ಅಳದಿರೋ ಸುಮ್ಮನಿರಮ್ಮ | ಶ್ರೀ ಪ್ರಸನ್ನವೆಂಕಟ ದಾಸರು | Aladiro Summaniramma | Sri Prasanna Venkata Dasaru

Поделиться
HTML-код
  • Опубликовано: 11 окт 2024
  • ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಅಳದಿರೋ ಸುಮ್ಮನಿರಮ್ಮ ನೀ
    ಅಳದಿರೊ ಬವ್ವ ಬಂದಾವಮ್ಮ ಕೃಷ್ಣಮ್ಮ ||ಪ||
    ನಾಲ್ಕು ಮೊಗವುಳ್ಳ ಬವ್ವ
    ಹದಿನಾಲ್ಕು ಜಗವ ಜೋಳಿಯಲ್ಲಿಟ್ಟ ಬವ್ವ
    ಗೋಳಿಟ್ಟಿಸುತಿದೆ ಬವ್ವ
    ನಿನ್ನಕಾಲು ಕಂಡರೆ ಕಚ್ಚಿ ಕೊಂಡೊಯ್ವ ಬವ್ವ ||೧||
    ಗಗನ ತುಂಬ್ಯಾಡುವ ಬವ್ವ
    ಪ್ರಾಣಿಗಳ ದೇಹವ ಪೊಕ್ಕು ಚೇಷ್ಟಿಪ ಬವ್ವ
    ಜಗವನ್ನಲ್ಲಾಡಿಪ ಬವ್ವ ನಿನ್ನ
    ಮೊಗವರಿತು ದೂರದಿ ನಿಂತಿಪ್ಪ ಬವ್ವ ||೨||
    ಮೊಗವೈದು ಪಣೆಗಣ್ಣ ಬವ್ವ
    ಪುಲಿದೊಗಲು ಕೆಂಜೆಡೆ ರುಂಡಮಾಲೆಯ ಬವ್ವ
    ಬಗೆಯಿಂದ ಪೆಣ್ಣೆತ್ತಿ ಬವ್ವ
    ತಾಸೊಗಸಿಲೆ ರಾಮರಾಮೆನುತಿದೆ ಬವ್ವ ||೩||
    ಮೈಯೆಲ್ಲ ಕಣ್ಣಿನ ಬವ್ವ
    ತನ್ನಕೈಯಲ್ಲಿ ವಜ್ರವ ಬೀಸುವ ಬವ್ವ
    ಉಯ್ಯಲಾಡುತಲಿದೆ ಬವ್ವ ನಿನ್ನ
    ಒಯ್ವೆನೆನುತ ಬಂತು ಹಲಕಾಲ ಬವ್ವ ||೪||
    ಒಂದಲ್ಲ ನೂರಲ್ಲ ಬವ್ವ ನಿನ್ನ
    ಮಂದಿರ ಸುತ್ತುತವನಂತ ಬವ್ವ
    ಪೊಂದೊಟ್ಟಿಲೊಳು ನಿದ್ರೆಗೆಯ್ಯೈ ಎನ್ನ
    ತಂದೆ ಪ್ರಸನ್ನವೆಂಕಟ ಸಿರಿದೊರೆಯೆ ||೫||
    aLadirO summaniramma nI
    aLadiro bavva baMdaavamma kRuShNamma ||pa||
    naalku mogavuLLa bavva
    hadinaalku jagava jOLiyalliTTa bavva
    gOLiTTisutide bavva
    ninnakaalu kaMDare kacci koMDoyva bavva ||1||
    gagana tuMbyaaDuva bavva
    praaNigaLa dEhava pokku cEShTipa bavva
    jagavannallaaDipa bavva ninna
    mogavaritu dUradi niMtippa bavva ||2||
    mogavaidu paNegaNNa bavva
    pulidogalu keMjeDe ruMDamaaleya bavva
    bageyiMda peNNetti bavva
    taasogasile raamaraamenutide bavva ||3||
    maiyella kaNNina bavva
    tannakaiyalli vajrava bIsuva bavva
    uyyalaaDutalide bavva ninna
    oyvenenuta baMtu halakaala bavva ||4||
    oMdalla nUralla bavva ninna
    maMdira suttutavanaMta bavva
    poMdoTTiloLu nidregeyyai enna
    taMde prasannaveMkaTa siridoreye ||5||

Комментарии • 12

  • @ShivalilaHandigund
    @ShivalilaHandigund 4 месяца назад

    ಹರೇ ಶ್ರೀನಿವಾಸ

  • @ramadevidhanya4722
    @ramadevidhanya4722 4 месяца назад

    ತುಂಬಾ ಚೆನ್ನಾಗಿದೆ ಹಾಡಿರುವುದು

  • @shashirekhashashirekha8536
    @shashirekhashashirekha8536 4 месяца назад

    ಹರೇ ಶ್ರೀನಿವಾಸ 🙏🏻 ❤

  • @UshaBidarahalli
    @UshaBidarahalli 4 месяца назад

    ಹಾಡು,ಗಾನ ಎರಡೂ ತುಂಬಾ ಚೆನ್ನಾಗಿದೆ

  • @namagirimadhusudanarao705
    @namagirimadhusudanarao705 3 месяца назад

    Tumba chenngide sahitya hagu gaana

  • @nandinimysoreraghavendrara7206
    @nandinimysoreraghavendrara7206 4 месяца назад

    ಸೊಗಸಾಗಿದೆ madam

  • @padmar4494
    @padmar4494 4 месяца назад

    Super

  • @savithrihn3595
    @savithrihn3595 4 месяца назад

    ಅವ್ವಾ, ಈ ಹಾಡು ಎಷ್ಟು ಚೆನ್ನಾಗಿ ದೆ ಹಾಡಿರುವುದು ಅಷ್ಟೇ ಚೆನ್ನಾಗಿ ದೆ

  • @ramadevidhanya4722
    @ramadevidhanya4722 4 месяца назад

    ಹಾಡಿಗೆ ಸರಿಯಾಗಿ ಫೋಟೋ ಗಳು ತುಂಬಾ ಚೆನ್ನಾಗಿದೆ

  • @shashirekhashashirekha8536
    @shashirekhashashirekha8536 3 месяца назад

    super...singing👌

  • @sudhan4416
    @sudhan4416 4 месяца назад

    Super singing mam please yava raga thilisi please