Enna Binnapa Kelu

Поделиться
HTML-код
  • Опубликовано: 1 окт 2024
  • Sung By : Pushpalatha and Anuradha
    Composer : Sri Gopala Dasa
    ಎನ್ನ ಬಿನ್ನಪ ಕೇಳು ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ
    ಬನ್ನಬಡಿಸುವ ರೋಗವನ್ನು ಯೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ||
    ವಸುಮತಿಯ ಮೇಲಿನ್ನು ಅಸುರಜನರೆ ಬಹಳ ವಶವಲ್ಲ ಕಲಿಯ ಬಾಧೆ ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವು ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೆ ಪೊರೆಯೊ ಸ್ವಾಮಿ ||
    ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ ಹೇದೇವ ನಿನ್ನ ಕರಕಲಶಸುಧೆಗರೆದು ಸಾಧುಗಳ ಸಂತೈಸುವಿ ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನೀವಿ ಆದರಿಸಿ ಇವಗೆ ತವಪಾದಧ್ಯಾನವಿತ್ತು ಸಾಧುಗಳೊಳಗಿಟ್ಟು ಮೋದಕೊಡು ಸರ್ವದಾ ||
    ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಲರಿಯೆ ಎನ್ನ ಪಾಲಿಸುವ ದೊರೆಯೆ ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೇಕು ಕರುಣಿ ಅನಂತಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೊ ಸ್ವಾಮಿ ||

Комментарии • 6