ಯಕ್ಷಗಾನದ ಭರವಸೆಯ ಕೋಗಿಲೆ ಸ್ವರವಾರಿಧಿ,ಶ್ರೀಮತಿ ಕಾವ್ಯಶ್ರೀ ಆಜೇರುರವರಿಗೆ ಮರವಂತೆಯಲ್ಲಿ ಯಕ್ಷ ಕಾವ್ಯಗುರು ಕಲಾ ಗೌರವ!

Поделиться
HTML-код
  • Опубликовано: 12 сен 2024
  • Don't Miss It....!!!??? Please Watch It....???!!! ಯಕ್ಷಗಾನದ ಭರವಸೆಯ ಕೋಗಿಲೆ ಸ್ವರವಾರಿಧಿ , ಶ್ರೀಮತಿ ಕಾವ್ಯಶ್ರೀ ಆಜೇರುರವರಿಗೆ ಮರವಂತೆಯಲ್ಲಿ ಪ್ರಪ್ರಥಮ ಬಾರಿಗೆ ಜೆ.ಜೆ.ಎಸ್.ಶ್ರುತಿಸಾಗರ ಯಕ್ಷಕಾವ್ಯಗುರು ಕಲಾಗೌರವ - 2021.
    ಮರವಂತೆ: ಮರವಂತೆ ಶ್ರೀನಾಗ ಯಕ್ಷಮಿತ್ರ ಬಳಗದವರ ಮುಂದಾಳತ್ವದಲ್ಲಿ, ದಿನಾಂಕ: 31/01/2021 ಭಾನುವಾರದಂದು, ಶ್ರೀ ವಿನಾಯಕ ಯಕ್ಷಕಲಾ ತಂಡ(ರಿ.) ಕೆರೆಕಾಡು, ಮೂಲ್ಕಿ ಮಂಗಳೂರು - ಇವರಿಂದ ಮರವಂತೆ ಸನಿಹ ನಡೆದ ಗರುಡೋದ್ಭವ ಎನ್ನುವ ಪೌರಾಣಿಕ ಯಕ್ಷಗಾನ ಪ್ರಸಂಗ
    ಪ್ರದರ್ಶನದ ನಡುವಲ್ಲಿ ಜ್ಯೋತಿಜೀವನಸ್ವರೂಪ ಫೌಂಡೇಶನ್(ರಿ.)ಸಂಸ್ಥೆಯವರು ಆಯೋಜಿಸಿದ, "ಜೆ.ಜೆ.ಎಸ್. ಶ್ರುತಿಸಾಗರ ಯಕ್ಷಕಾವ್ಯಗುರು ಕಲಾಗೌರವ " ಸಮಾರಂಭವು ಬಲು ಅದ್ಧೂರಿಯಾಗಿ ನೆರವೇರಿತು.
    ಯಕ್ಷಗಾನ ಪ್ರದರ್ಶನದ ಕಲಾವೇದಿಕೆಯ ರಂಗಸ್ಥಳದ ನಡುವೆ ಜರುಗಿದ, "ಜೆ.ಜೆ.ಎಸ್. ಶ್ರುತಿಸಾಗರ ಯಕ್ಷಕಾವ್ಯಗುರು ಕಲಾಗೌರವ ಸಮಾರಂಭ"ದ ಈ ಸಭಾಕಾರ್ಯಕ್ರಮದಲ್ಲಿ
    ಮರವಂತೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ತಿಮ್ಮ ವಿ. ದೇವಾಡಿಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಯಲ್ ಬೈಕ್ ಸೇಲ್ಸ್ & ಸರ್ವೀಸ್ ನ ಮಾಲಕರಾದ ಶ್ರೀ ನೌಷಾದ್ ನಾವುಂದ, ಮರವಂತೆ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ಗಿರೀಶ್ ಕೆ. ದೇವಾಡಿಗ ಉಪಸ್ಥಿತರಿದ್ದು, ಹೆಸರಾಂತ ಯಕ್ಷಗಾನ ಭಾಗವತೆ ಶ್ರೀಮತಿ ಕಾವ್ಯಶ್ರೀ ಆಜೇರುರವರು ಜ್ಯೋತಿಜೀವನಸ್ವರೂಪ ಫೌಂಡೇಶನ್ ನ ಸಂಸ್ಥಾಪಕಿಯಾದ ಶಯದೇವಿಸುತೆ ಮರವಂತೆಯವರೊಡನೆಯೇ ಬಂದು ವೇದಿಕೆಯನ್ನ ಬಲು ಅಂದವಾಗಿ ಅಲಂಕರಿಸಿಬಿಟ್ಟಿದ್ದರು. ಬಳಗದ ಮುಖ್ಯಸ್ಥ ಶ್ರೀ ಗೋಪಾಲ ಕೆ. ದೇವಾಡಿಗರು ಸರ್ವರ ಸಹಕಾರದೊಡನೇ ಸ್ವಾಗತಿಸಿ ವಂದಿಸಿದರು.
    ಇದೇ ಸಂದರ್ಭದಲ್ಲಿ, ಮರವಂತೆಯಲ್ಲಿ ಪ್ರಪ್ರಥಮ ಬಾರಿಗೆ ಭಾಗವತಿಕೆ ಮಾಡಲು ಬಹುದೂರದಿಂದ ಮನೆಮಗಳಾಗಿ ತಮ್ಮನೆಗೆ ಬಂದು ಮೊಟ್ಟ ಮೊದಲಾಗಿ ದೀಪ ಪ್ರಜ್ಚಲಿಸಿ
    ಕಲಾದೇವಿಯ ಉಪಾಸನೆಯನ್ನು ಮಾಡಿ ರಂಗಸ್ಥಳವನ್ನೇರಿದ ಸ್ವರವಾರಿಧಿ, ಶ್ರೀಮತಿ ಕಾವ್ಯಶ್ರೀ ಆಜೇರುರವರ 'ಕಿರುಪರಿಚಯ'ವನ್ನು ಶಯದೇವಿಸುತೆ ಮರವಂತೆಯವರು ಸ್ವತಃ, ತಾವೇ ಮುಂದಾಗಿ ನಿಂತು ನಿರೂಪಣೆ ಮಾಡಿದರು. ತದನಂತರ, ಶಯದೇವಿಸುತೆ ಮರವಂತೆಯವರು ತಮ್ಮಜ್ಜಿ-ತಾತರಾದ ದಿ |ವೆಂಕಮ್ಮನಾಗಪ್ಪ ದೇವಾಡಿಗರ ಸವಿನೆನಪಿಗಾಗಿ ಜೆ.ಜೆ.ಎಸ್. ಶ್ರುತಿಸಾಗರ ಯಕ್ಷಕಾವ್ಯಗುರು ಕಲಾಗೌರವದೊಡನೇ ನೆರೆದಿರುವ ಜನಸ್ತೋಮದಲ್ಲಿ ಗಣ್ಯಾತಿ-ಗಣ್ಯರೊಡನೇ ಸಂಮ್ಮಾನಿಸಿದರು.
    ಸಂಮ್ಮಾನವನ್ನು ಸ್ವೀಕರಿಸಿ ಅಂದಿನ ಯಕ್ಷಗಾನ ಪ್ರದರ್ಶನದ ಭಾಗವತಿಕೆಯನ್ನು ಸಂಪೂರ್ಣ ನೆರವೇರಿಸಿಕೊಟ್ಟಂತಹ ಶ್ರೀಮತಿ ಕಾವ್ಯಶ್ರೀ ಆಜೇರುರವರು ಮರವಂತೆ
    ಯಕ್ಷಕಲಾಭಿಮಾನಿಗಳಿಗೆ ತಮ್ಮ ಹೃದಯಪೂರ್ವಕ ಅಭಿವಂದನೆಗಳನ್ನು ಸಲ್ಲಿಸಿ, "ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿಯೂ ಸಹ, ತಾನೇನೂ ಮಹಾಸಾಧನೆ ಮಾಡಿಲ್ಲ " - ಎನ್ನುವಷ್ಟು ಸರಳ ಮಾತುಗಳನ್ನಾಡಿ, ಮತ್ತೊಮ್ಮೆ ಅತ್ಯುನ್ನತ ಮಹಾ ಪ್ರಭೆಯುಳ್ಳ ತೇಜಸ್ಸಿನ ಸಾಧಕಿಯೆನಿಸಿಕೊಂಡುಬಿಟ್ಟಿದ್ದರು. ಮಾತ್ರವಲ್ಲ, ತನ್ನ ಸಹೋದರಿ ಸರಿಸಮಾನರೆಂದೇ ಈ ಮೊದಲೇ ಪರಿಗಣಿಸಿರುವ ಪತ್ರಿಕಾ ಮತ್ತು ಮಾಧ್ಯಮವೃತ್ತಿ ನಿರತರು ಹಾಗೂ, ಜ್ಯೋತಿಜೀವನಸ್ವರೂಪ ಫೌಂಡೇಶನ್ ನ ಸಂಸ್ಥಾಪಕಿಯಾದ ಶಯದೇವಿಸುತೆ ಮರವಂತೆಯವರ ಬಗೆಗಿರುವ ತಮ್ಮ ಮನದಾಳದ ಭಾವನಾತ್ಮಕ ಮಾತುಗಳನ್ನು ಬಲು ಮುಕ್ತಮನಸ್ಸಿನಿಂದ ವ್ಯಕ್ತಪಡಿಸಿ ತಮಗಿರುವ ಆತ್ಮೀಯತೆಯ ಆಳವನ್ನು ಬಲು ಸಂತಸದಿಂದ ಬಹು ಹೆಮ್ಮೆಯಿಂದ ಹೇಳಿಕೊಂಡರು.
    ಇನ್ನು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೆಂಕುತಿಟ್ಟಿನ ಮಹಿಳಾ ಭಾಗವತಿಕೆಯಲ್ಲಿ ತನ್ನದೇ ಆದಂತಹ ವಿವಿಧ ಶೈಲಿಯ ಭಾಗವತಿಕೆಯಿಂದ ಹೊಸ ವಿಭಿನ್ನ ಛಾಪನ್ನು ಮೂಡಿಸಿ
    ದೇಶ-ವಿದೇಶಗಳಲ್ಲೂ ಸಹ ಖ್ಯಾತಿವೆತ್ತ ಶ್ರೀಮತಿ ಕಾವ್ಯಶ್ರೀ ಆಜೇರುರವರ ಭಾಗವತಿಕೆಯನ್ನು, ಮರವಂತೆಯಲ್ಲಿ ಪ್ರಪ್ರಥಮ ಬಾರಿಗೆ ನೋಡಿ ಆಲಿಸಿ ಆಸ್ವಾದಿಸಿದ ಗಣ್ಯಾತಿ-ಗಣ್ಯರು ವಿಧ-ವಿಧವಾಗಿ ವರ್ಣೀಸಿ ತಂತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿ ತಂತಮ್ಮ ಶುಭಶಂಸನೆ ನೀಡಿ ಹರಸಿದ ಪ್ರತಿಯೊಬ್ಬರಿಗೂ ಗೌರವ ಸ್ಮರಣಿಕೆಯನ್ನಿತ್ತು ಧನ್ಯವಾದ ಸಲ್ಲಿಸಲಾಯ್ತು.
    ತದನಂತರ, 'ಶ್ರೀ ವಿನಾಯಕ ಯಕ್ಷಕಲಾ ತಂಡ(ರಿ.) ಕೆರೆಕಾಡು, ಮೂಲ್ಕಿ(ಮಂಗಳೂರು)' - ಇವರಿಂದ ಗರುಡೋದ್ಭವ - ಎಂಬ ಯಕ್ಷಗಾನ ಪ್ರಸಂಗವು ಶ್ರೀಮತಿ ಕಾವ್ಯಶ್ರೀ
    ಆಜೇರುರವರ ಸಂಪೂರ್ಣ ಭಾಗವತಿಕೆಯಲ್ಲಿ ಮತ್ತಷ್ಟು ಮುಂದುವರೆದು ಬಲು ಅದ್ಧೂರಿಯಾಗಿ ಪ್ರದರ್ಶನಗೊಂಡು ಸಾಕಷ್ಟು ಕಲಾಭಿಮಾನಿಗಳ ಮನಸೂರೆಗೊಳ್ಳುವಷ್ಟು ಪರಿಯಲ್ಲಿ ರಸದೌತಣವನ್ನು ನೀಡಿತು. ಮಾತ್ರವಲ್ಲ, ತೆಂಕುತಿಟ್ಟಿನ ಭಾಗವತೆಯಾಗಿದ್ದರೂ ಸಹ, ತನ್ನ ಅಪ್ರತಿಮ ಕಂಠಸಿರಿಯ ಪ್ರತಿಭೆಯಿಂದ ಸಾಕಷ್ಟು ಬಡಗುತಿಟ್ಟುಗಳ ಅಭಿಮಾನಿಗಳ ಅಭಿಮಾನವನ್ನೂ ಸಹ ಮೀರಿ ಖ್ಯಾತಿ ಗಳಿಸಿರುವುದಕ್ಕೆ ಅಂದು ಶ್ರೀಮತಿ ಕಾವ್ಯಶ್ರೀ ಆಜೇರುರವರು ಅಂದಿನ ರಂಗಸ್ಥಳವನ್ನಲಂಕರಿಸಿ ತನ್ನ ಭಾಗವತಿಕೆ ಶೈಲಿಯಿಂದ ಸಾಕಷ್ಟು ಜನಮನವನ್ನು ಸೂರೆಗೊಂಡಿರುವುದಕ್ಕೇ ಅಲ್ಲಿ ನೆರೆದಂತಹ ಸಾಕಷ್ಟು ಪ್ರೇಕ್ಷಕರೇ ಪ್ರಮುಖ ಪ್ರತ್ಯಕ್ಷ ಸಾಕ್ಷಿಯಾಗಿಬಿಟ್ಟಿದ್ದರು.
    ತುಳುನಾಡ ಕರಾವಳಿಯ ಉದ್ಧಗಲಕ್ಕೂ ತೆಂಕುತಿಟ್ಟು-ಬಡಗುತಿಟ್ಟು ಎನ್ನುವ ಯಾವುದೇ ಬೇಧವಿಲ್ಲದೆಲೇ ತಮ್ಮ ಅಭಿಜಾತವಾದ ಪ್ರತಿಭೆ ಹಾಗೂ ಅಪಾರ ಸ್ವರ ಸಂಪತ್ತಿನಿಂದ ಇಂದು ಸಾವಿರಕ್ಕೂ ಹೆಚ್ಚು ಅಧಿಕ ಕಾರ್ಯಕ್ರಮಗಳನ್ನು ನೀಡಿ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ; ಪಟ್ಲ ಸತೀಶ್ ಶೆಟ್ಟಿಯವರಂತಹ ಹಲವಾರು ಮಹಾನ್ ಪ್ರಸಿದ್ಧ ದಿಗ್ಗಜ ಭಾಗವತರುಗಳ ಜೊತೆಗೆ ಕೂಡಾಟ, ದ್ವಂದ್ವಾಟ, ತೆಂಕು ಹಾಗೂ ಬಡಗು ಎನ್ನುವಂತಹ ಉಭಯತಿಟ್ಟುಗಳ ಗಾನವೈಭವ ಕಾರ್ಯಕ್ರಮಗಳಿಂದ ಸಾವಿರಾರು ವೇದಿಕೆಗಳಲ್ಲಿ ಹಾಡಿ ಕಂಗೊಳಿಸಿರುವ; ದೇಶ-ವಿದೇಶಗಳಲ್ಲೂ ಸಹ ಮಿಂಚಿ ಜನಮನವನ್ನು ಸೂರೆಗೊಂಡು ಹಲವಾರು ಪ್ರಶಸ್ತಿ-ಪುರಸ್ಕಾರ; ಗೌರವ-ಸಂಮ್ಮಾನಗಳನ್ನೂ ತನ್ನ ಮುಡಿಗೇರಿಸಿಕೊಂಡು ಖ್ಯಾತಿವೆತ್ತಿರುವ ಇಂದಿನ ಯಕ್ಷಗಾನ ಕಲಾಕ್ಷೇತ್ರದಲ್ಲಿ ವೃತ್ತಿಪರ ಭಾಗವತರಾಗಿ ಬೆಳೆಯುತ್ತಿರುವ ಭರವಸೆಯ ಕೋಗಿಲೆ ಶ್ರೀಮತಿ ಕಾವ್ಯಶ್ರೀ ಆಜೇರುರವರನ್ನು ಜೆ.ಜೆ.ಎಸ್. ಶ್ರುತಿಸಾಗರ ಯಕ್ಷಕಾವ್ಯಗುರು ಕಲಾಗೌರವ ಮೂಲಕ ಗುರುತಿಸಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಜ್ಯೋತಿಜೀವನಸ್ವರೂಪ ಸಂಸ್ಥೆಯ ಪದಾಧಿಕಾರಿಗಳು ಬಲು ಹೆಮ್ಮೆಯಿಂದ ತಂತಮ್ಮ ಸಂತಸದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ಸಮಾಜಮುಖಿ ಧರ್ಮಕಾರ್ಯಗಳಿಗೆಲ್ಲಾ ಮೂಲ ಸ್ಫೂರ್ತಿಯಸೆಲೆಯೆನಿಸಿದ ಶ್ರೀಮತಿ ಜೀವಿತಾ ತನ್ಮಯ್ ಮತ್ತವರ ಕುಟುಂಬ, ಅಕ್ಕ ಶ್ರೀಮತಿ ಶ್ರುತಿಸಾಗರ್(ಗಾನಶ್ರೀ), ಗೆಳತಿ ಪ್ರತುಲಾ ಶಾಸ್ತ್ರೀ, ಡಾ. ಪ್ರಕೃತಿ ಮಂಚಾಲೆ, ಶ್ರೀಮತಿ ಶ್ವೇತಾ ಪ್ರಭು, ಶ್ರೀಮತಿ ಗೀತಾ ಮಂಜುನಾಥ್, ಶ್ರೀಮತಿ ವಸುಧಾ ರತನ್, ಶ್ರೀಮತಿ ಬಿಂದು ಹಾಗೂ ಮತ್ತಿತ್ತರನ್ನು ಮನದಾಳದಿಂದ ಸ್ಮರಿಸಿದ ಸಂಸ್ಥೆಯ ಸ್ಥಾಪಕ ನಿರ್ದೇಶಕಿ
    ಶಯದೇವಿಸುತೆ, ಮರವಂತೆ(ಜ್ಯೋತಿ ಎಸ್.ಡಿ)ಯವರು ಮನದಾಳದಿಂದ ಕೃತಜ್ಞತೆಯನ್ನು ಸಲ್ಲಿಸಿದರು.
    Videography By : Jayanthi S D.
    Edited By : JJS SHRUTHISAGARA CREATIONS...
    Presented By:
    Shayadevisuthe Maravanthe, Jyothy JeevanSwaroop, Jyothi S.D. Maravanthe. (ಶಯದೇವಿಸುತೆ ಮರವಂತೆ, ಜ್ಯೋತಿ ಜೀವನ್ ಸ್ವರೂಪ್ , ಜ್ಯೋತಿ ಎಸ್. ಡಿ. ಮರವಂತೆ )
    Business Email : jjsshruthisagaracreations@gmail.com
    Jyothy JeevanSwaroop From Maravanthe [Udupi, Karnataka ]
    #JJSSHRUTHISAGARACREATIONSMARAVANTHE

Комментарии •