ಸಣ್ಣ ಆಲೂಗಡ್ಡೆಯ ಮಸಾಲಾ/baby aloo masala/baby aloo gravy/baby potato curry/aloo gravy for chapathi,puri

Поделиться
HTML-код
  • Опубликовано: 8 сен 2024
  • Jowar roti recipe : • ಉತ್ತಮ ಜೋಳದ ರೊಟ್ಟಿ ಮಾಡಲ...
    Baby aloo 500gms
    For paste:
    Tomato 2 nos
    Green chilli 2-3
    Cashew 1/4th cup
    For masala:
    Oil/ghee 2 tb sp
    Cumin
    Saunf
    Onion chopped 1 cup
    Ginger garlic paste 1 tsp
    Turmeric 1/2 tsp
    Cumin powder 1/2 tsp
    Kashmiri red chilli powder 1 tsp
    Red chilli powder 1 tsp
    Coriander powder 1 tsp
    Kasoori methi 1 tb sp
    Garam masala 1/2 tsp
    Salt
    Fresh cream or whole milk 1/2 cup
    ಬೇಕಾಗುವ ಸಾಮಗ್ರಿಗಳು
    ಸಣ್ಣ ಆಲೂಗಡ್ಡೆ250 ಗ್ರಾಂ,ಟೊಮೆಟೊ 2,ಎಣ್ಣೆ 2 ಟೇಬಲ್ ಚಮಚ ಜೀರಿಗೆ 1 ಚಮಚ, ಸೋಂಪು ಒಂದು ಚಮಚ,ಇಂಗು ಚಿಟಿಕೆ,ಕಡಲೆಹಿಟ್ಟು 1 ಟೇಬಲ್ ಚಮಚ, ಗೋಡಂಬಿ 2 ಟೇಬಲ್ ಚಮಚ,ಅರಿಸಿನ ಸ್ವಲ್ಪ, ಗರಂ ಮಸಾಲ 1/2 ಚಮಚ, ಜೀರಿಗೆ ಪುಡಿ ಅರ್ಧ ಚಮಚ, ಧನಿಯಾ ಪುಡಿ 1 ಚಮಚ ಖಾರದ ಪುಡಿ 1 ಚಮಚ ಕಸೂರಿ ಮೇತಿ ಒಂದು ಚಮಚ ಉಪ್ಪು, ಹಾಲು 1 ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ.
    ಮಾಡುವ ವಿಧಾನ ಮೊದಲಿಗೆ ಆಲೂಗಡ್ಡೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಂಡು ಸಿಪ್ಪೆ ತೆಗೆದು ಟೂತ್ ಪಿಕ್ ಅಥವಾ ಫೋರ್ಕ್ ನಿಂದ ಚುಚ್ಚಿಕೊಳ್ಳಬೇಕು. ಸಣ್ಣಗೆ ಹೆಚ್ಚಿದ ಟೊಮೆಟೊ,ಗೋಡಂಬಿ ಚೂರುಗಳು ಹಾಗೂ ಎರಡು ಹಸಿಮೆಣಸಿನಕಾಯಿಯನ್ನು ಸಣ್ಣ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು.
    ಒಂದು ಕಡಾಯಿಯನ್ನು ಸ್ಟಾರ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಕಾದ ಮೇಲೆ ಸ್ವಲ್ಪ ಜೀರಿಗೆ,ಸೋಂಪು, ಇಂಗು ಇವುಗಳನ್ನು ಹಾಕಿ ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಜೊತೆಗೆ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಕೈಯಾಡಿಸಬೇಕು. ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಮಿಶ್ರಣವನ್ನು ಬಾಡಿಸಿದ ಮೇಲೆ ಇದಕ್ಕೆ ಅರಿಶಿನ, ಖಾರ ಪುಡಿ,ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಹಾಗೂ ಕಸುರಿ ಮೇತಿ ಇವಿಷ್ಟನ್ನು ಹಾಕಿ ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ಮಗುಚಬೇಕು.2 ರಿಂದ 3 ನಿಮಿಷ ಆದ ಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿಕೊಂಡು ಇಟ್ಟಿರುವ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಜೊತೆಗೆ ಒಂದು ಕಪ್ ಹಾಲನ್ನು ಸೇರಿಸಿ ಮಗುಚಿರಿ. ಸಣ್ಣ ಉರಿಯಲ್ಲಿ ಕುದಿಯಲು ಬಿಡಿ ಕೊನೆಯದಾಗಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇದು ರೊಟ್ಟಿ ಚಪಾತಿ ಪೂರಿಯೊಂದಿಗೆ ಚೆನ್ನಾಗಿರುತ್ತದೆ.
    ಇದಕ್ಕೆ ಆಲೂಗಡ್ಡೆಯನ್ನು ಬೇಯಿಸಿ ನಂತರ ಎಣ್ಣೆಯಲ್ಲಿ ಕರೆದು ಸಹ ಬಳಸಬಹುದು ಹಾಗೆಯೇ ಹಾಲಿನ ಬದಲು ಅರ್ಧ ಕಪ್ ಮೊಸರನ್ನು ಹಾಕಿ ಈ ಮಸಾಲ ಗ್ರೇವಿ ಮಾಡಿಕೊಳ್ಳಬಹುದು.

Комментарии • 3