Nee Hinga Nodabyada Lyrical Video Song | C Ashwath | Kannada Folk Songs || Kannada Bhavageethegalu

Поделиться
HTML-код
  • Опубликовано: 31 янв 2025

Комментарии • 530

  • @nagaraju.pnagaraju.p1498
    @nagaraju.pnagaraju.p1498 Год назад +24

    ಮತ್ತೆ ಬೇಂದ್ರೆ ಅವರು ಕನ್ನಡ ನಾಡಲ್ಲಿ ಹುಟ್ಟಿಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏

  • @hanumantharao7543
    @hanumantharao7543 Год назад +24

    ಎರಡೇ ದಿನಕ್ಕೆ 50 ಕಿಂತ ಹೆಚ್ಚು ಬಾರಿ ನೋಡಿದವ್ರು ಲೈಕ್ ಮಾಡಿ 😭😭😭

  • @gopala.c1204
    @gopala.c1204 4 года назад +66

    ನಿಮ್ಮಂತ ವರಕವಿಯನ್ನು ಪಡೆದ ಕರ್ನಾಟಕದವರು ನಾವೇ ಧನ್ಯರು🌹🌼

  • @trsureshtrs1650
    @trsureshtrs1650 3 года назад +30

    ನನಗೆ ಈ ಹಾಡು ಕೇಳಿದರೆ... ಕಣ್ಣಿನಿಂದ ನೀರು ಜಾರುತ್ತೆ... ಅಂತಹ ಅದ್ಭುತವಾದ ಸಾಹಿತ್ಯ... ನಾವೇ ಪುಣ್ಯವಂತರು...

  • @gaibusabyadahalli6545
    @gaibusabyadahalli6545 Год назад +6

    ಬದುಕಿನಲ್ಲಿ ತುಂಬಾ ಕಷ್ಟ ಪಟ್ಟ ಹೃದಯ ಇದು ನಮ್ಮವರೇ ಇವರನ್ನೂ ದೂರ ಮಾಡಿದರು ಜೈಲು ವಾಸ ಅನುಭವಿಸುತ್ತಿದ್ದ 💔

  • @vishalgoudar9172
    @vishalgoudar9172 3 года назад +27

    ಬದುಕಿನುದ್ದಕ್ಕೂ ಸಾವುಗಳನ್ನೇ ಕಂಡ ಕವಿ ನಮ್ಮ ಬೇಂದ್ರೆ ಅಜ್ಜ..

  • @deepu6851
    @deepu6851 2 года назад +168

    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಿದರ ನನ್ನ
    ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ಸಂಸಾರ ಸಾಗರದಾಗ
    ಲೆಕ್ಕವಿರದಷ್ಟು ದುಃಖದ ಬಂಡಿ
    ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ
    ಎಲ್ಲಿ ಆಚೆಯ ದಂಡಿ
    ಸಂಸಾರ ಸಾಗರದಾಗ
    ಲೆಕ್ಕವಿರದಷ್ಟು ದುಃಖದ ಬಂಡಿ
    ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ
    ಎಲ್ಲಿ ಆಚೆಯ ದಂಡಿ
    ಮಲಗಿರುವ ಕೂಸು ಮಲಗಿರಲಿ ಅಲ್ಲಿ
    ಮುಂದಿನದು ದೇವರ ಚಿತ್ತ
    ನಾ ತಡೀಲಾರೆ ಅದು
    ಯಾಕ ನೋಡತೀ ಮತ್ತ ಮತ್ತ ಇತ್ತ
    ತಂಬಲ ಹಾಕದ ತುಂಬ ಕೆಂಪು
    ಗಿಣಿ ಗಡಕ ಹಣ್ಣಿನ ಹಾಂಗ
    ಇದ್ದಂಥ ತುಟಿಯ ಬಣ್ಣೆತ್ತ ಹಾರಿತು
    ಯಾವ ಗಾಳಿಗೆ ಹಿಂಗ
    ತಂಬಲ ಹಾಕದ ತುಂಬ ಕೆಂಪು
    ಗಿಣಿ ಗಡಕ ಹಣ್ಣಿನ ಹಾಂಗ
    ಇದ್ದಂಥ ತುಟಿಯ ಬಣ್ಣೆತ್ತ ಹಾರಿತು
    ಯಾವ ಗಾಳಿಗೆ ಹಿಂಗ
    ಈ ಗದ್ದ ಗಲ್ಲ ಹಣಿ ಕಣ್ಣುಕಂಡು
    ಮಾರೀಗೆ ಮಾರಿಯ ರೀತಿ
    ಸಾವನ ತನ್ನ ಕೈ ಸವರಿತಲ್ಲಿ
    ಬಂತೆನಗ ಇಲ್ಲದ ಭೀತಿ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ಇಬ್ಬನಿ ತೊಳೆದರೂ ಹಾಲು ಮೆತ್ತಿದ
    ಕವಳಿಕಂಟಿಯ ಹಣ್ಣು
    ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ
    ಹೇಳು ನಿನ್ನವೇನ ಈ ಕಣ್ಣು
    ಇಬ್ಬನಿ ತೊಳೆದರೂ ಹಾಲು ಮೆತ್ತಿದ
    ಕವಳಿಕಂಟಿಯ ಹಣ್ಣು
    ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ
    ಹೇಳು ನಿನ್ನವೇನ ಈ ಕಣ್ಣು
    ದಿಗಿಲಾಗಿ ಅನ್ನತದ ಜೀವ ನಿನ್ನ
    ಕಣ್ಣಾರೆ ಕಂಡು ಒಮ್ಮಿಗಿಲ
    ಹುಣ್ಣವೀ ಚಂದಿರನ ಹೆಣ ಬಂತೊ
    ಮುಗಿಲಾಗ ತೇಲತ ಹಗಲ
    ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು
    ನಡ ನಡಕ ಹುಚ್ಚನಗಿ ಯಾಕ
    ಹನಿ ಒಡೆಯಲಿಕ್ಕೆ ಬಂದಂಥ ಮೋಡ
    ತಡದಾಂಗ ಗಾಳಿಯ ನೆವಕ
    ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು
    ನಡ ನಡಕ ಹುಚ್ಚನಗಿ ಯಾಕ
    ಹನಿ ಒಡೆಯಲಿಕ್ಕೆ ಬಂದಂಥ ಮೋಡ
    ತಡದಾಂಗ ಗಾಳಿಯ ನೆವಕ
    ಅತ್ತಾರ ಅತ್ತುಬಿಡು ಹೊನಲು ಬರಲಿ
    ನಕ್ಯಾಕ ಮರಸತೀ ದುಃಖ
    ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ
    ತುಟಿಕಚ್ಚಿ ಹಿಡಿಯದಿರು ಬಿಕ್ಕ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಿದರ ನನ್ನ
    ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

  • @manojr8099
    @manojr8099 2 года назад +121

    2023ರಲ್ಲಿ ಸಹ ಈ ಅದ್ಭುತವಾದ ಸಂಗೀತವನ್ನು ಕೆಳುತಿರುವಾವರು ಒಂದು like ಕೊಡಬೇಕ್ಕಾಗಿ ವಿನಂತಿ 🥰

  • @ಮಹೇಂದ್ರಶೈವಾಸ್
    @ಮಹೇಂದ್ರಶೈವಾಸ್ 3 года назад +32

    ನನ್ ಈ ಗೀತೆನ ಹೆಚ್ಚುಕಡಿಮೆ 14ವರ್ಷದಿಂದ ಕೇಳ್ತಾ ಬಂದಿದೀನಿ... ಈ ಸಾಂಗ್ ಪೂರ್ತಿ ಹೇಳ್ತೀನಿ..... ಬಹಳ ಅಂದ್ರೆ ಬಹಳ ಇಷ್ಟ....
    ❤️❤️❤️❤️ಫೇವರ್ ಭಾವಗೀತೆ 👏👏👏
    ಅಶ್ವಥ್ ಅವ್ರ ವಾಯ್ಸ್ 👏👏👏

  • @raghukarnam8850
    @raghukarnam8850 3 месяца назад +1

    ಅಶ್ವಥ್ ಸರ್, ನೀವು ಗ್ರೇಟ್ ಆದ್ರೆ ಇ ಹಾಡು ಒರಿಜಿನಲ್ ಹಾಡಿದವರು 👌... ನಿಮ್ಮ ಮೇಲೆ ತುಂಬಾ ಗೌರವಾ ಇದೆ ಆದ್ರೆ......

  • @shivagowda502
    @shivagowda502 6 лет назад +52

    ಬೇಂದ್ರೆ ಕನ್ನಡ ಸಾಹಿತ್ಯದ ಮಹಾನ್ ಸಾಧಕರು🙏🙏🙏🙏🙏🙏🙏🙏

  • @somashekar3168
    @somashekar3168 11 месяцев назад +4

    ಬೇಂದ್ರೆ ಅಜ್ಜನ ಸಾಲುಗಳು... ಕೇಳ್ತಾ ಕೇಳ್ತಾ ಕೇಳ್ತಾನೆ ಇದ್ರೆ ಸಾಟಿ ಇಲ್ಲದ ಸಾಲುಗಳು.... ಎಂತಹ ನೋವಿನಲ್ಲೂ ಅದ್ಭುತ ಸಾಲುಗಳನ್ನು ಬರೆದಿದ್ದಾರೆ... ಈ ಸಾಲುಗಳ ಶಕ್ತಿನೇ ಹಾಗೆ...

  • @hassansudihassan6591
    @hassansudihassan6591 4 года назад +29

    ಬೆಂದ್ರೆ ಅಜ್ಜನ ಬದುಕಿ ದೃಷ್ಯ ಅದ್ಬುತವಾದ ಹಾಡು. ಮೈ ಜುಮ್ ಎನಿಸುತ್ತದೆ. 🙏🙏🙏

  • @shivashankara9830
    @shivashankara9830 6 лет назад +58

    ವರಕವಿ ನಿಜವಾಗ್ಲೂ ಅದ್ಭುತ ಜ್ಞಾನ ಪರ್ವತ ...ದ ರಾ ಬೇಂದ್ರೇ

  • @sunilkumars79
    @sunilkumars79 Год назад +4

    ದ. ರಾ. ಬೇಂದ್ರೆ ರವರ ಸಾಹಿತ್ಯ,,, C ಅಶ್ವಥ್ ರವರ ಧ್ವನಿ ನಮ್ಮನ ಒಂದು ಕ್ಷಣ ಮೈ ಮರೆಸುತ್ತೆ

  • @proudindian6941
    @proudindian6941 5 лет назад +86

    ವರ ಕವಿ ನಿಜವಾಗಲೂ ಕನ್ನಡ ನಾಡಿಗೇ ದೇವರು ಕೊಟ್ಟ ವರ .

  • @kariyadivakar8280
    @kariyadivakar8280 16 дней назад +1

    ಒಂದೊಂದು ಪದಗಳು ಎದೆಗೆ ಬಡಿತ ಇದೆ ❤

  • @basavarajhd6728
    @basavarajhd6728 4 года назад +8

    ಬೇಂದ್ರೆ ಅವರ ದುಃಖದ ಸನ್ನಿವೇಶ ಯೆಂತ ಅರ್ಥ ಪೂರ್ಣ 🙏🙏🙏

  • @anilsonu6005
    @anilsonu6005 6 лет назад +16

    ಈ ಗೀತೆಯ ಮೊದಲೆರಡು ಸಾಲು ಕೇಳಿ ಹುಡುಗ ತನ್ನ ಹುಡುಗಿಗೆ ಹೇಳೂ ಗೀತೆ ಅನೊ ಆಗಿದೆ. ಆದರೆ ತನ್ನ ಮನೆಲಿ ಸತಿರೋ ಮಗು ಮುಖ ಹೆಂಡತಿ ನೋಡಿ ಮತ್ತೆ ಗಂಡನ ಮುಖ ನೋಡುವಾಗ ಈ ಗೀತೆ ಹುಟ್ಟಿರೇದು

  • @ManjunathBk-jk9sk
    @ManjunathBk-jk9sk 5 месяцев назад +4

    ಈ ಪದ್ಯ ೧೦೦ ರಷ್ಟು ಅರ್ಥ ಆಗಬೇಕಂದ್ರೆ. ಮದುವೆ ಹಾಗಿ ಮಕ್ಕಳು ಹಾಗಬೇಕು ಮತ್ತೆ ನಿಷ್ಠಾವಂತ ಸಂಸಾರಸ್ತಾ ಆಗಿರ್ಬೇಕು.💛❤️🙏

  • @sandeeppatilsquantumclasse3221
    @sandeeppatilsquantumclasse3221 Год назад +6

    No words to express.....so emotional song.... very nice...

  • @brahluaagura9995
    @brahluaagura9995 5 лет назад +8

    Nam kannadakke intha kavigalu sikkiddu nam punya entha sahitya idu yava bhasheyallu sigalaradu hats of c aseath and dr bendre

  • @manjuks2860
    @manjuks2860 3 года назад +4

    ಅಜ್ಜ❤ ನಿಮ್ಮ ಈ ಅದ್ಭುತ ಸಾಹಿತ್ಯಕ್ಕೆ ನನ್ನ ಕೋಟಿ ನಮನಗಳು🙏🙏🙏🙏

  • @gilgil3507
    @gilgil3507 Год назад +61

    That Accual lyrics meaning behind the song is ..just made you cry...it's not an love song..😢

    • @vidyaviresh7105
      @vidyaviresh7105 11 месяцев назад +7

      Yes ... After his son died he wrote this song

    • @ManiManavath
      @ManiManavath 5 месяцев назад

      Not son. daughter​@@vidyaviresh7105

    • @Suman.k.s.e.t
      @Suman.k.s.e.t 5 месяцев назад +2

      We know

    • @gilgil3507
      @gilgil3507 5 месяцев назад +1

      @@Suman.k.s.e.t okay 👍

    • @yashwanthdn6199
      @yashwanthdn6199 5 месяцев назад

      💯💯 bro

  • @jagadishteradal6156
    @jagadishteradal6156 Год назад +6

    In childhood i used to listen to this viove in doordarshan,30 years back.
    Happy happy happy to listen to this melody vioce

  • @bhagup2204
    @bhagup2204 4 года назад +167

    2021 ರಲ್ಲಿ ಕೇಳುವರು ಲೈಕ್ ಮಾಡಿ

  • @RoopaHCRoopaHC
    @RoopaHCRoopaHC 6 месяцев назад +2

    ಹಾಡು ಕೇಳಿದಗ ಕಣ್ಮುಂದೆ ಬೇಂದ್ರೆ ಅವ್ರೆ ಬರ್ತಾರೆ ಕಣ್ಣು ತುಂಬಿ ಹೋಗ್ತಾವೆ😢

  • @srinivass6633
    @srinivass6633 6 месяцев назад +1

    ವರಕವಿ ಬೇಂದ್ರೆ ಅವರಿಗೇ ನನ್ನ ಶಿರಾಸಾಸ್ಟಂಗ ನಮನಗಳು ❤

  • @PraveenR-mk1yp
    @PraveenR-mk1yp Год назад +4

    ನಮ್ಮ ವರಕವಿ ❤

  • @sangameshjalahalli5519
    @sangameshjalahalli5519 4 года назад +8

    ಅದ್ಭುತವಾದ ಗೀತೆ ಸರ್ ಧನ್ಯವಾದಗಳುವು👌👌👌👌❤❤❤

  • @manjunayakmanju9652
    @manjunayakmanju9652 7 месяцев назад

    ನಿಮ್ಮಂತಹ ವರಕವಿ ಗಳನ್ನ ಪಡೆದ ನಾವೇ ಧನ್ಯರು...ನೀವುಗಳು ಎಂದೆಂದೂ ಅಜರಾಮರ..❤❤❤❤❤

  • @prasansangur4712
    @prasansangur4712 Год назад +2

    ಕನ್ನಡ‌ 💛❤️ ಬೇಂದ್ರೆ 💛❤️

  • @ushausha9834
    @ushausha9834 2 года назад +46

    Two great voice and writing legends of Kannada( Karnataka)😉🙏🙏

  • @bhagyabasum304
    @bhagyabasum304 2 года назад +6

    ಸುಮಧುರವಾದ ಗಾಯನ 🙏🙏

  • @Namskara_devru
    @Namskara_devru Год назад +1

    ಫ್ಯಾನ್ ಆಫ್ ಬೇಂದ್ರೆ ಫೋರೆವರ್ ❤️❤️❤️

  • @hasansabsudi5106
    @hasansabsudi5106 2 года назад +5

    ಇದು ಬೇಂದ್ರೆ ಅಜ್ಜನ ಬದುಕಿ ದೃಶ್ಯ...

  • @ranganathrgn4695
    @ranganathrgn4695 5 лет назад +52

    ಮರೆಯಲಾಗದ ಮಾಣಿಕ್ಯ ದ ರಾ ಬೇಂದ್ರೆ

  • @Lachamanna.1975
    @Lachamanna.1975 Год назад +4

    ಜೈ ಬೇಂದ್ರೆ ಅಜ್ಜ 🙏🙏🙏

  • @sharanakumarkavital6543
    @sharanakumarkavital6543 4 года назад +7

    ಸಾಹಿತ್ಯ ಮತ್ತು ಸಂಗೀತ
    ಅದ್ಭುತ.

  • @shivarajshivu1805
    @shivarajshivu1805 Месяц назад

    Miss u Gaana Gaarudiga Kogile Kanta Ashwath Sir 🙏🙏

  • @manjunathbs7746
    @manjunathbs7746 5 лет назад +20

    Thanks alot for Lahari music for not keeping advertisement in between...
    Thanks a lot for audio too...

  • @BaramappaharijanaBaramap-tu1wq
    @BaramappaharijanaBaramap-tu1wq Год назад +2

    ಮನದಾಳದ ಹಾಡು ಸೂಪರ್ ಸರ್ 🙏🙏🙏

  • @vishalsherikar1949
    @vishalsherikar1949 2 года назад +2

    First 25 sec music😌

  • @mbobby8469
    @mbobby8469 2 года назад +5

    ವರ್ಣಿಸಲು ಶಬ್ದಗಳು ಇಲ್ಲ 🙏🙏

  • @chandrukatagar1562
    @chandrukatagar1562 Год назад +1

    ಸುಪರ ಸಾಂಗ್ಸ್ ದರ ಬೇಂದ್ರೆ

  • @siddharthkore99
    @siddharthkore99 5 лет назад +15

    ವರಕವಿಗೊಂದು ನಮನ...👏

  • @seetharamak8757
    @seetharamak8757 3 года назад +4

    Nice composition by ashwath
    Nobody can beat most popular m rangarao s composition

  • @renukrajmantrodi5892
    @renukrajmantrodi5892 2 года назад +3

    Lyrics super..... Song super..... I love this song 💕💕

  • @yashayush275
    @yashayush275 9 месяцев назад +2

    what a beautiful voice and songs. I like it.

  • @KumarKumar-ot2mp
    @KumarKumar-ot2mp 4 года назад +1

    Thumbba emppagide e sangitha danyavadagalu gurugale

  • @lokeshloki5719
    @lokeshloki5719 6 лет назад +6

    ಸಾವಿಲ್ಲದ ಹಾಗೂ ಭೂಮಿ ಮುಚ್ಚಿದರೂ ಸಾವಿಲ್ಲದ ಈ ಹಾಡುಗಳು

  • @madhujp1716
    @madhujp1716 Год назад +4

    Ever green

  • @Abhishek_koralli143
    @Abhishek_koralli143 Год назад +5

    Reels ನೋಡಿ ಬಂದವರು like madi😅😎😍

  • @mahanteshyadahalli304
    @mahanteshyadahalli304 6 лет назад +11

    ಎಂದು ಮರೆಯದ ಹಾಡು.ದುಃಖ ಸಮಯದಲ್ಲಿ ಅದ್ಭುತ ಸಾಹಿತ್ಯ ಅವರಿಗೆ ಅವರೆ ಸಾಟಿ.......

  • @hemavathivaddar249
    @hemavathivaddar249 2 года назад +1

    Nan jeevanadali nodidanta kavi d r bendre. nodade edaru nodivee kannagalu, mugiyada baanu mugiyada haadu . Evaradu

  • @AASENOORU
    @AASENOORU 3 года назад +5

    ಅದ್ಭುತ ಸಾಹಿತ್ಯ ಹಾಗು ಗಾಯನ🙏🙏🙏

  • @mahanteshyadahalli304
    @mahanteshyadahalli304 6 лет назад +9

    ಎಂದು ಮರೆಯದ ಹಾಡು....

  • @deepikarao3157
    @deepikarao3157 5 лет назад +83

    How intense pain in this lyrics.. Well depicted by bendre.. Apt composition by ashwath

  • @sahebagoudareddy1899
    @sahebagoudareddy1899 6 лет назад +3

    ತುಂಬಾ ಅದ್ಭುತವಾದ ಗೀತೆ

  • @Meenavishwa
    @Meenavishwa Год назад +1

    Never forget sir you

  • @AkashPoojari100
    @AkashPoojari100 Год назад +1

    ದ.ರಾ. ಬೇಂದ್ರೆ...❤️✨🙏🙏

  • @DSEDITOR-w6v
    @DSEDITOR-w6v 2 года назад +5

    Most beautiful song 🎵 😍 ❤

  • @Umaj.Pruthvi
    @Umaj.Pruthvi 7 месяцев назад +1

    ವಾವ್ ಸೂಪರ್ ಸಾಂಗ್

  • @ManjuVajra-sp2ji
    @ManjuVajra-sp2ji 6 месяцев назад

    ನನಗೆ ಇಷ್ಟ್ಟವಾದ ಗೀತೆ

  • @Aarush.s.m
    @Aarush.s.m 5 лет назад +7

    Great combination of
    Ashwath sir and Bendre sir

  • @rameshbiradara5351
    @rameshbiradara5351 4 года назад +5

    ಕನ್ನಡ ನಾಡಿನ ದೇ ವರು ನನ್ನ ಪ್ರೀತಿಯ ವರ ಕವಿ

  • @santunmujjainiasaddharma5714
    @santunmujjainiasaddharma5714 7 лет назад +27

    ಅದ್ಭುತವಾದ ಸಾಹಿತ್ಯ ಈ ಸಂದರ್ಭದಲ್ಲಿ ಮೂಡಿಬಂದಿರುವುದು ಅದ್ಭುತವಾದ ಸನ್ನಿವೇಶ.

  • @yashasub4861
    @yashasub4861 4 года назад +6

    Legend+Legend🙏

  • @manjunathh6449
    @manjunathh6449 5 лет назад +9

    No words to express in this song amazing

  • @kumarkarigar8979
    @kumarkarigar8979 3 года назад +1

    Super song sir its really heart touching song sir

  • @anilkumarmali9985
    @anilkumarmali9985 6 лет назад +3

    Thanks for RUclips channel for dedicating this video

  • @girishkumarys4827
    @girishkumarys4827 7 лет назад +28

    We all are blessed to have such a poeiter.

  • @harishg4724
    @harishg4724 6 лет назад +12

    ಅದ್ಭತವಾದ ಸಾಹಿತ್ಯ, ಅದ್ಭುತವಾದ ಗಾಯನ 🙏🙏🙏

  • @kannadatechworld9665
    @kannadatechworld9665 Год назад

    ವರಕವಿ ❤️

  • @ArunKumar-td2yf
    @ArunKumar-td2yf 3 года назад +1

    Ee kasta yarigu bardiralli

  • @purushothambhteacher
    @purushothambhteacher 3 года назад +1

    Love you Lahari Music

  • @anilkumarmali9985
    @anilkumarmali9985 6 лет назад +2

    ಒಳ ಮನಸನ್ನು ತೆರೆಸುವಂತ ಹಾಡು ಅದ್ಭುತ

  • @ooo8487
    @ooo8487 3 года назад +1

    sprr

  • @praveen_journalist512
    @praveen_journalist512 3 года назад +3

    Mind-blowing❤❤❤

  • @neonagatc
    @neonagatc 2 месяца назад

    This song made me to cry

  • @murtuja1473
    @murtuja1473 3 года назад +2

    Awesome song sir🙏🙏

  • @kannadavasu
    @kannadavasu 22 дня назад

    Very meaningful song

  • @deepagowda9170
    @deepagowda9170 6 лет назад +4

    We lost one of our greatest magnum writer for kannada literature..... born again in this state again sir

  • @Pavana1432
    @Pavana1432 Год назад +1

    What a song ❤😊

  • @razakkarivellur6756
    @razakkarivellur6756 2 года назад +1

    Very nice... Good work..... 👍🏻

  • @sureshsurya6367
    @sureshsurya6367 5 лет назад +5

    miss you bendre sir..nimmanna kalkonda nave papigalu.....manamuttuva hadu

  • @sharanakumarkavital6543
    @sharanakumarkavital6543 3 года назад +1

    ಇಂಪಾದ ಕನ್ನಡ ದ್ವನಿ

  • @hanumagoudamalipatil4717
    @hanumagoudamalipatil4717 11 месяцев назад

    ಬೇಂದ್ರೆ ಅಜ್ಜ❤❤

  • @kavyabj1068
    @kavyabj1068 4 года назад +1

    ಎಂಥಾ ಸಾಹಿತ್ಯ🙏🙏

  • @manjufkkareppanavar9180
    @manjufkkareppanavar9180 6 лет назад +155

    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಿದರೆ ನನ್ನ
    ತಿರುಗಿ ನಾ ಹ್ಯಾಂಗ ನೋಡಲಿ ನಿನ್ನ
    ಸಂಸಾರ ಸಾಗರದಾಗ
    ಲೆಕ್ಕವಿರದಷ್ಟು ದುಃಖದ ಬಂಡಿ
    ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ
    ಎಲ್ಲಿ ಆಚೆಯ ದಂಡಿ
    ಮಲಗಿರುವ ಕೂಸು ಮಲಗಿರಲಿ ಅಲ್ಲಿ
    ಮುಂದಿನದು ದೇವರ ಚಿತ್ತ
    ನಾ ತಡಿಲಾರೆ ಅದು ಯಾಕ ನೋಡತೀ
    ಮತ್ತ ಮತ್ತ ನೀ ಇತ್ತ
    ತಂಬಲ ಹಾಕದ ತುಂಬಾ ಕೆಂಪು
    ಗಿಣಿ ಗಡಕ ಹಣ್ಣಿನ ಹಂಗ
    ಇದ್ದಂತ ತುಟಿಯ ಬಣ್ಣೇತ್ತ ಹಾರಿತು
    ಯಾವ ಗಾಳಿಗೆ ಹಿಂಗ
    ಈ ಗತ್ತಗಲ್ಲ ಹನಿ ಕಣ್ಣು ಕಂಡು
    ಮಾರಿಗೆ ಮಾರಿಯ ರೀತಿ
    ಸಾವನ ತನ್ನ ಕೈ ಸವರಿತಿಲ್ಲಿ
    ಬಂತೆನಗ ಇಲ್ಲದ ಭೀತಿ
    ನೀ ಹಿಂಗ ನೋಡಬ್ಯಾಡ ನನ್ನ
    ಇಬ್ಬನಿ ತೊಳೆದರೂ ಹಾಲು ಮೆತ್ತಿದ
    ಕವಲಿ ಕಂಠಿಯ ಹಣ್ಣು
    ಹೊಳೆ ಹೊಳೆವ ಹಂಗ ಕಣ್ಣಿರುವ ಹೆಣ್ಣ
    ಹೇಳು ನಿನ್ನವೆನ ಈ ಕಣ್ಣು
    ದಿಗಿಲಾಗಿ ಅನ್ನತದ ಜೀವ ನಿನ್ನ
    ಕಣ್ಣಾರೆ ಕಂಡು ಒಮ್ಮಿಗಿಲ
    ಹುಣ್ಣಿಮಿ ಚಂದಿರನ ಹೆಣ್ಣ ಬಂತೋ
    ಮುಗಿಲಾಗ ತೇಲತಾ ಹಗಲ
    ನಿನ್ನ ಕಣ್ಣೀನಾಗ ಕಾಲೂರಿ ಮಳೆಯೂ
    ನಡ ನಡಕ ಹುಚ್ಚು ನಗಿ ಯಾಕ
    ಹನಿ ಒಡೆಯಲಿಕ್ಕೆ ಬಂದಂಥ ಮೋಡ
    ತಡದಂಗ ಗಾಳಿಯ ನೇವಕ
    ಅತ್ತಾರೆ ಅತ್ತು ಬಿಡು ಹೊನಲು ಬರಲಿ
    ನಕ್ಯಾಕ ಮರಸತಿ ದುಃಖ
    ಎದೆ ಬಿರಿಸಿ ಕೆಡವು ಬರಿಗಣ್ಣು ಬ್ಯಾಡ
    ತುಟಿ ಕಚ್ಚಿ ಹಿಡಿಯದಿರು ಬಿಕ್ಕ
    ನೀ ಹಿಂಗ ನೋಡಬ್ಯಾಡ ನನ್ನ
    ನೀ ಹಿಂಗ ನೋಡಿದರೆ ನನ್ನ

  • @kanakalakshmi8207
    @kanakalakshmi8207 2 года назад

    Wow suiuuuuuuper

  • @amithgowda1554
    @amithgowda1554 4 года назад +2

    Heart touching song... 💗💔❤🧡🧡🧡💚💚💚

  • @masterukjanapadmusic3571
    @masterukjanapadmusic3571 11 месяцев назад +143

    2024 ರಲ್ಲಿಯೂ ಈ ಹಾಡು ಯಾರು ಕೆಳ್ತಾ ಇದಿರಾ ಒಂದ like ಕೊಡಿ

    • @ravindrass9503
      @ravindrass9503 8 месяцев назад +6

      ಯಾವ್ ವರ್ಷ ಆದ್ರೂ ಇಂತಹದೊಂದು ಬೆಲೆ ಕಟ್ಟಲಾಗದ ಹಾಡು ಇರ್ಬೇಕಾದ್ರೆ ಕೇಳಲೇ ಬೇಕು

  • @vivekanadbkattimani5543
    @vivekanadbkattimani5543 5 лет назад +1

    E adbutavad hadige Nan hrudaya karagi hoyitu....

  • @ganeshdj8896
    @ganeshdj8896 2 года назад +1

    Super 💯

  • @saraswathis82
    @saraswathis82 2 года назад +3

    Love u sir your voice is very nice

  • @praveenshimoga9353
    @praveenshimoga9353 6 лет назад +2

    entha haadugalannu dislike maadoru e bhumi mele edhara.... nujakku ashcharya.

  • @Unique__sky
    @Unique__sky 6 лет назад +3

    🙏🙏Big fan of u sir 🙏🙏
    Super song

  • @padmavathivchaamu7958
    @padmavathivchaamu7958 Год назад +2

    The legend voice❤

  • @naveenbelagali6310
    @naveenbelagali6310 Год назад

    Super ways super duper song