ISHTU DINA E VAIKUNTA || ಇಷ್ಟು ದಿನ ಈ ವೈಕುಂಠ || Sudhakar P. Aloor.

Поделиться
HTML-код
  • Опубликовано: 15 окт 2024
  • ISHTU DINA E VAIKUNTA || ಇಷ್ಟು ದಿನ ಈ ವೈಕುಂಠ
    LYRICS: PURANDARA DASA
    VOICE: SUDHAKAR P. ALOOR
    ಇಷ್ಟು ದಿನ ಈ ವೈಕುಂಠ
    ಎಷ್ಟು ದೂರವೋ ಎನುತಲಿದ್ದೆ
    ದೃಷ್ಟಿಯಿಂದಲಿ ನಾನು ಕಂಡೆ
    ಸೃಷ್ಟಿಗೀಶನೇ ಶ್ರೀರಂಗಶಾಯಿ ||1||
    ಎಂಟು ಏಳನು ಕಳೆದುದರಿಂದ
    ಬಂಟರೈವರ ತುಳಿದುದರಿಂದ
    ಕಂಟಕನೊಬ್ಬನ ತರಿದುದರಿಂದ
    ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||
    ವಜ್ರ ವೈಢೂರ್ಯದ ತೊಲೆಗಳ ಕಂಡೆ
    ಪ್ರಜ್ವಲಿಪ ಮಹಾದ್ವಾರವ ಕಂಡೆ
    ನಿರ್ಜರಾದಿ ಮುನಿಗಳ ಕಂಡೆ
    ದುರ್ಜನಾಂತಕನೆ ಶ್ರೀರಂಗಶಾಯಿ ||3||
    ರಂಭೆ ಊರ್ವಶಿಯರ ಮೇಳವ ಕಂಡೆ
    ತುಂಬುರು ಮುನಿ ನಾರದರನು ಕಂಡೆ
    ಅಂಬುಜೋದ್ಭವ ರುದ್ರರ ಕಂಡೆ
    ಶಂಬರಾರಿಪಿತನೆ ಶ್ರೀರಂಗಶಾಯಿ ||5||
    ನಾಗಶಯನನ ಮೂರುತಿ ಕಂಡೆ
    ಭೋಗಿಭೂಷಣ ಶಿವನನು ಕಂಡೆ
    ಭಾಗವತರ ಸಮ್ಮೇಳವ ಕಂಡೆ
    ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||6||
    #haribhaktilahari

Комментарии • 2