ಇಷ್ಟಲಿಂಗ ಶಿವಯೋಗವೇ ಸತ್ಯ..! | Ishtalinga Shivayoga.

Поделиться
HTML-код
  • Опубликовано: 26 окт 2024
  • ಇಷ್ಟಲಿಂಗ ಶಿವಯೋಗವೇ ಸತ್ಯ...
    ಕಳೆದ ನಾಲ್ಕೈದು ವರ್ಷಗಳಿಂದ ಇಷ್ಟಲಿಂಗ ಶಿವಯೋಗ ಸಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಶಿವಾನುಭವವನ್ನು ಅನುಭವಿಸುತ್ತಿರುವ ಶಿವಶರಣ ಶ್ರೀ ಮಂಜುನಾಥ ಸುಳ್ಳೊಳ್ಳಿ. ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಪ್ರಸಾರ ಇಲಾಖೆ, ಧಾರವಾಡ. ಇವರ ಅಪೇಕ್ಷೆಯ ಮೇರೆಗೆ ನಾಲ್ಕು ಪಟ್ಟು ಹೆಚ್ಚು ಪದಾರ್ಥಗಳನ್ನು ಬಳಸಿ ವೈಜ್ಞಾನಿಕವಾಗಿ ತಯಾರಿಸಲಾದಂತಹ ಎರಡು ವಿಶೇಷ ಇಷ್ಟಲಿಂಗಗಳನ್ನ ನೀಡಲಾಯಿತು ಹಾಗೂ ಅವುಗಳ ಪ್ರಾತ್ಯಕ್ಷಿಕೆ ನಡೆಸಿ ಚರ್ಚಿಸಲಾಯಿತು.
    ಇಷ್ಟಲಿಂಗ ಶಿವಯೋಗದ ಬಗ್ಗೆ ಅಪಾರವಾದ ಜ್ಞಾನಸಂಪತ್ತನ್ನು ಹೊಂದಿರುವ ಈ ಶಿವಶರಣರು "ಬರಿ ಇಷ್ಟಲಿಂಗ ಪೂಜೆಯಿಂದ ಶಿವಾನುಭವ ಸಾಧ್ಯವಿಲ್ಲ ಸಾಧನೆ ಮಾಡಬೇಕು, ಪ್ರತಿಯೊಬ್ಬರು ಶಿವಯೋಗ ಮಾಡಬೇಕು ಅಂದಾಗ ಮಾತ್ರ ಶಿವಾನುಭವ, ಶಿವಾನಂದ, ಪರಮಾನಂದ ಲಭಿಸುವುದು. ಶಿವಯೋಗ ಒಂದೇ ಸತ್ಯ". ಎಂದು ಹೇಳಿದರು.
    12ನೇ ಶತಮಾನದಲ್ಲಿ ಆದ ಶರಣ ಕ್ರಾಂತಿಯನ್ನ ಸ್ಮರಿಸುತ್ತಾ "ಪ್ರತಿಯೊಬ್ಬರೂ ಇಷ್ಟಲಿಂಗವನ್ನು ಧರಿಸಬೇಕು, ಶಿವಯೋಗ ಸಾಧನೆ ಮಾಡಬೇಕು, ಸಾಧನೆ ಒಂದೇ ಸತ್ಯ. ದೃಷ್ಟಿ ಯೋಗ ಮಾಡುವುದರ ಮೂಲಕ ಆತ್ಮದ ಅರಿವನ್ನ ಹೊಂದಬೇಕು, ಇದೊಂದು ತಂತ್ರಜ್ಞಾನವಾಗಿದೆ" ಎಂದು ಹೇಳುವ ಮೂಲಕ ಅನೇಕ ಜನರ ಮನ ಪರಿವರ್ತನೆ ಮಾಡಿ ಇಷ್ಟಲಿಂಗ ಶಿವಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.
    ಸರಕಾರಿ ನೌಕರಿಯನ್ನು ಮಾಡುತ್ತಾ ಬಿಡುವಿನ ವೇಳೆಯಲ್ಲಿ ಶರಣ ಸಂಸ್ಕೃತಿಯನ್ನು ಪಸರಿಸುವ ಶಿವ ಮೆಚ್ಚುವಂತಹ ಮಹತ್ವದ ಕಾರ್ಯವನ್ನು ಮಾಡುತ್ತಿರುವ ಈ ಶಿವಶರಣರಿಗೆ ಶುಭವಾಗಲಿ ಶಿವನ ಕೃಪೆ ಸದಾ ಹೀಗೆ ಇವರ ಮೇಲಿರಲಿ ಎಂದು ಪ್ರಾರ್ಥಿಸುತ್ತೇವೆ.
    #BenalmathKantiworks
    #IshtalingaShivayoga
    #IshtalingaManufacturer
    #Ishtalinga
    www.ishtalinga.in
    www.tuppadakantilinga.com
    tuppadakantili...

Комментарии • 14