Playback Singer Vani Jayaram | Bhavapoorna Shraddhanjali | ಭಾವಪೊರ್ಣ ಶ್ರಧ್ದಾಂಜಲಿ

Поделиться
HTML-код
  • Опубликовано: 3 фев 2023
  • ವಾಣಿ ಜಯರಾಂ (೩೦ ನವೆಂಬರ್ ೩೦ ೧೯೪೫ - ೦೪ ಫೆಬ್ರವರಿ ೨೦೨೩) ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ. ಇವರು ತಮಿಳು, ಕನ್ನಡ, ತೆಲುಗು, ತುಳು, ಹಿಂದಿ, ಮರಾಠಿ, ಮಲಯಾಳಂ, ಬಂಗಾಳಿ, ಒಡಿಯಾ ಸೇರಿದಂತೆ, ಒಟ್ಟು ೧೪ ಭಾಷೆಗಳಲ್ಲಿ ೮೦೦೦ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ.
    -----------------------------
    ಕನ್ನಡ ಚಿತ್ರ ಸಂಗೀತಕ್ಕೆ ೧೯೭೩ರಲ್ಲಿ ಪದಾರ್ಪಣೆ ಮಾಡಿ ೯೦ರ ದಶಕದ ಆದಿಯವರೆಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ.ಕನ್ನಡದಲ್ಲಿ ಮರೆಯಲಾಗದ ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅವರು ಹಾಡಿದ ಮೊದಲ ಚಿತ್ರ ’ಛಲಗಾರ’ ತೆರೆ ಕಾಣಲಿಲ್ಲ.ಕೌಬಾಯ್ ಕುಳ್ಳ, ಕೆಸರಿನ ಕಮಲ, ಉಪಾಸನೆ, ಶುಭಮಂಗಳ, ದೀಪ, ಅಪರಿಚಿತ, ಕಸ್ತೂರಿ ವಿಜಯ, ಚಿರಂಜೀವಿ, ಬೆಸುಗೆ, ಬಿಳೀ ಹೆಂಡ್ತಿ ಮೊದಲಾದ ಚಿತ್ರಗಳಲ್ಲಿ ಹಾಡಿದ್ದಾರೆ. ತಮ್ಮನ್ನು ಪರಿಚಯಿಸಿದ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಸಂಗೀತ ನಿರ್ದೇಶನದ ಕಡೆಯ ಚಿತ್ರ ನೀಲಾ (೨೦೦೧), ಇವರು ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಡಿದ ಚಿತ್ರವಾಗಿರುತ್ತದೆ.ಕನ್ನಡದಲ್ಲಿ ಹಾಡಿರುವ ಸುಮಾರು ೮೫೦ ಗೀತೆಗಳನ್ನು ಸೇರಿಸಿ, ಒಟ್ಟಾರೆ ೧೨ ಭಾಷೆಗಳಲ್ಲಿ ೮೮೦೦ ಗೀತೆಗಳನ್ನು ಹಾಡಿದ್ದಾರೆ.
    -------------------------------
    ಇವರು ಹಾಡಿರುವ ಕೆಲವು ಸುಮಧುರ ಗೀತೆಗಳು
    ನಗು ನೀ ನಗು...
    ಭಾವವೆಂಬ ಹೂವು ಅರಳಿ...
    ಹೋದೆಯಾ ದೂರ ಓ ಜೊತೆಗಾರ..ವಿರಹ ಗೀತೆ
    ಏನೇನೊ ಆಸೆ.. ನೀ ತಂದ ಭಾಷೇ, (ಅಣ್ಣಾವರ ಜೊತೆ ಸೇರಿ ಹಾಡಿದ್ದು)
    ಈ ಶತಮಾನದ ಮಾದರಿ ಹೆಣ್ಣು...
    ದಾರಿ ಕಾಣದಾಗಿದೆ ರಾಘವೇಂದ್ರನೆ...
    ಸವಿ ನೆನಪುಗಳು ಬೇಕು...
    ಬಾನಲಿ ಮುಡಿದ ಭಾಸ್ಕರನು...
    ಓ ತಂಗಾಳಿಯೇ...
    ಲೈಫ್ ಈಸ್ ಎ ಮೆರ್ರಿ ಮೆಲಡಿ...- ಬೆಸುಗೆ ಚಿತ್ರದ ಪಾಶ್ಚಾತ್ಯಶೈಲಿಯ ಇಂಗ್ಲಿಷ್ ಹಾಡು.
    ಹ್ಯಾಪಿಯಸ್ಟ್ ಮೊಮೆಂಟ್ಸ್...- ಬಿಳೀ ಹೆಂಡ್ತಿ ಚಿತ್ರದ ಪಾಶ್ಚಾತ್ಯಶೈಲಿಯ ಇಂಗ್ಲಿಷ್ ಹಾಡು.
    ----------------------------------
    ತಮಿಳು ಭಾಷೆಯ ಅಪೂರ್ವ ರಾಗಂಗಳ್ ಮತ್ತು ತೆಲುಗು ಭಾಷೆಯಶಂಕರಾಭರಣಂ, ಸ್ವಾತಿ ಕಿರಣಂ ಚಿತ್ರಗಳ ಹಿನ್ನೆಲೆ ಗಾಯನಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
    ವಿವಿಧ ರಾಜ್ಯಗಳ ೨೭ ಶ್ರೇಷ್ಠ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.
    ದಕ್ಷಿಣ ಭಾರತದ ಖ್ಯಾತ ಟಿ. ವಿ. ಮಾಧ್ಯಮಗಳ ಮ್ಯೂಸಿಕ್ ರಿಯಾಲಿಟಿ ಶೋಗಳಲಿ ಕಾಣಿಸಿಕೊಳ್ಳುತ್ತಿದ್ದಾರೆ.
    'ಗಾನಸುಧೆಯ ೪೦ ನೇ ವರ್ಷದ ಸೇವೆ'ಗಾಗಿ ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಸನ್ಮಾನಮಾಡಲಾಯಿತು.
    --------------------------------------

Комментарии •