ಶ್ರೀಮದ್ಭಾಗವತಮ್ ಉಪನ್ಯಾಸ I ಶ್ರೀ ಮೇಘ ಶ್ಯಾಮ ದಾಸ I SB 1.15.45 I 05.05.2024 ISKCON Bangalore Kannada

Поделиться
HTML-код
  • Опубликовано: 12 сен 2024
  • ಶ್ಲೋಕ - 45
    ಸರ್ವೆ ತಮನುನಿರ್ಜಗು ಭ್ರ್ರಾತರಃ ಕೃತನಿಶ್ಚಯಾಃ |
    ಕಲಿನಾಧರ್ಮಮಿತ್ರೇಣ ದೃಷ್ಟಾ ಸ್ಪಷ್ಟಾ; ಪ್ರಜಾ ಭುವಿ ||೪೫||
    ಅನುವಾದ
    ಯುಧಿಷ್ಠಿರ ಮಹಾರಾಜನ ತಮ್ಮಂದಿರು, ಅದಾಗಲೆ ಕಲಿಯುಗವು ಜಗತ್ತಿನಾದ್ಯಂತ ಹರಡಿದ್ದುದನ್ನೂ ರಾಜ್ಯದ ಪ್ರಜೆಗಳು ಅದರಿಂದ ಪ್ರಭಾವಿತರಾಗಿ ಅಧಾರ್ಮಿಕ ಆಚರಣೆಗಳಲ್ಲಿ ನಿರತರಾಗಿದ್ದುದನ್ನೂ ನೋಡಿದರು. ತಾವೂ ಅಣ್ಣನು ಹಿಡಿದ ದಾರಿಯನ್ನೇ ಹಿಡಿಯಬೇಕೆಂದು ಅವರು ನಿರ್ಧರಿಸಿದರು.
    ಭಾವಾರ್ಥ
    ಯುಧಿಷ್ಠಿರನ ತಮ್ಮಂದಿರು ಅವನನ್ನು ವಿಧೇಯತೆಯಿಂದ ಅನುಸರಿಸುತ್ತಿದ್ದರು. ಬದುಕಿನ ಅಂತಿಮ ಲಕ್ಷ್ಯವನ್ನು ತಿಳಿದುಕೊಳ್ಳಲು ತಕ್ಕ ತರಬೇತಿ ಅವರಿಗೆ ದೊರಕಿತ್ತು. ಶ್ರೀಕೃಷ್ಣಪ್ರಭುವಿಗೆ ಭಕ್ತಿಯುತ ಸೇವೆಸಲ್ಲಿಸುವುದರಲ್ಲಿ ತಮ್ಮ ಅಣ್ಣನನ್ನೇ ಅನುಸರಿಸಲು ಅವರು ನಿರ್ಧರಿಸಿದರು. ಸನಾತನ ಧರ್ಮದ ತತ್ವಗಳಿಗೆ ಅನುಸಾರವಾಗಿ ವ್ಯಕ್ತಿಯು ತನ್ನ ಜೀವಿತದ ಅರ್ಧಭಾಗವನ್ನು ಕಳೆಯುತ್ತಿದ್ದಂತೆ ಸಾಂಸಾರಿಕ ಜೀವನದಿಂದ ನಿವೃತ್ತಿ ಪಡೆಯಬೇಕು, ಆತ್ಮಸಾಕ್ಷಾತ್ಕಾರದಲ್ಲಿ ನಿರತನಾಗಬೇಕು. ಆದರೆ ಈ ವಿಷಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಯಾವಾಗಲೂ ಖಚಿತವಾದ ವಿಷಯವಲ್ಲ. ಕೆಲವೊಮ್ಮೆ ನಿವೃತ್ತರಾದ ಜನರು ತಮ್ಮ ಬಾಳುವೆಯ ಕೊನೆಯ ದಿನಗಳನ್ನು ಹೇಗೆ ಕಳೆಯಬೇಕೆಂದು ತಿಳಿಯದೆ ದಿಗ್ಧಮೆಗೊಳಗಾಗುತ್ತಾರೆ. ಇಲ್ಲಿ ಪಾಂಡವರು ಇತರರಿಗೆ ಪ್ರಮಾಣವಾಗಬಲ್ಲ ಮಾರ್ಗವನ್ನು ತೋರಿದ್ದಾರೆ. ಅವರೆಲ್ಲರೂ ದೇವೋತ್ತಮ ಪರಮ ಪುರುಷ ಶ್ರೀಕೃಷ್ಣಪ್ರಭುವಿನ ಭಕ್ತಿಸೇವೆಯನ್ನು ಮನಃಪೂರ್ವಕವಾಗಿ ಮಾಡುವುದರಲ್ಲಿ ನಿರತರಾದರು. ಶ್ರೀಧರ ಸ್ವಾಮಿ ಅವರ ಪ್ರಕಾರ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳು, ಅಥವಾ ಕಾಮ್ಯಕರ್ಮಗಳು, ತತ್ವ ಚಿಂತನೆಗಳು, ಮೋಕ್ಷ- ಇವು ಅನೇಕ ಜನರು ಭಾವಿಸುವಂತೆ, ಬದುಕಿನ ಅಂತಿಮ ಲಕ್ಷ್ಯವಲ್ಲ. ಬದುಕಿನ ಚರಮ ಲಕ್ಷ್ಯದ ಬಗೆಗೆ ಏನೊಂದೂ ತಿಳಿಯದವರು ಇವೆಲ್ಲವನ್ನೂ ಆಚರಿಸುತ್ತಿರುತ್ತಾರೆ. ಪ್ರಭುವೇ ಅಂತಿಮ ಲಕ್ಷ್ಯವನ್ನು ಭಗವದ್ಗೀತೆಯಲ್ಲಿ (18.64) ಸೂಚಿಸುತ್ತಾನೆ. ಪಾಂಡವರು ಏನೊಂದೂ ಶಂಕೆ ಅನುಮಾನಗಳಿಲ್ಲದೆ ಅದನ್ನು ಅನುಸರಿಸುವಷ್ಟು ವಿವೇಕಿಗಳಾಗಿದ್ದರು.
    ಇಸ್ಕಾನ್ ಬೆಂಗಳೂರಿನ ದೇವಾಲಯದ ಭಕ್ತರು ನೀಡಿದ ಕನ್ನಡ ಶ್ರೀಮದ್-ಭಾಗವತ ಉಪನ್ಯಾಸಗಳನ್ನು ಕೇಳಿ. ಈ ಉಪನ್ಯಾಸಗಳು ನಿಮಗೆ ದೇವರ ವಿಜ್ಞಾನದ ಬಗ್ಗೆ ಜ್ಞಾನವನ್ನು ನೀಡುತ್ತವೆ ಮತ್ತು ಆಧ್ಯಾತ್ಮಿಕ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತವೆ.
    #ಶ್ರೀಮದ್ಭಾಗವತ #srimadbhagavatam #iskconbangalorekannada #kannada

Комментарии • 4

  • @srinivask6150
    @srinivask6150 4 месяца назад +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @amrutholakundi2393
    @amrutholakundi2393 3 месяца назад +1

    Hare KRISHNA

  • @srinivask6150
    @srinivask6150 4 месяца назад +1

    Jagathguru ಶ್ರೀಲ ಪ್ರಭುಪಾದರು

  • @vedabe6904
    @vedabe6904 4 месяца назад

    HARE Krishna Hare Krishna Krishna Krishna Hare Hare Hare Rama Hare Rama Rama Rama Hare Hare