13 ನೇಯ ವರ್ಷದ ಹರಿಕಥಾ ಸಾಪ್ತಾಹ, ಹರಿಕೀರ್ತನ ಹಬ್ಬ ಪುರಂದರ ವೇದಿಕೆಯಲ್ಲಿ ಸುಸಂಪನ್ನ

Поделиться
HTML-код
  • Опубликовано: 12 сен 2024
  • ಕಾಸರಗೋಡು ಜಿಲ್ಲೆಯ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಣ್ವ ಸಭಾಗೃಹದಲ್ಲಿ ಕೀರ್ತನ ಕುಟೀರದ ಸಂಚಾಲಕರಾದ ಕಲಾರತ್ನ ಶಂಕರ ನಾರಾಯಣ ಅಡಿಗರ ನೇತೃತ್ವದಲ್ಲಿ ದಿನಾಂಕ 5 ರಿಂದ 11 ಅಗಸ್ಟ್ 2024ರಲ್ಲಿ ಹರಿಕಥಾ ಸಾಪ್ತಾಹ ಜರುಗಿತು.
    ಸಾಪ್ತಾಹದಲ್ಲಿ ಶಿಷ್ಯ ವರ್ಗದಿಂದ ಭಕ್ತ ಸುದಾಮ, ಸಮರ್ಥ ರಾಮದಾಸ, ವಿಧಿ ಲಿಖಿತ, ಮಾತೃದೇವೋಭಾವ, ಗೋವರ್ಧನಗಿರಿಧಾರಿ, ಗಜವದನ ಗಣಪತಿ, ರಾಮಸೇತು, ಮೃತ್ಯುಂಜಯ, ಏಕದಂತ, ಸರ್ವಂತರ್ಯಾಮಿ, ಅಕ್ಷಯ ವಸನ, ಪಕ್ಷಿರಾಜ ಜಟಾಯು, ಶಕಟಾಸುರ ವಧೆ, ಮಹಿಷಮರ್ದಿನಿ, ದರ್ಪಣದಲ್ಲಿ ದರ್ಶನ, ಮದಮರ್ಧನ, ಹರಿ ದಿಗ್ವಿಜಯ, ಧನುಜಾರಿ, ಭಕ್ತ ಪ್ರಹ್ಲಾದ, ಏಕಾಗ್ರಚಿತ್ತ, ಗಂಗಾವತರಣ, ಬೆಣ್ಣೆ ಕೃಷ್ಣ, ಮಾಯೆಯ ತೆರೆ, ಚಂಡ ಕೌಶಿಕ, ದ್ರುವ ನಕ್ಷತ್ರ, ದೇವಿ ಮಹಿಮೆ, ಚೂಡಾಮಣಿ, ಕಾಳಿಂಗ ಮರ್ಧನ, ರಾಮನೆಲ್ಲಿ ಹನುಮ, ಪಾಂಚಜನ್ಯ, ಗೋರ ಕುಂಭಾರ ಹರಿ ಕಥೆಗಳ ಸತ್ಸಂಗ ನಡೆಯಿತು.
    ಸಮಾರೋಪ ಸಮಾರಂಭದಲ್ಲಿ ಹರಿಕಥಾ ಪರಿಷತ್ ಅಧ್ಯಕ್ಷ ರಾದ ಶ್ರೀ ಕೆ. ಮಹಾಬಲ ಶೆಟ್ಟಿ ಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಲ್ಯ ದೇವಸ್ಥಾನ ಮೊಕ್ತೇಸರರಾದ ಶ್ರೀ ಮಧುಸೂದನ ಅಯ್ಯರ್, ವಿ.ಹೆಚ್.ಪಿ. ಕಾರ್ಯಕರ್ತೆ ಶ್ರೀ ಮತಿ ಪದ್ಮಾವತಿ ಯಂ.ಎಲ್, ಕುಂಬಳೆ ಗಣೇಶೋತ್ಸವ ಸಂಚಾಲಕರಾದ ಶ್ರೀ ಶಂಕರ ಆಳ್ವ, ಕೋಟೆಕ್ಕಾರು ಭಾಗವಹಿಸಿ ಶುಭ ಹಾರೈಸಿದರು.
    ಸಮಾರಂಭದಲ್ಲಿ ಹರಿಕಥಾ ಗುರುಗಳಾದ ಶ್ರೀ ಶಂ.ನಾ. ಅಡಿಗ ದಂಪತಿಗಳನ್ನು ಶಾಲು ಹಾರ ಸ್ಮರಣೆಕೆ ಹಣ್ಣು ಹಂಪಲು ನೀಡಿ ಶಿಷ್ಯ ವರ್ಗದಿಂದ ಗೌರವಾರ್ಪಣೆ ನಡೆಯಿತು.
    ಕಾರ್ಯಕ್ರಮವನ್ನು ಶ್ರೀ ಮತಿ ವಿಜಯಲಕ್ಷ್ಮಿ ಶಂ.ನಾ.ಅಡಿಗರವರು ನಿರೂಪಿಸಿದರು.
    Mangalore Samachar..
    / @mangaloresamachar9338

Комментарии • 1