ಶ್ರೀಮದ್ಭಾಗವತಮ್ ಉಪನ್ಯಾಸI ಶ್ರೀ ಪ್ರದೀಪ್ತ ನರಸಿಂಹ ದಾಸ I SB 1.15.41 I 31.03.2024

Поделиться
HTML-код
  • Опубликовано: 12 сен 2024
  • ಶ್ಲೋಕ - 41
    ವಾಚಂ ಜುಹಾವ ಮನಸಿ ತಾಣ ಇತರೇ ಚ ತಮ್ |
    ಮೃತ್ಯಾವಪಾನಂ ಸೋತ್ಸರ್ಗಂ ತಂ ಪಂಚತೇ ಹೃಜೋಹವೀತ್ ||೪೧||
    ಅನುವಾದ
    ಆಮೇಲೆ ಅವನು ತನ್ನ ಇಂದ್ರಿಯಗಳನ್ನು ಮನಸ್ಸಿನಲ್ಲಿ, ಮನಸ್ಸನ್ನು ಪ್ರಾಣದಲ್ಲಿ, ಪ್ರಾಣವನ್ನು ಉಸಿರಾಟದಲ್ಲಿ ಲೀನಗೊಳಿಸಿ ತನ್ನ ಇಡೀ ಅಸ್ತಿತ್ವವನ್ನು ಪಂಚಭೂತ ನಿರ್ಮಿತ ಶರೀರಕ್ಕೆ ತಂದು, ಶರೀರವನ್ನು ಮೃತ್ಯುವಿಗೊಯ್ದನು. ಆಮೇಲೆ ಪರಿಶುದ್ಧಾತ್ಮನಾಗಿ ಬದುಕಿನ ಭೌತಿಕ ಕಲ್ಪನೆಯಿಂದ ವಿಮುಕ್ತನಾದನು.
    ಭಾವಾರ್ಥ
    ಯುಧಿಷ್ಠಿರ ಮಹಾರಾಜನು, ತಮ್ಮನಾದ ಅರ್ಜುನನಂತೆಯೇ ಗಮನವನ್ನು ಕೇಂದ್ರೀಕರಿಸಿ ಕ್ರಮಕ್ರಮವಾಗಿ ಎಲ್ಲಾ ಭೌತಿಕ ಬಂಧನಗಳಿಂದ ವಿಮುಕ್ತಿ ಪಡೆಯಲು ತೊಡಗಿದನು. ಮೊದಲು ಎಲ್ಲಾ ಇಂದ್ರಿಯಗಳ ಕಾರ್ಯಚಟುವಟಿಕೆಗಳನ್ನು ಕೇಂದ್ರೀಕರಿಸಿ ಅವುಗಳನ್ನು ಮನಸ್ಸಿನಲ್ಲಿ ಲೀನ ಗೊಳಿಸಿದನು. ಅಂದರೆ, ಪರಮ ಪ್ರಭುವಿನ ದಿವ್ಯ ಸೇವೆಯಲ್ಲಿ ಮನಸ್ಸನ್ನು ಪೂರ್ತಿಯಾಗಿ ನಿಲ್ಲಿಸಿದನು ಎಂದರ್ಥ. ಲೌಕಿಕ ಚಟುವಟಿಕೆಗಳನ್ನು ನಡೆಸುವುದು ಮನಸ್ಸು ಇಂದ್ರಿಯಗಳ ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಅದು ಕಾರ್ಯನಿರತವಾಗುತ್ತದೆ. ಈಗ ಅವನು ದೇವತ್ವಕ್ಕೆ ಹಿಂದಿರುಗುತ್ತಿರುವುದರಿಂದ ಮನಸ್ಸು ತನ್ನ ಲೌಕಿಕ ಚಟುವಟಿಕೆಗಳನ್ನು ನಿಲ್ಲಿಸಲಿ ಮತ್ತು ಭಗವಂತನ ದಿವ್ಯ ಸೇವೆಯ ಕಡೆಗೆ ಅದು ತಿರುಗಲಿ ಎಂದು ಪ್ರಾರ್ಥಿಸಿದನು. ಇನ್ನು ಮುಂದೆ ಭೌತಿಕ ಚಟುವಟಿಕೆಗಳ ಅಗತ್ಯ ಉಳಿಯಲಿಲ್ಲ. ವಾಸ್ತವವಾಗಿ ಮನಸ್ಸಿನ ಚಟುವಟಿಕೆಗಳನ್ನು ನಿಲ್ಲಿಸುವುದು ಸಾಧ್ಯವಿಲ್ಲ. ಏಕೆಂದರೆ ಅವು ನಿತ್ಯಾತ್ಮರ ಪ್ರತಿಬಿಂಬವಾಗಿರುತ್ತವೆ. ಆದರೆ ಆ ಚಟುವಟಿಕೆಗಳ ಗುಣವನ್ನು ಬದಲಾಯಿಸಬಹುದು. ಅದನ್ನುಭೌತವಸ್ತುಗಳಿಂದ ಭಗವಂತನ ದಿವ್ಯ ಸೇವೆಯತ್ತ ತಿರುಗಿಸಬಹುದು. ಪ್ರಾಣವಾಯುವಿನ ಕಲ್ಮಷದಿಂದ ಮನಸ್ಸನ್ನು ಸ್ವಚ್ಛಗೊಳಿಸಿದಾಗ ಮನಸ್ಸಿನ ಭೌತಿಕಗುಣವು ಬದಲಾವಣೆ ಹೊಂದುತ್ತದೆ. ಆ ಮೂಲಕ, ಮತ್ತೆ ಮತ್ತೆ ಹುಟ್ಟುವ ಸಾಯುವ ಗೋಜಲನ್ನು ತಪ್ಪಿಸಿಕೊಂಡು ಶುದ್ದ ಅಧ್ಯಾತ್ಮ ಜೀವನದಲ್ಲಿ ನೆಲೆಗೊಳ್ಳಬಹುದು. ಎಲ್ಲವೂ ಭೌತ ಶರೀರದ ತಾತ್ಕಾಲಿಕ ಅಸ್ತಿತ್ವದಿಂದ ಪ್ರಕಟವಾಗುತ್ತದೆ. ಸಾಯುವ ಸಮಯದಲ್ಲಿ ಮನಸ್ಸು ಮುಂದಿನ ಶರೀರವನ್ನು ಉತ್ಪತ್ತಿ ಮಾಡುತ್ತದೆ. ಆದರೆ ಭಗವಂತನ ದಿವ್ಯ ಚರಣಕಮಲಗಳ ಪ್ರೇಮಯುತ ಸೇವೆಯಲ್ಲಿ ಸತತವಾಗಿ ನಿರತವಾಗುವುದರಿಂದ ಶುದ್ದಗೊಂಡು, ದೇಹಾವಸಾನ ಸಮಯದಲ್ಲಿ ಮನಸ್ಸಿಗೆ ಇನ್ನೊಂದು ದೇಹವನ್ನು ಉತ್ಪತ್ತಿ ಮಾಡುವ ಅವಕಾಶವೇ ಬರುವುದಿಲ್ಲ. ಅದು ಭೌತಿಕ ಕಶ್ಯಲದಲ್ಲಿ ಮಗ್ನವಾಗುವುದರಿಂದ ಬಿಡುಗಡೆ ಪಡೆಯುತ್ತದೆ. ಆಗ ಪರಿಶುದ್ಧ ಆತ್ಮವು ಭಗವದ್ದಾಮಕ್ಕೆ ಮರಳಲು ಸಮರ್ಥವಾಗುತ್ತದೆ.
    "ಇಸ್ಕಾನ್ ಬೆಂಗಳೂರಿನ ದೇವಾಲಯದ ಭಕ್ತರು ನೀಡಿದ ಕನ್ನಡ ಶ್ರೀಮದ್-ಭಾಗವತ ಉಪನ್ಯಾಸಗಳನ್ನು ಕೇಳಿ. ಈ ಉಪನ್ಯಾಸಗಳು ನಿಮಗೆ ದೇವರ ವಿಜ್ಞಾನದ ಬಗ್ಗೆ ಜ್ಞಾನವನ್ನು ನೀಡುತ್ತವೆ ಮತ್ತು ಆಧ್ಯಾತ್ಮಿಕ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತವೆ.
    #ಶ್ರೀಮದ್ಭಾಗವತ #srimadbhagavatam #iskconbangalorekannada #kannada

Комментарии •