ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Поделиться
HTML-код
  • Опубликовано: 11 окт 2024
  • dasarahadugalu...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಧ್ರುವತಾಳ
    ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ |
    ಮುದ್ರದೊಳಗೆ ಹತ್ತು ಮಹಾಕಲ್ಪಾ |
    ಇದ್ದು ಕ್ಷಾರೋದಕ ಪಾನಮಾಡಿ ಪದವಿ |
    ಸಿದ್ಧ ಮಾಡಿಕೊಂಡು ನರಸಿಂಹನ
    ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು |
    ತ್ರಿದ್ದಶರಲ್ಲಿ ಮಹಾದೇವನೆನಿಸಿ |
    ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ |
    ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ |
    ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ |
    ನಿರ್ದೋಷರಾಗುವರು ಸಜ್ಜನರೂ |
    ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ |
    ರುದ್ರನ ಪಾಲಿಪ ಪ್ರಭುವೆ ಎನ್ನಿ ||೧||
    ಮಟ್ಟತಾಳ
    ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ |
    ಇರುತಿಪ್ಪನು ತನ್ನ ಪರಿವಾರದ ಒಡನೆ |
    ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ |
    ಸುರರಿಗೆ ಗುರುವೆನಿಸಿ ಪರಮ |
    ಪುರುಷ ನಮ್ಮ ವಿಜಯವಿಠಲನಿಂದಾ |
    ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨||
    ತ್ರಿವಿಡಿತಾಳ
    ಭಸ್ಮಾಸುರನು ಮಹತಪಮಾಡಿ ಉಗ್ರದಲಿ |
    ಪಶುಪತಿಯಾ ಒಲಿಸಿದ ಭಕುತಿಯಿಂದ |
    ಅಸಮನೇತ್ರನು ಬಂದು ನುಡಿದ ನಿನಗೇನು |
    ಕುಶಲ ಬೇಕೆನಲು ವಂದಿಸಿ ತಲೆವಾಗಿ |
    ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು |
    ಬೆಸಸೀದನು ಉರಿಹಸ್ತಾ ಕರುಣಿಸೆಂದೂ |
    ಎಸೆವ ಮಾತಿಗೆ ಸತಿಯಿಂದಾಗಲೆ ಅವನು |
    ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ |
    ದಶೆಗೆಟ್ಟು ಮುಂದಾಣ ಯೋಚನೆ ತೋರದೆ |
    ದಶದಿಶಿಗೆ ಓಡಿದಾ ಭೀತಿಯಿಂದ |
    ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ |
    ವಸತಿ ಇದೆ ಎಂದು ಅಡಗಿದಾನಲ್ಲಿ |
    ಅಸುರ ಸಂಹರ ಶಿರಿ ವಿಜಯವಿಠಲರೇಯಾ |
    ನಸುನಗುತಾ ಐದಿದ ನಾರಿವೇಷವ ತಾಳಿ ||೩||
    ಅಟ್ಟತಾಳ
    ಶಿವನು ಕೇಶವಗೆ ದಾನವನ ಅಟ್ಟುಳಿಗೆ ಗಾ |
    ತ್ರವನು ಬಳಲಿ ಮೊರೆಯಿಟ್ಟೂ ಮಾತಿಗೆ ತ್ರಿ |
    ಭುವನ ಬೆರಗಾಗೆ ಯುವತಿ ರೂಪವ ತಾಳಿ |
    ನವನವ ಮೋಹಕ ಕೌತುಕವನೆ ತೋರಿ |
    ಅವನ ವಂಚಿಸಿ ಆಟವನು ಆಡಿದ ದಾ |
    ನವನ ಸಂಹರಿಸಿದ ಪವನಗಿರಿಯಲ್ಲಿ |
    ಪವಿತುರ ಮೂರುತಿ |
    ಕವಿ ಮನೋಹರ ನಮ್ಮ ವಿಜಯವಿಠಲರೇಯಾ |
    ಅವನಿಯೊಳಗೆ ವೇಲಾಪುರದ ಚನ್ನಿಗ ಕಾಣೊ ||೪||
    ಆದಿತಾಳ
    ಯಾಗ ಮಾಡಿದ ಬ್ರಹ್ಮಾ ಮುನಿಗಳ ಕೂಡ ಇಲ್ಲಿ |
    ಭಾಗಕೊಡುವದಕ್ಕೆ ತಪೋಧನಾ ಉಳ್ಳ ಕೋಟೇ
    ಯೋಗೀಶ್ವರರಕೈಯ್ಯ ಪಾರ್ಥಿವ ಪೂಜಿಸಿ
    ಆಗ ಕರಿಸಿದ ಶಿವನ ಕೂಪದಿಂದೂರ್ಧ್ವಕ್ಕೆ |
    ಭೂಗೋಳದೊಳಗಿದೆ ಕೋಟೀಶ್ವರ ಪಶ್ಚಿಮ |
    ಸಾಗರ ತೀರದಲ್ಲಿ ಒಪ್ಪುತಿದೆ ಕೇಳಿ |
    ನಾಗಭೂಷಣ ಇಲ್ಲಿ ವಸುರಾಯನಿಂದ ಚ
    ನ್ನಾಗಿ ಪೂಜೆಯಗೊಂಡ ಭಕುತಿಭರಕೆ ಮೆಚ್ಚಿ |
    ಆಗಮ ವಂದ್ಯನಾದಿ ವಿಜಯವಿಠಲರೇಯ |
    ಬಾಗಿದ ಜನಕೆ ಸದ್ಗತಿಯಾ ಕೊಡುವಾ ಒಲಿದೂ ||೫||
    ಜತೆ
    ಧ್ವಜಪುರಿನಿಲಯಾ ಪಾರ್ವತಿಪತಿ ಪುರವೈರಿ |
    ವಿಜಯವಿಠಲನ ಪ್ರೀಯಪಾವನ ಕಾಯಾ ||೬||
    dhruvataaLa
    rudrENa lavaNaaMbhasi eMbo pramaaNa I sa |
    mudradoLage hattu mahaakalpaa |
    iddu kShaarOdaka paanamaaDi padavi |
    siddha maaDikoMDu narasiMhana
    hRudayadalli iTTu kailaasapati taanu |
    triddasharalli mahaadEvanenisi |
    padmajaa pradhaanaa vaayuriMdaali nODe |
    vidyaadalli kaDime muktili saha |
    nirdhaaraa tiLidu nityaa smarisI |
    nirdOSharaaguvaru sajjanarU |
    shuddha mUruti namma vijayaviThalarEyaa |
    rudrana paalipa prabhuve enni ||1||
    maTTataaLa
    girijaapati shivanu niruta vairaagyadali |
    irutippanu tanna parivaarada oDane |
    siri raamanaamaa smaraNemaaDikoLutaa |
    surarige guruvenisi parama |
    puruSha namma vijayaviThalaniMdaa |
    sharaNara bhaya uttaara maaDuvaa karuNi ||2||
    triviDitaaLa
    bhasmaasuranu mahatapamaaDi ugradali |
    pashupatiyaa olisida bhakutiyiMda |
    asamanEtranu baMdu nuDida ninagEnu |
    kushala bEkenalu vaMdisi talevaagi |
    vasudhiyoLage citraavara oMdu koDu eMdu |
    besasIdanu urihastaa karuNiseMdU |
    eseva maatige satiyiMdaagale avanu |
    pushiyilladaage parIkShisuvenenalU |
    dashegeTTu muMdaaNa yOcane tOrade |
    dashadishige ODidaa bhItiyiMda |
    asuraa beMbiDade barutiralu pUrvadalliddaa |
    vasati ide eMdu aDagidaanalli |
    asura saMhara shiri vijayaviThalarEyaa |
    nasunagutaa aidida naarivEShava taaLi ||3||
    aTTataaLa
    shivanu kEshavage daanavana aTTuLige gaa |
    travanu baLali moreyiTTU maatige tri |
    bhuvana beragaage yuvati rUpava taaLi |
    navanava mOhaka koutukavane tOri |
    avana vaMcisi ATavanu ADida daa |
    navana saMharisida pavanagiriyalli |
    pavitura mUruti |
    kavi manOhara namma vijayaviThalarEyaa |
    avaniyoLage vElaapurada canniga kaaNo ||4||
    AditaaLa
    yaaga maaDida brahmaa munigaLa kUDa illi |
    bhaagakoDuvadakke tapOdhanaa uLLa kOTE
    yOgIshvararakaiyya paarthiva pUjisi
    Aga karisida shivana kUpadiMdUrdhvakke |
    bhUgOLadoLagide kOTIshvara pashcima |
    saagara tIradalli opputide kELi |
    naagabhUShaNa illi vasuraayaniMda ca
    nnaagi pUjeyagoMDa bhakutibharake mecci |
    Agama vaMdyanaadi vijayaviThalarEya |
    baagida janake sadgatiyaa koDuvaa olidU ||5||
    jate
    dhvajapurinilayaa paarvatipati puravairi |
    vijayaviThalana prIyapaavana kaayaa ||6||

Комментарии • 13

  • @savithrihn3595
    @savithrihn3595 7 месяцев назад

    ಚೆನ್ನಾಗಿ ದೆ ಚೆನ್ನಾಗಿದೆ ಸುಳಾದಿ ಮತ್ತು ಹಾಡಿರುವುದು ಸಹ ಚೆನ್ನಾಗಿದೆ

  • @gayathric9147
    @gayathric9147 7 месяцев назад

    Nammurina aaradya devaru Kotilingeshwara 🙏🙏🙏
    Hara Hara Mahadeva.

  • @ramadevidhanya4722
    @ramadevidhanya4722 7 месяцев назад

    ಸುಳಾದಿ ತುಂಬಾ ಚೆನ್ನಾಗಿದೆ

  • @hebbalkarbasu7782
    @hebbalkarbasu7782 7 месяцев назад

    ಶಿವರಾತ್ರಿಯ ಪುಣ್ಯ ದಿನ ವಿಜಯ ವಿಠಲ ರಾಯರ ಪ್ರೀತಿ ಪಾತ್ರ ಶಿವನಿಗೆ ನಮೋ ನಮೋ,ಶಿವ ಧ್ಯಾನದಿಂದ ನಿಮ್ಮ ಹಾಡು ಕೇಳಲು ನಾವು ಭಾಗ್ಯವಂತರು..ಹರೆ ಶ್ರೀನಿವಾಸ..

  • @jayananjundaiah5966
    @jayananjundaiah5966 7 месяцев назад

    ಹರೇ ಶ್ರೀನಿವಾಸ 🙏🙏

  • @empirekts
    @empirekts 7 месяцев назад

    ಧನ್ಯವಾದಗಳು...... ಕೋಟೀಲಿಂಗೇಶ್ವರನ ಕೀರ್ತನೆ ಹಾಡಿ ಭಕ್ತಾದಿಗಳಿಗೆ ಕೇಳಲು ಹಾಡಲು ಅನುಕೂಲ ಮಾಡಿಕೊಟ್ಟಿದ್ದಕೆ....🙏

  • @Latha67
    @Latha67 7 месяцев назад

    🙏🙏🙏🙏🌼⚘️🌼⚘️🌼⚘️🌼

  • @srinivasabhatta7251
    @srinivasabhatta7251 7 месяцев назад

    🙏🙏🙏🙏🙏

  • @padmar4494
    @padmar4494 7 месяцев назад

    ❤❤❤

  • @ramadevidhanya4722
    @ramadevidhanya4722 7 месяцев назад

    ‌👌👌🙏🙏👏👏

  • @shrishailagk2551
    @shrishailagk2551 7 месяцев назад

    👌🙏