ಶ್ರೀ ಸೋಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಪಡುವರಿ ಬೈಂದೂರು ಉಡುಪಿ

Поделиться
HTML-код
  • Опубликовано: 3 окт 2024
  • ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯ, ಬೈಂದೂರು, ತಾಲೂಕಿನ ಶ್ರೀ ಸೋಮೇಶ್ವರ ದೇವಸ್ಥಾನ ,ಪಡುವರಿ ಶ್ರೀಕ್ಷೇತ್ರ ಬೈಂದೂರು. ಸಮುದ್ರದ ಮೇಲ್ದಂಡೆ ಮೇಲಿರುವ ಈ ದೇವಸ್ಥಾನ ಅತಿ ಪುರಾತನವಾದ ದೇವಸ್ಥಾನ. ಶ್ರೀರಾಮಚಂದ್ರ ಲಂಕೆಗೆ ಹೋಗುವಂತಹ ಸಂದರ್ಭದಲ್ಲಿ ಸೋಮೇಶ್ವರನನ್ನು ಪ್ರತಿಷ್ಠಾಪಿಸಿದ ಎನ್ನುವುದು ಇಲ್ಲಿಯ ವಿಶೇಷತೆ. ಶ್ರೀರಾಮಚಂದ್ರ ದೇವರುಇಲ್ಲಿಂದಲೇ ಲಂಕೆಗೆ ಸೇತುವೆಯನ್ನು ಕಟ್ಟಬೇಕು ಎಂದು ನಿರ್ಧರಿಸುತ್ತಾನೆ. ಆದರೆ ಇಲ್ಲಿಂದ ಲಂಕೆಗೆ ಹೋದರೆ ಹಿಂಬದಿಯ ಬಾಗಿಲನ್ನು ತಲುಪುತ್ತೇವೆ ಎಂದು ತಿಳಿದ ಶ್ರೀರಾಮಚಂದ್ರನು ಸೇತುವೆಯನ್ನು ಅಲ್ಲಿಗೆ ನಿಲ್ಲಿಸುತ್ತಾನೆ. ಅದರ ಕುರುಹುವಾಗಿ ಈಗಲೂ ಕೂಡ ಕಲ್ಲು ಬಂಡೆಗಳ ರಾಶಿಯನ್ನು ಕಾಣಬಹುದಾಗಿದೆ. ಹಾಗೂ ಸೇತುವೆಯನ್ನು ಪ್ರಾರಂಭಿಸಿದನು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ ನದಿಯು ಸಮುದ್ರವನ್ನು ಸೇರುವ ಸಂಗಮ ಸ್ಥಳವಿದ್ದು ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಆಕರ್ಷಿಸುತ್ತಿದೆ. ಇಲ್ಲಿ ಕಲ್ಲು ಬಂಡೆಗಳ ಪೊಟರೆಯ ಒಳಗಡೆಯಿಂದ ನೀರು ಹರಿದು ಬರುತ್ತಿದ್ದು ನಾಗನ ಸಾನಿಧ್ಯವು ಅಲ್ಲಿ ಇರುವುದರಿಂದ ಅದಕ್ಕೆ ನಾಗತೀರ್ಥ ವೆಂದು ಕರೆಯುತ್ತಾರೆ. ಹಾಗಾಗಿ ಈ ಕ್ಷೇತ್ರವು ತೀರ್ಥಕ್ಷೇತ್ರವಾಗಿ ಮಾರ್ಪಟ್ಟಿದೆ. ಪಿತೃ ಕಾರ್ಯಗಳನ್ನು ಮಾಡುವುದರಿಂದ ಮೃತರಾದವರಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿದೆ. ಪ್ರಕೃತಿ ರಮಣೀಯ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಭೇಟಿ ಕೊಡಲೇಬೇಕು. ತಾವೆಲ್ಲರೂ ಆಗಮಿಸಿ ಶ್ರೀದೇವರ ಸಂದರ್ಶನವನ್ನು ಮಾಡಿ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಸವಿದು ಕೃತಾರ್ಥ ರಾಗಬೇಕು.

Комментарии • 6

  • @NagaRaju-tg4sz
    @NagaRaju-tg4sz 8 дней назад +1

    SUPER SUPER SUPER SUPER SUPER TEMPLE SIR SUPER SUPER POOJA SIR SUPER SUPER SPEECHING SIR 🎉🎉🎉.

  • @yashodaU-x3f
    @yashodaU-x3f 7 дней назад +2

    Sumadhura vivarane battare temple running a jayavagale👌🙏🙏🙏🙏🙏

  • @nagaveniudupa9235
    @nagaveniudupa9235 День назад +1

    ಸುಂದರ ಪರಿಸರದಲ್ಲಿ ದೇವರು ನೆಲಸಿದ್ದಾನೆ. ಜೈ ಸೋಮೇಶ್ವರ🙏

  • @bhaskaratrasi
    @bhaskaratrasi 8 дней назад +1

    ಸುಂದರ ಪರಿಸರ ಅತ್ಯಾಕರ್ಶಣ ವಾಗಿದೆ 👍🏻

  • @gururajgururajtg3832
    @gururajgururajtg3832 8 дней назад +1

    Olleya vivarane.... Bhatre

  • @jayalakshmiupadhyaya2133
    @jayalakshmiupadhyaya2133 7 дней назад +1

    ವಾವ್