ಶ್ರೀಮದ್ಭಾಗವತಮ್ ಉಪನ್ಯಾಸ I ಶ್ರೀ ಅವಿನಾಶ ಚಂದ್ರ ದಾಸ I SB 1.15.38 I 10.03.2024 | ISKCON Bangalore Kannada

Поделиться
HTML-код
  • Опубликовано: 12 сен 2024
  • ಶ್ಲೋಕ - 38
    ಸ್ವರಾಟ್ ಪೌತ್ರಂ ವಿನಯಿನಮಾತ್ಮನಃ ಸುಸಮಂ ಗುಣೈಃ |
    ತೋಯನೀವ್ಯಾಃ ಪತಿಂ ಭೂಮೇರಭ್ಯಷಿಂಚದ್ಗಜಾಹ್ವಯೇ ||೩೮||
    ಅನುವಾದ
    ಆಮೇಲೆ, ಉತ್ತಮ ಶಿಕ್ಷಣವನ್ನು ಪಡೆದು ತನಗೆ ಸರಿಸಮಾನವಾದ ಸಾಮರ್ಥ್ಯವನ್ನು ಪಡೆದಿದ್ದ ತನ್ನ ಮೊಮ್ಮಗನನ್ನು ಹಸ್ತಿನಾಪುರ ರಾಜಧಾನಿಯಲ್ಲಿ ಸಮುದ್ರ ಪರ್ಯಂತವಾದ ವಿಶಾಲ ಸಾಮ್ರಾಜ್ಯಕ್ಕೆ ಚಕ್ರವರ್ತಿಯನ್ನಾಗಿ ಮಾಡಿ ಸಿಂಹಾಸನದ ಮೇಲೆ ಕುಳ್ಳಿರಿಸಿದನು.
    ಭಾವಾರ್ಥ
    ಸಮುದ್ರವು ಸುತ್ತುವರಿದ ಇಡೀ ಭೂಮಿಯು ಹಸ್ತಿನಾಪುರದ ಚಕ್ರವರ್ತಿಯ ಅಧೀನದಲ್ಲಿತ್ತು. ಯುಧಿಷ್ಠಿರನು ತನ್ನಷ್ಟೇ ಅರ್ಹನಾಗಿದ್ದ ತನ್ನ ಮೊಮ್ಮಗನಾದ ಪರೀಕ್ಷಿತನಿಗೆ ಒಳ್ಳೆಯ ತರಬೇತಿ ಕೊಟ್ಟು, ಪ್ರಜೆಗಳನ್ನು ರಾಜನು ಹೇಗೆ ಪಾಲಿಸಬೇಕು, ಹೇಗೆ ರಾಜ್ಯವಾಳಬೇಕು ಎನ್ನುವುದನ್ನು ಕಲಿಸಿದ್ದನು. ಹಾಗಾಗಿ ಯುಧಿಷ್ಠಿರನು ಭಗವದ್ದಾಮಕ್ಕೆ ಮರಳುವ ಮೊದಲು ಪರೀಕ್ಷಿತನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದನು. ಪರೀಕ್ಷಿತ ಮಹಾರಾಜನನ್ನು ಕುರಿತು ವಿನಯಿನಂ ಎಂಬ ಪದವು ಪ್ರಯೋಗವಾಗಿರುವುದನ್ನು ಗಮನಿಸಬೇಕು. ಅವನನ್ನು ಹಸ್ತಿನಾಪುರದ ರಾಜನಂದೇ ಏಕೆ ಇಡೀ ಭೂಮಿಯ ಚಕ್ರವರ್ತಿಯೆಂದು ಎಲ್ಲರೂ ಒಪ್ಪಿಕೊಂಡಿದ್ದರು. ಅದಕ್ಕೆಒಂದೇ ಒಂದು ಕಾರಣ. ಅವನ ಒಳ್ಳೆಯ ಆಡಳಿತವು ಜಗತ್ತಿನಾದ್ಯಂತ ಜನತೆಗೆ ತುಂಬ ಹರ್ಷದಾಯಕವಾಗಿತ್ತು. ಧಾನ್ಯಗಳು, ಹಣ್ಣುಗಳು, ಹಾಲು, ಮೂಲಿಕೆಗಳು, ಪ್ರಶಸ್ತ ಶಿಲೆಗಳು, ಲೋಹಗಳು-ಹೀಗೆ ಜನರಿಗೆ ಬೇಕಾದ ನೈಸರ್ಗಿಕ ವಸ್ತುಗಳೆಲ್ಲವೂ ಧಾರಾಳವಾಗಿ ಉತ್ಪಾದನೆಯಾಗುತ್ತಿದ್ದುವು. ಜನರಿಗೆ ಯಾವುದೇ ಬಗೆಯ ದೈಹಿಕ ಕ್ಷೇಶಗಳಿರಲಿಲ್ಲ: ಮಾನಸಿಕ ತಳಮಳವಿರಲಿಲ್ಲ: ನೈಸರ್ಗಿಕ ಪರಿಸ್ಥಿತಿಗಳಿಂದಾಗಲಿ ಇತರ ಜೀವಿಗಳಿಂದಾಗಲಿ ಒದಗುವ ವ್ಯಾಕುಲತೆಯಿರಲಿಲ್ಲ. ಎಲ್ಲರೂ ಎಲ್ಲ ವಿಧದಿಂದಲೂ ಸಂತುಷ್ಟರಾಗಿದ್ದುದರಿಂದ ಆಡಳಿತದ ಬಗೆಗೆ ಅಸಮಾಧಾನವಿರಲಿಲ್ಲ. ರಾಜರ ನಡುವೆ ರಾಜಕೀಯ ಕಾರಣಗಳಿಗಾಗಿ ಮತ್ತು ಮೇಲುಗೈ ಆಗಬೇಕೆಂಬ ಹಂಬಲದಿಂದಾಗಿ ಕೆಲವೊಮ್ಮೆ ಯುದ್ಧಗಳಾಗುತ್ತಿದ್ದುವು. ಜೀವನದ ಅತ್ಯುನ್ನತ ಲಕ್ಷ್ಯವನ್ನು ಸಾಧಿಸಲು ಪ್ರತಿಯೊಬ್ಬರಿಗೂ ತರಬೇತಿ ದೊರೆತಿದ್ದುದರಿಂದ ಜನರು ಸಣ್ಣಪುಟ್ಟ ವಿಷಯಗಳಿಗಾಗಿ ಜಗಳವಾಡದಿರುವಷ್ಟು ಬುದ್ಧಿವಂತರಾಗಿದ್ದರು. ಕಲಿಯುಗದ ಪ್ರಭಾವವು ಕ್ರಮಕ್ರಮವಾಗಿ, ನಿಧಾನವಾಗಿ ರಾಜರ ಮತ್ತು ಪ್ರಜೆಗಳ ಸದ್ಗುಣಭರಿತವಾದ ಬದುಕಿನ ಒಳಕ್ಕೆ ಇಳಿಯಿತು. ಆಳುವವನಿಗೂ ಆಳಿಸಿಕೊಳ್ಳುವವರಿಗೂ ನಡುವೆ ಬಿಕ್ಕಟ್ಟಿನ ಸನ್ನಿವೇಶವು ನಿರ್ಮಾಣವಾಯಿತು. ಇಂತಹ ಸಂದರ್ಭದಲ್ಲೂ ನಾವು ಭಗವತ್ ಪ್ರಜ್ಞೆ ಹಾಗೂ ಆಧ್ಯಾತ್ಮಿಕ ಸಂಪತ್ತನ್ನು ಹೊಂದಬಹುದು; ಅದು ನಮಗಿರುವ ವಿಶೇಷವಾದ ಹಕ್ಕು.
    "ಇಸ್ಕಾನ್ ಬೆಂಗಳೂರಿನ ದೇವಾಲಯದ ಭಕ್ತರು ನೀಡಿದ ಕನ್ನಡ ಶ್ರೀಮದ್-ಭಾಗವತ ಉಪನ್ಯಾಸಗಳನ್ನು ಕೇಳಿ. ಈ ಉಪನ್ಯಾಸಗಳು ನಿಮಗೆ ದೇವರ ವಿಜ್ಞಾನದ ಬಗ್ಗೆ ಜ್ಞಾನವನ್ನು ನೀಡುತ್ತವೆ ಮತ್ತು ಆಧ್ಯಾತ್ಮಿಕ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತವೆ.
    #ಶ್ರೀಮದ್ಭಾಗವತ #srimadbhagavatam #iskconbangalorekannada #kannada

Комментарии • 1