ಶ್ರೀ ಮಹಾಲಕ್ಷ್ಮೀಯ ಅಲಂಕರಿಸಿ | ಪುರಂದರ ವಿಠಲ | Sri Mahalakshmiya Alankarisi | Sri Purandara Dasaru

Поделиться
HTML-код
  • Опубликовано: 25 авг 2021
  • dasarahadugalu.blogspot.com/2...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
    Kruti: Sri Purandara Dasaru (Purandara vittala)
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಶ್ರೀ ಮಹಾಲಕ್ಷ್ಮೀಯ ಅಲಂಕರಿಸಿ ಕರೆದರು |
    ಶ್ರೀ ಮಹಾಲಕ್ಷ್ಮೀಯ ||ಪ||
    ಕೇಶವ ನಿಮ್ಮ ನಾಮ ಮಾಂಗಲ್ಯ ಸೂತ್ರ ತಾಳಿ |
    ನಾರಾಯಣ ನಿಮ್ಮ ನಾಮ ತಾಳಿ ಪದಕವು ||
    ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು |
    ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||
    ವಿಷ್ಣುವೇ ನಿಮ್ಮ ನಾಮ ರತ್ನಕುಂಡಲಿಗಳು |
    ಮಧೂಸೂದನ ನಿಮ್ಮ ನಾಮ ಮಾಣಿಕ್ಯದ್ಹರಳು ||
    ತ್ರಿವಿಕ್ರಮ ನಿಮ್ಮ ನಾಮ ವಂಕಿನಾಗುಮುರುಗವು ||
    ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||
    ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನಹಾರ |
    ಹೃಷಿಕೇಶ ನಿಮ್ಮ ನಾಮ ಕೂಡಿಗೆಜ್ಜೆಯು ||
    ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು |
    ದಾಮೋದರ ನಿಮ್ಮ ನಾಮ ರತ್ನಪದಕವು ||೩||
    ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು |
    ವಾಸುದೇವ ನಿಮ್ಮ ನಾಮ ಒಲಿದ ಚೂಡ ||
    ಪ್ರದ್ಯುಮ್ನ ನಿಮ್ಮ ನಾಮ ಹಸ್ತ ಕಂಕಣ ಬಳೆ |
    ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||
    ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ |
    ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ ||
    ನರಸಿಂಹ ನಿಮ್ಮ ನಾಮ ಚೌರಿ ರಾಗುಟಿಗೊಂಡ್ಯ |
    ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||
    ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ |
    ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು ||
    ಶ್ರೀ ಹರಿ ನಿಮ್ಮ ನಾಮ ಕಂಚು ವಂಕಿಯ ತುಳಸಿ |
    ಶ್ರೀ ಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||
    ಸರಸಿಜಾಕ್ಷ ನಿಮ್ಮ ನಾಮ ಅರಿಶಿನ ಎಣ್ಣೆಯ ಹಚ್ಚಿ |
    ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು ||
    ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು ||
    ನಿಲುವು ಕನ್ನಡಿಯಲ್ಲಿ ಲಲನೆಯ ತೋರಿಸುತ ||೭||
    SrI mahAlakShmIya alaMkarisi karedaru |
    SrI mahAlakShmiyA ||pa||
    kESava nimma nAma mAMgalya sUtra tALi |
    nArAyaNa nimma nAma tALi padakavu ||
    mAdhava nimma nAma suragi saMpige moggu |
    gOviMda nimma nAma gOdhiya saravu ||1||
    viShNuvE nimma nAma ratnakuMDaligaLu |
    madhUsUdana nimma nAma mANikyad~haraLu ||
    trivikrama nimma nAma vaMkinAgumurugavu ||
    vAmana nimma nAma Ole EkAvaLiyu ||2||
    SrIdhara nimma nAma oLLe muttinahAra |
    hRuShikESa nimma nAma kUDigejjeyu ||
    padmanABa nimma nAma muttinaDDikeyu |
    dAmOdara nimma nAma ratnapadakavu ||3||
    saMkarShaNa nimma nAma vaMki tOLAyitu |
    vAsudEva nimma nAma olida cUDa ||
    pradyumna nimma nAma hasta kaMkaNa baLe |
    aniruddha nimma nAma mukura bulAku ||4||
    puruShOttama nimma nAma hosa muttina mUguti |
    adhOkShaja nimma nAma caMdra sUrya ||
    narasiMha nimma nAma cauri rAguTigoMDya |
    acyuta nimma nAma muttina boTTu ||5||
    janArdana nimma nAma jariya pItAMbara |
    upEMdra nimma nAma kaDaga gejjeyu ||
    SrI hari nimma nAma kaMcu vaMkiya tuLasi |
    SrI kRuShNa nimma nAma naDuvinoDyANavu ||6||
    sarasijAkSha nimma nAma ariSina eNNeya hacci |
    paMkajAkSha nimma nAma kuMkuma kADigeyu ||
    puraMdara viThala nimma nAma sarvABaraNavu ||
    niluvu kannaDiyalli lalaneya tOrisuta ||7||
  • ВидеоклипыВидеоклипы

Комментарии • 23