ಲಕ್ಷುಮಿನಾರಾಯಣ ಜಯ | ಹಯವದನ Lakshumi Narayana Jaya | Hayavadana | ಭಜನೆ | ದೇವರನಾಮ Devaranama | Bhajane

Поделиться
HTML-код
  • Опубликовано: 26 авг 2024
  • dasarahadugalu...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
    Kruti:Sri Vadirajaru (Hayavadana)
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಲಕ್ಷುಮಿ ನಾರಾಯಣ ಜಯ
    ಲಕ್ಷುಮಿ ನಾರಾಯಣ ||ಪ||
    ಲಕ್ಷುಮಿ ನಾರಾಯಣ ನಮ್ಮ
    ರಕ್ಷಿಸೋ ನಾರಾಯಣ ||ಅಪ||
    ಸರ್ವಲೋಕ ಶರಣ್ಯ ಶಾಶ್ವತ
    ಸರ್ವ ವಂದಿತ ಪಾದ ದಾನವ ||
    ಗರ್ವಹರಣ ಗದಾಧಾರಣ
    ಪರ್ವತಾರಿ ವರಪ್ರದ ||೧||
    ನಂಬಿಕೊಂಡಿಹೆ ನಿನ್ನ ದಿವ್ಯ
    ಪದಾಂಬುಜಗಳನು ಸರ್ವಕಾಲದಿ ||
    ಅಂಬುಜಾಲಯೆ ಸಹಿತ
    ಮನದೊಳಗಿಂಬುಗೊಳು ಕಮಲಾಂಬಕ ||೨||
    ಆರು ಸಂಖ್ಯೆಯ ಕಳ್ಳರೆನ್ನನು
    ಗಾರು ಮಾಡುವರಾದರಿಂದತಿ ||
    ಧೀರ ನಿನ್ನ ಪದಾರವಿಂದಕೆ
    ದೂರುವೆನು ರಘುವೀರನೇ ||೩||
    ದುರ್ಮತಿಗಳಾದಸುರ ಹರಣಕೆ
    ಬ್ರಹ್ಮಗರ್ಭನು ಬಂದು ತುತಿಸಲು ||
    ಧರ್ಮ ಸಂಸ್ಥಾಪಿಸುತತಿಶುಭ
    ಕರ್ಮ ತೋರುವ ಕರುಣಿಯೇ ||೪||
    ಸಪ್ತ ಋಷಿಗಳ ಕೂಡಿಕೊಂಡತಿ
    ಭಕ್ತಿಯಿಂದಲಿ ನಿನ್ನ ಭಜಿಸಿದ ||
    ಸತ್ಯವ್ರತನಿಗೆ ಸಕಲ ಶ್ರುತಿಗಳ
    ತತ್ತ್ವ ತಿಳಿಸಿದ ಮತ್ಸ್ಯನೇ ||೫||
    ಅಮರ ದೈತ್ಯರು ಅಂಬುನಿಧಿಯೊಳು
    ಭ್ರಮಣಗೊಳಿಸಲು ಮುಳುಗಿಕೊಂಡಿಹ
    ಅಮಿತಗುರು ಮಂದರವ ಧರಿಸುವ
    ಅಮೃತರಸ ತಂದಿತ್ತನೆ ||೬||
    ಧಾತ್ರಿಯನು ಕದ್ದೊಯ್ದ ಹಾಟಕ
    ನೇತ್ರನ ತೆಗೆದು ಬಿಸುಟು ವಿಧಾತೃ
    ನಾಸಾಕುಹರ ಜನಿತ ಪವಿತ್ರ
    ಯಜ್ಞಾವರಹನೇ ||೭||
    ಹುಡುಗ ಪೇಳಿದ ಮಾತಿನಿಂದ
    ಘುಡು ಘುಡಿಸಿ ಕಂಭದೊಳು ಬಂದ ||
    ಸಿಡಿಲಿನಂತಿಹ ನಖದಿ ದೈತ್ಯನ
    ಒಡಲ ಬಗೆದ ಕೋಪದಿಂದ ||೮||
    ಮಾಣಿಯಂದದಿ ಪೋಗಿ ಭೂಮಿಯ
    ದಾನಕೊಂಡಾ ನೆವನದಿ ||
    ದಾನವಾಹೃತ ಧರೆಯ ಕಶ್ಯಪ
    ಸೂನುಗಳಿಗೊಲಿದಿತ್ತನೇ ||೯||
    ದುಷ್ಟ ಭೂಭುಜ ಭಾರದಿಂದಲಿ
    ಕಷ್ಟಪಡುತಿಹ ಧರೆಯ ಕರುಣಾ
    ದೃಷ್ಟಿಯಿಂದಲಿ ನೋಡಿ ಕೊಡಲಿಯ
    ಪೆಟ್ಟಿನಿಂದಲಿ ನೃಪರ ಕಡಿದಾ ||೧೦||
    ನೀರಜಾ ವದನಾರವಿಂದ ಮಹಾ
    ರಸಾಸ್ವಾದನ ವರಕಪಿ ||
    ವೀರನಿಗೆ ಸ್ವರಾಜ್ಯ ನೀಡಿದ
    ಮಾರುತಿಗೆ ದಯ ಮಾಡಿದ ||೧೧||
    ಬಾಲ ಲೀಲೆಯ ತೋರಿ ಗೋಪಿಕ
    ಬಾಲೆಯರ ಕೂಡಾಡಿದ ||
    ಖೂಳ ಕಂಸನ ಕೆಡಹಿ ದಾನವ
    ಮೂಲ ಕಿತ್ತು ಬಿಸಾಡಿದ ||೧೨||
    ದಾನವರ ಮೋಹಿಸುವೆನೆಂದನು
    ಮಾನವಿಲ್ಲದೆ ನಗ್ನನಾಗಿ ||
    ಹೀನ ಬುದ್ಧಿಯ ತಿಳಿಸಿ ತ್ರಿಪುರರ
    ಹಾನಿಗೈಸಿದ ಬೌದ್ಧನೇ ||೧೩||
    ಮಿಂಚ ನೋಡಿದ ಮೇಘದಂದದ
    ಪಂಚವರ್ಣದ ತುರಗನೇರಿ ||
    ಸಂಚರಿಸಿ ಮ್ಲೇಂಛರನು ಗೆಲಿದ ಶ್ರೀ
    ಲೊಂಚಜೀವರ ವರದನೇ ||೧೪||
    ಮಂಗಳಾಯುತ ನಿನ್ನ ಕರುಣಾ
    ಪಾಂಗ ಸುಧೆಯನು ಕರೆದು ಶಿರದಲಿ ||
    ತುಂಗ ವಿಷಯ ತರಂಗ ತಪ್ಪಿಸು
    ಲಿಂಗ ಭಂಗದ ಸಿಂಗನೇ ||೧೫||
    ಮಂದಿರದಿ ನೀ ಬಂದು ರಕ್ಷಿಪೆ
    ಯೆಂದು ಸಕಲಾನಂದಗೊಂಡಿಹೆ ||
    ಇಂದಿರೇಶನೇ ಎಂದಿಗೂ ಈ
    ಅಂದದಿಂದಲಿ ನಿಂದು ಸಲಹೋ ||೧೬||
    ಕೇಶವಾದಿ ಚತುರ ವಿಂಶತಿ
    ಮಾಸಗಳಧಿಷ್ಠಾನ ನಿನಗೆ ||
    ಪರೇಶ ಕಡೆಯಲಿ ಬರುವ ಕಾರ್ತೀಕ
    ವಾಸಿ ದಾಮೋದರ ಹರೇ ||೧೭||
    ಛಳಿಯೊಳೇಳುತ ಮುಳುಗಿ ಜಲದೊಳು
    ಬಳಲಿ ಕರ್ಮವ ಮಾಡಲಾರೆ ||
    ನಳಿನಜಾರ್ಚಿತ ನಿನ್ನ ಪಾದದ
    ನೆಳಲ ನಂಬಿ ಸುಮ್ಮನಿರುವೆ ||೧೮||
    ಅಖಿಳ ದೋಷ ನಿವಾರಣಾರ್ಭುತ
    ಸಕಲ ಸದ್ಗುಣ ಧಾರಣ ||
    ಮಕರ ಕುಂಡಲಧಾರಿ ವೇಂಕಟ
    ಶಿಖರಸ್ಥಿತ ಸುಖಕಾರಣ ||೧೯||
    ಪಕ್ಷಿವಾಹನವಂತೆ ನಿನಗೆ
    ಸರ್ಪ ನಿನ್ನ ಶಯನವಂತೆ ||
    ಮುಕ್ಕಣ್ಣಾ ಮೊಮ್ಮಗನಂತೆ
    ಮುದ್ದು ಮುಖದ ಚೆಲುವನಂತೆ ||೨೦||
    ಕಡಲ ಮಗಳ ಗಂಡನಂತೆ
    ಕರಡಿ ಮಗಳು ಮಡದಿಯಂತೆ ||
    ಹಡಗಿನಿಂದ ಬಂದೆಯಂತೆ
    ಮಧ್ವಮುನಿಗೆ ಒಲಿದೆಯಂತೆ ||೨೧||
    ದೇವರ ದೇವನೇ ಬಾರೋ
    ದೇವಕೀ ನಂದನ ಬಾರೋ ||
    ದೇವೇಂದ್ರನ ಸಲಹಿದ
    ದೇವ ಬಾ ನರಹರಿಯೇ ||೨||
    ಕೊಲ್ಲು ಬೇಗ ಖಳರ ಶ್ರೀ
    ನಲ್ಲ ಮಧ್ವ ವಲ್ಲಭ ||
    ಕೊಲ್ಲದಿದ್ದರೊಲ್ಲರಿವರು
    ಕಲಿಯುಗದ ಕಳ್ಳರು ||೨೩||
    ಎಲ್ಲ ಕೂಡಿ ನಿನ್ನ ಪೂಜೆಗೆ
    ಕಲ್ಲು ಹಾಕುತಿರ್ದರುಗಡ ||
    ಬಲ್ಲೆನವರ ಕೊಲೆಗಾರರ
    ಹಲ್ಲು ಕೀಳದೆ ನಿಲ್ಲರು ||೨೪||
    ಒಳ್ಳೆ ಮಾತನಾಡಲವರು
    ಕೋಲಾಹಲವ ಮಾಡಿ ಬೈವರು ||
    ಗೆಲುವ ಶಕ್ತಿ ಇಲ್ಲ ನಮಗೆ
    ಬಲ್ಲೆ ನೀ ಮಧ್ವಗೊಲಿದವನೇ ||೨೫||
    ಕಳ್ಳತನವನೊಲ್ಲೆನೆಂಬರು
    ಮುಳ್ಳು ಮೊನೆಯಂತೆ ಹಾಯ್ವರು ||
    ಚೆಲುವ ಹಯವದನ ಅವರ
    ಕೊಲ್ಲು ಕೊಲ್ಲು ನಮ್ಮ ಗೆಲಿಸು ||೨೬||

Комментарии • 29