ಕುಡುಕರ ತಾಣವಾದ ಫಾಸ್ಟ್ ಫುಡ್ ಇರುವ ಫುಟ್ ಪಾತ್ ಜಾಗ...ಕಣ್ಮುಚ್ಚಿ ಕುಳಿತ ಅಧಿಕಾರಿಗಳು...

Поделиться
HTML-код
  • Опубликовано: 20 сен 2024
  • ಕುಡುಕರ ತಾಣವಾದ ಫಾಸ್ಟ್ ಫುಡ್ ಇರುವ ಫುಟ್ ಪಾತ್ ಜಾಗ...ಕಣ್ಮುಚ್ಚಿ ಕುಳಿತ ಅಧಿಕಾರಿಗಳು...
    ಮೈಸೂರು,ಏ11,Tv10 ಕನ್ನಡ
    ಫಾಸ್ಟ್ ಫುಡ್ ನಡೆಯುತ್ತಿರುವ ಫುಟ್ ಪಾತ್ ಸ್ಥಳ ಕುಡಕರತಾಣವಾಗಿ ಪರಿವರ್ತನೆಯಾಗಿದೆ.ಕುಡುಕರ ಹಾವಳಿಗೆ ಸ್ಥಳೀಯರು ಬೇಸತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಹಾಪ್ ಕಾಮ್ ಗೋಡೆಯನ್ನ ಬಳಸಿಕೊಂಡು ಮೇಲ್ಛಾವಣಿ ನಿರ್ಮಿಸಿಕೊಂಡ ಮಧ್ಯವ್ಯಸನಿಗಳು ಹಾಡುಹಗಲೇ ಫುಲ್ ಟೈಟ್ ಆಗಿ ಮಲಗುತ್ತಾರೆ.ದುರ್ವಾಸನೆಯಿಂದಾಗ ಸಾರ್ವಜನಿಕರು ಇತ್ತ ಸುಳಿಯಲೂ ಸಹ ಮುಜುಗರ ಪಟ್ಟುಕೊಳ್ಳುತ್ತಿದ್ದಾರೆ.ಮೇಲ್ಛಾವಣಿಯ ಕೆಳಗೆ ಮಧ್ಯದ ಬಾಟಲುಗಳು ತುಂಬಿದೆ.ಗಲೀಜಿನಿಂದ ತುಂಬಿದ್ದರೂ ಪಾಲಿಕೆಯೆ ಯಾವುದೇ ಅಧಿಕಾರಿಯಾಗಲಿ,ಸಿಬ್ಬಂದಿಯಾಗಲಿ ಇತ್ತ ಸುಳಿದಿಲ್ಲ.
    ಇದು ಮೈಸೂರು ನಗರ ಪ್ರತಿಷ್ಠಿತ ಗೋಕುಲಂ ಬಡಾವಣೆಯಲ್ಲಿ ಕಂಡುಬರುವ ದೃಶ್ಯ.ಸಮೀಪದಲ್ಲಿ ವಿವಿ ಪುರಂ ಪೊಲೀಸ್ ಠಾಣೆ ಇದೆ.ನಿರ್ಮಲ ಕಾನ್ವೆಂಟ್ ನ ಹೆಣ್ಣುಮಕ್ಕಳು ಓಡಾಡುತ್ತಾರೆ.ಅಲ್ಲಿರುವ ಹಾಪ್ ಕಾಮ್ ಗೋಡೆಗೆ ಹೊಂದಿಕೊಂಡಂತೆ ಮೇಲ್ಛಾವಣಿ ನಿರ್ಮಿಸಿಕೊಂಡಿರುವ ಕುಡುಕರು ರಾಜಾರೋಷವಾಗಿ ಕುಡಿದು ಸ್ಥಳದಲ್ಲೇ ಗಡದ್ದಾಗಿ ಮಲಗುತ್ತಾರೆ. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ವ್ಯಾಪ್ತಿಯಲ್ಲಿ ಇಂತಹ ಕೆಟ್ಟ ವಾತಾವರಣ ಸೃಷ್ಟಿಯಾಗಿದೆ.ಇಲ್ಲಿಂದ ಹೊರಬರುವ ದುರ್ಗಂಧದಿಂದ ಸಾರ್ವಜನಿಕರು ಇತ್ತ ಸುಳಿಯಲು ಮುಜುಗರ ಪಡುತ್ತಿದ್ದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಇನ್ನಾದರೂ ಸಂಭಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕುಡುಕರ ಹಾವಳಿ ತಪ್ಪಿಸಿ ಸಾರ್ವಜನಿಕರ ನೆಮ್ಮದಿಗೆ ಸ್ಪಂದಿಸುವರೇ...?

Комментарии •