ಶ್ರೀಮದ್ಭಾಗವತಮ್ ಉಪನ್ಯಾಸ I ಶ್ರೀ ಶುಚಿ ಶ್ರವ ದಾಸ I SB 1.15.34 I 04.02.2024 | ISKCON Bangalore Kannada
HTML-код
- Опубликовано: 28 окт 2024
- ಶ್ರೀಮದ್ಭಾಗವತಮ್ 1.15.34
ಶ್ಲೋಕ
ಯಯಾಹರದ್ ಭುವೋ ಭಾರಂ ತಾಂ ತನುಂ ವಿಜಹಾವಜಃ |
ಕಂಟಕಂ ಕಂಟಕೇನೇವ ದ್ವಯಂ ಚಾಪೀಶಿತುಃ ಸಮಮ್ ||೩೪||
ಅನುವಾದ
ಯದುವಂಶದವರೆಲ್ಲರೂ ತಮ್ಮ ದೇಹಗಳನ್ನು ತ್ಯಜಿಸುವಂತೆ ಮಾಡಿ ಪರಮ ಜನನರಹಿತನಾದ ಪರಮ ಪ್ರಭು ಶ್ರೀಕೃಷ್ಣನು ಭೂಬಾರವನ್ನು ಇಳಿಸಿದನು. ಇದು ಒಂದು ಮುಳ್ಳನ್ನು ಇನ್ನೊಂದು ಮುಳ್ಳಿನಿಂದ ತೆಗೆದಹಾಗೆ, ನಿಯಂತ್ರಕನಿಗೆ ಎರಡೂ ಒಂದೇ ಸಮ.
ಭಾವಾರ್ಥ
ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ಹೀಗೆ ಸೂಚಿಸುತ್ತಾರೆ. ಶೌನಕ ಮೊದಲಾದ ಋಷಿಗಳು ನೈಮಿಷಾರಣ್ಯದಲ್ಲಿ ಸೂತಮುನಿಗಳಿಂದ ಶ್ರೀಮದ್ಭಾಗವತವನ್ನು ಕೇಳುತ್ತಿದ್ದರು. ಯದುವಂಶಸ್ಥರು ಮದ್ಯದ ಅಮಲಿನಿಂದ ಪರಸ್ಪರ ಬಡಿದಾಡಿ ಎಲ್ಲರೂ ಸತ್ತುಹೋದರೆಂದು ಕೇಳಿ ದುಃಖಪಟ್ಟರು. ಅವರ ದುಃಖವನ್ನು ಹೋಗಲಾಡಿಸಲು ಸೂತಮುನಿಗಳು ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಹೇಳಿದರು. ಯದುವಂಶದವರು ತಮ್ಮ ದೇಹಗಳನ್ನು ತ್ಯಜಿಸಿ ಆ ಮೂಲಕ ಭೂಮಿಯ ಭಾರವನ್ನು ಹೋಗಲಾಡಿಸಬೇಕೆಂದು ಪ್ರಭುವೇ ಏರ್ಪಾಟು ಮಾಡಿದನು. ವಿಶ್ವದ ಆಡಳಿತವನ್ನು ನಡೆಸುತ್ತಿರುವ ದೇವತೆಗಳಿಗೆ ಭೂಭಾರವನ್ನಿಳಿಸುವುದರಲ್ಲಿ ಸಹಾಯ ಮಾಡುವುದಕ್ಕಾಗಿಯೇ ಭಗವಂತನೂ ಅವನ ನಿತ್ಯ ಸಂಗಾತಿಗಳೂ ಇಲ್ಲಿ ಕಾಣಿಸಿಕೊಂಡಿದ್ದರು. ತನ್ನ ಆತ್ಮೀಯವಲಯದ ಕೆಲವು ದೇವತೆಗಳು ಯದುವಂಶದಲ್ಲಿ ಜನಿಸುವಂತೆ, ತನ್ನ ಅವತಾರೋದ್ದೇಶಕ್ಕಾಗಿ ತನಗೆ ಸೇವೆ ಸಲ್ಲಿಸುವಂತೆ ಅವನೇ ಏರ್ಪಾಟು ಮಾಡಿದ್ದನು. ಉದ್ದೇಶವು ಈಡೇರಿದ ಮೇಲೆ ದೇವತೆಗಳು ಪ್ರಭುಸಂಕಲ್ಪದಂತೆ ಮದ್ಯದ ಅಮಲಿನಲ್ಲಿ ತಮ್ಮತಮ್ಮೊಳಗೇ ಹೊಡೆದಾಡಿ ದೇಹ ತ್ಯಾಗ ಮಾಡಿದರು. ದೇವತೆಗಳು ಸೋಮರಸವನ್ನು ಕುಡಿಯುವ ಅಭ್ಯಾಸವುಳ್ಳವರು. ಆದ್ದರಿಂದ ಮದ್ಯದ ಸೇವನೆಯಾಗಲಿ ಅಮಲೇರುವುದಾಗಲಿ ಅವರಿಗೆ ಹೊಸದಲ್ಲ. ಅನೇಕ ವೇಳೆ ಅವರು ಹಾಗೆ ವರ್ತಿಸಿ ಕಷ್ಟಕ್ಕೆ ಸಿಲುಕಿಕೊಂಡಿದ್ದುಂಟು. ಒಮ್ಮೆ ಕುಬೇರನ ಮಕ್ಕಳು ಪಾನಮತ್ತರಾಗಿ ನಾರದರಿಂದ ಶಾಪ ಪಡೆದಿದ್ದರು. ಆಮೇಲೆ ಶ್ರೀಕೃಷ್ಣಪ್ರಭುವಿನ ಕೃಪೆಯಿಂದ ತಮ್ಮ ಮೂಲ ರೂಪವನ್ನು ಪಡೆದರು. ಈ ಕತೆಯು ಹತ್ತನೆಯ ಸ್ಕಂಧದಲ್ಲಿ ಬರುತ್ತದೆ. ಪರಮ ಪ್ರಭುವಿನ ದೃಷ್ಟಿಯಲ್ಲಿ ಅಸುರರು ಸುರರು ಇಬ್ಬರೂ ಸಮಾನರು. ಸುರರು ಪ್ರಭುವಿಗೆ ವಿಧೇಯತೆಯಿಂದಿರುತ್ತಾರೆ; ಅಸುರರು ಹಾಗಿರುವುದಿಲ್ಲ. ಆದ್ದರಿಂದ ಇಲ್ಲಿ ಕೊಟ್ಟಿರುವ ಒಂದು ಮುಳ್ಳಿನಿಂದ ಇನ್ನೊಂದು ಮುಳ್ಳನ್ನು ತೆಗೆಯುವುದು ಎಂಬ ಉದಾಹರಣೆಯು ಅತ್ಯಂತ ಸೂಕ್ತವಾಗಿದೆ. ಭಗವಂತನ ಕಾಲಿಗೆ ಚುಚ್ಚಿಕೊಂಡಿರುವ ಒಂದು ಮುಳ್ಳು ಅವನಿಗೆ ಖಂಡಿತವಾಗಿಯೂ ಯಾತನೆ ನೀಡುತ್ತಿರುತ್ತದೆ. ಇನ್ನೊಂದು ಮುಳ್ಳಾದರೋ ಆ ನೋವಿಗೆ ಕಾರಣವಾದ ಮುಳ್ಳನ್ನು ತೆಗೆದುಹಾಕುವುದರ ಮೂಲಕ ಪ್ರಭುವಿಗೆ ಸೇವೆಯನ್ನು ಸಲ್ಲಿಸುತ್ತದೆ. ಹಾಗೆಯೇ ಪ್ರತಿಯೊಬ್ಬ ಜೀವಿಯೂ ಭಗವಂತನ ಭಾಗವೇ. ಆದರೂ ಪ್ರಭುವಿಗೆ ಹಿಂಸೆ ಕೊಡುತ್ತಿರುವವನನ್ನು ಅಸುರ ಎಂದೂ ಅವನಿಗೆ ಸೇವೆ ಸಲ್ಲಿಸುತ್ತಿರುವವನನ್ನು ಸುರ ಅಥವಾ ದೇವತೆ ಎಂದೂ ಕರೆಯಲಾಗುತ್ತದೆ. ಈ ಲೋಕದಲ್ಲಿ ಸುರರು-ಅಸುರರು ಸದಾ ಕಾದಾಡುತ್ತಲೇ ಇರುತ್ತಾರೆ. ದೇವತೆಗಳನ್ನು ಅಸುರರ ಮುಷ್ಟಿಯಿಂದ ಪ್ರಭುವು ಸದಾ ರಕ್ಷಿಸುತ್ತಾನೆ. ಇಬ್ಬರೂ ಅವನ ನಿಯಂತ್ರಣದಲ್ಲೇ ಇದ್ದಾರೆ. ಭಗವಂತನ ಕಾರ್ಯೋದ್ದೇಶವೇ ದೇವತೆಗಳನ್ನು ಶಿಕ್ಷಿಸಿ ಅಸುರರನ್ನು ನಾಶಮಾಡುವುದು. ಜಗತ್ತಿನಲ್ಲಿ ಅಗತ್ಯ ಬಿದ್ದಾಗಲೆಲ್ಲ ಪ್ರಭುವು ಅದನ್ನು ನಿರ್ವಹಿಸಿ ದೇವತೆಗಳು ಮತ್ತು ಅಸುರರು ಇಬ್ಬರಿಗೂ ಒಳ್ಳೆಯದನ್ನು ಮಾಡುತ್ತಾನೆ.
"ಇಸ್ಕಾನ್ ಬೆಂಗಳೂರಿನ ದೇವಾಲಯದ ಭಕ್ತರು ನೀಡಿದ ಕನ್ನಡ ಶ್ರೀಮದ್-ಭಾಗವತ ಉಪನ್ಯಾಸಗಳನ್ನು ಕೇಳಿ. ಈ ಉಪನ್ಯಾಸಗಳು ನಿಮಗೆ ದೇವರ ವಿಜ್ಞಾನದ ಬಗ್ಗೆ ಜ್ಞಾನವನ್ನು ನೀಡುತ್ತವೆ ಮತ್ತು ಆಧ್ಯಾತ್ಮಿಕ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತವೆ.
#ಶ್ರೀಮದ್ಭಾಗವತ #srimadbhagavatam #iskconbangalorekannada #kannada
Hare Krishna
Dandavast Prabhu jeee ❤
🙏🙏🙏Hare krishna shree gurubhyo namaha 🌺🌼🌺
Hare Krishna 🌹🌹🌹🙏🙏🙏