ಶ್ರೀಮದ್ಭಾಗವತಮ್ ಉಪನ್ಯಾಸ I ಶ್ರೀ ಪ್ರದೀಪ್ತ ನರಸಿಂಹ ದಾಸ I SB 1.15.49 | ISKCON Bangalore Kannada

Поделиться
HTML-код
  • Опубликовано: 12 сен 2024
  • ಶ್ಲೋಕ: - 49
    ವಿದುರೋSಪಿ ಪರಿತ್ಯಜ್ಯ ಪ್ರಭಾಸೇ ದೇಹಮಾತ್ಮನಃ |
    ಕೃಷ್ಣಾವೇಶೇನ ತಚ್ಚಿತ್ತಃ ಪಿತೃಭಿಃ ಸ್ವಕ್ಷಯಂ ಯಯೌ ||೪೯||
    ಅನುವಾದ
    ತೀರ್ಥಯಾತ್ರೆಯಲ್ಲಿದ್ದ ವಿದುರನು ಪ್ರಭಾಸ ಕ್ಷೇತ್ರದಲ್ಲಿ ತನ್ನ ದೇಹ ತ್ಯಾಗ ಮಾಡಿದನು. ಅವನು ಶ್ರೀಕೃಷ್ಣ ಪ್ರಭುವಿನ ಚಿಂತನೆಯಲ್ಲೇ ಮಗ್ನನಾಗಿದ್ದುದರಿಂದ, ಪಿತೃಲೋಕದಲ್ಲಿ ಅವನನ್ನು ಪಿತೃದೇವತೆಗಳು ಸ್ವಾಗತಿಸಿದರು. ಅಲ್ಲಿ ಅವನು ತನ್ನ ಮೂಲ ಸ್ಥಾನವನ್ನು ಸೇರಿದನು.
    ಭಾವಾರ್ಥ
    ಪಾಂಡವರಿಗೂ ವಿದುರನಿಗೂ ವ್ಯತ್ಯಾಸವಿದೆ. ಪಾಂಡವರು ದೇವೋತ್ತಮ ಪರಮ ಪುರುಷನಾದ ಪ್ರಭುವಿನ ನಿತ್ಯ ಸಂಗಾತಿಗಳು. ವಿದುರನು ಪಿತೃಲೋಕದ ಆಡಳಿತವನ್ನು ನಿರ್ವಹಿಸುವ ದೇವತೆಗಳಲ್ಲಿ ಒಬ್ಬನು, ಅವನಿಗೆ ಯಮರಾಜನೆಂದು ಹೆಸರು. ಇಹಲೋಕದಲ್ಲಿ ದುಷ್ಕರ್ಮ ನಿರತರಾದವರಿಗೆ ಶಿಕ್ಷೆ ಕೊಡುವವನು ಯಮರಾಜನೇ ಆದುದರಿಂದ ಜನರು ಅವನ ಹೆಸರೆತ್ತಿದರೇ ಹೆದರುತ್ತಾರೆ. ಆದರೆ ಪ್ರಭುವಿನ ಭಕ್ತರಾದವರು ಅವನಿಗೆ ಹೆದರಬೇಕಾದ ಕಾರಣವೇ ಇಲ್ಲ. ಭಕ್ತರಿಗೆ ಅವನು ಆತ್ಮೀಯ ಮಿತ್ರ; ಭಕ್ತರಲ್ಲದವರಿಗೆ ಭೀತಿಯ ಸಾಕಾರ ಮೂರ್ತಿ. ನಾವು ಈಗಾಗಲೇ ಚರ್ಚಿಸಿರುವಂತೆ, ಯಮರಾಜನಿಗೆ ಮಾಂಡವ್ಯ ಮುನಿಯು ಶೂದ್ರನಾಗಿ ಹುಟ್ಟುವಂತೆ ಶಾಪ ಕೊಟ್ಟಿದ್ದನು. ಹಾಗಾಗಿ ವಿದುರನು ಯಮರಾಜನ ಅವತಾರವಾದನು. ಪ್ರಭುವಿನ ನಿರಂತರ ಸೇವಕನಾಗಿ ಉತ್ಸಾಹ ಪೂರ್ವಕವಾಗಿ ಭಕ್ತಿಸೇವೆಯನ್ನು ಮಾಡಿದನು ಹಾಗೂ ಧರ್ಮಿಷ್ಠಜೀವನವನ್ನು ನಡೆಸಿದನು. ಎಷ್ಟರಮಟ್ಟಿಗೆ ಎಂದರೆ ಧೃತರಾಷ್ಟ್ರನಂತಹ ಲೌಕಿಕ ವ್ಯಕ್ತಿಯೂ ವಿದುರನ ಉಪದೇಶಗಳನ್ನು ಕೇಳಿ ಮೋಕ್ಷವನ್ನು ಪಡೆದನು. ಹಾಗಾಗಿ ಭಗವಂತನ ಭಕ್ತಿಸೇವೆಯನ್ನು ಮಾಡುತ್ತಾ ಆಚರಿಸಿದ ಸತ್ಕರ್ಮಗಳಿಂದಾಗಿ ವಿದುರನು ಸದಾ ಪ್ರಭುವಿನ ಚರಣಕಮಲಗಳನ್ನು ಸ್ಮರಿಸಲು ಸಮರ್ಥನಾಗಿದ್ದನು. ಇದರಿಂದ ಅವನು ಶೂದ್ರ ಜನ್ಮದ ಎಲ್ಲಾ ಭೌತಿಕ ಮಲಿನತೆಗಳನ್ನು ತೊಡೆದುಹಾಕಿದನು. ಕೊನೆಯಲ್ಲಿ ಪಿತೃಗಳು ಅವನನ್ನು ಸ್ವಾಗತಿಸಿ ಮತ್ತೆ ಮೂಲ ಪದವಿಯಲ್ಲಿ ನಿಲ್ಲಿಸಿದರು. ಪಿತೃಗಳೂ ಪ್ರಭುವಿನ ಸಂಗಾತಿಗಳೇ. ಆದರೆ ಅವರಿಗೆ ಅವನ ವೈಯಕ್ತಿಕ ಸಂಪರ್ಕವಿರುವುದಿಲ್ಲ. ಪ್ರಭುವಿನ ಪ್ರತ್ಯಕ್ಷ ಸಂಗಾತಿಗಳಾದರೋ ಅವನೊಂದಿಗೆ ಅವಿರತವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿರುವವರು. ಪ್ರಭುವೂ ಅವನ ಪ್ರತ್ಯಕ್ಷ ಸಂಗಾತಿಗಳೂ ನಿಲುಗಡೆಯೇ ಇಲ್ಲದೆ ಹಲವಾರು ವಿಶ್ವಗಳಲ್ಲಿ ಅವತರಿಸುವರು. ಪ್ರಭುವಿಗಾದರೆ ಅವೆಲ್ಲವೂ ನೆನಪಿರುತ್ತದೆ; ಆದರೆ ಅವನ ಅತಿಸೂಕ್ಷ್ಮ ಅಂಶಗಳಾದುದರಿಂದ ಸಂಗಾತಿಗಳು ತಮ್ಮ ಆ ಅವತಾರ ಘಟನೆಗಳನ್ನು ಮರೆತು ಬಿಡುವರು. ಅವರು ಅತಿ ಸೂಕ್ಷ್ಮಾಂಶಗಳಾಗಿರುವುದರಿಂದ ಮರೆಯಲೇಬೇಕು. 'ಇದಕ್ಕೆ ಭಗವದ್ಗೀತೆಯೂ ತಾರ್ಕಣೆ ಕೊಡುತ್ತದೆ (4.5).
    "ಇಸ್ಕಾನ್ ಬೆಂಗಳೂರಿನ ದೇವಾಲಯದ ಭಕ್ತರು ನೀಡಿದ ಕನ್ನಡ ಶ್ರೀಮದ್-ಭಾಗವತ ಉಪನ್ಯಾಸಗಳನ್ನು ಕೇಳಿ. ಈ ಉಪನ್ಯಾಸಗಳು ನಿಮಗೆ ದೇವರ ವಿಜ್ಞಾನದ ಬಗ್ಗೆ ಜ್ಞಾನವನ್ನು ನೀಡುತ್ತವೆ ಮತ್ತು ಆಧ್ಯಾತ್ಮಿಕ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತವೆ.
    #ಶ್ರೀಮದ್ಭಾಗವತ #srimadbhagavatam #iskconbangalorekannada #kannada

Комментарии • 4