನು
    ಸೃಷ್ಟಿಯೊಳಗೆ ನಿನ್ನ ಲಿಂಗ | ಶ್ರೇಷ್ಠವಾಗಲೆಂದನು
    ವೈಕುಂಠಕ್ಕೆ ಬಂದನು | ವಾರಿಜಾಕ್ಷನ ಕಂಡನು
    ಕೆಟ್ಟ ಕೋಪದಿಂದ ಒದ್ದರೆ | ಎಷ್ಟು ನೊಂದಿತೆಂದನು
    ತಟ್ಟನೆ ಬಿಸಿನೀರಿನಿಂದ | ನೆಟ್ಟಗೆ ಪಾದ ತೊಳೆದನು
    ಬಂದ ಕಾರ್ಯ ಆಯಿತೆಂದು | ಅಂದು ಮುನಿಯು ತೆರಳಿದ
    ಬಂದು ನಿಂದು ಸಭೆಯೊಳಗೆ | ಇಂದಿರೇಶನ ಹೊಗಳಿದ
    ಪತಿಯ ಕೂಡೆ ಕಲಹ ಮಾಡಿ | ಕೊಲ್ಹಾಪುರಕೆ ಹೋದಳು
    ಸತಿಯು ಪೋಗೆ ಪತಿಯು ಹೊರಟು | ಗಿರಿಗೆ ಬಂದು ಸೇರಿದ
    ಹುತ್ತದಲ್ಲೇ ಹತ್ತು ಸಾವಿರ ವರುಷ | ಗುಪ್ತವಾಗೇ ಇದ್ದನು
    ಬ್ರಹ್ಮ ಧೇನುವಾದನು | ರುದ್ರ ವತ್ಸನಾದನು
    ಧೇನು ಮುಂದೆ ಮಾಡಿಕೊಂಡು | ಗೋಪಿ ಹಿಂದೆ ಬಂದಳು
    ಕೋಟಿ ಹೊನ್ನು ಬಾಳುವೋದು | ಕೊಡದ ಹಾಲು ಕರೆವುದು
    ಪ್ರೀತಿಯಿಂದಲಿ ತನ್ನ ಮನೆಗೆ | ತಂದುಕೊಂಡನು ಚೋಳನು
    ಒಂದು ದಿವಸ ಕಂದಗ್ಹಾಲು | ಚೆಂದದಿಂದಲಿ ಕೊಡಲಿಲ್ಲ
    ಅಂದು ರಾಯನ ಮಡದಿ ಕೋಪಿಸಿ | ಬಂದು ಗೋಪನ ಹೊಡೆದಳು
    ಧೇನು ಮುಂದೆ ಮಾಡಿಕೊಂಡು | ಗೋಪ ಹಿಂದೆ ನಡೆದನು
    ಕಾಮಧೇನು ಕರೆದ ಹಾಲು | ಹರಿಯ ಶಿರಕೆ ಬಿದ್ದಿತು
    ಇಷ್ಟು ಕಷ್ಟ ಬಂದಿತೆಂದು | ಪೆಟ್ಟು ಬಡಿಯೆ ಹೋದನು
    ಕೃಷ್ಣ ತನ್ನ ಮನದಲ್ಯೋಚಿಸಿ | ಕೊಟ್ಟ ತನ್ನ ಶಿರವನು
    ಏಳು ತಾಳೆಮರದ ಉದ್ದ | ಏಕವಾಗಿ ಹರಿಯಿತು
    ರಕ್ತವನ್ನು ನೋಡಿ ಗೋಪ | ಮತ್ತೆ ಸ್ವರ್ಗಕ್ಕೇರಿದ
    ಕಷ್ಟವನ್ನು ನೋಡಿ ಗೋವು | ಅಷ್ಟು ಬಂದ್-ಹೇಳಿತು
    ತಟ್ಟನೆ ರಾಯ ಎದ್ದು ಗಿರಿಗೆ | ಬಂದು ಬೇಗ ಸೇರಿದ
    ಏನು ಕಷ್ಟ ಇಲ್ಲಿ ಹೀಗೆ | ಯಾವ ಪಾಪಿ ಮಾಡಿದ
    ಇಷ್ಟು ಕಷ್ಟ ಕೊಟ್ಟವಾಗೆ | ಭ್ರಷ್ಟಪಿಶಾಚಿಯಾಗೆಂದ
    ಪೆಟ್ಟು ವೇದನೆ ತಾಳಲಾರದೆ | ಬೃಹಸ್ಪತಿಯ ಕರೆಸಿದ
    ಅರುಣ ಉದಯದಲ್ಲೆದ್ದು | ಔಷಧಕ್ಕೆ ಪೋದನು
    ಕ್ರೋಢರೂಪಿಯ ಕಂಡನು | ಕೂಡಿ ಮಾತನಾಡಿದನು
    ಇರುವುದಕ್ಕೆ ಸ್ಥಳವು ಎನಗೆ | ಏರ್ಪಾಡಾಗಬೇಕೆಂದ
    ನೂರು ಪಾದ ಭೂಮಿ ಕೊಟ್ಟರೆ | ಮೊದಲು ಪೂಜೆ ನಿಮಗೆಂದ
    ಪಾಕ ಪಕ್ವ ಮಾಡುವುದಕ್ಕೆ | ಆಕೆ ಬಕುಳೆ ಬಂದಳು
    ಭಾನುಕೋಟಿತೇಜನೀಗ | ಬೇಟೆಯಾಡ ಹೊರಟನು
    ಮಂಡೆ ಬಾಚಿ ದೊಂಡೆ ಹಾಕಿ | ದುಂಡುಮಲ್ಲಿಗೆ ಮುಡಿದನು
    ಹಾರ ಪದಕ ಕೊರಳಲ್ಹಾಕಿ | ಫಣೆಗೆ ತಿಲಕವಿಟ್ಟನು
    ಅಂಗುಲಿಗೆ ಉಂಗುರ | ರಂಗಶೃಂಗಾರವಾದವು
    ಪಟ್ಟೆನುಟ್ಟು ಕಚ್ಚೆ ಕಟ್ಟಿ | ಪೀತಾಂಬರವ ಹೊದ್ದನು
    ಢಾಳು ಕತ್ತಿ ಉಡಿಯಲ್ ಸಿಕ್ಕಿ | ಜೋಡು ಕಾಲಲ್ಲಿ ಮೆಟ್ಟಿದ
    ಕರದಿ ವೀಳ್ಯವನ್ನೆ ಪಿಡಿದು | ಕನ್ನಡೀಯ ನೋಡಿದ
    ಕನಕಭೂಷಣವಾದ ತೊಡಿಗೆ | ಕಮಲನಾಭ ತೊಟ್ಟನು
    ಕನಕಭೂಷಣವಾದ ಕುದುರೆ | ಕಮಲನಾಭ ಏರಿದ
    ಕರಿಯ ಹಿಂದೆ ಹರಿಯು ಬರಲು | ಕಾಂತೆರೆಲ್ಲ ಕಂಡರು
    ಯಾರು ಇಲ್ಲಿ ಬರುವರೆಂದು | ದೂರ ಪೋಗಿರೆಂದರು
    ನಾರಿಯರು ಇರುವ ಸ್ಥಳಕೆ | ಯಾವ ಪುರುಷ ಬರುವನು
    ಎಷ್ಟು ಹೇಳೆ ಕೇಳ ಕೃಷ್ಣ | ಕುದುರೆ ಮುಂದೆ ಬಿಟ್ಟನು
    ಅಷ್ಟು ಮಂದೀರೆಲ್ಲ ಸೇರಿ | ಪೆಟ್ಟುಗಳನು ಹೊಡೆದರು
    ಕಲ್ಲುಮಳೆಯ ಕರೆದರಾಗ | ಕುದುರೆ ಕೆಳಗೆ ಬಿದ್ದಿತು
    ಕೇಶ ಬಿಚ್ಚಿ ವಾಸುದೇವ | ಶೇಷಗಿರಿಗೆ ಬಂದನು
    ಪರಮಾನ್ನ ಮಾಡಿದ್ದೇನೆ | ಉಣ್ಣು ಬೇಗ ಎಂದಳು
    ಅಮ್ಮ ಎನಗೆ ಅನ್ನ ಬೇಡ | ಎನ್ನ ಮಗನೆ ವೈರಿಯೇ
    ಕಣ್ಣಿಲ್ಲದ ದೈವ ಅವಳ | ನಿರ್ಮಾಣವ ಮಾಡಿದ
    ಯಾವ ದೇಶ ಯಾವೋಳಾಕೆ | ಎನಗೆ ಪೇಳು ಎಂದಳು
    ನಾರಾಯಣನ ಪುರಕೆ ಪೋಗಿ | ರಾಮಕೃಷ್ಣರ ಪೂಜಿಸಿ
    ಕುಂಜಮಣಿಯ ಕೊರಳಲ್ಹಾಕಿ | ಕೂಸಿನ ಕಂಕುಳಲೆತ್ತಿದಾ
    ಧರಣಿದೇವಿಗೆ ಕಣಿಯ ಹೇಳಿ | ಗಿರಿಗೆ ಬಂದು ಸೇರಿದ
    ಕಾಂತೆರೆಲ್ಲ ಕೂಡಿಕೊಂಡು | ಆಗ ಬಕುಳೆ ಬಂದಳು
    ಬನ್ನಿರೆಮ್ಮ ಸದನಕೆನುತ | ಬಹಳ ಮಾತನಾಡಿದರು
    ತಂದೆತಾಯಿ ಬಂಧುಬಳಗ | ಹೊನ್ನು ಹಣ ಉಂಟೆ೦ದರು
    ಇಷ್ಟು ಪರಿಯಲ್ಲಿದ್ದವಗೆ | ಕನ್ಯೆ ಯಾಕೆ ದೊರೆಕಿಲ್ಲಾ
    ದೊಡ್ಡವಳಿಗೆ ಮಕ್ಕಳಿಲ್ಲ | ಮತ್ತೆ ಮದುವೆ ಮಾಡ್ವೆವು
    ಬೃಹಸ್ಪತೀಯ ಕರೆಸಿದ | ಲಗ್ನಪತ್ರಿಕೆ ಬರೆಸಿದ
    ಶುಕಾಚಾರ್ಯರ ಕರೆಸಿದ | ಮದುವೆ ಓಲೆ ಬರೆಸಿದ
    ವಲ್ಲಭೇನ ಕರೆವುದಕ್ಕೆ | ಕೊಲ್ಹಾಪುರಕೆ ಹೋದರು
    ಗರುಡನ್ ಹೆಗಲನೇರಿಕೊಂಡು | ಬೇಗ ಹೊರಟುಬಂದರು
    ಅಷ್ಟವರ್ಗವನ್ನು ಮಾಡಿ | ಇಷ್ಟದೇವರನ್ನು ಪೂಜಿಸಿ
    ಲಕ್ಷ್ಮೀಸಹಿತ ಆಕಾಶರಾಜನ | ಪಟ್ಟಣಕ್ಕೆ ಬಂದರು
    ಕನಕಭೂಷಣವಾದ ತೊಡುಗೆ | ಕಮಲನಾಥ ತೊಟ್ಟನು
    ಕನಕಭೂಷಣವಾದ ಮಂಟಪ | ಕಮಲನಾಭ ಏರಿದ
    ಕಮಲನಾಭಗೆ ಕಾಂತಿಮಣಿಯ | ಕನ್ಯಾದಾನವ ಮಾಡಿದ
    ಕಮಲನಾಭ ಕಾಂತೆ ಕೈಗೆ | ಕಂಕಣವನ್ನೆ ಕಟ್ಟಿದ
    ಶ್ರೀನಿವಾಸ ಪದ್ಮಾವತಿಗೆ | ಮಾಂಗಲ್ಯವನ್ನೆ ಕಟ್ಟಿದ
    ಶ್ರೀನಿವಾಸನ ಮದುವೆ ನೋಡೆ | ಸ್ತ್ರೀಯರೆಲ್ಲರು ಬನ್ನಿರೇ
    ಪದ್ಮಾವತಿಯ ಮದುವೆ ನೋಡೆ | ಮುದ್ದು ಬಾಲೆಯರ್ ಬನ್ನಿರೇ
    ಶಂಕೆಯಿಲ್ಲದೆ ಹಣವ ಸುರಿದು | ವೆಂಕಟೇಶನ ಕಳುಹಿದ
    ಲಕ್ಷ ತಪ್ಪು ಎನ್ನಲುಂಟು | ಪಕ್ಷಿವಾಹನ ಸಲಹೆನ್ನ
    ಕೋಟಿ ತಪ್ಪು ಎನ್ನಲ್ಲುಂಟು | ಕುಸುಮನಾಭ ಸಲಹೆನ್ನ
    ಶಂಕೆಯಿಲ್ಲದೆ ವರವ ಕೊಡುವ ವೆಂಕಟೇಶ ಸಲಹೆನ್ನ
    ಭಕ್ತಿಯಿಂದಲಿ ಹೇಳ್ ಕೇಳ್ದವರಿಗೆ | ಮುಕ್ತಿ ಕೊಡುವ ಹಯವದನನು
    ಜಯ ಜಯ ಶ್ರೀನಿವಾಸನಿಗೆ | ಜಯ ಜಯ ಪದ್ಮಾವತಿಗೆ
    ಒಲಿದಂತಹ ಶ್ರೀಹರಿಗೆ | ನಿತ್ಯ ಶುಭಮಂಗಳ
    ಶೇಷಾದ್ರಿಗಿರಿವಾಸ | ಶ್ರೀದೇವಿ ಅರಸಗೆ
    ಕಲ್ಯಾಣಮೂರುತಿಗೆ | ನಿತ್ಯಜಯಮಂಗಳ
    ಕಲ್ಯಾಣಮೂರುತಿಗೆ | ನಿತ್ಯಶುಭಮಂಗಳ

Комментарии • 106

  • @indirasr2750
    @indirasr2750 8 дней назад +2

    ಧನ್ಯವಾದ ಗಳು

  • @annapurna6462
    @annapurna6462 9 дней назад +1

    Ammana hadu bandillalla antha nodthaidini ega bandithu. Exllent amma🙏🙏🙏🙏🙏🙏🙏

  • @krishnavasudev2155
    @krishnavasudev2155 Год назад +2

    Tumba sogasagi haadiddira...tumba dhanyavadagalu

  • @rashmijagdish143
    @rashmijagdish143 5 дней назад

    Very nice super 👌

  • @padmavatishiraguppi4743
    @padmavatishiraguppi4743 Год назад +4

    ನಿಮ್ಮಿಂದ. ಹಾಡು. ಹಾಡಲು. ಕಲಿತೆವು🙏🙏

  • @ashanagabhushana8359
    @ashanagabhushana8359 2 года назад +3

    ನೀವು ಹೇಳಿದ್ದಕ್ಕೆ ಹಾಡು ಚೆನ್ನಾಗಿದೆಯೋ ಅಥವಾ ಶ್ರೀನಿವಾಸ ಕಲ್ಯಾಣವೇ ಚೆನ್ನಾಗಿದೆಯೋ ಅನ್ನುವಂತಿದೆ ತುಂಬಾ ಚೆನ್ನಾಗಿ ಹೇಳಿದ್ದೀರಿ. 🙏🙏

    • @bhajane-dasarahadugalu-
      @bhajane-dasarahadugalu-  2 года назад

      ಶ್ರೀ ವಾದಿರಾಜ ಗುರುಭ್ಯೋ ನಮಃ 🙏🙏

  • @ushakumari.l.j953
    @ushakumari.l.j953 Год назад +1

    ಹಾಡು ತುಂಬಾ ಚೆನ್ನಾಗಿದೆ ಧನ್ಯೋಸ್ಮಿ. ನಿಮ್ಮ ಹಾಡನ್ನು ಕೇಳಿ ಮತ್ತು ಹೇಳಿಯಾದರು ನನ್ನ ಮಗಳಿಗೆ ಮದುವೆ ಆಗಲಿ ಅಂತ ಆ ಶ್ರೀನಿವಾಸ ಪದ್ಮಾವತಿಯರಲ್ಲಿ ಭಕ್ತಿಯಿಂದ ಬೇಡುವೆ.

  • @geetharajarao2185
    @geetharajarao2185 3 года назад +4

    ಈ ಹಾಡು ತುಂಬಾ ಚಣಿಗಿದೆ ನನಗೆ ಇಷ್ಟ ಆಯ್ತು 👌👌🙏🙏

  • @manjulagopal9625
    @manjulagopal9625 4 года назад +3

    Hari Srinivas song very nice🙏🏻🙏🏻🙏🏻👌👌👌

    • @srilathaperur4777
      @srilathaperur4777 3 года назад +1

      ತುಂಬಾ ಚೆನ್ನಾಗಿ ಹಾಡಿದ್ದೀರಿ.

  • @savithrihn3595
    @savithrihn3595 4 года назад +10

    ಹರೇ ಶ್ರೀನಿವಾಸ ಶ್ರೀನಿವಾಸ ಕಲ್ಯಾಣ ಹಾಡು ಚೆನ್ನಾಗಿ ಹಾಡಿ ಕಳಿಸಿದ್ದಕ್ಕೆ ಧನ್ಯವಾದಗಳು

  • @BHAVANIAN
    @BHAVANIAN 2 дня назад

    🙏🙏🙏🙏

  • @usharaghu2524
    @usharaghu2524 Год назад

    👌🙏🙏🙏hare Srinivasa 🙏 Hari sarvotthama 🙏 vayujeevotthama

  • @chandrikaprasad6107
    @chandrikaprasad6107 2 года назад +3

    ನಿಮ್ಮಿಂದ ನಾನೂ ಹಾಡು ಕಲಿತುಕೊಂಡೆ 🙏🏻 ಚೆನ್ನಾಗಿದೆ 👌 ನಿಮಗೆ ನಮಸ್ಕಾರ ಗಳು & ಧನ್ಯವಾದಗಳು 🙏🏻

    • @bhajane-dasarahadugalu-
      @bhajane-dasarahadugalu-  2 года назад +1

      ಕೇಳಿ ಖುಷಿ ಆಯ್ತು. ಧನ್ಯವಾದಗಳು.

  • @AnujaJoshi-x5r
    @AnujaJoshi-x5r 3 месяца назад +1

    Hare Shreenivaasa🙏

  • @AnithaKumari-us6td
    @AnithaKumari-us6td 11 месяцев назад

    Hare srinivasa

  • @jagadeeshakodur2179
    @jagadeeshakodur2179 Год назад

    ತುಂಬಾ ಚೆನ್ನಾಗಿ helideeri, ಧನ್ಯವಾದಗಳು

  • @kiranjoshi1077
    @kiranjoshi1077 3 месяца назад

    Shree Lakshmi sahita Shreenivaasa Lakshmi sahita Satyanaarayana swamy Namostute🙏

  • @manjulapurohit9748
    @manjulapurohit9748 Год назад

    🙏🙏🙏 Kalyan Murthy Ge Nitya Shubha Mangal....

  • @leelavathikulkarnileela4920
    @leelavathikulkarnileela4920 18 дней назад

    👌🙏

  • @myspace9192
    @myspace9192 11 месяцев назад

    Tumba chanagide..thankyou so much

  • @kamalakrishnappa5040
    @kamalakrishnappa5040 Год назад

    Hare Srèenivasa

  • @kiranjoshi1077
    @kiranjoshi1077 3 месяца назад

    Shree Hari MahaaLakshmaamma kaapadri nammanna🙏

  • @kasturishenoy9
    @kasturishenoy9 Год назад

    Hare ram hare ram hare hare🙏🙏🙏🙏🙏🙏🙏sundarvagi vth lyrics jotege hadi torsidira ........amma

  • @sumathihr3122
    @sumathihr3122 2 года назад

    Hare Srinivasa. Haadu Keli dhanyaradevu. Dhanyavaadagalu

  • @jayabhandari2429
    @jayabhandari2429 Год назад

    Deviyalli anugrahadinda nana magalige oleyadagali 🙏

  • @vinoda8190
    @vinoda8190 Год назад +1

    🙏🏼🙏🏼🙏🏼🙏🏼🙏🏼

  • @RaghavendraShirahatti-su2uq
    @RaghavendraShirahatti-su2uq 6 месяцев назад

    *🙏ಶ್ರೀನಿವಾಸ ಕಲ್ಯಾಣ🙏*
    🌷 ಸರ್ವಂ ಕಲ್ಯಾಣಮಯಮ್🌷

  • @tippammabm3278
    @tippammabm3278 4 месяца назад

    ಹರೇ ಶ್ರೀನಿವಾಸ ಹರೇ ಶ್ರೀನಿವಾಸ

  • @vaidehisrinivasan2972
    @vaidehisrinivasan2972 4 месяца назад

    Beautiful song sung by superb lady🙏🙏

  • @sunandaannigeri6773
    @sunandaannigeri6773 4 месяца назад

    Hare shreenivas

  • @kamalakrishnappa5040
    @kamalakrishnappa5040 Год назад

    Om Namo Bagavathe Vasudevaya 0:46

  • @chandrikakundalagiri1424
    @chandrikakundalagiri1424 11 месяцев назад

    ತುಂಬಾ ಚೆನ್ನಾಗಿ ಹಾಡಿದ್ದಿರಿ

  • @prabhayadwad7355
    @prabhayadwad7355 2 года назад +1

    Tumba chennagi haadiddira

  • @kamalakrishnappa5040
    @kamalakrishnappa5040 Год назад

    Lakshmi Narayana Namo Namah....

  • @ashanagabhushana8359
    @ashanagabhushana8359 2 года назад +1

    ಮೇಡಂ ಈಗ ನಿಮ್ಮ ಹಾಡು ಕೇಳಿದೆ ಅದೆಷ್ಟು ಖುಷಿಯಾಯ್ತು ಎಂದರೆ ತಲೆಯಲ್ಲಿದ್ದ ಯೋಚನೆಗಳೆಲ್ಲಾ ಹೋಗಿ ಅಷ್ಟು ಸಂತೋಷವಾಯಿತು.
    ಧನ್ಯವಾದಗಳು ಮೇಡಂ.🙏

  • @sujatarao7524
    @sujatarao7524 3 года назад +1

    ಬಹಳ ಚೆನ್ನಾಗಿ ಹಾಡಿದ್ದಾರೆ

  • @laxmiharibhatt3170
    @laxmiharibhatt3170 3 года назад +1

    Tumba channagive dhanyavadagalu.

  • @poornimamohan3876
    @poornimamohan3876 2 года назад +1

    Very beautiful voice 👌🙏🙏 Om Sri laxmi Srinivasaya namaha 🙏🏼

  • @sumas6309
    @sumas6309 Год назад

    Dhanyavadagalu🙏🙏🙏🙏🙏👌

  • @vatsalamurthy2433
    @vatsalamurthy2433 Год назад +2

    ಹಾಡಿರುವ ರಾಗ ಕಲಿಯಲು ಸುಲಭವಾಗಿದೆ ವಂದನೆಗಳು 😢

  • @sunandakulkarni5325
    @sunandakulkarni5325 Год назад

    ತುಂಬಾ ಅದ್ಬುತ ವಾಗಿದೆ ಮೇಡಂ ನೀವು ಹಿಡಿದು ಸುಪರ್ ಮೇಡಂ 🙏🌹

  • @bharathi.ramesh5057
    @bharathi.ramesh5057 4 года назад +1

    Shri Srinivasa kalyana hadu chennagi ide

  • @rajshekarnirmala5431
    @rajshekarnirmala5431 2 года назад +1

    Super, Madam.Thank you very much.

  • @mamathamurthy9195
    @mamathamurthy9195 Год назад

    Excellent Srinivasa kalyana song

    • @bharthirao231
      @bharthirao231 11 месяцев назад

      😊😊😊😊😊😊😊super

  • @shashikalaanchan4339
    @shashikalaanchan4339 Год назад

    Thànq so much mam very nice 👌🙏🙏🙏

  • @ashokrt2809
    @ashokrt2809 4 месяца назад

    🙏🏻🙏🏻🙏🏻🙏🏻

  • @bhagyagururaj9572
    @bhagyagururaj9572 3 года назад +2

    Super

  • @jayabhandari2429
    @jayabhandari2429 Год назад

    Very nice

  • @malathic4865
    @malathic4865 3 года назад +1

    Hare srinivasa 🙏 chanagi helliedhri Malathi Venkateshachar from Gadwal 😊

  • @kumudinikundangar1349
    @kumudinikundangar1349 Год назад

    ಸುಂದರವಾಗಿ ಹಾಡಿದಿರಿ ನಮಸ್ಕಾರ

  • @padmavatishiraguppi4743
    @padmavatishiraguppi4743 Год назад

    ಧನಯ್ಯವಾದಗಳು

  • @meenakini556
    @meenakini556 2 года назад +1

    Amazing wordings. Dhanyavad 🙏🙏🙏🙏🙏

  • @shashirekhashashirekha8536
    @shashirekhashashirekha8536 2 года назад +2

    Super singing 👌👌👌🙏🙏🙏💐

  • @shrilekhakulkarni7819
    @shrilekhakulkarni7819 3 месяца назад

    🙏🙏🙏🙏🙏

  • @NagashreeShree-ed7kz
    @NagashreeShree-ed7kz Месяц назад

    🎉

  • @rrcatering7160
    @rrcatering7160 2 года назад

    Tumb chennagide

  • @srilathaperur4777
    @srilathaperur4777 3 года назад +1

    Very nice.🙏

  • @chetanams203
    @chetanams203 3 года назад +1

    Superb.....

  • @usharao9571
    @usharao9571 2 года назад

    sreenivas Kalpana is very nice to hear

  • @deepakunder2670
    @deepakunder2670 2 года назад +2

    ❤❤

  • @mamathav8246
    @mamathav8246 3 года назад +1

    Super madam

  • @geethavenkat9526
    @geethavenkat9526 3 года назад +2

    Very nice rendition

  • @PrameelaVenugopal-s3u
    @PrameelaVenugopal-s3u 7 месяцев назад

    Beautiful madam please share more videos

  • @musicaldipak5064
    @musicaldipak5064 11 месяцев назад

    I am marathi and really like this❤,
    I know about little this..marriage moment but not completely..
    Can you please tell madam
    this is song in devi laxmi and vishnu stuti or marriage song only?

    • @nutankulkarni9
      @nutankulkarni9 11 месяцев назад

      This song describes the story of how Lord Vishnu came down to Earth I e Tirupati and how he got married to Goddess Padmavati. It's the story of Shrinivas Kalyan in short . People sing it for the sake of their children's marriage.

    • @musicaldipak5064
      @musicaldipak5064 11 месяцев назад

      @@nutankulkarni9 great information 👌👌👌

  • @ramadevidhanya4722
    @ramadevidhanya4722 4 года назад +2

    ನವರಾತ್ರಿ ಗೆ ಸರಿಯಾದ ಹಾಡು. ನವರಾತ್ರಿ ಯಲ್ಲಿ ಶ್ರೀ ನಿವಾಸ ನ ವಿವಾಹ ಮಹೋತ್ಸವಾದ್ದರಿಂದ ಸಂತೋಷವಾಯಿತು

  • @sumithrasumithramalpe3029
    @sumithrasumithramalpe3029 Год назад

    💪💜🌹👌💪💜🌹👌💪💜🌹👌💪💜🌹👌💪💜🌹👌💜💜💜💜💜💜💜💜💜💜💜💜💜💜💜💜💜💜

  • @venkateshe232
    @venkateshe232 10 месяцев назад

    🙏🙏🙏🌹🍒🍇💐🍓🍒🌺🍑🍑

  • @shamaladevi6523
    @shamaladevi6523 2 года назад

    006

  • @gayathrichandrashekar2778
    @gayathrichandrashekar2778 4 дня назад

    🙏🙏🙏

  • @shwethabc9089
    @shwethabc9089 3 года назад +1

    ಚೆನ್ನಾಗಿ ಹಾಡಿದ್ದಿರ

  • @VinodVinod-il2op
    @VinodVinod-il2op Год назад

    🙏🙏🙏🙏🙏

  • @gayathrip2149
    @gayathrip2149 4 года назад

    Super

  • @jayabhandari2429
    @jayabhandari2429 Год назад

    🙏🙏

  • @lathacv2728
    @lathacv2728 2 года назад +1

    🙏🙏

  • @manjulapurohit9748
    @manjulapurohit9748 Год назад

    🙏🙏🙏

  • @manjulapurohit9748
    @manjulapurohit9748 Год назад

    🙏🙏🙏

  • @sagarpalla209
    @sagarpalla209 Год назад

    🙏🙏🙏🙏

  • @akhilamath6262
    @akhilamath6262 2 года назад +1

    🙏🙏🙏🙏🙏

  • @basavarajganiger8663
    @basavarajganiger8663 2 года назад +1

    🙏🙏🙏🙏🙏

  • @anithadeepak5252
    @anithadeepak5252 4 года назад +1

    🙏🙏🙏

  • @sudhaanandmathad5327
    @sudhaanandmathad5327 3 года назад +1

    🙏🙏🙏🙏