ಭಗವದ್ಗೀತಾ ಸಂಗೀತಮಯ ಶ್ಲೋಕ ನಿರೂಪಣೆ | ಅಧ್ಯಾಯ 2|ಕನ್ನಡ ಅನುವಾದದೊಂದಿಗೆ

Поделиться
HTML-код
  • Опубликовано: 12 сен 2024
  • ಇಸ್ಕಾನ್ ಬೆಂಗಳೂರು ಭಗವದ್ಗೀತೆಯ ಕಾಲಾತೀತ ಜ್ಞಾನವನ್ನು ಸುಮಧುರ ಗಾಯನದ ರೂಪದಲ್ಲಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ. ಪ್ರತಿಯೊಂದು ಶ್ಲೋಕವನ್ನೂ ಸುಪ್ರಸಿದ್ಧ ಕರ್ನಾಟಕ ಸಂಗೀತ ವಿದ್ವಾಂಸರಾದ ಡಾ. ವಿದ್ಯಾಭೂಷಣ ಅವರು ಹಾಡಿದ್ದಾರೆ. ಆಳವಾದ ಅರ್ಥಗ್ರಹಿಕೆಗಾಗಿ ಪ್ರತಿಯೊಂದು ಶ್ಲೋಕದ ನಂತರವೂ ಬಹು ಭಾಷೆಗಳಲ್ಲಿನ ಅನುವಾದವನ್ನು ಸೇರಿಸಲಾಗಿದೆ.
    ಗೀತೆಯ ಬೋಧನೆಯನ್ನು ಎಲ್ಲ ವಯೋಮಾನದವರೂ ಅರಿತು ಮೆಚ್ಚಲು ಸಹಾಯವಾಗುವಂತೆ ಈ ಪ್ರಸ್ತುತಿಯನ್ನು ಸಮಕಾಲೀನ ಶೈಲಿಯಲ್ಲಿ ಸಂಗ್ರಹಿಸಲಾಗಿದೆ.
    ಶ್ರೀಲ ಪ್ರಭುಪಾದರನ್ನು ಕುರಿತು :
    ಈ ಪ್ರಸ್ತುತಿಯನ್ನು ನಾವು ಶ್ರೀ ಶ್ರೀಮದ್ ಎ.ಸಿ. ಭಕ್ತವೇದಾಂತ ಸ್ವಾಮಿ ಪ್ರಭುಪಾದರಗೆ ಅರ್ಪಿಸುತ್ತೇವೆ.
    ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಭಗವದ್ಗೀತೆಯ ಸಂದೇಶವನ್ನು ಇಡೀ ಜಗತ್ತಿಗೇ ಪ್ರಸಾರ ಮಾಡಿದರು. ಅವರ ಕೃತಿ ‘‘ಭಗವದ್ಗೀತಾ ಯಥಾರೂಪ’’ವು 70ಕ್ಕೂ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡಿದೆ. ಭಗವದ್ಗೀತೆಯ ಸಂದೇಶವು ರಾಷ್ಟ್ರ ಅಥವಾ ಧರ್ಮದ ಭೇದವಿಲ್ಲದೆ ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯವಾಗುತ್ತದೆ ಮತ್ತು ದೇಶ ವಿದೇಶಗಳ ಗಣ್ಯರು ಗೀತೆಯನ್ನು ಪ್ರಶಂಸಿಸಿದ್ದಾರೆ.
    ಗೀತಾ ಜಯಂತಿಯ ಶುಭ ಸಂದರ್ಭದಲ್ಲಿ, ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ಸನ್ಮಾನ್ಯ ಶ್ರೀ ರಾಜನಾಥ ಸಿಂಗ್ ಅವರು ಈ ಪ್ರಸ್ತುತಿಯನ್ನು ಅನಾವರಣಗೊಳಿಸಿದರು.
    ಶ್ರೀ ಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸಿದ ಶುಭ ದಿನವೇ ಗೀತಾ ಜಯಂತಿ. ಎಲ್ಲ ವೈದಿಕ ಜ್ಞಾನದ ಸಾರವಾದ ಭಗವದ್ಗೀತೆಯ ಪುಸ್ತಕ ಪ್ರತಿಯನ್ನು ಉಡುಗೊರೆಯಾಗಿ ನೀಡಿ. ನಿಮ್ಮ ಈ ಕರುಣಾಮಯ ಕೊಡುಗೆಯು ಭಗವದ್ಗೀತೆಯ ಜ್ಞಾನವನ್ನು ವಿಶಾಲವಾಗಿ ಹರಡಲು ನೆರವಾಗುತ್ತದೆ.
    ಈ ಭವ್ಯ ಜ್ಞಾನವನ್ನು ಪಸರಿಸುವ ಕಾರ್ಯದಲ್ಲಿ ನಮ್ಮನ್ನು ಬೆಂಬಲಿಸಿ ಮತ್ತು ಜನರ ಬದುಕಿನಲ್ಲಿ ಒಳ್ಳೆಯ ಭಾಗವ್ಯವನ್ನು ತನ್ನಿ.
    ಭೇಟಿ ನೀಡಿ : isk.life/gita

Комментарии • 7

  • @vedabe6904
    @vedabe6904 Год назад

    Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare

  • @shamanthakamani6171
    @shamanthakamani6171 Год назад +1

    Hare Krishna 🙏🙏🙏

  • @bindumd5738
    @bindumd5738 Год назад

    Shri krishna ya NAMO NAMAHA 🙏🏻🙏🏻

  • @lokeshabrlokesha7823
    @lokeshabrlokesha7823 Год назад

    ವಾವ್ ಅಧ್ಭುತ, ಅನಂತ ಪ್ರಣಾಮಗಳು ನಿಮಗೆ.....

  • @subbakrishnan2636
    @subbakrishnan2636 Год назад

    HARE SRI KRISHNAYA NAMAHA
    KRISHNAM VONDHE JAGADGURUM

  • @kaushik_herle
    @kaushik_herle Год назад

    When will you upload next part of it? It's really heart touching..

  • @nagalakshmimanasa9904
    @nagalakshmimanasa9904 Год назад

    We need Garuda Purana original book