ತೋಳು ತೋಳು ರಂಗ ಹಾಡುವುದು ಹೇಗೆ? || Tolu Tolu Tolu Ranga | Purandara dasaru | Kannada Song 🔥

Поделиться
HTML-код
  • Опубликовано: 12 сен 2024
  • ತೋಳು ತೋಳು ರಂಗ ಹಾಡುವುದು ಹೇಗೆ? || Tolu Tolu Tolu Ranga | Purandara dasaru | Kannada Song
    Kannada Lyrics:
    ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
    ಘಳಿರು ಘಳಿರೆಂದು ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ll1ll
    ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ
    ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ
    ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ
    ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ll2ll
    ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
    ಅರ್ಜುನರಥಕೆ ಸಾರಥ್ಯ ಮಾಡಿದ ತೋಳನ್ನಾಡೈ
    ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ
    ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ll3ll
    ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ
    ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ
    ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ll4ll
    .......................................
    English Lyrics:
    Tolu tolu tolu ranga tolannadai swami nilavarnada balakrishnane tolannadai ||pa||
    Huliyuguraralele magayigala nitta tolannadai svami
    ghaliru ghalirendu gejjeli nalivutta tolannadai
    Neluvige nilukade orala tanditta tolannadai svami chaluva makkala muddu manikave tolannadai ll1ll
    Putaniyembavalasuvane hirida tolannadai svami mateya pitana anugala maduhida tolannadai
    Matige shishupAlana shira tarida tolannadai svami shri tulasiya priya nityavinodi tolanadai ll2ll
    Sajjana satyake dharmava nadesida tolannadai svamiarjunaradake sarathya madida tolannadai
    Lajjegitada draupadi kaida tolannadai svami vajra panjara pandava priya tolannadai ll3ll
    Nakhadinda hiranyakanudara bagida tolannadai svami sukhadindali prahladana kaida tolannadai
    Vikhalitagedisida gopa striyara tolannadai svami sukhatirttara pati purandara vittala tolannadai ll4ll
    ....................
    #Howtosingtolutolutoluranga
    #Tolutolutoluranga
    #Sangeethmane #kannadalyarical #kannadadasarpada #purandaradasaru

Комментарии • 242