Ep. 10 ಗರುಡ ವಿಜಯ | Garuda earns freedom for his mother Vinaata | Mahabharatha Darshana
HTML-код
- Опубликовано: 8 фев 2025
- ವಿವರ :-
ಗರುಡ ಸ್ವರ್ಗಾಭಿಮುಖವಾಗಿದ್ದಾನೆ . ಇಂದ್ರನಿಗೆ ಅಪಶಕುನಗಳು ಒಂದರಮೇಲೊಂದರಂತೆ ಗೋಚರಿಸಿವೆ . ಕಾರಣವನ್ನು ಬೃಹಸ್ಪತಿಗಳು ಹೇಳಿದ್ದಾರೆ ; ಹಿಂದೊಮ್ಮೆ ಇಂದ್ರ ಮಾಡಿದ್ದ ಕುಚೋದ್ಯದೊಡನೆ . .....
ಅಮೃತ ರಕ್ಷಣೆಗಾಗಿ ಸರ್ವ ಸಿದ್ಧತೆಗಳನ್ನೂ ಮಾಡಿದ ಇಂದ್ರ . ಸಮಸ್ತ ಸೇನೆಯೊಡನೆ ಅಡ್ಡಗಟ್ಟಿದ ಗರುಡನ ದಾರಿಯಲ್ಲಿ . ಗೆದ್ದನೇ ಗರುಡ ? ಎಂತು ? .......
ಗರುಡನ ಪರಾಕ್ರಮವನ್ನು ಮೆಚ್ಚಿದ ವಿಷ್ಣು , ಗರುಡನಿಗೆ ವರ ಕೊಡುವೆನೆಂದ . ಗರುಡನೂ ಹೇಳಿದ ; " ವಿಷ್ಣೋ , ನೀನೇನಾದರೂ ವರ ಕೇಳಿಕೋ . " ವಿಷ್ಣು ಹೇಳಿದ ; " ನೀನು ನನ್ನ ಕೆಳಗಿರಬೇಕು ವಾಹನವಾಗಿ ! " ಗರುಡನೂ ಹೇಳಿದ " ನೀನು ನನ್ನ ಕೆಳಗಿರಬೇಕು " . ಇಬ್ಬರೂ ಒಬ್ಬರಮೇಲೊಬ್ಬರಿರಬೇಕೆಂದು ಕೇಳಿದಾಗ ಆ ಸಮಸ್ಯೆ ಬಗೆಹರಿದದ್ದು ಹೇಗೆ ?
ಮುಂದುವರಿದ ಗರುಡನೆದುರು ವಜ್ರಾಯುಧ ಹಿಡಿದು ನಿಂತಿದ್ದಾನೆ ಇಂದ್ರ ! ಪ್ರಯೋಗಿಸಿಯೂ ಬಿಟ್ಟ ! ಅದು ಬಂದು ಅಪ್ಪಳಿಸಿಯೂ ಬಿಟ್ಟಿತು !! ಏನಾಯ್ತು ಫಲಿತ ?
" ಸುಪರ್ಣ " ಎಂಬ ನೂತನ ನಾಮಕಾರಣವಾದದ್ದಕ್ಕೇನು ಕಾರಣ ?
ದರ್ಭೆಗಳನ್ನು " ಪವಿತ್ರ " ವೆಂದೂಕರೆಯುತ್ತಾರೆ . ಏಕೆ ?
ಆಸ್ತೀಕ ಹೇಳಿದ ಕಥೆಯನ್ನು ಕೇಳಿ ಸಂತುಷ್ಟನಾದ ರಾಜ , ಅವನನ್ನು ಸನ್ಮಾನಿಸಿ ಕಳಿಸಿದರೂ , ಲೆಕ್ಕವಿಲ್ಲದಷ್ಟು ಹಾವುಗಳ ಹನನ ಮಾಡಿದ್ದು ಅವನ ಮನಸ್ಸನ್ನು ಕೊರೆಯುತ್ತಿತ್ತು . ' ಸರ್ಪ ಮಾರಣ ಹೋಮಕ್ಕೆ ತಾನು ಕಾರಣನಾದೆನಲ್ಲಾ ; ಆ ಪಾಪದ ಮೊತ್ತವೇನು ಕಡಿಮೆಯೇ ? ' ಎಂದು ಚಿಂತಾಕ್ರಾಂತನಾಗಿದ್ದಾಗ , ಅದರ ನಿವಾರಣೆಗಾಗಿ ಬಂದದ್ದು ವೇದವ್ಯಾಸ ಮಹರ್ಷಿಗಳು ! ಯಾವುದೇ ದೋಷ ನಿವಾರಣೆಗಾಗಿ ವ್ಯಾಸ ಮಹರ್ಷಿಗಳು ಕೊಟ್ಟ ಸಲಹೆ ಏನು ?
......... ಈ ಎಲ್ಲ ವಿಷಯಗಳನ್ನೂ ಅರಿಯಲು ನೋಡಿ ಹತ್ತನೆಯ ಸಂಚಿಕೆಯನ್ನು .
----------------------
When Garuda observes the hardships his mother was undergoing, he determined to put an end to her slavery. He enquires with Kadru's sons, serpents about it whereby he gets to know that if he can get Amruta - the Nectar that came out of the "Churning of the ocean", then his mother will be freed.
So Garuda sets out on a mission to get Amruta from heaven. Since he would need extra strength to achieve this arduous task, he asks for guidance from his father, Rishi Kashyapa. Accordingly he sets out to capture an elephant and a huge tortoise. Holding them in each of his giant claws, he sits on a huge branch but it breaks, so he holds it in his beak since there are tiny Rishies doing penance by hanging upside down from that branch. Again with the help of his father, he disentangles himself and with the renewed energy gallops towards heaven.
Indra tries to prevent him from taking the Amruta by creating different obstacles in his path, but Garuda achieves his goal by surmounting all of them. Indra understands that it's better to make friends than oppose this mighty, all-powerful King of Birds.
Vishnu is also very happy to see Garuda's valor and congratulates him by bestowing a boon. In turn Garuda also asks Vishnu to ask for a boon. What are these two boons?
Does Garuda finally free his mother?
Get these answers in this episode and also listen to what all benefits you get by listening to the great epic, Mahabharata, as explained by Veda Vyasa to Janamejaya.
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಸೊಗಸಾದ ವ್ಯಾಖ್ಯಾನ. ನಿಮ್ಮಿಂದ ಮಹಾಭಾರತ ಕೇಳುತ್ತಿರುವ ನಾವೇ ಧನ್ಯ ಗುರುಗಳೇ ಧನ್ಯ.
ಗುರುಗಳೇ ಒಂದು ಸಣ್ಣ ಸಂದೇಹ , ಋಷಿಗಳು ಗರುಡನಿಗೆ ಪನ್ನಗ ಭೋಜನಾ: ಅನ್ನೋ ಮಾತು ಯಾಕೆ ಹೇಳಿದರು ? ಅಥವಾ ಗರುಡನಿಗೆ ಸರ್ಪಗಳೇ ಆಹಾರವಾಗುವುದಕ್ಕೆ ಏನಾದರು ನಿರ್ದಿಷ್ಟ ಕಾರಣವಿದ್ದರೆ ದಯವಿಟ್ಟು ತಿಳಿಸಿ.
ಗುರುವರ್ಯರಿಗೆ ಪಾದಾಭಿವಂದನೆಗಳು.. ತಮ್ಮ ಪ್ರವಚನಗಳ ಸ್ಫೂರ್ತಿ, ಪ್ರಭಾವಗಳಿಂದ ಸ್ವಲ್ಪ ಮಟ್ಟಿನ ಅಧ್ಯಯನ ನಡೆಸುತ್ತಿದ್ದೇನೆ. ಅದು ನಿರ್ವಿಘ್ನವಾಗಿ ಸಾಗಲೆಂದು ದಯಮಾಡಿ ಆಶೀರ್ವದಿಸಿ..🙏
ಅಧ್ಯಯನಿಗಳಿಗೆ ಖಂಡಿತಾ ಸರಸ್ವತಿಯ ಅನುಗ್ರಹವಿರುತ್ತದೆ . ವಿಛ್ಛಿತ್ತಿಯಿಲ್ಲದೇ ಅಭ್ಯಸಿಸಿ . ಶ್ರೀರಾಮರು ಅನುಗ್ರಹಿಸಲಿ .
❤❤❤
ಗುರುಗಳಿಗೆ ನಮಸ್ಕಾರ.
ಶ್ರೀ ಗುರುಭ್ಯೋ ನಮಃ,🙏🏻🙏🙏🙏🙏
🙏🙏🙏🙏🙏🙏
ಮಹಾಭಾರತದ ಕನ್ನಡ ಪುಸ್ತಕ ಬೇಕು. ಒಳ್ಳೆಯ ಅನುವಾದವಿರ ಬೇಕು ಗುರುಗಳೇ.
ದಯವಿಟ್ಟು ತ್ಯಾಗರಾಜನಗರದ ಭಾರತ ಪ್ರಕಾಶನದಲ್ಲಿ ವಿಚಾರಿಸಿ . ಅವರು ಬಹು ದೊಡ್ಡ ಕಾರ್ಯ ಮಾಡಿದ್ದಾರೆ . ನಿಸ್ವಾರ್ಥ ಸೇವೆ ಮಾಡಿದ್ದಾರೆ . ಜನರಿಗೆ ಮಹೋಪಕಾರ ಮಾಡಿದ್ದಾರೆ . ಅವರಿಂದಾಗಿ ಜನ ಸಾಮಾನ್ಯರೂ ಸುಲಭವಾಗಿ ಓದುವಂತಾಗಿದೆ . ಅದರ ಮೂಲ ಶಕ್ತಿ ಕೌಶಿಕರು . ಅವರಿಗೆ ಕರ್ನಾಟಕವೇ ಕೃತಙ್ಞರಾಗಿರಬೇಕು .
ಅನುವಾದ ಮಂಡಳಿಯ ಅಧ್ಯಕ್ಷರು ವಿಷ್ಣುಪಾದದಲ್ಲಿ ಪಾರ್ಷದರಂತಿರುವ ಶ್ರೀ ಶ್ರೀ ರಂಗಪ್ರಿಯ ಮಹಾಸ್ವಾಮಿಗಳು . ಮಹಾ ಶುದ್ಧರು . ಮಹಾ ಸಹೃದಯರು . ಮಹಾ ವಿರಕ್ತರು . ಹುಟ್ಟಾ ಬ್ರಮ್ಹಚಾರಿಗಳು . ಮಹಾ ಸಮತಾವಾದಿಗಳು . ಎಲ್ಲ ಬಗೆಯ ಶಿಷ್ಯರೂ ಅವರಲ್ಲಿದ್ದರು . ಮುಕ್ತ ಮನಸ್ಕರು . ಒಳಗೆ ಹೊರಗೆ ಬೇರೆ ಬೇರೆ ಮುಖವಾಡ ಇಲ್ಲದವರು . ನನಗೆ ಅವರ ಸಖ್ಯ ತುಂಬ ಹತ್ತಿರದಿಂದ ಇತ್ತು . ನಾನು ಅದ್ವೈತಿಯಾಗಿದ್ದೂ ಅವರನ್ನು ಅತ್ತ್ಯೆತ್ತರದಲ್ಲಿಟ್ಟು ಇಂದಿಗೂ ವಂದಿಸುವೆ . ಅದು ಕಾರಣ ಅವರ ನೇತೃತ್ವದಲ್ಲಿ ಬಂದ ಮಹಾಭಾರತದ ಅನುವಾದ ಶುದ್ಧವಾಗಿರುತ್ತದೆ . ಶುಭ್ರವಾಗಿರುತ್ತದೆ . ಒಂದೇ ಸಮಸ್ಯೆ ಎಂದರೆ ತುಂಬಾ ತುಂಬಾ ವಿವರಣೆ , ಪುನರುಕ್ತಿ . ಅದಕ್ಕೆ ಅವರನ್ನೇನೂ ಪ್ರಶ್ನಿಸುವಂತಿಲ್ಲ . ಅವರು ಕೇವಲ ಅನುವಾದಕರಷ್ಟೇ !!
Which book did you buy?
Nananthu ಭಾನುವರಕ್ಕಾಗಿ.ಕಾಯ್ತಾ ..ಈರುವೆ ಅತ್ಯದ್ಭುತವಾದ ನಿಮ್ಮ ನಿರೂಪಣೆ ಸವಿ ಸವಿತಾ ಬೇರೆ ಲೋಕಕ್ಕೆ ಹೋಧ.ಹಾಗೆ ಅನ್ನಿಸಿತು puujjare ನಾನು ಸದಾ ಚಿರಋಣಿ ನಿಮಗೆ
ನಿಮ್ಮ ಆಸಕ್ತಿಗಾಗಿ ವಂದನೆ .
PUJYA SRI GURUGALIGE BAKTIPURVAKA NAMASKARAGALU
ನಮಸ್ಕಾರ .
Gurugale 🙏🙏🙏
ನಮಸ್ಕಾರ .
ಗುರುಭ್ಯೋನಮಃ....ಗುರುಗಳೆ ತಮ್ಮ ಪ್ರವಚನ ಅತಿ ಸೊಗಸಾಗಿ ಮೂಡಿ ಬರುತ್ತಿದೆ. ದಯಮಾಡಿ ಅದನ್ನು ಒಂದು ಗಂಟೆ ಕಾಲ ವಿಸ್ತರಿಸಿ 🙏
ಈಗಿನ ೨೦-೨೫ ನಿಮಿಷಗಳನ್ನೇ ಅರ್ಧಕ್ಕಿನ್ನ ಹೆಚ್ಚು ಜನ ಪೂರ್ಣ ವೀಕ್ಷಿಸೊಲ್ಲ . ಇನ್ನು ಘಂಟೆಯ ಮೇಲೆ ??? ದೇವರೇ ಬಲ್ಲ .
@@pavagadaprakashrao373 ತಮ್ಮ ಉತ್ತರಕ್ಕೆ ಧನ್ಯವಾದಗಳು ಗುರುಗಳೇ🙏30ನಿಮಿಷಗಳು ಕಳೆಯುವುದೇ ತಿಳಿಯುವುದಿಲ್ಲ..
ಗುರು ಚರಣಕೆ ವಂದನೆ. ಗುರುಗಳೇ ದಯಮಾಡಿ ವಾರದಲ್ಲಿ ಎರಡು ಪ್ರವಚನ ನೀಡಿ ಎಂದು ನಿಮ್ಮಲ್ಲಿ ವೇನಂತಿಸುತ್ತೆ.
ಚಂದ್ರಶೇಖರ್ ,
ಈ ಬಗ್ಗೆ ಯೋಚಿಸುತ್ತಿದ್ದೇವೆ . ತಯಾರಿಸಲು ತುಂಬಾ ಕಾಲ ಬೇಕು . ಸಭೆಯಲ್ಲಿ ಉಪನ್ಯಾಸ ಕೊಟ್ಟಂತಲ್ಲ ಅದು . ಅದರ ಹಿಂದೆ-ಮುಂದೆ ಬಹಳಷ್ಟು ಕೆಲಸಗಳಿರುತ್ತವೆ . ಖರ್ಚೂ ತುಂಬಾ ಇರುತ್ತದೆ . ಹಲವು ಮಂದಿ ಶ್ರಮಿಸಬೇಕಾಗುತ್ತದೆ . ಒಮ್ಮೆ ಆರಂಭಿಸಿದರೆ ನಿಲ್ಲಿಸುವಂತಿಲ್ಲ . ನೋಡೋಣ . ಆಕ್ಷಣ ಬಂದಾತು !!
@@pavagadaprakashrao373 ಗುರುಗಳೇ, ನನ್ನ ಮತ್ತು ಅನೇಕ ಪ್ರವಚನ ಆಸಕ್ತರ, ಪ್ರಿಯ ಮನವಿಗೆ ನಿಮ್ಮ ಉತ್ತರ ಕಂಡೆ ಸಂತೋಷ ವಾಯಿತು. ನಿಮ್ಮಲ್ಲಿ ಮತ್ತೊಂದು ಮನವಿ, ದಯಮಾಡಿ ಪ್ರವಚನ ದ ಆರಂಭ ಅಥವ ಕೊನೆಯಲ್ಲಿ ಕಾರ್ಯಕ್ರಮ ಆಯೋಜಕರ ಅಥವ ಸೂಕ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ವಿವರ ನೀಡಿದರೆ ಇ ಪುಣ್ಯ ಕಾರ್ಯಕ್ಕೆ ಅಳಿಲು ಸೇವೆಗೆ ಮಾಡಲು ನಮಗೆ ಮತ್ತು ಭಗವತ್ ಆಸಕ್ತರಿಗೆ ಅವಕಾಶ ಕೊಟ್ಟಂತೆ ಆಗುತ್ತದೆ. ನಮ್ಮ ಉದ್ದೇಶ್ಯ ಇಷ್ಟೇ ಇದು ನಮ್ಮ ಕಾರ್ಯಕ್ರಮ, ಯಾವುದೇ ಅಡೆ ತಡೆ ಇಲ್ಲದಂತೆ ಸಾಗಬೇಕೆಂದು ನಮ್ಮ ಅಸೆ.
ಕೊನೆಯದಾಗಿ ನಿಮಗೆ ಮತ್ತು ಎಲ್ಲಾ ಆಯೋಜಕ ತಾಂತ್ರಿಕ ವರ್ಗದವರಿಗೂ ಅನಂತ ವಂದನೆಗಳು.
ಇಂತಿ,
ನಿಮ್ಮ ಪ್ರವಚನ ಭಕ್ತ.
ಚಂದ್ರಶೇಖರ್ ,
ನಿಮ್ಮ ಅಪ್ರಾರ್ಥಿತ ಸಹಾಯದ ಮನಸ್ಸಿಗೆ ಕೃತಙ್ಞ . ಸದ್ಯಕ್ಕೆ ಹಣ ಸಂಗ್ರಹಿಸುವ ಯೋಚನೆ ಇಲ್ಲ . ಕಾರ್ಯ ತಂಡ ಹೇಗೆ ಯೋಚಿಸುತ್ತಿದ್ದಾರೋ ನನಗೆ ಖಚಿತವಿಲ್ಲ . ಅಂತಹ ಯೋಜನೆ ಮಾಡಿದಾಗ ತಿಳಿಸುತ್ತಾರೆ . ಹೇಗೇ ಇರಲಿ ಶ್ರೀರಾಮರ ರಕ್ಷೆ ಇದ್ದರೆ ಖಂಡಿತ ಮಹಾಭಾರತದ ಉಪನ್ಯಾಸ ಮಾಲೆ ಕೊನೆ ಮುಟ್ಟುತ್ತದೆ . ನಮಸ್ಕಾರ .
@@pavagadaprakashrao373 ನಿಮ್ಮ ಉತ್ತರಕ್ಕೆ ಧನ್ಯವಾದಗಳು ಗುರುಗಳೇ. 🙏🙏.
ಜೈ ಶ್ರೀರಾಮ
Hare srinivasa 🙏🙏🙌
🙏🙏🙏🙏🙏🙏🙏
🌹🌹🌹🌹🌹🌹🌹🙏🙏🙏🙏🙏🙏
ಅಬ್ಬಾ..! ಇಂಥ.ಅಧ್ಭುತ ವಧ ನಿಮ್ಮ ಪ್ರವಚನ.ನಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು.hoggutte ಗುರುಗಳೇ
ಹೌದೇ ! ಅಬ್ಬಾ ! ಎಂತಹ ಆಸಕ್ತರಿದ್ದೀರಿ ನೀವು !
ಧನ್ಯ ವಾದಗಳು ಗುರುಗಳೇ
gurugalige namaskaragalu
ನಮಸ್ಕಾರ .
We are waiting for next sunday guruji 🙏🙏🙏🙏🙏🙏
I am happy to read such comments . Thank you for your interest towards the epic . Actually now the Mahabharata starts . Till now is the introduction .
ನಮಸ್ಕಾರ! ಕೊನೆಗೆ ನೀವು ನಿಮ್ಮ ಚಾನಲ್ ಅನ್ನು ಪ್ರಾರಂಭಿಸಿದ್ದೀರಿ. ತುಂಬಾ ಸಂತೋಷ. ನಾನು ನಿಮ್ಮ ಎಲ್ಲಾ ಪ್ರವಚನಗಳನ್ನು ಹೊಂದಿದ್ದೇನೆ ಮತ್ತು ಪ್ರತಿದಿನ ಕೇಳುತ್ತೇನೆ.
ನಿಮ್ಮ ಚಂದಾದಾರ
ಸರೀ ಭಟ್ಟರೇ . ಈ ಹಿಂದೇ ಹೀಗೆ ಬರೆದಿದ್ದರೆ ಚೆನ್ನಿತ್ತು . ಹಾಗಾಗಿದ್ದಿದ್ದರೆ , ನಮ್ಮ ವಾಹಿನಿ ಆರಂಭವಾಗಿ ವರ್ಷಗಳೇ ಆಗಿರುತ್ತಿತ್ತು . ನೀವು ಅರಿತವರು ; ಅನುಭವಿಗಳು , ಮೇಲಾಗಿ ಭಟ್ಠರು !! ನೀವು ಪ್ರಚಾರಕ್ಕೆ ಬೆಲೆ ಕೊಟ್ಟಿರಾಗಲೀ , ಅದಕ್ಕೊಂದು ವಿಧ್ಯುಕ್ತ ರೂಪ ಕೊಡಲಿಲ್ಲ . .
ಒಮ್ಮೆಯಾದರೂ ನನ್ನೊಡನೆ ಮಾತನಾಡಬೇಕೆಂದೆನಿಸಲಿಲ್ಲ ನಿಮಗೆ !!!!
@@pavagadaprakashrao373 ನಮಸ್ಕಾರ ಗುರುಜಿ.
ಉತ್ತರಿಸಿದಕ್ಕಾಗಿ ಧನ್ಯವಾದಗಳು.
2015 ನನ್ನ ತಂದೆ ನನಗೆ ನಿಮ್ಮ ಡಿವಿಡಿ ಮತ್ತು ವಿಸಿಡಿ ವೀಕ್ಷಿಸಲು ನೀಡಿದರು. ಅಂದಿನಿಂದ ನಾನು ನಿಮ್ಮನ್ನು ಅನುಸರಿಸುತ್ತಿದ್ದೇನೆ, ನಿಮ್ಮ ಎಲ್ಲಾ ಪ್ರವಚನಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮ ರಾಮಾಯಣ ಮತ್ತು ಮಹಾಭಾರತ ಪ್ರವಚನವು ಅತ್ಯುತ್ತಮವಾದುದು ಮತ್ತು ಅವುಗಳನ್ನು ಕೇಳುತ್ತಲೇ ಇರಿ.
"ತಪಹ್ ಸ್ವಾಧ್ಯಾಯ ನಿರತಂ ತಪಸ್ವಿ ವಾಗ್ವಿಡಂ" Tapah svadhyaya nirataam tapasvi vagvidam
ಕೊನೆಯದಾಗಿ, ನಿಮ್ಮಂತಹ ದೊಡ್ಡ ವ್ಯಕ್ತಿಯನ್ನು ಭೇಟಿ ಮಾಡುವ ಜ್ಞಾನ ಮತ್ತು ಸಾಮರ್ಥ್ಯ ನನಗೆ ಇಲ್ಲ. ನನಗೆ ಇನ್ನೂ ಕಲಿಯಲು ಸಾಕಷ್ಟು ಇದೆ, ಗುರುಜಿ. ನಾನು ವಿದೇಶದಲ್ಲಿ ವಾಸಿಸುತ್ತಿದ್ದೇನೆ, ಮುಂದಿನ ಬಾರಿ ನಾನು ಬಂದಾಗ ಖಂಡಿತವಾಗಿಯೂ ನಿಮ್ಮ ಆಶೀರ್ವಾದ ಪಡೆಯಲು ಬರುತ್ತೇನೆ. ವಂದನೆಗಳು
🙏
🙏🙏🙏🙏🙏🙏🙏
ನಮಸ್ಕಾರ
ಶ್ರೀ ಶ್ರೀ ಶ್ರೀ ಪಾವಗಡ ಪ್ರಕಾಶ್ ರಾವ್ ಆಚಾರ್ಯ ರವರಿಗೆ ನನ್ನ ವಿನಮ್ರತೆಗಳು ನೀವು ಮಾಡುವ ಉಪನ್ಯಾಸ ಗಳು ವಿಚಾರ ಗಳು ಜೇನು ಸವಿದಷ್ಟೆ ಆನಂದ ವಾಗುತ್ತೆ ಈ ನಿಮ್ಮ ವಿಚಾರ ಧಾರೆಗಳು ಮಹಾ ಕಾವ್ಯ ಗ್ರಂಥ ಗಳು ಸಂಸ್ಕೃತಿ ಸಂಸ್ಕಕಾರ ನಮ್ಮ ಸನಾತನ ಧರ್ಮದ ಬಗ್ಗೆ ಇನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಲಿ ನಮ್ಮ ಬಯಕೆ 🙏🙏🙏
ಮಾದೇಗೌಡರೆ , ನಿಮ್ಮ ಒಳ್ಳೆಯ ಮಾತುಗಳಿಗೆ ಕೃತಙ್ಞನಾಗಿದ್ದೇನೆ . ನಿಮಗೆ ಶುಭವಾಗಲಿ .
@@pavagadaprakashrao373 ,ಪೂಜ್ಯ ಆಚಾರ್ಯ ರಿಗೆ ನನ್ನ ಅನಂತ ವಂದನೆಗಳು, 🙏🙏🙏
🙏🏻🙏🏻🙏🏻🙏🏻🙏🏻🙏🏻🙏🏻👌👌
ನಮಸ್ಕಾರ ಅಮ್ಮಾ .
ಗುರುಗಳೆ ಈ "ಗರುಡ ವಿಜಯ" ನಡೆದದ್ದು ಮಹಾಭಾರತದ ಕಾಲಘಟ್ಟದಲ್ಲೋ ಅಥವಾ ವೇದದ ಕಾಲದಲ್ಲಿಯೋ? ದಯವಿಟ್ಟು ತಿಳಿಸಿಕೊಡಿ.
ಮಹಾಭಾರತದ ಕಥೆ ಈಗ ಶುರುವಾಗುತ್ತಿದೆ . ಜನಮೇಜಯನ ಯಙ್ಞಕ್ಕೆ ಪೂರ್ವದಲ್ಲಿ ಎಷ್ಟೋ ಸಹಸ್ರ ವರ್ಷಗಳ ಹಿಂದೆ ನಡೆದದ್ದು ಗರುಡ ವಿಜಯ . ಇದೀಗ ಪ್ರಾಸಂಗಿಕವಾಗಿ ಅದರ ನಿರೂಪಣೆ . ಅಷ್ಟೇ .
ಮಾನ್ಯ ಜಯರಾಮ್ ,
ವೇದಗಳ ಕಾಲ ಸಂಪ್ರದಾಯದ ಪ್ರಕಾರ ಬೇರೆ . ಐತಿಹಾಸಿಕವಾಗಿ ಲೆಕ್ಕ ಹಾಕುವವರ ನಿರ್ಣಯ ಬೇರೆ . ಅದು ಮಹಾಭಾರತಕ್ಕೂ ಅನ್ವಯಿಸುತ್ತದೆ . ಹೀಗಾಗಿ ಇದಮಿತ್ಥಂ ಎಂದು ಹೇಳುವಂತಿಲ್ಲ . ಹೇಗೇ ಇದ್ದರೂ ಮಹಾಭಾರತದ ಕಾಲಕ್ಕಿನ್ನಾ ಬಹು ಹಿಂದೇ ಗರುಡ ವಿಷಯ ನಡೆದಿರಬೇಕು .
ಧನ್ಯವಾದಗಳು ಗುರುಗಳೆ
Nanage ಸರಿ ಟೈಪ್ ಮಾಡಲು barrollo ತಪ್ಪಿದ್ದರೆ ಕ್ಷಮಿಸಿ
ಅಂಬಿಕಾ ಅವರಿಗೆ ನಮಸ್ಕಾರ .
ಈ ಒಂದು ಸಂಚಿಕೆಯಲ್ಲೇ ಮೂರು ಬಾರಿ ಪ್ರತಿಕ್ರಿಯಿಸಿದ್ದೀರಿ . ನೀವು ನನ್ನೆಲ್ಲ ಉಪನ್ಯಾಸಗಳನ್ನೂ ನೋಡುತ್ತಿರುವುದು ಸಂತೋಷ . ಕೃತಙ್ಞ . ತುಂಬಾ ಹೊಗಳುತ್ತಿದ್ದೀರಿ . ಜಾಸ್ತಿ ಎನ್ನಿಸುವುದಿಲ್ಲವೆ ?
ಚೆನ್ನಾಗಿಯೇ ಬೆರಳಚ್ಚಿಸುತ್ತೀರಿ . ಸಂಕೋಚ ಬೇಡ .
ತತ್ವಶಂಕರವನ್ನೂ ನೋಡುತ್ತಿದ್ದೀರಾ ?
ನನ್ನ ಇತರೇ ಉಪನ್ಯಾಸಗಳನ್ನು ನೋಡಿದ್ದೀರಾ ? ಅಥವಾ ನನ್ನ ಉಪನ್ಯಾಸಗಳಿಗೆ ಬಂದಿದ್ದೀರಾ ?
🙏