ಏನೆಂದು ಕೊಂಡಾಡಿ ಸ್ತುತಿಸಲೋ ದೇವ ನಾನೇನು ಬಲ್ಲೆ ನಿನ್ನ ಮಹಿಮೆ ಮಾಧವ ಹರಿಮುಕುಂದನು ನೀನು ನರಜನ್ಮ ಹುಳು ನಾನು ಪರಮಾತ್ಮನು ನೀನು ಪಾಮರನು ನಾನು ಗರುಡ ಗಮನನು ನೀನು ಮರುಳು ಪಾಪಿಯು ನಾನು ಪರಂಜ್ಯೋತಿಯು ನೀನು ತಿರುಕನು ನಾನು ಅಣುರೇಣು ತೃಣಗಳಲಿ ಪರಿಪೂರ್ಣನು ನೀನು ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು ವಾಣಿಯರಸನ ಪೆತ್ತ ವೈಕುಂಠಪತಿ ನೀನು ತನು ನಿತ್ಯವಲ್ಲದ ಬೊಂಬೆಯು ನಾನು ತಿರುಪತಿಯವಾಸ ಶ್ರೀ ವೆಂಕಟೇಶನು ನೀನು ಸ್ಮರಿಸಿ ನಿನ್ನಯ ನಾಮ ಬದುಕುವವ ನಾನು ಬಿರುದುಳ್ಳವನು ನೀನು ಮರೆಹೊಕ್ಕವನು ನಾನು ಸಿರಿ ಕಾಗಿನೆಲೆಯಾದಿಕೇಶವನು ನೀನು
ಏನೆಂದು ಕೊಂಡಾಡಿ ಸ್ತುತಿಸಲೋ ದೇವ
ನಾನೇನು ಬಲ್ಲೆ ನಿನ್ನ ಮಹಿಮೆ ಮಾಧವ
ಹರಿಮುಕುಂದನು ನೀನು ನರಜನ್ಮ ಹುಳು ನಾನು
ಪರಮಾತ್ಮನು ನೀನು ಪಾಮರನು ನಾನು
ಗರುಡ ಗಮನನು ನೀನು ಮರುಳು ಪಾಪಿಯು ನಾನು
ಪರಂಜ್ಯೋತಿಯು ನೀನು ತಿರುಕನು ನಾನು
ಅಣುರೇಣು ತೃಣಗಳಲಿ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನು
ತನು ನಿತ್ಯವಲ್ಲದ ಬೊಂಬೆಯು ನಾನು
ತಿರುಪತಿಯವಾಸ ಶ್ರೀ ವೆಂಕಟೇಶನು ನೀನು
ಸ್ಮರಿಸಿ ನಿನ್ನಯ ನಾಮ ಬದುಕುವವ ನಾನು
ಬಿರುದುಳ್ಳವನು ನೀನು ಮರೆಹೊಕ್ಕವನು ನಾನು
ಸಿರಿ ಕಾಗಿನೆಲೆಯಾದಿಕೇಶವನು ನೀನು
Pls send us the ugabhoga
Humble request
@@ganeshprabhulicsba
ಹರಿ ನಿನ್ನ ಸ್ಮರಣೆಯ ಸ್ಮರಿಸಲು
ದುರಿತ ಪೀಡಿಪುದುಂಟೆ
ಅರಿತು ಭಜಿಪರಿಗೆಲ್ಲ ಕೈವಲ್ಯವನೆ ಕೊಡುವೆ
ಕರುಣವರಿತು ತನ್ನ ಮಗನ ಕೂಗಿದವಗೆ
ಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ
Ninnaya mahime ghanava, nanena balle
Sooooper singing my favorite song
Excellent rendition 🙏 🙏
Thanks for listening
Excellent rendition delivered with full devotion by Shri Yogish Kini maam. Also, please upload Bramhandadolage Bhajan sung on the same day.
Thank you. Will upload it soon
Tala yavudendu tilsabhude
Yavaragadallide
Rags: Abhogi