Tulu-Vaira

Поделиться
HTML-код
  • Опубликовано: 14 дек 2020
  • ಮರೆಯಾಗಿರುವ ತುಳುನಾಡಿನ ಹಾಡುಗಳಲ್ಲಿ ಇದೂ ಒಂದು .
    ಆಂಟೋನಿನ ಇಲ್ಲ ಬರಿಟ್ ಸಾಂತಣಿದ ಮರ ಇದು ನಾವು ಚಿಕ್ಕಂದಿನಲ್ಲಿ ಕೇಳಿಕೊಂಡು ಬಂದ ಕ್ರಿಶ್ಚಿಯನ್ ಸ್ನೇಹಿತರ ಹಾಡು . ಕೊಂಕಣಿ ಮತ್ತು ತುಳು ಭಾಷೆಯನ್ನು ಸೇರಿಸಿಕೊಂಡು ಭಾಷಾ ಭಾವೈಕ್ಯ ಮೆರೆಯುವ ಇಂತಹ ಸ್ವಾರಸ್ಯ ಹಾಸ್ಯ ಮಿಶ್ರಿತ ಹಾಡುಗಳನ್ನು ಪ್ರಾದೇಶಿಕವಾಗಿ ಭಿನ್ನ ಭಿನ್ನವಾಗಿ ಹಾಡಿಕೊಂಡು ಬಂದಿರುತ್ತಾರೆ. ಬೈಲಾ ರೂಪದಲ್ಲಿರುವ ಈ ರಾಗಗಳನ್ನು ಒಟ್ಟಾಗಿ ಕೂತು ಲೋಕಾಭಿರಾಮವಾಗಿ ಹಾಡಿ ಮುದ ಪಡೆಯುತ್ತಿದ್ದ ಕಾಲವೀಗ ಅನಾಮತ್ತಾಗಿ ಮೊಬೈಲ್ ಒಳಗೆ ಸೇರಿಕೊಂಡಿದೆ. ಡಿಜೆ ಹಾಡುಗಳು ಸಂಗೀತ ಸಾಹಿತ್ಯ ಎಲ್ಲಾ ನುಂಗಿ ಜನರೇಟರ್ ಶಬ್ದದಂತಾಗಿದೆ.
    ಇಂತಹುದೇ ಹಾಡುಗಳು ಕೋರಹ ಜನಾಂಗದಲ್ಲಿಯೂ ಇದ್ದು ಅವುಗಳನ್ನು ''ವೈರಾ'' ಗಳೆಂದು ಕರೆಯುತ್ತಿದ್ದರು . ಯಾವುದೇ ಶಾಸ್ತ್ರ ಬದ್ಧ ನೇಯ್ಗೆ ಇಲ್ಲದಿದ್ದರೂ ಇವು ತಾಳಕ್ಕೆ ಸರಿಯಾಗಿದ್ದು ಡೋಲಿನ ಬಡಿತಕ್ಕೆ ಹೊಂದಿಕೆಯಾಗಿ ಅಂದಿನ ಸಾಮಾಜಿಕ ನಡೆಯನ್ನು ನಿರೂಪಿಸುತ್ತಿದ್ದವು . ಅಂತಹ ಒಂದು ವೈರಾ ಹೀಗಿದೆ
    ನಪ್ಪೆ ಬೆಂದಿನಾಂಡ ಖಾಲಿ ಕೂರು ಚೆಲಿಲಾ
    ನಯ್ಯೆ ಬೆಂದಿನಾಂಡ ಉಂಡು ಆರ ಅಂಬುಲಾ
    ಹೇ ಹೇ ಹೇ .... ಹೇ ಹೇ ಹೇ
    ಲೇ ಲೇ ಲೇ ಲೇ ಲೇ ಲೇ
    ತಾಯಿ (ನಪ್ಪೆ )ದುಡಿದರೆ ಬರಿಯ ಗಂಜಿ ತೆಲಿ ತಂದೆ( ನಯ್ಯೇ ) ಏನಾದರೂ ದುಡಿದರೆ ಮಾಂಸದಡುಗೆ (ಆರ ಅಂಬುಲಾ ) ಎನ್ನುವುದು ಇದರ ಸಾರ . ಹಾಡಿನಲ್ಲಿಯೇ ತಮ್ಮ ಸ್ಥಿತಿಗತಿ ತಿಳಿಸುತ್ತಾ ಕಷ್ಟದ ನಡುವೆಯೂ ಕುಣಿಯುತ್ತಾ ಸಂತೋಷ ಪಡುವ ಆ ಮನಸ್ಸುಗಳು ಇನ್ನು ಸಿಗುವುದಾದರೂ ಮರೀಚಿಕೆ .
    ಇದನ್ನೆಲ್ಲಾ ನಿಮ್ಮಲ್ಲಿ ಹಂಚಿಕೊಳ್ಳಲು ಕಾರಣವಿದೆ . ಐಲೇಸಾ- The voice of ocean ಇಂತಹ ತುಳು ಸಾಂಸ್ಕೃತಿಕ ಹಿನ್ನಲೆಯುಳ್ಳ ಹಾಡುಗಳನ್ನು ಸಂಗ್ರಹಿಸಲು ಮತ್ತು ಪುನರ್ನಿರ್ಮಿಸಲು ಮನ ಮಾಡಿದೆ . ಯಾರಲ್ಲಾದರೂ ಇಂತಹ ಹಾಡುಗಳ ಸಂಗ್ರಹ ಅಥವಾ ಸಾಹಿತ್ಯ ಇದ್ದಲ್ಲಿ ದಯವಿಟ್ಟು ಐಲೇಸಾ ವೇದಿಕೆಯಲ್ಲಿ ತಿಳಿಸುವಿರಂತಾಗಿ .
    ಪ್ರೀತಿಯಿಂದ
    ಶಾಂತಾರಾಮ್ ಶೆಟ್ಟಿ
    --------------------------
  • РазвлеченияРазвлечения

Комментарии •