ಬೆಂಡೆ ಮನೆಯಲ್ಲಿ ಕುಲ ದೇವರ ಆರಾಧನೆ, ದೈವಗಳ ನೇಮೋತ್ಸವ ಸುಸಂಪನ್ನ.

Поделиться
HTML-код
  • Опубликовано: 25 авг 2024
  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದರ್ಭೇತಡ್ಕ ಬೆಂಡೆ ಮನೆಯಲ್ಲಿ ರುದ್ರ ಏಕಾದಷ್ಣಿ, ಸಪ್ತಶತಿ ಪಾರಾಯಣ, ನಾಗಾರಾಧನೆ, ಪಂಜುರ್ಲಿಗೆ ನೂತನ ಮೊಗ ಸಮರ್ಪಣೆ ಅಂಗವಾಗಿ ನವಕ ಪ್ರಧಾನ ಕಲಶಾಭಿಷೇಕ, ಕರ್ಮಾಂಗ ಸಮಾಪ್ತಿ ಯಲ್ಲಿ ಬ್ರಾಹ್ಮಣ ಸುವಾಸಿನಿ ಪೂಜನ, ದಾನ ದಕ್ಷಿಣೆ ಅರ್ಪಣೆ, ಬ್ರಾಹ್ಮಣ ಸಮಾರಾಧನೆಯು ದಿನಾಂಕ 06.04.2024ರ ಮಧ್ಯಾಹ್ನ ನಡೆಯಿತು.
    ಸಂಜೆ ಕಲ್ಕುಡ, ಕಲ್ಲುರ್ಟಿ, ಕುಟುಂಬದ ಕಲ್ಲುರ್ಟೀ, ಕುಪ್ಪೆ ಪಂಜುರ್ಲಿ ದೈವಗಳ ಭಂಡಾರ ಇಳಿಸಿ, ದೈವ ನರ್ತಕರಿಗೆ ತಾಂಬೂಲ, ಪಡಿ ಅಕ್ಕಿ ವಸ್ತ್ರ ನೀಡಿ, ಎಣ್ಣೆ ಬೂಳ್ಯ ನೆರವೇರಿತು.
    ಬೆಂಡೆ ಮನೆತನದ
    ಯಜಮಾನರಾದ ಶ್ರೀ ಮಹಾದೇವ ವಿನಾಯಕ ಬೆಂಡೆಯವರ ನೇತೃತ್ವದಲ್ಲಿ, ಶ್ರೀ ಶ್ರೇಯಸ್ ಪಾಳಂದ್ಯೆಯವರ ಮಧ್ಯಸ್ಥಿಕೆಯಲ್ಲಿ
    ಜಾಗದ ಕಲ್ಕುಡ ಕಲ್ಲುರ್ಟಿ, ಕುಟುಂಬದ ಕಲ್ಲುರ್ಟಿ, ಜಾಗದ ಕುಪ್ಪೆಪಂಜುರ್ಲಿ ದೈವಗಳಿಗೆ ಗಗ್ಗರ ಸೇವೆ, ನರ್ತನ ಸೇವೆ, ಅಣಿ ಸೇವೆ, ಮೊಗ ಸೇವೆ, ಜೀಟಿಗೆ ಸೇವೆ, ಹರಕೆ ಸಮರ್ಪಣೆ ಯೊಂದಿಗೆ ನಂಬಿಕೆಯಲ್ಲಿ ಐದು ವರ್ಷಗಳಿಗೊಮ್ಮೆ ನೆರವೇರುವ ನೇಮೋತ್ಸವ ಸುಸಂಪನ್ನಗೊಂಡಿತು.
    ಈ ಸಂದರ್ಭ ಮುಖ್ಯವಾಗಿ ಶ್ರೀಮತಿ ಸುಮನ ಚಂದ್ರಶೇಖರ್ ಬೆಂಡೆ ಮತ್ತು ಮಕ್ಕಳು, ಶ್ರೀಮತಿ ಮತ್ತು ವೆಂಕಟೇಶ್ ಬೆಂಡೆ ಮತ್ತು ಮಕ್ಕಳು, ಕುಟುಂಬಿಕರು, ನೆರೆ ಕರೆಯವರು, ಇಷ್ಟ ಮಿತ್ರರು ಭಾಗವಹಿಸಿ ಛಂದ ಗಾಣಿಸಿಕೊಟ್ಟರು. ಶ್ರೀಮತಿ ಮತ್ತು ಶ್ರೀ ವಿನಾಯಕ ಬೆಂಡೆಯವರ ಉಸ್ತುವಾರಿ ಯೊಂದಿಗೆ ಕಾರ್ಯಕ್ರಮ ಸಾಂಗವಾಗಿ ಜರುಗಿತು.
    Mangalore Samachar..
    / @mangaloresamachar9338

Комментарии •