Explore ಹಂಪಿ with this song | ಈ ದಾಸರ ಪದದೊಂದಿಗೆ ಹಂಪಿಯನ್ನು ನೋಡುತ್ತಾ ಹಾಡು ಕಲಿಯಿರಿ

Поделиться
HTML-код
  • Опубликовано: 9 фев 2025
  • Explore ಹಂಪಿ with this song | ಈ ದಾಸರ ಪದದೊಂದಿಗೆ ಹಂಪಿಯನ್ನು ನೋಡುತ್ತಾ ಹಾಡು ಕಲಿಯಿರಿ
    ತೋಳು ತೋಳು ತೋಳು ರಂಗ
    ( ರಾಗ ಮುಖಾರಿ ಅಟ ತಾಳ)
    ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
    ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||
    ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ
    ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ
    ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ
    ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||
    ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ
    ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ
    ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||
    #hampi
    #tholutholuranga
    #dasarapadagalu
    #bhaktigeethekannada
    #kannadabhaktigeethegalu

Комментарии •