ಕಂಗಳಿದ್ಯಾತಕೊ ಕಾವೇರಿ | ಶ್ರೀ ಶ್ರೀಪಾದರಾಜರ ಕೃತಿ | Kangalidyatako Kaveri | Sri Sripadarajara Kruti

Поделиться
HTML-код
  • Опубликовано: 11 окт 2024
  • ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ ||ಪ||
    ಜಗಂಗಳೊಳಗೆ ಮಂಗಳ ಮೂರುತಿ
    ರಂಗನ ಶ್ರೀಪಾದಂಗಳ ನೋಡದ ||ಅಪ||
    ಎಂದಿಗಾದರೊಮ್ಮೆ ಜನರು
    ಬಂದು ಭೂಮಿಯಲ್ಲಿ ನಿಂದು |
    ಚಂದ್ರ ಪುಷ್ಕರಣಿ ಸ್ನಾನವ ಮಾಡಿ
    ಆನಂದದಿಂದಲಿ ರಂಗನ ನೋಡದ ||೧||
    ಹರಿ ಪಾದೋದಕ ಸಮ ಕಾವೇರಿ
    ವಿರಜಾ ನದಿಯ ಸ್ನಾನವ ಮಾಡಿ |
    ಪರಮ ವೈಕುಂಠ ರಂಗ ಮಂದಿರ
    ಪರವಾಸುದೇವನ ನೋಡದ ||೨||
    ಹಾರ ಹೀರ ವೈಜಯಂತಿ
    ತೋರ ಮುತ್ತಿನ ಸರವ ಧರಿಸಿ |
    ತೇರನೇರಿ ಬೀದಿಲಿ ಮೆರೆವ
    ರಂಗವಿಠ್ಠಲನ್ನ ನೋಡದ ||೩||
    kaMgaLidyAtako kAvEri raMgana nODada ||pa||
    jagaMgaLoLage maMgaLa mUruti
    raMgana shrIpAdaMgaLa nODada ||apa||
    eMdigAdaromme janaru
    baMdu bhUmiyalli niMdu |
    caMdra puShkaraNi snAnava mADi
    AnaMdadiMdali raMgana nODada ||1||
    hari pAdOdaka sama kAvEri
    virajA nadiya snAnava mADi |
    parama vaikuMTha raMga maMdira
    paravAsudEvana nODada ||2||
    hAra hIra vaijayaMti
    tOra muttina sarava dharisi |
    tEranEri bIdili mereva
    raMgaviThThalanna nODada ||3||

Комментарии • 7