ಶ್ರೀ ಶಂಕರಲಿಂಗ ಭಗವಾನರ ಜೀವನ ಚರಿತ್ರೆ ಭಾಗ-2

Поделиться
HTML-код
  • Опубликовано: 24 окт 2024
  • ಅ.ರಾ.ಸೇ ಅವರು ಬರೆದಿರುವ ಪುಸ್ತಕ ಶ್ರೀ ಗುರುಕಥಾಮೃತದಿಂದ ಆಧಾರಿತ ವಿಡಿಯೋ ಇದಾಗಿದ್ದು ಧ್ವನಿ :- ಶ್ರೀಮತಿ ನಿರ್ಮಲಾ ರಾಮರಾವ್ ಹಾಗೂ ಶ್ರೀ ಹೆಚ್. ವೈ ರಾಮರಾವರದ್ದಾಗಿದೆ, ಇದು ಕೋರೋನ ಸಮಯದಲ್ಲಿ ಶಂಕರಲಿಂಗ ಭಗವಾನ್ ಭಕ್ತ ಮಂಡಳಿವತಿಯಿಂದ ನಡೆದ ಸತ್ಸಂಗದ ರೆಕಾರ್ಡ್ ವಿಡಿಯೋ ಆಗಿದೆ
    #ಶಂಕರಲಿಂಗ_ಭಗವಾನ್_ಸರಸ್ವತಿ_ಪರಮಹಂಸರು:
    'ಸಾಕ್ಷಾತ್ #ಪರಬ್ರಹ್ಮನು, '#ಸದಾಶಿವ'ನು, '#ಶ್ರೀಮನ್ಮಹಾವಿಷ್ಣು' ವು ಆದ '#ಸದ್ಗುರು'ಗಳು ಲೋಕವನುದ್ದರಿಸಲು ಬೋದಿಸುವ ಮಾರ್ಗವೆ 'ಗುರುಪಂಥ'. ಇಂತಹ ಅನೇಕ ಗುರು ಪರಂಪರೆಗಳಿವೆ. ದಕ್ಷಿಣ ಭಾರತದಲ್ಲಿ ಮೂರು ಪರಂಪರೆಗಳು ಪ್ರಖ್ಯಾತವಾಗಿವೆ. ಅವುಗಳೆಂದರೆ-
    #ದತ್ತಪಂಥ,
    #ರಾಮದಾಸ_ಪಂಥ,
    #ಚಿದಂಬರ_ಪಂಥ,
    'ಶ್ರೀ ಶಂಕರಲಿಂಗ ಭಗವಾನರು' ಈ ಮೂರೂ ಪಂಥಗಳ ಸಂಗಮ ಸ್ವರೂಪವಾಗಿದ್ದಾರೆ. ಅವರ ಶಿಷ್ಯ ವೃಂದವು ಅವರನ್ನು "ಅಪ್ಪ" ಎಂದು ಸಂಭೋಧಿಸುತ್ತಾರೆ. ಅವರನ್ನು ಅವಧೂತರೆಂದು ಪರಿಗಣಿಸಿ ಸ್ತುತಿಸುತ್ತಾರೆ. "ಗುರುಸೇವೆಯು ಕೈವಲ್ಯ ಪ್ರದವಾದುದು.ಆತ್ಮಸಾಕ್ಷಾತ್ಕಾರಕ್ಕಾಗಿ ಗುರುವನ್ನಾಶ್ರಯಿಸಬೇಕು. ಸದ್ಗುರುವು ಕರುಣಾಸಾಗರನು. ಶಿಷ್ಯರ ಸಕಲ ದುಃಖಗಳನ್ನು, ಸಮಸ್ತಸಂತಾಪಗಳನ್ನು ನಿವಾರಿಸಿ ಮೋಕ್ಷವನ್ನು ದಯಪಾಲಿಸುತ್ತಾನೆ. ಸರ್ವತಂತ್ರ ಸ್ವತಂತ್ರನಾದ ಅವನು ಯಾರಿಂದ ಏನನ್ನೂ ಬಯಸುವುದಿಲ್ಲ. ಅವನು ಸಜ್ಜನರಿಗೆ ದಾತಾರನಾಗಿರುತ್ತಾನೆ. ಅಂತಹ ಸದ್ಗುರುಗಳಾದ ಶ್ರೀ ಶ್ರೀ ಶಂಕರಲಿಂಗ ಭಗವಾನರ ದಿವ್ಯಸನ್ನಿಧಿಯು ಕೊಮಾರನಹಳ್ಳಿ (ಶ್ರೀ ಹೆಳವನಕಟ್ಟೆ ರಂಗನಾಥನ ಪಕ್ಕದಲ್ಲಿ) ಯಲ್ಲಿದೆ. ಕೊಮಾರನಹಳ್ಳಿಯ ಅರುಣಗಿರಿಯು ವೈಕುಂಠ, ಕೈಲಾಸ, ಸತ್ಯಲೋಕ.ಶ್ರೀ ಶಂಕರಲಿಂಗನ ಸನ್ನಿಧಿಯು ಆನಂದ. ಅಲ್ಲಿ ಯಾವ ಬಂಧನಗಳೂ ಇಲ್ಲ.
    ಭಗವಾನರು ೧೯೫೧ ರಲ್ಲಿ ಕೊಮಾರನಹಳ್ಳಿ ಎಂಬ ಪವಿತ್ರ ಕ್ಷೇತ್ರದಲ್ಲಿ, ಬೆಟ್ಟದ ಮೇಲೆ ಇರುವ 'ಹೆಳವನಕಟ್ಟೆ ಶ್ರೀಲಕ್ಷ್ಮೀರಂಗನಾಥ ದೇವಾಲಯ' ದ ಪಕ್ಕದಲ್ಲಿ 'ರಂಗನಾಥಾಶ್ರಮ' ವನ್ನು ಸ್ಥಾಪಿಸಿದರು. ಆಶ್ರಮದ ಮುಂದಿದ್ದ ಬಂಡೆಯಲ್ಲಿ ತಮ್ಮ ಸಮಾಧಿಗಾಗಿ ಒಂದು ಗುಹೆಯನ್ನು ತೋಡಿಸಿದರು. 'ಶ್ರೀರಂಗನಾಥನ ವಿಗ್ರಹ'ವಿರುವ ಎತ್ತರಕ್ಕಿಂತ ಕೆಳಭಾಗದಲ್ಲಿ, ಈ ಗುಹೆ ಇರುವಂತೆ ನೋಡಿಕೊಂಡರು. ಸ್ವಾಮಿಯ ಮುಂದೆ ಭಕ್ತನು, ಗುರುವಿನ ಮುಂದೆ ಶಿಷ್ಯನು ಮೆರೆಯಬಾರದೆಂದು ಯಾವಾಗಲೂ ಹೇಳುತ್ತಿದ್ದರು. ೧೬-೭-೧೯೫೩ ರಂದು ಸಮಾಧಿಸ್ತರಾದರು.
    ಧ್ವನಿ :- ಶ್ರೀಮತಿ ನಿರ್ಮಲಾ ರಾಮರಾವ್ ಹಾಗೂ ಶ್ರೀ ಹೆಚ್. ವೈ ರಾಮರಾವ್.
    #ಶಂಕರಲಿಂಗಭಗವಾನ್ #ದತ್ತಪಂಥ #ರಾಮದಾಸಪಂಥ #ಚಿದಂಬರಪಂಥ #ಗುರುವಾಣಿ #Guruvani in kannada #Guruvaninikhil

Комментарии • 3