SRI SAMARTHA RAMADASA CHARITHRAE

Поделиться
HTML-код
  • Опубликовано: 6 фев 2025
  • ಶ್ರೀ ಸಮರ್ಥ ರಾಮದಾಸ ಚರಿತ್ರೆ
    ಅಧ್ಯಾಯ - 23 ಸಮರ್ಥರ ಶಿಷ್ಯ ರಕ್ಷಣೆ, ಮಧುಕರನ ರಕ್ಷಣೆ, ಜೋಷಿಗೆ ಗುಣಪಾಠ.
    ಪರಮಪೂಜ್ಯ ಶ್ರೀ ಸ್ವಾಮಿ ವಿಠಲಾನಂದ ಸರಸ್ವತೀ ಮಹಾರಾಜ್‌ರವರು ತೆಲುಗಿನಲ್ಲಿ ರಚಿಸಿರುವ ಶ್ರೀ ಸಮರ್ಥ ರಾಮದಾಸ ಚರಿತ್ರೆಯನ್ನು ವೇದ ಬ್ರಹ್ಮ ಶ್ರೀ ಬಿ. ಎಸ್‌. ವೆಂಕಟೇಶ ಮೂರ್ತಿಯವರು ಬಾಬಾಜಿಯವರ ಆಶೀರ್ವಾದ ಬಲದಿಂದ, ಗುರು ಪ್ರಸಾದ ರೂಪವಾದ ಈ ಪ್ರತ್ಯಕ್ಷ ಭಕ್ತಿ ಕಾವ್ಯವನ್ನು, ಗುರು ಸಂಪ್ರದಾಯ ಸಾಧಕ - ಭಕ್ತರೆಲ್ಲರ ಹೃದಯಗಳಲ್ಲಿ ಮುದ್ರಿಸಲ್ಪಡುವಂತೆ ಕನ್ನಡದಲ್ಲಿ ಅದ್ಭುತವಾಗಿ ಬರೆದಿದ್ದಾರೆ.
    ಶ್ರೀ ಸಮರ್ಥ ರಾಮದಾಸರು ಸಾಕ್ಷಾತ್ ಹನುಮಂತರೆಂದು ಕೊಂಡಾಡಲ್ಪಟ್ಟಿರುವರು. ಶ್ರೀ ರಾಮನಾಮ ಪ್ರಚಾರೋದ್ಯಮದಿಂದ ಸುಸ್ಥಿರ ಸಾಮ್ರಾಜ್ಯದ ಸ್ಥಾಪನೆಯನ್ನು ಮಾಡಿಸಿದರು. ಅವರಿಂದ ಮರಾಠಿಯಲ್ಲಿ ರಚಿಸಲ್ಪಟ್ಟಿರುವ 'ದಾಸಬೋಧ' ಎಂಬ ಗ್ರಂಥವು ಇಂದಿಗೂ ನಿತ್ಯಪಾರಾಯಣ ಗ್ರಂಥವಾಗಿ ಅನೇಕ ಗೃಹಗಳಲ್ಲಿ ಪಠಿಸಲ್ಪಡುತ್ತಿದೆ. ಇಂದಿನ ಅಸ್ತವ್ಯಸ್ತ ಸಮಾಜದಲ್ಲಿರುವ ಪ್ರಜೆಗಳ ಜೀವನ ವಿಧಾನವನ್ನು ಶ್ರೀ ಸಮರ್ಥರು ತಮ್ಮ ಮಹಿಮೆಯಿಂದ ಸರಿಪಡಿಸುವರೆಂದು ನಂಬಿದ್ದೇವೆ. ಯಜ್ಞ-ಯಾಗಾದಿ ಸತ್ಕರ್ಮಗಳಾದರೂ ಯಾವುದಾದರೂ ಲೋಪದೋಷಗಳಿಂದ ಫಲವನ್ನು ಕೊಡದಿರಬಹುದು, ಆದರೆ ನಂಬಿಕೆಯಿಂದ ಮಹಾತ್ಮರ ಚರಿತ್ರೆಗಳನ್ನು ಪಾರಾಯಣ ಮಾಡಿದರೆ, ಸಕಲ ದುಷ್ಕರ್ಮಗಳೂ ದೂರವಾಗಿ, ಶುಭಪ್ರದವಾದ ಕೋರಿಕೆಗಳು ನೆರವೇರುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಪಾಪಗಳು, ದುಷ್ಕರ್ಮಗಳೂ ದೂರವಾದರೆ, ಮಾನವನು ಪವಿತ್ರನಾಗಿ ಒಳ್ಳೆಯ ಆಲೋಚನೆಗಳನ್ನು ಮಾಡುವನು. ಇದೇ ಮಹಾತ್ಮರ ಅಭಿಲಾಷೆ.
    ಎಲ್ಲರೂ ಪವಿತ್ರವಾದ ಈ ಗ್ರಂಥವನ್ನು ಶ್ರದ್ಧಾಭಕ್ತಿಗಳೊಂದಿಗೆ ಪಾರಾಯಣವನ್ನು ಮಾಡಿ, ಸರ್ವತ್ರ ವಿಜಯವನ್ನೂ ಆರೋಗ್ಯವನ್ನೂ ಜ್ಞಾನ-ವಿಜ್ಞಾನಗಳನ್ನೂ ಶಾಂತಿಯನ್ನೂ ಪಡೆದು ಸುಖಿಗಳಾಗಲಿ ಎಂದು ಶ್ರೀ ಸಮರ್ಥರ ಪಾದಾರವಿಂದಗಳಿಗೆ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇವೆ.
    #SamarthaRamdas#RamdasCharitra#RamdasSwami #HinduSaints#SpiritualJourney#ChantingWithRamdas #SpiritualLiterature#RamdasDevotion#WisdomOfRamdas#DivineGuidance#RamdasPhilosophy#SacredText #RamdasInspiration #SaintRamdas#RamdasStories#RamdasTeachings
    RUclips: /@avadhoothachinthana
    Facebook: / 615553365887. .
    Instagram: / avadhoothac. .
    Linkdn: / avadhooth. .
    Twitter: / avadhoothac___
    Printrest: / avadhoothaaa
    #meresai#spirituality #guru #charitre #avadhootha #datha #sripadavallabha #ganagapur #datta

Комментарии •